200 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ; ಪಾಕ್​ನಲ್ಲಿ ಕೂದಲೆಳೆಯಲ್ಲಿ ತಪ್ಪಿತು ಭಾರೀ ದುರಂತ

ಲಾಹೋರ್​ನ ಅಲ್ಲಮ ಇಕ್ಬಾಲ್ ಇಂಟರ್​ನ್ಯಾಷನಲ್ ಏರ್​ಪೋರ್ಟ್​ನಲ್ಲಿ ವಿಮಾನ ಟೇಕಾಫ್​ ಆಗುತ್ತಿದ್ದಂತೆ ಇಂಜಿನ್​ನಲ್ಲಿ ಸಮಸ್ಯೆಯಾಗಿ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಯಿತು. ಕೂಡಲೆ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು.

news18-kannada
Updated:September 15, 2019, 6:42 PM IST
200 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ; ಪಾಕ್​ನಲ್ಲಿ ಕೂದಲೆಳೆಯಲ್ಲಿ ತಪ್ಪಿತು ಭಾರೀ ದುರಂತ
ಸಾಂದರ್ಭಿಕ ಚಿತ್ರ
  • Share this:
ಲಾಹೋರ್ (ಸೆ. 15): ಪಾಕಿಸ್ತಾನದಲ್ಲಿ ಇಂದು ಸಂಭವಿಸಲಿದ್ದ ದೊಡ್ಡ ದುರಂತವೊಂದು ಕೂದಲೆಳೆಯಲ್ಲಿ ತಪ್ಪಿದೆ. 200 ಪ್ರಯಾಣಿಕರಿದ್ದ ಜೆದ್ದಾಹ್​ಗೆ ತೆರಳಲಿದ್ದ ಪಿಕೆ-759 ವಿಮಾನ ಟೇಕ್ ಆಫ್​ ಆದ ಕೂಡಲೆ ಬೆಂಕಿ ಕಾಣಿಸಿಕೊಂಡಿದೆ. ಟೇಕ್ ಆಫ್ ಆದ ಕೂಡಲೆ ಪಾಕಿಸ್ತಾನ ಅಂತಾರಾಷ್ಟ್ರೀಯ ಏರ್​ಲೈನ್ಸ್​ನ ಈ ವಿಮಾನದ ಇಂಜಿನ್​ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್​ ಮಾಡಿದ್ದಾರೆ. ಪೈಲಟ್ ಸಮಯಪ್ರಜ್ಞೆಯಿಂದ 200 ಪ್ರಯಾಣಿಕರ ಜೀವ ಉಳಿದಿದೆ.

ಲಾಹೋರ್​ನ ಅಲ್ಲಮ ಇಕ್ಬಾಲ್ ಇಂಟರ್​ನ್ಯಾಷನಲ್ ಏರ್​ಪೋರ್ಟ್​ನಲ್ಲಿ ವಿಮಾನ ಟೇಕಾಫ್​ ಆಗುತ್ತಿದ್ದಂತೆ ಇಂಜಿನ್​ನಲ್ಲಿ ಸಮಸ್ಯೆಯಾಗಿ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಯಿತು. ಕೂಡಲೆ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು. ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಕೂಡಲೇ ಪೈಲಟ್​ ಕಂಟ್ರೋಲ್​ ರೂಂಗೆ ಈ ವಿಷಯವನ್ನು ತಿಳಿಸಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಪೈಲಟ್​ ತುರ್ತಾಗಿ ವಿಮಾನವನ್ನು ಕೆಳಗಿಳಿಸಿದ್ದರಿಂದ ಯಾವುದೇ ಪ್ರಯಾಣಿಕರಿಗೂ ಗಾಯಗಳಾಗಿಲ್ಲ.

ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ್ದ ಪಾಕ್​​ ಗಾಯಕಿಗೆ 2 ವರ್ಷ ಜೈಲು ಶಿಕ್ಷೆ

ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದಕ್ಕೆ ಕಾರಣವೇನೆಂದು ಪರಿಶೀಲಿಸಲಾಗುತ್ತಿದೆ. ಆ ವಿಮಾನದಲ್ಲಿ ಪ್ರಯಾಣಿಕರನ್ನು ಬೇರೆ ವಿಮಾನದ ಮೂಲಕ ಇಂದು ಮಧ್ಯಾಹ್ನ ಜೆದ್ದಾಹ್​ಗೆ ಕಳುಹಿಸಲಾಗಿದೆ. ಕೆಲವು ವಾರಗಳ ಹಿಂದೆ ಪಾಕಿಸ್ತಾನ ಮೂಲದ ಮತ್ತೊಂದು ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ತುರ್ತು ಭೂಸ್ಪರ್ಶ ಮಾಡಲಾಗಿತ್ತು.

 

First published:September 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading