• Home
  • »
  • News
  • »
  • national-international
  • »
  • Baby Tortured: 2 ವರ್ಷದ ಮಗುವಿಗೆ ಚಿತ್ರ ಹಿಂಸೆ! ಬೆಚ್ಚಿಬೀಳಿಸೋ ಘಟನೆ ವಿಡಿಯೋದಲ್ಲಿ ಸೆರೆ

Baby Tortured: 2 ವರ್ಷದ ಮಗುವಿಗೆ ಚಿತ್ರ ಹಿಂಸೆ! ಬೆಚ್ಚಿಬೀಳಿಸೋ ಘಟನೆ ವಿಡಿಯೋದಲ್ಲಿ ಸೆರೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪುಟ್ಟ ಕಂದನ ಬಿಟ್ಟು ಹೋಗ್ತೀರಾ? ಕೇರ್ ಟೇಕರ್ ನಿಮ್ಮ ಮಗುವನ್ನು ಹೇಗೆ ನೋಡಿಕೊಳ್ತಾರೆ ಗೊತ್ತೇ? ಮಧ್ಯಪ್ರದೇಶದ ವೈರಲ್ ಆಗಿರುವ ವಿಡಿಯೋದಲ್ಲಿ ಕಂದನಿಗೆ ಚಿತ್ರಹಿಂಸೆ ಕೊಟ್ಟಿರುವ ದೃಶ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

  • Share this:

ಭೋಪಾಲ್(ಜೂ.15): ಉದ್ಯೋಗದಲ್ಲಿರುವ ದಂಪತಿ (Couple) ತಮ್ಮ ಪುಟ್ಟ ಕಂದನನ್ನು ಕೇರ್ ಟೇಕರ್ (Care Taker) ಬಳಿ ಬಿಟ್ಟು ಹೋಗುವುದು ತುಂಬಾ ಸಾಮಾನ್ಯ. ಇಬ್ಬರೂ ಉದ್ಯೋಗದಲ್ಲಿರುವ (Job) ಕಾರಣಕ್ಕೋ ಅಥವಾ ಇನ್ಯಾವುದೋ ಕಾರಣಕ್ಕೆ ಮಗುವನ್ನು ಕೇರ್ ಟೇಕರ್ ಬಳಿ ಬಿಟ್ಟು ಹೋಗುತ್ತಾರೆ. ತಿಂಗಳಿಗೆ ಕೆಲವು ಸಾವಿರಗಳನ್ನು ಕೊಟ್ಟು ಮತ್ತಷ್ಟು ಸಾವಿರಗಳನ್ನು ಗಳಿಸೋ ಯೋಚನೆಯಲ್ಲಿರೋ ಪೋಷಕರೇ (Parents) ನೀವು ನೋಡಲೇಬೇಕಾದ ಸುದ್ದಿಯೊಂದಿದೆ. ನಿಮ್ಮ ಮುದ್ದಿನ ಮಗುವನ್ನು (Baby) ಇನ್ನೊಬ್ಬರ ಕೈಗೊಪ್ಪಿಸಿ ಟಾಟಾ ಬಾಯ್ ಬಾಯ್ ಹೇಳುವ ಮುನ್ನ ಅವರೆಷ್ಟು ಸುರಕ್ಷಿತರು ಎನ್ನುವುದನ್ನು ತಿಳಿದುಕೊಳ್ಳಿ. ಮಧ್ಯಪ್ರದೇಶದ ಕ್ರೂರ ಘಟನೆಯ ವಿಡಿಯೋ (Video) ಈಗ ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ. ಕೇರ್ ಟೇಕರ್ ಬಳಿ ಬಿಟ್ಟು ಹೋಗುವ ಮಗುವಿನ ಸ್ಥಿತಿ ಇದಾಗಿದ್ದರೆ ಅದೆಷ್ಟು ಕಂದಮ್ಮಗಳ ಕೇರ್ ಟೇಕರ್ ಸುಪರ್ದಿಯಲ್ಲಿ ನರಳುತ್ತಿರಬಹುದು ಯೋಚಿಸಿ.


ಎರಡು ವರ್ಷದ ಬಾಲಕನಿಗೆ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಮಧ್ಯಪ್ರದೇಶದ ಜಬಲ್‌ಪುರದಲ್ಲಿ 30 ವರ್ಷದ ಕೇರ್‌ಟೇಕರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಬಾಲಾಪರಾಧಿ ಕಾಯ್ದೆಯಡಿ ಪ್ರಕರಣ ದಾಖಲು


ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ) ಮತ್ತು ಬಾಲಾಪರಾಧಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಅಗರವಾಲ್ ತಿಳಿಸಿದ್ದಾರೆ.


ಮನೆಯಲ್ಲಿ ಸಿಸಿಟಿವಿ ಇಟ್ಟ ಕಾರಣಬಯಲಾಯ್ತು ಪ್ರಕರಣ


ಬಾಲಕನ ತಂದೆ ರಾಜ್ಯ ವಿದ್ಯುತ್ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ತಾಯಿ ಜಿಲ್ಲಾ ನ್ಯಾಯಾಲಯದ ಉದ್ಯೋಗಿ. ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ಬಳಿಕ ದಂಪತಿಗೆ ಚಿತ್ರಹಿಂಸೆ ನೀಡಿರುವುದು ಗೊತ್ತಾಗಿದೆ.


ಎಂಜಿನಿಯರ್ ತನ್ನ ಪತ್ನಿ, ತಾಯಿ, ತಂದೆ ಮತ್ತು ಮಾನಸಿಕ ಅಸ್ವಸ್ಥ ಸಹೋದರಿಯೊಂದಿಗೆ ವಾಸಿಸುತ್ತಿದ್ದಾರೆ ಎಂದು ಅಗರವಾಲ್ ಹೇಳಿದ್ದಾರೆ.


ವೀಕ್ ಆಗಿತ್ತು ಮಗು


ತಂದೆ ಮತ್ತು ಸಹೋದರಿಯನ್ನು ತಾಯಿ ನೋಡಿಕೊಳ್ಳುತ್ತಾಳೆ. ಮಗುವನ್ನು ನೋಡಿಕೊಳ್ಳಲು ರಜನಿ ಅವರನ್ನು ನೇಮಿಸಲಾಯಿತು. ಆದರೆ ಕೆಲವು ವಾರಗಳ ಹಿಂದೆ, ಮಗು ಅನಾರೋಗ್ಯಕ್ಕೆ ಒಳಗಾಯಿತು. ಕರುಳಿನಲ್ಲಿ ಸೋಂಕು ಇದೆ ಮತ್ತು ಹುಡುಗ ದುರ್ಬಲನಾಗಿದ್ದಾನೆ ಎಂದು ವೈದ್ಯರು ಹೇಳಿದರು ಎಂದಿದ್ದಾರೆ.


ಕೇರ್ ಟೇಕರ್​ನ್ನು ಕೆಲಸದಿಂದ ತೆಗೆದುಹಾಕಿದ ದಂಪತಿ


ದಂಪತಿಗಳು ಕೇರ್‌ಟೇಕರ್‌ನನ್ನು ಕೆಲಸದಿಂದ ತೆಗೆದುಹಾಕಿದರು. ಆದರೆ ದಂಪತಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಹೇಳಿ ಆಕೆ ಬ್ಲಾಕ್‌ಮೇಲ್ ಮಾಡಲು ಆರಂಭಿಸಿದ್ದಾಳೆ. ದಂಪತಿಗಳು ಕ್ಯಾಮೆರಾಗಳನ್ನು ಅಳವಡಿಸಿದ್ದರಿಂದ ಮಗುವನ್ನು ನೋಡಿಕೊಳ್ಳಲು ಕೇರ್‌ಟೇಕರ್ ಮರಳಿ ಬಂದಳು.


ಇದನ್ನೂ ಓದಿ: Cheating: ಮಗಳ MBBS ಸೀಟ್​ಗಾಗಿ ತಂದೆಯ ಪರದಾಟ! ಬಡ ತಂದೆಗೆ 8 ಲಕ್ಷ ರೂ. ವಂಚನೆ


ಆಕೆ ಮಗುವನ್ನು ಥಳಿಸುವುದು, ತಳ್ಳುವುದು ಮತ್ತು ಆಹಾರ ಸೇವಿಸುವುದನ್ನು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾಣಬಹುದು. ಈ ದೃಶ್ಯಾವಳಿಗಳನ್ನು ಉಲ್ಲೇಖಿಸಿ ಬಾಲಕನ ತಂದೆ ಪೊಲೀಸ್ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಮಂಗಳವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.


ಒಂದೆಡೆ ಮಕ್ಕಳಿಗೆ ಚಿತ್ರಹಿಂಸೆ ನೀಡುವ ಪ್ರಕರಣಗಳಿದ್ದರೆ ಮಕ್ಕಳನ್ನು ರಕ್ಷಿಸುವ ಘಟನೆಗಳೂ ನಡೆಯುತ್ತಿವೆ. ಕೆಲವೊಂದು ಘಟನೆಗಳು ಇತತರಿಗೆ ಪ್ರೇರಣೆಯಾಗುತ್ತವೆ. ಟ್ರಾಫಿಕ್ ಪೊಲೀಸ್ ತನ್ನ ಜೀವ ಲೆಕ್ಕಿಸದೆ ಮಗುವಿನ ಪ್ರಾಣ ಉಳಿಸಿದ ಘಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.


ಮಗುವಿನ ರಕ್ಷಣೆ


ಪೊಲೀಸ್ ಅಧಿಕಾರಿಯೊಬ್ಬರು ಇದ್ದಕ್ಕಿದ್ದಂತೆ ಅಂಬೆಗಾಲಿಡುವ ಮಗುವೊಂದು ಎಲೆಕ್ಟ್ರಿಕ್ ರಿಕ್ಷಾದಿಂದ ಕೆಳಕ್ಕೆ ಬೀಳುವುದನ್ನು ನೋಡಿದಾಗ ಸಂಚಾರವನ್ನು ನಿಯಂತ್ರಿಸುತ್ತಿರುವುದನ್ನು ಕಾಣಬಹುದು. ಒಂದು ಬಸ್ ಆ ಮಗುವಿನ ಸಮೀಪ ಬರುತ್ತಿದ್ದು, ಆ ಬಸ್ ಅನ್ನು ಕೈ ಮಾಡಿ ನಿಲ್ಲಿಸಿದ್ದು ಅಲ್ಲದೆ ಆ ಕೆಳಗೆ ಬಿದ್ದಂತಹ ಮಗುವನ್ನು ಕರೆದೊಯ್ಯಲು ಕೂಡಲೇ ಆ ಸ್ಥಳಕ್ಕೆ ಓಡೋಡಿ ಬಂದರು. ಅಂಬೆಗಾಲಿಡುವ ಮಗುವಿನೊಂದಿಗೆ ಅವನ ತಾಯಿಯೂ ಸಹ ಇದ್ದಳು, ಅವನು ರಿಕ್ಷಾದಿಂದ ಕೆಳಗೆ ಬಿದ್ದ ನಂತರ ಅವಳು ಕೂಡಲೇ ಆಟೋದಿಂದ ಕೆಳಗಿಳಿದು ಮಗು ಬಿದ್ದ ಸ್ಥಳಕ್ಕೆ ಬಂದರು.

Published by:Divya D
First published: