ದೆಹಲಿ-ದೌಸಾ-ಲಾಲ್ಸೋಟ್ ಮಾರ್ಗವು ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯ (Delhi-Mumbai Expressway) 246 ಕಿಮೀ ವಿಸ್ತಾರವಾಗಿದೆ ಮತ್ತು ದೆಹಲಿಯಿಂದ ಜೈಪುರಕ್ಕೆ ಪ್ರಯಾಣದ ಸಮಯವನ್ನು 5 ಗಂಟೆಗಳಿಂದ ಸುಮಾರು 3 ಗಂಟೆಗಳವರೆಗೆ ಕಡಿಮೆ ಮಾಡುವ ನಿರೀಕ್ಷೆಯಿದೆ. ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಭಾರತದ (India) ವಿವಿಧ ರಾಜ್ಯಗಳ ನಡುವೆ ರಸ್ತೆ ಸಂಪರ್ಕವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೆಯೇ ಸಂಪೂರ್ಣ ಸುಸಜ್ಜಿತ ಆಘಾತ ಕೇಂದ್ರಗಳು ಮತ್ತು ಹೆಲಿಪ್ಯಾಡ್‌ಗಳು ಹಾಗೂ ಹೋಟೆಲ್‌ಗಳು, ಎಟಿಎಂಗಳು (ATM), ಫುಡ್ ಕೋರ್ಟ್‌ಗಳು, ಬರ್ಗರ್ ಕಿಂಗ್, ಸಬ್‌ವೇ, ಮ್ಯಾಕ್ ಡೊನಾಲ್ಡ್ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ (Electric Vehicles) ಚಾರ್ಜಿಂಗ್ ಸ್ಟೇಷನ್‌ಗಳಂತಹ ಸೌಲಭ್ಯಗಳನ್ನು ಹೊಂದಿರುತ್ತದೆ.
ಈ ಎಕ್ಸ್‌ಪ್ರೆಸ್‌ವೇಯ ಮೊದಲ ಹಂತವನ್ನು ಇತ್ತೀಚೆಗೆ ಫೆಬ್ರವರಿ 12, 2023 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಹೆದ್ದಾರಿಯ ಸಂಪೂರ್ಣ ಕೆಲಸವು 2024 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಈ ಯೋಜನೆಯ ಮೊದಲನೇ ಹಂತವಾದ ದೆಹಲಿಯಿಂದ ರಾಜಸ್ಥಾನದ ಜೈಪುರದವರೆಗಿನ 246 ಕಿ.ಮೀ ರಸ್ತೆಯನ್ನು ತೆರವುಗೊಳಿಸಲಾಗಿದೆ. ಈ ರಸ್ತೆ ತೆರೆದಾಗ ನಾವು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋಗಳನ್ನು ನೋಡಬಹುದು.
ಈ ಹಲವು ವಿಡಿಯೋಗಳಲ್ಲಿ ಯುರೋಪಿಯನ್ ಡ್ರೈವರ್‌ನ ವಾಟರ್ ಗ್ಲಾಸ್ ಟೆಸ್ಟ್ ವಿಡಿಯೋ ಸಹ ವೈರಲ್ ಆಗಿದ್ದು, ಹೆಚ್ಚು ಗಮನ ಸೆಳೆಯುತ್ತಿದೆ. ಈ ವಿಡಿಯೋವನ್ನು ಇಂಡಿಯಾ ಇನ್ ಡಿಟೇಲ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದೆ.
ವಾಟರ್ ಬಾಟಲ್ ಟೆಸ್ಟ್
ಈ ವಿಡಿಯೋದಲ್ಲಿ ಯುರೋಪಿಯನ್ ಪ್ರಜೆಯಾಗಿರುವ ಕರೋಲಿನಾ ಗೋಸ್ವಾಮಿ ಹೊಸದಾಗಿ ತೆರೆದಿರುವ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಮೂಲಕ ಕಾರನ್ನು ಓಡಿಸುತ್ತಿದ್ದಾರೆ.
ಈ ಹೊಸ ಹೆದ್ದಾರಿಯ ಕುರಿತು ಹಲವು ವಿಷಯಗಳನ್ನು ವಿಡಿಯೋದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕರೋಲಿನಾ ಅವರು ತಮ್ಮ ಕೆಲಸದ ಭಾಗವಾಗಿ ಅನೇಕ ಯುರೋಪಿಯನ್ ರಾಷ್ಟ್ರಗಳು ಮತ್ತು ಯುಎಸ್ಎ ಹೆದ್ದಾರಿಗಳಲ್ಲಿ ಕಾರನ್ನು ಓಡಿಸಿದ್ದಾರೆ ಮತ್ತು ಭಾರತದಲ್ಲಿ 20,000 ಕಿಮೀ ರೋಡ್ ಟ್ರಿಪ್ ಮಾಡಿರುವುದಾಗಿ ವಿಡಿಯೋದಲ್ಲಿ ತಿಳಿಸಿದ್ದಾರೆ.
ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿಟ್ಟು ಪರೀಕ್ಷೆ
ವಾಟರ್ ಬಾಟಲ್ ಟೆಸ್ಟ್ ಅಥವಾ ವಾಟರ್ ಗ್ಲಾಸ್ ಟೆಸ್ಟ್ ಎಂದು ಕರೆಯಲಾಗುವ ಪರೀಕ್ಷೆಯನ್ನು ಈ ವಿಡಿಯೋದಲ್ಲಿ ತೋರಿಸಿದ್ದಾರೆ. ಈ ಪರೀಕ್ಷೆಯಲ್ಲಿ, ನೀರು ಎಷ್ಟರಮಟ್ಟಿಗೆ ಅಲುಗಾಡುತ್ತದೆ ಎಂಬುದನ್ನು ಪರಿಶೀಲಿಸಲು ಬಾಟಲ್ ಅಥವಾ ನೀರಿನಿಂದ ತುಂಬಿದ ಗ್ಲಾಸ್ ಅನ್ನು ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಇಡಲಾಗುತ್ತದೆ.
ರಸ್ತೆ ಸುಗಮವಾಗಿದ್ದರೆ, ನೀರಿನ ಚಲನೆ ಕಡಿಮೆ ಇರಬೇಕು ಮತ್ತು ರಸ್ತೆ ಅಸಮವಾಗಿದ್ದರೆ, ಚಲನೆ ಹೆಚ್ಚು ಇರುತ್ತದೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ಈ ಪರೀಕ್ಷೆಯನ್ನು ಅವರು ಮೊದಲಿಗೆ ಯುರೋಪಿಯನ್ ಹೆದ್ದಾರಿಯಲ್ಲಿ ನಡೆಸಿದ್ದಾರೆ. ಅವಾಗ ಗ್ಲಾಸ್‌ನಲ್ಲಿ ತುಂಬಿರುವ ನೀರಿನ ಚಲನೆ ಹೆಚ್ಚು ಇರುತ್ತದೆ. ಆದರೆ ಈ ಪರೀಕ್ಷೆಯನ್ನು ನಮ್ಮ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆಸಿದಾಗ ನೀರಿನ ಚಲನೆ ಕಡಿಮೆ ಇರುತ್ತದೆ.
ಅವರು ಇದರೊಂದಿಗೆ ನಮ್ಮ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯನ್ನು ಹಾಡಿ ಹೊಗಳಿದ್ದಾರೆ ಹಾಗೂ ಹೆದ್ದಾರಿಯನ್ನು ತುಂಬ ಇಷ್ಟಪಟ್ಟಿದ್ದಾರೆ. ಫಾಸ್ಟ್‌ಟ್ಯಾಗ್‌ಗಳು ಹೆಚ್ಚು ಅನುಕೂಲಕರವಾಗಿವೆ ಮತ್ತು ಯುರೋಪ್‌ಗೆ ಹೋಲಿಸಿದರೆ ಫಾಸ್ಟ್‌ಟ್ಯಾಗ್‌ಗಳು ಹೆಚ್ಚು ಅನುಕೂಲಕರ ಮತ್ತು ಅಗ್ಗವಾಗಿವೆ ಎಂದು ಅವರು ತಿಳಿಸಿದ್ದಾರೆ.
ಆದರೆ ಇದು ವೈಜ್ಞಾನಿಕ ಪರೀಕ್ಷೆಯಾಗಿರದೆ ಕಾರಿನ ಓಡಿಸುವ ವೇಗ, ಸಸ್ಪೆನ್ಷನ್ ಮತ್ತು ಎಂಜಿನ್ ಪರಿಷ್ಕರಣೆಗೆ ಸಂಬಂಧಿಸಿದಂತೆ ಏನನ್ನು ಸಾಬೀತುಪಡಿಸುವುದಿಲ್ಲ ಎನ್ನುವ ಕರೋಲಿನಾ ಇದು ಕೇವಲ ನಯವಾದ ರಸ್ತೆ ಮೇಲ್ಮೈ ಬಗ್ಗೆ ಮನವರಿಕೆ ಮಾಡುವ ಒಂದು ಅಂಶವಾಗಿದೆ ಎಂದಿದ್ದಾರೆ. ವಿಡಿಯೋ ವೈರಲ್ ಆದ ನಂತರ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಕಾಮೆಂಟ್ಗಳು ಸಹ ಬರುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ