ಬೈಕಿಗೆ ಗುದ್ದಿದ ಮೋಹನ್ ಭಾಗವತ್​ ಬೆಂಗಾವಲು ಪಡೆಯ ಕಾರು; ಆರು ವರ್ಷದ ಬಾಲಕ ಸಾವು

ತಿಜಾರಾದಲ್ಲಿ ನಡೆದ ಕಾರ್ಯಕ್ರಮ ಮುಗಿಸಿಕೊಂಡು  ಮೋಹನ್​ ಭಾಗವತ್​ ವಾಪಸ್ಸಾಗುವಾಗ ಈ ಘಟನೆ ನಡೆದಿದೆ ಮತ್ತು ಝಡ್​ ಪ್ಲಸ್​ ಸೆಕ್ಯೂರಿಟಿ ಹೊಂದಿರುವ ಭಾಗವತ್​ ಅವರ ಕಾರಿನ ಹಿಂದೆ-ಮುಂದೆ ಎಂಟರಿಂದ ಹತ್ತು ಬೆಂಗಾವಲು ಪಡೆಯ ಕಾರುಗಳು ಹೋಗುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. 

HR Ramesh | news18-kannada
Updated:September 11, 2019, 10:20 PM IST
ಬೈಕಿಗೆ ಗುದ್ದಿದ ಮೋಹನ್ ಭಾಗವತ್​ ಬೆಂಗಾವಲು ಪಡೆಯ ಕಾರು; ಆರು ವರ್ಷದ ಬಾಲಕ ಸಾವು
ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​
  • Share this:
ಜೈಪುರ (ರಾಜಸ್ಥಾನ): ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಅವರ ಬೆಂಗಾವಲು ವಾಹನ ಬೈಕಿಗೆ ಗುದ್ದಿದ ಪರಿಣಾಮ ಆರು ವರ್ಷದ ಮಗು ಬಲಿಯಾಗಿದ್ದು, ಮಗುವಿನ ತಾತಾ ಗಂಭೀರವಾಗಿ ಗಾಯಗೊಂಡ ಘಟನೆ ರಾಜಸ್ಥಾನದ ಅಲ್ವಾರ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.

ತಿಜಾರಾದಲ್ಲಿ ನಡೆದ ಕಾರ್ಯಕ್ರಮ ಮುಗಿಸಿಕೊಂಡು  ಮೋಹನ್​ ಭಾಗವತ್​ ವಾಪಸ್ಸಾಗುವಾಗ ಈ ಘಟನೆ ನಡೆದಿದೆ ಮತ್ತು ಝಡ್​ ಪ್ಲಸ್​ ಸೆಕ್ಯೂರಿಟಿ ಹೊಂದಿರುವ ಭಾಗವತ್​ ಅವರ ಕಾರಿನ ಹಿಂದೆ-ಮುಂದೆ ಎಂಟರಿಂದ ಹತ್ತು ಬೆಂಗಾವಲು ಪಡೆಯ ಕಾರುಗಳು ಹೋಗುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: ನಿನ್ನ ಕತ್ತನ್ನು ಕತ್ತರಿಸಿಹಾಕುತ್ತೇನೆ ಎಂದು ಪಕ್ಷದ ಕಾರ್ಯಕರ್ತನ ವಿರುದ್ಧ ತಾಳ್ಮೆ ಕಳೆದುಕೊಂಡ ಹರಿಯಾಣ ಸಿಎಂ ಖಟ್ಟರ್​

ಬೆಂಗಾವಲು ಪಡೆಯ ಕಾರುಗಳಲ್ಲಿ ಒಂದು ಕಾರು ಬೈಕಿಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಬೈಕಿನಲ್ಲಿದ್ದ ಆರು ವರ್ಷದ ಬಾಲಕ ಸಚಿನ್​ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ, ಮತ್ತು ಮಗುವಿನ ತಾತಾ ಗಾಯಗೊಂಡಿದ್ದಾರೆ. ಘಟನೆ ಬಳಿಕ ಬೆಂಗಾವಲು ಪಡೆಯ ವಾಹನ ಬೆಹ್ರಾರ್​ ಕಡೆಗೆ ತೆರಳಿತು. ಅಪಘಾತ ಎಸಗಿದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಕಾರನ್ನು ಚಲಾಯಿಸುತ್ತಿದ್ದ ಚಾಲಕನ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ ಎಂದು ಮಂದಾವರ್​ ಪೊಲೀಸ್ ಠಾಣೆಯ ಸಬ್​ ಇನ್ಸೆಪೆಕ್ಟರ್​ ರಾಮಸ್ವರೂಪ್​ ಬೈರ್ವಾ ತಿಳಿಸಿದ್ದಾರೆ.

First published: September 11, 2019, 10:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading