Viral Video: ಕಾರು ನಿಲ್ಲಿಸಿ ಎಂದಿದ್ದಕ್ಕೆ ರೊಚ್ಚಿಗೆದ್ದ ಚಾಲಕ; ಕಾರಿನ ಬಾನೆಟ್ ಮೇಲೆ ಟ್ರಾಫಿಕ್​ ಪೊಲೀಸ್, ಮುಂದೇನಾಯ್ತು?

ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಯೋರ್ವ ತನ್ನ ಕಾರಿನ ಬಾನೆಟ್ ಮೇಲೆ ಕರ್ತವ್ಯ ನಿರತ ಪೊಲೀಸ್ ನನ್ನು ಎಳೆದೊಯ್ದಿರುವ ಘಟನೆ ಮುಂಬೈನ ಅಂಧೇರಿಯ ಆಜಾದ್ ಮೆಟ್ರೋ ಸ್ಟೇಷನ್ ಬಳಿ ನಡೆದಿದೆ.

ಕಾರಿನ ಬಾನೆಟ್​ ಮೇಲೆ ಟ್ರಾಫಿಕ್ ಪೊಲೀಸ್

ಕಾರಿನ ಬಾನೆಟ್​ ಮೇಲೆ ಟ್ರಾಫಿಕ್ ಪೊಲೀಸ್

 • Share this:
  ಪ್ರತಿದಿನ ರಸ್ತೆಯಲ್ಲಿ ಸಾವಿರಾರು ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ವಾಹನ ಸವಾರರು ಹಾಗೂ ಸಂಚಾರಿ ಪೊಲೀಸರ ನಡುವೆ ಅಂತೂ ಯುದ್ಧದ ರೀತಿಯಲ್ಲಿ ಗಲಾಟೆ ಆಗುತ್ತವೆ. ಪೊಲೀಸರು ಹೇಳಿದ ಮಾತನ್ನ ವಾಹನ ಸವಾರರು ಕೇಳುವುದಿಲ್ಲ. ಸಂಚಾರಿ ನಿಯಮ ಪಾಲನೆ ಮಾಡುವುದಿಲ್ಲ. ಇದನ್ನ ಪ್ರಶ್ನಿಸಿದರೆ ಪೊಲೀಸರ ಮೇಲೆಯೇ ವಾಗ್ವಾದ ನಡೆಸುತ್ತಾರೆ. ಹೆಲ್ಮೆಟ್ ಹಾಕದೆ ಚಾಲನೆ, ಅತಿ ವೇಗದ ಚಾಲನೆ, ಹೀಗೆ ನಿಯಮಗಳನ್ನು ಬ್ರೇಕ್ ಮಾಡಿದ್ರೆ ಮಾತ್ರ ಸಂಚಾರಿ ಪೊಲೀಸರು, ವಾಹನ ಸವಾರರನ್ನು ತಡೆದು ಫೈನ್ ಹಾಕುತ್ತಾರೆ. ಆದರೆ ಇಲ್ಲೊಬ್ಬ ಸವಾರ ತನ್ನ ಕಾರನ್ನು ರಾಂಗ್ ರೂಟ್ ನಲ್ಲಿ ಚಲಾಯಿಸಿಕೊಂಡು ಬರುತ್ತಿದ್ದ. ಹೀಗಾಗಿ ಕಾರನ್ನು ನಿಲ್ಲಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ ಚಾಲಕ ಇದಕ್ಕೆ ನಿರಾಕರಿಸಿ ಮುಂದೆ ಹೋಗಿದ್ದಾನೆ. ಕೂಡಲೇ ಪೊಲೀಸರು ಆತನ ಕಾರಿನ ಬಾನೆಟ್ ಮೇಲೆ ಹತ್ತಿ ಕೂತಿದ್ದಾರೆ. ಸಂಚಾರಿ ಪೊಲೀಸರು ಬಾನೆಟ್ ಮೇಲೆ ಹತ್ತಿದ್ದರೂ ಕೇರ್ ಮಾಡದೆ ಚಾಲಕ ತನ್ನ ಕಾರನ್ನು ಓಡಿಸಿದ್ದಾನೆ.

  ಹೌದು, ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಯೋರ್ವ ತನ್ನ ಕಾರಿನ ಬಾನೆಟ್ ಮೇಲೆ ಕರ್ತವ್ಯ ನಿರತ ಪೊಲೀಸ್ ನನ್ನು ಎಳೆದೊಯ್ದಿರುವ ಘಟನೆ ಮುಂಬೈನ ಅಂಧೇರಿಯ ಆಜಾದ್ ಮೆಟ್ರೋ ಸ್ಟೇಷನ್ ಬಳಿ ನಡೆದಿದೆ. ನಿಯಮ ಉಲ್ಲಂಘಿಸಿದ ಕಾರನ್ನು ತಡೆಯಲು ಯತ್ನಿಸಿದ ಸಂಚಾರಿ ಪೊಲೀಸ್ ನನ್ನು ಕೆಲ ಮೀಟರ್ ಗಳ ವರೆಗೂ ಕಾರಿನ ಬಾನೆಟ್ ಮೇಲೆಯೇ ಎಳೆದೊಯ್ಯಲಾಗಿದೆ. 28 ವರ್ಷದ ಸೊಹೈಲ್ ಕಟೋರಿಯಾ ಎಂಬಾತ ಈ ರೀತಿ ಮಾಡಿದ್ದು, ಆತನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಈತ ಅಂಬೋಲಿಯ ಗಾರ್ಮೆಂಟ್ಸ್ ಉದ್ಯಮಿ, ತನ್ನ  Hyundai Creta ಕಾರಿನಲ್ಲಿ ರಾಂಗ್ ವೇನಲ್ಲಿ ಈತ ಬರುತ್ತಿದ್ದ. ಇದನ್ನ ಸಂಚಾರಿ ಪೋಲಿಸರು ತಡೆದು ಪ್ರಶ್ನಿಸಿದ್ದಾರೆ.  ತಾನು ಮಾಧ್ಯಮದ ವ್ಯಕ್ತಿಯೆಂದು ಆ ಯುವಕ ಸುಳ್ಳು ಹೇಳಿದ್ದಾನೆ. ಸಂಚಾರಿ ಪೊಲೀಸ್ ಅಧಿಕಾರಿ ಹಾಗೂ ಯುವಕನ ನಡುವೆ ಮಾತಿನ ಚಕಮಕಿ ಉಂಟಾಗಿದೆ. ನೀನು ರಾಂಗ್ ರೂಟ್ ನಲ್ಲಿ ಬಂದಿದ್ದೀಯಾ? ನೀನು ಯಾರೇ ಆಗಿರು? ಎಲ್ಲರಿಗೂ ರೂಲ್ಸ್ ವೊಂದೇ ಫೈನ್ ಕಟ್ಟಿ ಇಲ್ಲಿಂದ ತೆರಳು ಎಂದು ಯುವಕನಿಗೆ ಸೂಚಿಸಿದ್ದಾರೆ. ಕಾರಿನಿಂದ ಇಳಿಯಲು ಹಿಂದೇಟು ಹಾಕುತ್ತಿದ್ದ ಯುವಕನನ್ನು ಪೊಲೀಸರು ಕೆಳಗಿಳಿಯುವಂತೆ ಹೇಳಿದ್ದಾರೆ. ಪೋಲಿಸರ ಮಾತಿಗೂ ಕ್ಯಾರೆ ಎನ್ನದ ಯುವಕ ತನ್ನ ಕಾರನ್ನ ಮತ್ತೆ ಸ್ಟಾರ್ಟ್ ಮಾಡಿದ್ದಾನೆ. ಆಗ ಪೊಲೀಸರು ಕಾರಿನ ಬಾನೆಟ್ ಮೇಲೆ ಹತ್ತಿ ಕೂತಿದ್ದಾರೆ. ಬಾನೆಟ್ ಮೇಲೆ ಪೊಲೀಸರು ಕೂತಿದ್ದರು, ಯುವಕ ಅವರನ್ನು ವೇಗವಾಗಿ ಎಳೆದೊಯ್ದಿದ್ದಾನೆ.

  ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು, ಕಾರು ನಿಲ್ಲಿಸುವಂತೆ ಕೂಗಿ ಹೇಳಿದರು ಯುವಕ ದರ್ಪ ಮೆರೆದಿದ್ದಾನೆ. ಮಾಧ್ಯಮದವರು ಎಂದು ಸುಳ್ಳು ಹೇಳಿ ಈ ರೀತಿಯ ಕೃತ್ಯ ಎಸಗಿದ್ದಾನೆ. ಬಾನೆಟ್ ಮೇಲೆ ಪೊಲೀಸ್ ಅಧಿಕಾರಿಯನ್ನ ಸ್ವಲ್ಪ ದೂರ ಎಳೆದೊಯ್ದಿದ್ದಾನೆ. ಬಳಿಕ ಕಾರನ್ನು ನಿಲ್ಲಿಸಿದ್ದು, ಸಂಚಾರಿ ಪೊಲೀಸ್ ಅಧಿಕಾರಿ ಬಾನೆಟ್ ಮೇಲಿಂದ ಕೆಳಗಡೆ ಇಳಿದಿದ್ದಾರೆ. ಪೊಲೀಸ್ ಅಧಿಕಾರಿ ಕೆಳಗಿಳಿಯುತ್ತಿದ್ದಂತೆ ಮತ್ತೆ ಆ ಯುವಕ  ಕಾರನ್ನು ಅತಿ ವೇಗವಾಗಿ ಓಡಿಸಿಕೊಂಡು ಹೋಗಿ ಎಸ್ಕೇಪ್ ಆಗಿದ್ದ. ಘಟನೆಯ ಸಂಪೂರ್ಣ ವಿಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆ ಯುವಕನನ್ನ ಪೊಲೀಸರು ಬಂಧಿಸಿದ್ದಾರೆ.

  • ವರದಿ - ವಾಸುದೇವ್. ಎಂ

  Published by:Latha CG
  First published: