ಹುಬ್ಬಳ್ಳಿ(ಆ.07): ಚಾಲಕನ ನಿಯಂತ್ರಣ ತಪ್ಪಿ ದರ್ಗಾಕ್ಕೆ (Darga) ಕಾರು ಡಿಕ್ಕಿಯಾದ ಪರಿಣಾಮ ಮುವ್ವರು ಸ್ಥಳದಲ್ಲಿಯೇ ಸಾವು, ಓರ್ವ ಮಹಿಳೆಗೆ ಗಂಭೀರ ಗಾಯಗೊಂಡ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಜಿಗಳೂರು ಬಳಿ ನಡೆದಿದೆ. ಪೂನಾ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆಯಲ್ಲಿ ಓರ್ವ ಎಇಇ ಮತ್ತು ಇಬ್ಬರು ಸ್ಟಾಫ್ ನರ್ಸ್ (Staff Nurse) ದುರ್ಮರಣಕ್ಕೀಡಾಗಿದ್ದಾರೆ. ಬೆಂಗಳೂರಿನಲ್ಲಿ (Bengaluru) ಸಂಬಂಧಿಕರ ಮನೆ ಗೃಹ ಪ್ರವೇಶ ಮುಗಿಸಿಕೊಂಡು ಹುಬ್ಬಳ್ಳಿಯ ನವನಗರಕ್ಕೆ ವಾಪಸ್ಸಾಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ವಾಪಸ್ ಬರುವಾಗ ನಿಯಂತ್ರಣ ತಪ್ಪಿ ಕಾರು ದರ್ಗಾಕ್ಕೆ ನುಗ್ಗಿದೆ. ಪರಿಣಾಮ ಸ್ಥಳದಲ್ಲಿಯೇ ಮುವ್ವರ ಸಾವನ್ನಪ್ಪಿದ್ದಾರೆ. ಮೃತ ದುರ್ದೈವಿಗಳನ್ನುಧಾರವಾಡ ಕೆ.ಯು.ಡಿ. ಯ ಎಇಇ ರವೀಂದ್ರ ನಾಗನಾಥ, ಈತನ ಅತ್ತೆ ಮಾವನವರಾದ ಸ್ಟಾಫ್ ನರ್ಸ್ ಗಳಾಗಿದ್ದ ಹನುಮಂತಪ್ಪ ಬೇವಿನಕಟ್ಟಿ, ರೇಣುಕಾ ಬೇವಿನಕಟ್ಟಿ ಎಂದು ಗುರುತಿಸಲಾಗಿದೆ. ರವೀಂದ್ರ ಪತ್ನಿ ಅರುಂಧತಿಗೆ ಗಂಭೀರ ಗಾಯಗೊಂಡಿದ್ದು, ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೈ ಟೆನ್ಶನ್ ಟವರ್ ಹತ್ತಿ ಟೆನ್ಶನ್ ನೀಡಿದ ಭೂಪ
ವ್ಯಕ್ತಿಯೋರ್ವ ಹೈ ಟೆನ್ಶನ್ ಟವರ್ ಹತ್ತಿ ಎಲ್ಲರಿಗೂ ಟೆನ್ಶನ್ ಕೊಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಟೆನ್ಶನ್ ಕೊಟ್ಟ ವ್ಯಕ್ತಿಯನ್ನು ಸಾವಿನಿಂದ ಪಾರು ಮಾಡುವಲ್ಲಿ ಹೆಸ್ಕಾಂ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ವಿದ್ಯುತ್ ಹೈಟೆನ್ಶನ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಕಾಪಾಡುವಲ್ಲಿ ಹೆಸ್ಕಾಂ ಅಧಿಕಾರಿಗಳು ಯಶ್ವಿಯಾಗಿದ್ದಾರೆ. ಹುಬ್ಬಳ್ಳಿಯ ಬಿಡ್ನಾಳ ದಲ್ಲಿ ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಹೆಸ್ಕಾಂ ಗ್ರಾಮೀಣ ಉಪವಿಭಾಗದ ಕಾರ್ಯಾನಿರ್ವಾಹಕ ಅಭಿಯಂತರ ಕಿರಣಕುಮಾರ ಕಾಪಾಡಿದ್ದಾರೆ.
ಇದನ್ನೂ ಓದಿ: Heavy Rain: ಸ್ಮಶಾನಕ್ಕೆ ಹೋಗಲು ರಸ್ತೆಯೇ ಇಲ್ಲ; ನೀರಿನಲ್ಲೇ ಶವ ಹೊತ್ತು ಸಾಗಿದ ಗ್ರಾಮಸ್ಥರು!
ವಿದ್ಯುತ್ ಟವರ್ ಏರಿ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದ. ಇದನ್ನು ನೋಡಿದ ಸ್ಥಳೀಯರು ತಕ್ಷಣ ಹೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾಗಿ ಹೆಸ್ಕಾಂ ಅಧಿಕಾರಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ್ದಾರೆ. ಸಂಪರ್ಕ ಕಡಿತವಾದ ನಂತರ ವ್ಯಕ್ತಿ ವಿದ್ಯುತ್ ತಂತಿ ಸ್ಪರ್ಶಿಸಿದ್ಜಾನೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾರಗಿದ್ದಾನೆ. ಸ್ಥಳಕ್ಕೆ ಬಂದ ಹೆಸ್ಕಾಂ ಅಧಿಕಾರಿ, ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರಕ್ಷಿಸಿದ್ದಾರೆ. ಹೆಸ್ಕಾಂ ಅಧಿಕಾರಿಯ ಸಮಯ ಪ್ರಜ್ಞೆಯಿಂದಾಗಿ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
11 ಕೆವಿ ಹೈಟೆನ್ಷನ್ ಟವರ್ ಮೇಲೆ ಹತ್ತಿದ್ದ ವ್ಯಕ್ತಿ ಆತ್ಮಹತ್ಯೆಗೆ ಯತ್ನ
ಬಿಡ್ನಾಳದ 11 ಕೆವಿ ಹೈಟೆನ್ಷನ್ ಟವರ್ ಮೇಲೆ ಹತ್ತಿದ್ದ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದ. ವ್ಯಕ್ತಿಯನ್ನು ಬದುಕಿಸುವಲ್ಲಿ ಹೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿ ಯಶಸ್ವಿಯಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಾಘವೇಂದ್ರ ಬಳ್ಳಾರಿ ಎಂದು ಗುರುತಿಸಲಾಗಿದೆ. ಕೆಳಗೆ ಇಳಿಯುವಂತೆ ಕೆಲವರು ಕೂಗುತ್ತಿದ್ದರೂ ಲೆಕ್ಕಿಸದೆ ಟವರ್ ಏರಿದ್ದ ರಾಘವೇಂದ್ರ, ವಿದ್ಯುತ್ ತಂತಿ ಹಿಡಿಯೋಕೆ ಯತ್ನಿಸಿದ್ದ. ಸುದ್ದಿ ತಿಳಿಯುತ್ತಿದ್ದಂತೆಯೇ ಆ ಮಾರ್ಗದಲ್ಲಿ ಹೋಗುವ ಎಲ್ಲಾ ಮಾರ್ಗಗಳ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ್ದರು.
ಇದನ್ನೂ ಓದಿ: Har Ghar Tiranga: ಕೋಟೆನಾಡಿನ ಮನೆಗಳಲ್ಲಿ ಹಾರಾಡಲಿದೆ ರಾಷ್ಟ್ರಧ್ವಜ, ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಿದ್ಧತೆ
ಕ್ಷಣಮಾತ್ರದ ವ್ಯತ್ಯಾಸದಲ್ಲಿ ಪಾರು
ವಿದ್ಯುತ್ ಸ್ಥಗೀತಗೊಳ್ಳುತ್ತಿದ್ದಂತೆ ಕೆಲವೇ ಸೆಕೆಂಡ್‌ಗಳಲ್ಲಿ ಹೈ ಟೆನ್ಷನ್ ವೈರ್ ಸ್ಪರ್ಶಿಸಿದ್ದರಿಂದ ರಾಘವೇಂದ್ರ ಬಚಾವಾಗಿದ್ದ. ವಿದ್ಯುತ್ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ರಾಘವೇಂದ್ರ ಅಪಾಯದಿಂದ ಪಾರಾಗಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರಾಘವೇಂದ್ರ ಆತ್ಮಹತ್ಯೆಗೆ ಮುಂದಾಗಿದ್ದ ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರಿಂದ ರಾಘವೇಂದ್ರನ ವಿಚಾರಣೆ ನಡೆಸಿದ್ದಾರೆ. ಹೆಸ್ಕಾಂ ಅಧಿಕಾರಿಗಳ ಕಾರ್ಯಕ್ಕೆ ಪೊಲೀಸರು, ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ