ಕೋಯಿಕ್ಕೋಡ್ ವಿಮಾನ ದುರಂತ: ನೂರಾರು ಜನರ ಜೀವ ಉಳಿಸಿ ತನ್ನ ಪ್ರಾಣವನ್ನೇ ಬಲಿಕೊಟ್ಟ ಪೈಲಟ್?
Air India Express Crash: ದೀಪಕ್ ಬೋಯಿಂಗ್ 737 ವಿಮಾನ ಚಾಲನೆ ಮಾಡುವಲ್ಲಿ ತುಂಬಾನೇ ಅನುಭವ ಹೊಂದಿದ್ದರು. ಹೈದರಾಬಾದ್ನಲ್ಲಿ ಏರ್ಫೋರ್ಸ್ ಅಕಾಡೆಮಿಯಿಂದ ಸ್ವಾರ್ಡ್ ಆಫ್ ಹಾನರ್ ಗೌರವ ಕೂಡ ಅವರಿಗೆ ದೊರೆತಿತ್ತು.
ಕೋಯಿಕ್ಕೋಡ್ (ಆ.8): ಕೇರಳದ ಕೊಯಿಕ್ಕೋಡ್ನಲ್ಲಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಪೈಲಟ್ ಸೇರಿ 17 ಜನರು ಮೃತಪಟ್ಟಿದ್ದಾರೆ. ಅಚ್ಚರಿ ಎಂದರೆ, ಪೈಲಟ್ಗಳು ನೂರಾರು ಜನರ ಪ್ರಾಣ ಉಳಿಸಿ ತಾವು ಮೃತಪಟ್ಟಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ವಿಂಗ್ ಕಮಾಂಡರ್ ದೀಪಕ್ ಸಾಥೆ ಈ ಮೊದಲು ಇಂಡಿಯನ್ ಏರ್ಫೋರ್ಸ್ನಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಏರ್ ಇಂಡಿಯಾ ವಿಮಾನ ಚಾಲನೆ ಮಾಡಲು ಆರಂಭಿಸಿದ್ದರು. ಅವರ ಕಾರ್ಯ ವೈಖರಿ ನೋಡಿ ಅವರನ್ನು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಪೈಲಟ್ ಆಗಿ ಬಡ್ತಿ ನೀಡಲಾಗಿತ್ತು. ದೀಪಕ್ ಬೋಯಿಂಗ್ 737 ವಿಮಾನ ಚಾಲನೆ ಮಾಡುವಲ್ಲಿ ತುಂಬಾನೇ ಅನುಭವ ಹೊಂದಿದ್ದರು. ಹೈದರಾಬಾದ್ನಲ್ಲಿ ಏರ್ಫೋರ್ಸ್ ಅಕಾಡೆಮಿಯಿಂದ ಸ್ವಾರ್ಡ್ ಆಫ್ ಹಾನರ್ ಗೌರವ ಕೂಡ ಅವರಿಗೆ ದೊರೆತಿತ್ತು.
ಸಾವು-ನೋವು ಕಡಿಮೆ ಆಗಲು ದೀಪಕ್ ಅವರ ಚಾಣಾಕ್ಷತೆಯೇ ಕಾರಣ ಎನ್ನುವ ಮಾತು ಕೇಳಿ ಬಂದಿದೆ. ಕೋಯಿಕ್ಕೋಡ್ನ ವಿಮಾನ ನಿಲ್ದಾಣ ತುಂಬಾನೇ ಅಪಾಯಕಾರಿಯಾಗಿದೆ. ಅಲ್ಲದೆ, ನಿನ್ನೆ ಭಾರೀ ಪ್ರಮಾಣದ ಮಳೆ ಕೂಡ ಸುರಿಯುತ್ತಿತ್ತು. ವಿಮಾನ ಬಿದ್ದ ರಭಸಕ್ಕೆ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಯೂ ಇತ್ತು. ಆದರೆ, ದೀಪಕ್ ಹೀಗಾಗಂದಂತೆ ತಡೆದಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ದುರಂತದಲ್ಲಿ ಮೃತಪಟ್ಟ ಮತ್ತೋರ್ವ ಪೈಲಟ್ ಅಖಿಲೇಶ್ ಅವರಿಗೆ ಕಳೆದ ವರ್ಷವಷ್ಟೇ ಮದುವೆಯಾಗಿತ್ತು.
ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಇದು ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗುದೆ. ದುಬೈ- ಕೊಜಿಕೋಡ್ ವಿಮಾನ X1344 ಬೋಯಿಂಗ್ 737 ವಿಮಾನದಲ್ಲಿ 174 ಮಂದಿ ಪ್ರಯಾಣಿಕರು ಇದ್ದರು. ಈ ವಿಮಾನ ಕೋಯಿಕ್ಕೋಡ್ನಲ್ಲಿ ಸಂಜೆ 7;41ರಲ್ಲಿ ಲ್ಯಾಂಡ್ ಆಗಿದ್ದು, ರನ್ವೇನಲ್ಲಿ ಅಪಘಾತಕ್ಕೆ ಈಡಾಗಿದೆ. ಈ ವೇಳೆ ಇಬ್ಬರು ಪೈಲಟ್ ಸೇರಿ 17 ಜನರು ಮೃತಪಟ್ಟಿದ್ದಾರೆ.
Published by:Rajesh Duggumane
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ