Punjab: ಪಂಜಾಬಿನಲ್ಲಿ ಪ್ರತಿಭಟನೆ ಮಾಡಬೇಡಿ; ದೆಹಲಿ- ಹರಿಯಾಣಕ್ಕೆ ಹೋಗಿ ಎಂದ ಸಿಎಂ ಕ್ಯಾಪ್ಟನ್​

ಅಕಾಲಿದಳದ ನಾಯಕರಾದ ಹರ್ಸಿಮ್ರತ್ ಕೌರ್ ಬಾದಲ್ ( Harsimrat Kaur Badal ) ಮತ್ತು ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ (former CM Parkash Singh Badal )ಕೂಡ ಈ ಮೊದಲು ಕಾನೂನುಗಳ ಪರವಾಗಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು, ಆದರೆ ಆ ನಂತರ ಅವರು ತಮ್ಮ ಓಟಿನ ಬ್ಯಾಂಕಿಗೆ ಹೆದರಿ "ಯು-ಟರ್ನ್" ಹೊಡೆದರು ಎಂದು ವ್ಯಂಗ್ಯವಾಡಿದರು.

ಪಂಜಾಬ್ ಸಿಎಂ ಅಮರೀಂದರ್ ಸಿಂಗ್

ಪಂಜಾಬ್ ಸಿಎಂ ಅಮರೀಂದರ್ ಸಿಂಗ್

 • Share this:
  Punjab: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ (Captain Amarinder Singh ) ಅವರು ಸೋಮವಾರ ರೈತರ ಪ್ರತಿಭಟನೆಗಳು ರಾಜ್ಯದ ಹಿತಾಸಕ್ತಿಗೆ ಧಕ್ಕೆ ತರುತ್ತಿದ್ದು, ಇದರಿಂದ ಭಾರೀ ತೊಂದರೆಯಾಗುತ್ತಿದೆ. ರೈತ ಸಂಘಗಳಿಗೆ ಪಂಜಾಬ್ ನಲ್ಲಿ ಪ್ರತಿಭಟನೆ ನಿಲ್ಲಿಸಿ, ಬದಲಾಗಿ ಭಾರತದ ಇತರ ಭಾಗಗಳತ್ತ ಗಮನ ಹರಿಸಿ ಎಂದು ಹೇಳಿದರು.

  ಪ್ರಸ್ತುತ ಪಂಜಾಬ್​ ರಾಜ್ಯದಲ್ಲಿ 113 ಸ್ಥಳಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಆರ್ಥಿಕ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತಿವೆ ಎಂದು ಮುಖ್ಯಮಂತ್ರಿ ಹೇಳಿದರು.

  ಚಬ್ಬೇವಾಲ್ (Chabbewal) ವಿಧಾನಸಭಾ ಕ್ಷೇತ್ರದ ಮುಖ್ಲಿಯಾನಾ ( Mukhliana) ಗ್ರಾಮದಲ್ಲಿ ಸರ್ಕಾರಿ ಕಾಲೇಜಿಗೆ ಶಂಕುಸ್ಥಾಪನೆ ಮಾಡಿದ ನಂತರ ಅವರು ಭಾಷಣ ಮಾಡಿದ ವೇಳೆ ಈ ಮಾತುಗಳನ್ನು ಆಡಿದರು. ಆಂದೋಲನ ಮಾಡುವ ರೈತರು ನನ್ನ ಮಾತನ್ನು ಒಪ್ಪಿಕೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ಅವರು ಹೇಳಿದರು.

  ಅಮರೀಂದರ್, "ರೈತರು ಧರಣಿ ನಡೆಸಬೇಕು ಎನ್ನುವ ಇರಾದೆ ಹೊಂದಿದ್ದರೆ, ಅವರು ಪಂಜಾಬ್ ಬದಲಿಗೆ ಹರಿಯಾಣ ಮತ್ತು ದೆಹಲಿಗೆ ತೆರಳಬೇಕು" ಎಂದು ತಮ್ಮ ಭಾಷಣದಲ್ಲಿ ಹೇಳಿದರು.


  ಪಂಜಾಬ್‌ನಲ್ಲಿ ರಾಜ್ಯ ಸರ್ಕಾರ ಮತ್ತು ಜನರು ಈಗಾಗಲೇ ಈ ಪ್ರತಿಭಟನೆಗೆ ತಮ್ಮ ಒಗ್ಗಟ್ಟನ್ನು ಹಾಗೂ ಬೆಂಬಲವನ್ನು ವ್ಯಕ್ತಪಡಿಸಿರುವುದರಿಂದ ಅವರು ರೈತ ಸಂಘಗಳನ್ನು ಪಂಜಾಬ್‌ನಲ್ಲಿ ಪ್ರತಿಭಟನೆ ನಡೆಸದಂತೆ ಒತ್ತಾಯಿಸಿದರು.


  ಆದರೂ ರೈತರು ಕೇಂದ್ರ ಸರ್ಕಾರದ ಮುಂದೆ ಇಡುತ್ತಿರುವ ಬೇಡಿಕೆಗಳನ್ನು ಈಡೇರಿಸುವಲ್ಲಿ ಬಿಜೆಪಿಯು ಅತಿಯಾದ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಬಗ್ಗೆ ಕಳವಳ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಪ್ರತಿಭಟನೆಗಳನ್ನು ನಡೆಸುವ ಬದಲು "ಕಠಿಣ ಮತ್ತು ರೈತ ವಿರೋಧಿ" ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಸಿಎಂ ಹೇಳಿದರು.

  ಹೊಸ ಕೃಷಿ ಕಾನೂನುಗಳ ವಿಚಾರದಲ್ಲಿ ಶಿರೋಮಣಿ ಅಕಾಲಿ ದಳ (Shiromani Akali Dal) ರೈತರನ್ನು ಮೋಸಗೊಳಿಸುತ್ತಿದೆ ಎಂದು ಆರೋಪಿಸಿದ ಸಿಎಂ, ಅಕಾಲಿದಳದ ಒಪ್ಪಿಗೆಯೊಂದಿಗೆ ಈ ಕೆಟ್ಟ ಕಾನೂನುಗಳನ್ನು ರಚಿಸಲಾಗಿದೆ ಎಂದು ಆರೋಪಿಸಿದರು. ಅಕಾಲಿದಳದ ನಾಯಕರಾದ ಹರ್ಸಿಮ್ರತ್ ಕೌರ್ ಬಾದಲ್ ( Harsimrat Kaur Badal ) ಮತ್ತು ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ (former CM Parkash Singh Badal )ಕೂಡ ಈ ಮೊದಲು ಕಾನೂನುಗಳ ಪರವಾಗಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು, ಆದರೆ ಆ ನಂತರ ಅವರು ತಮ್ಮ ಓಟಿನ ಬ್ಯಾಂಕಿಗೆ ಹೆದರಿ "ಯು-ಟರ್ನ್" ಹೊಡೆದರು ಎಂದು ವ್ಯಂಗ್ಯವಾಡಿದರು.

  ಇದನ್ನೂ ಓದಿ: Explained: ಈ ದೇಶದಲ್ಲಿ ಜನಗಳಿಗಿಂತ ದನ- ಕರುಗಳೇ ಜಾಸ್ತಿ: ಜಾನುವಾರು ಸಾಕುವುದು ಬೇಡ ಎಂದ ನೆದರ್‌ಲ್ಯಾಂಡ್

  1950 ರಿಂದ 127 ಬಾರಿ ಸಂವಿಧಾನವನ್ನು ತಿದ್ದುಪಡಿ (Constitution amended) ಮಾಡಲಾಗಿದೆ ಎಂದು ಸಿಎಂ ಹೇಳಿದರು. "ಹಾಗಾದರೆ ಸಿಂಗು ಮತ್ತು ಟಿಕ್ರಿ ಗಡಿಗಳಲ್ಲಿ ಕುಳಿತ ರೈತರಿಗೆ ಸಹಾಯ ಮಾಡಲು ಕೃಷಿ ಕಾನೂನುಗಳನ್ನು ಏಕೆ ರದ್ದುಗೊಳಿಸಬಾರದು?" ಎಂದು ಅವರು ಹೇಳಿದರು, ಪಂಜಾಬ್ ಸರ್ಕಾರವು ಆಂದೋಲನದ ಸಮಯದಲ್ಲಿ ಸಾವನ್ನಪ್ಪಿದ ರಾಜ್ಯದ ಪ್ರತಿಯೊಬ್ಬ ರೈತರ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳನ್ನು ನೀಡಿದೆ ಎನ್ನುವ ಮಾಹಿತಿ ನೀಡಿದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.

  Published by:HR Ramesh
  First published: