Captain Amarinder| ಹೊಸ ಪಕ್ಷ ಆರಂಭಿಸಲು ಮುಂದಾದ ಅಮರೀಂದರ್​; ರೈತ ಪ್ರತಿಭಟನೆ ಬಗೆಹರಿದರೆ ಬಿಜೆಪಿ ಜೊತೆಗೆ ಮೈತ್ರಿ!

Punjab Politics: ಕಾಂಗ್ರೆಸ್‌ನ ಪ್ರಬಲ ಪ್ರಾದೇಶಿಕ ನಾಯಕರಲ್ಲಿ ಒಬ್ಬರಾದ 79 ವರ್ಷದ ಕ್ಯಾಪ್ಟನ್ ಅಮರೀಂದರ್​, ಕಳೆದ ತಿಂಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯ ನಿವಾಸದಲ್ಲಿ ಭೇಟಿ ಮಾಡಿದ್ದರು, ಈ ವೇಳೆ ಅವರು ಬಿಜೆಪಿ ಸೇರುವ ಬಗ್ಗೆ ರಾಜಕೀಯ ವಲಯದಲ್ಲಿ ವದಂತಿಗಳು ಗದ್ದಲವೆಬ್ಬಿಸಿದ್ದವು.

ಅಮರೀಂದರ್ ಸಿಂಗ್.

ಅಮರೀಂದರ್ ಸಿಂಗ್.

 • Share this:
  ಪಂಜಾಬ್​ನ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್​ ಹಿರಿಯ ನಾಯಕರಾಗಿದ್ದ ಕ್ಯಾಪ್ಟನ್ ಅಮರೀಂದರ್​ (Captain Amarinder) ನಾನಾ ಕಾರಣಗಳಿಗಾಗಿ ಕಳೆದ ತಿಂಗಳು ಸಿಎಂ ಸ್ಥಾನದಿಂದ ಕೆಳಗಿಳಿಸಲ್ಪಟ್ಟಿದ್ದರು. ಅವರ ಸ್ಥಾನಕ್ಕೆ ದಲಿತ ನಾಯಕರಾದ ಚರಣಜೀತ್​ ಸಿಂಗ್ ಚೆನ್ನಿ (Charanjit Singh Channi) ಅವರನ್ನು ನೇಮಕ ಮಾಡಲಾಗಿತ್ತು. ಆದರೆ, ಘಟನೆಯಿಂದ ಮನನೊಂದಿದ್ದ ಕ್ಯಾಪ್ಟನ್ ಅಮರೀಂದರ್​ ಸಿಂಗ್ ಕಾಂಗ್ರೆಸ್​ (Congress) ಪಕ್ಷದಿಂದಲೇ ಹೊರ ನಡೆದಿದ್ದರು. ಅಲ್ಲದೆ, ಹೊಸ ಪಕ್ಷವನ್ನು ಸ್ಥಾಪಿಸುವುದಾಗಿಯೂ ತಿಳಿಸಿದ್ದರು. ಅದರಂತೆ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮಂಗಳವಾರ ತಮ್ಮ ಸ್ವಂತ ರಾಜಕೀಯ ಪಕ್ಷವನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ. ಅಲ್ಲದೆ, "2022 ರ ಪಂಜಾಬ್ ವಿಧಾನಸಭಾ ಚುನಾವಣೆಗೆ ತಾನು ಬಿಜೆಪಿಯೊಂದಿಗೆ (BJP) ಮೈತ್ರಿ ಮಾಡಿಕೊಳ್ಳಲು ಮುಕ್ತನಾಗಿದ್ದೇನೆ" ಎಂದು ಘೋಷಿಸಿದ್ದಾರೆ.

  ಅಮರೀಂದರ್ ಹೊಸ ಪಕ್ಷದ ಘೋಷಣೆ:

  ಅಮರೀಂದರ್​ ಸಿಂಗ್ ಅವರ ಅವರ ರಾಜಕೀಯ ಸಲಹೆಗಾರ ರವೀನ್ ತುಕ್ರಾಲ್ ಟ್ವೀಟ್ ಮಾಡುವ ಮೂಲಕ ಹೊಸ ಸ್ಥಾಪನೆಯನ್ನು ಖಚಿತಪಡಿಸಿದ್ದು, "ಪಂಜಾಬ್ ಭವಿಷ್ಯಕ್ಕಾಗಿ ಯುದ್ಧ ನಡೆಯುತ್ತಿದೆ. ಒಂದು ವರ್ಷದಿಂದ ತಮ್ಮ ಉಳಿವಿಗಾಗಿ ಹೋರಾಡುತ್ತಿರುವ ನಮ್ಮ ರೈತರು ಸೇರಿದಂತೆ ಪಂಜಾಬ್ ಮತ್ತು ಅದರ ಜನರ ಹಿತಾಸಕ್ತಿಗಾಗಿ ನನ್ನದೇ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಶೀಘ್ರದಲ್ಲೇ ಘೋಷಿಸುತ್ತೇನೆ" ಎಂದು ತಿಳಿಸಿದ್ದಾರೆ.  ಮತ್ತೊಂದು ಟ್ವೀಟ್​ನಲ್ಲಿ, "2022 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ರೈತರ ಹಿತದೃಷ್ಟಿಯಿಂದ #FarmersProtest ಬಗೆಹರಿಸಿದರೆ ಬಿಜೆಪಿ ಪಕ್ಷದ ಜೊತೆ ಸೀಟು ಹೊಂದಾಣಿಗೆ ಮಾಡುವ ಭರವಸೆ ಇದೆ. ಒಡೆದ ಅಕಾಲಿ ಗುಂಪುಗಳು, ವಿಶೇಷವಾಗಿ ದಿಂಡಸ ಮತ್ತು ಬ್ರಹ್ಮಪುರ ಬಣಗಳಂತಹ ಸಮಾನ ಮನಸ್ಕ ಪಕ್ಷಗಳೊಂದಿಗಿನ ಮೈತ್ರಿಯನ್ನೂ ನಾವು ಎದುರು ನೋಡುತ್ತಿದ್ದೇವೆ" ಎಂದು ಟ್ವೀಟ್​ನಲ್ಲಿ ತಿಳಿಸಲಾಗಿದೆ.

  ನವಜೋತ್​ ಸಿಂಗ್ ಸಿಧು ಕಾರಣಕ್ಕೆ ಅಧಿಕಾರದಿಂದ ಇಳಿದಿದ್ದ ಕ್ಯಾಪ್ಟನ್:

  ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಹಿರಿಯ ನಾಯಕ ನವಜೋತ್​ ಸಿಂಗ್ ಸಿಧು ಅವರನ್ನು ಇತ್ತೀಚೆಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ, ಅಧಿಕಾರದ ವಿಚಾರದಲ್ಲಿ ಈ ಇಬ್ಬರೂ ನಾಯಕರ ವಿರುದ್ಧ ತೀವ್ರ ಹೋರಾಟ ವ್ಯಕ್ತವಾದ ಹಿನ್ನೆಲೆಯಲ್ಲಿ ಅಮರೀಂದರ್​ ಸಿಂಗ್ ತನ್ನ ಸಿಎಂ ಸ್ಥಾನವನ್ನು ಕಳೆದುಕೊಂಡಿದ್ದರು. ಅಲ್ಲದೆ, ಈ ಅಧಿಕಾರದ ಹೋರಾಟವನ್ನು "ಅವಮಾನಕಾರಿ" ಎಂದು ಉಲ್ಲೇಖಿಸಿ ಜರಿದಿದ್ದರು.

  ಸಿಧು ವಿರುದ್ಧ ಕ್ಯಾಪ್ಟನ್ ಕಿಡಿ:

  ಈ ವೇಳೆ ನವಜೋತ್​ ಸಿಂಗ್ ವಿರುದ್ಧ ಸರಣಿ ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದ ಕ್ಯಾಪ್ಟನ್ ಅಮರೀಂದರ್, "ನನ್ನ ಜನರು ಮತ್ತು ನನ್ನ ರಾಜ್ಯದ ಭವಿಷ್ಯವನ್ನು ಭದ್ರಪಡಿಸುವವರೆಗೂ ತಾನು ವಿಶ್ರಾಂತಿ ಪಡೆಯುವುದಿಲ್ಲ. ಪಂಜಾಬ್‌ಗೆ ರಾಜಕೀಯ ಸ್ಥಿರತೆ ಮತ್ತು ಆಂತರಿಕ-ಬಾಹ್ಯ ಬೆದರಿಕೆಗಳಿಂದ ರಕ್ಷಣೆ ಬೇಕು. ನನ್ನ ಜನರಿಗೆ ನಾನು ಭರವಸೆ ನೀಡುತ್ತೇನೆ ರಾಜ್ಯದ ಶಾಂತಿ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾನು ಏನು ಬೇಕಾದರೂ ಮಾಡುತ್ತೇನೆ. ಏಕೆಂದರೆ ಇಂದು ಈ ವಿಚಾರಗಳೆಲ್ಲವೂ ಅಪಾಯದಲ್ಲಿದೆ" ಎಂದು ಕಿಡಿಕಾರಿದ್ದರು.

  ಇದನ್ನೂ ಓದಿ: Bhabesh Kalita| ಪೆಟ್ರೋಲ್ ಬೆಲೆ 200ಕ್ಕೆ ಏರಿದರೆ ಟ್ರಿಪಲ್ ರೈಡಿಂಗ್​ಗೆ ಅವಕಾಶ; ಅಸ್ಸಾಂ ಬಿಜೆಪಿ ಅಧ್ಯಕ್ಷನ ವಿಲಕ್ಷಣ ಹೇಳಿಕೆ!

  ಕುತೂಹಲ ಮೂಡಿಸಿದ್ದ ಅಮಿತ್ ಶಾ ಭೇಟಿ:

  ಕಾಂಗ್ರೆಸ್‌ನ ಪ್ರಬಲ ಪ್ರಾದೇಶಿಕ ನಾಯಕರಲ್ಲಿ ಒಬ್ಬರಾದ 79 ವರ್ಷದ ಕ್ಯಾಪ್ಟನ್ ಅಮರೀಂದರ್​, ಕಳೆದ ತಿಂಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯ ನಿವಾಸದಲ್ಲಿ ಭೇಟಿ ಮಾಡಿದ್ದರು, ಈ ವೇಳೆ ಅವರು ಬಿಜೆಪಿ ಸೇರುವ ಬಗ್ಗೆ ರಾಜಕೀಯ ವಲಯದಲ್ಲಿ ವದಂತಿಗಳು ಗದ್ದಲವೆಬ್ಬಿಸಿದ್ದವು.

  ಇದನ್ನೂ ಓದಿ: ಉತ್ತರಪ್ರದೇಶ ಚುನಾವಣೆಯಲ್ಲಿ ಕಮಾಲ್ ಮಾಡಲಿದೆಯಾ ಎಎಪಿ?; 300 ಯೂನಿಟ್​ವರೆಗೆ ಉಚಿತ ವಿದ್ಯುತ್​ ಭರವಸೆ!

  ಈ ವೇಳೆ ಬಹಿರಂಗ ಹೇಳಿಕೆ ನೀಡಿದ್ದ ಕ್ಯಾಪ್ಟನ್ ಅಮರೀಂದರ್ ಅವರ ಆಪ್ತ ಮೂಲಗಳು, "ಎಲ್ಲಾ ಆಯ್ಕೆಗಳು ತೆರೆದಿವೆ ಇನ್ನೂ ನಿರ್ಧಾರವಷ್ಟೇ ಬಾಕಿ" ಎಂದು ಹೇಳಿಕೆ ನೀಡಿದ್ದವು. ಈ ಹೇಳಿಕೆ ಕ್ಯಾಪ್ಟನ್ ಅಮರೀಂದರ್​ ಸಿಂಗ್ ಬಿಜೆಪಿ ಸೇರಲಿದ್ದಾರೆ ಎಂಬುದನ್ನು ಒತ್ತಿ ಹೇಳಿತ್ತು. ಅಲ್ಲದೆ, ಕೇಸರಿ ಪಕ್ಷದ ಮೂಲಗಳು ಆ ಸಮಯದಲ್ಲಿ CNN-News18 ಗೆ ಹೇಳಿಕೆ ನೀಡಿದ್ದು,  ಪಕ್ಷವು "ಕ್ಯಾಪ್ಟನ್‌ನೊಂದಿಗೆ ಕೆಲಸ ಮಾಡಲು ಉತ್ಸುಕವಾಗಿದೆ" ಎಂದಿತ್ತು. ಆದರೆ, ಹೊಸ ಬೆಳವಣಿಗೆಯಲ್ಲಿ ಇದೀಗ ಅಮರೀಂದರ್​ ಸಿಂಗ್ ಹೊಸ ಪಕ್ಷದ ಸ್ಥಾಪನೆಗೆ ಮುಂದಾಗಿದ್ದಾರೆ.
  Published by:MAshok Kumar
  First published: