Punjab Congress Crisis: ಪಂಜಾಬ್ ಸಿಎಂ ಸ್ಥಾನಕ್ಕೆ ಕ್ಯಾ. ಅಮರೀಂದರ್ ಸಿಂಗ್ ರಾಜೀನಾಮೆ

ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಅಷ್ಟು ಸುಲಭವಾಗಿ ರಾಜೀನಾಮೆ ನೀಡುವುದಿಲ್ಲ. ಅವರಿಂದ ರಾಜೀನಾಮೆ ಕೊಡುಸುವುದು ದೊಡ್ಡ ಸವಾಲು ಎಂದು ಭಾವಿಸಲಾಗಿತ್ತು. ಆದರೆ, ಆ ಎಲ್ಲ ನಿರೀಕ್ಷೆಗಳು ಅಮರೀಂದರ್ ಸಿಂಗ್ ರಾಜೀನಾಮೆಯೊಂದಿಗೆ ಹುಸಿಯಾಗಿವೆ.

ರಾಜ್ಯಪಾಲರನ್ನು ಭೇಟಿಯಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ ಕ್ಯಾ. ಅಮರೀಂದರ್ ಸಿಂಗ್

ರಾಜ್ಯಪಾಲರನ್ನು ಭೇಟಿಯಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ ಕ್ಯಾ. ಅಮರೀಂದರ್ ಸಿಂಗ್

 • Share this:
  ಅಮೃತಸರ್, ಸೆ. 18: ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ (Punjab CM Captain Amarinder Singh) ಮತ್ತು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ನಡುವಿನ ಜಟಾಪಟಿ ತಾರ್ಕಿಕ ಅಂತ್ಯಕ್ಕೆ ಹೋಗಿದೆ. ಅಮರೀಂದರ್ ಸಿಂಗ್ ರಾಜೀನಾಮೆ ಕೊಡುತ್ತಾರೆಂದು ಕೆಲವಾರು ತಿಂಗಳಿಂದ ಇದ್ದ ವದಂತಿ ಇಂದು ಕೊನೆಗೂ ನಿಜವಾಗಿದೆ. ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಪಂಜಾಬ್ ರಾಜ್ಯಪಾಲರಾದ ಬನ್ವರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ನೀಡಿದ್ದಾರೆ.

  ಇದಕ್ಕೂ ಮುನ್ನ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಮಗ ರನೀಂದರ್ ಸಿಂಗ್ ಅವರು ಟ್ವೀಟ್ ಮಾಡಿ, "ಹಾಹಾ ನಿಜವಾಗಿ ಈಗಲೇ ನಾನು ಹೋಗಬೇಕು. ಏಕೆಂದರೆ ನನ್ನ ತಂದೆ ರಾಜಭವನದಲ್ಲಿ ಪಂಜಾಬ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಾಗ ನಾನು ಜೊತೆಯಲ್ಲಿ ಇರಬೇಕು. ಮತ್ತು ನಮ್ಮ ಕುಟುಂಬದ ಮುಖ್ಯಸ್ಥರಾಗಿ ನಮ್ಮನ್ನು ಹೊಸ ಆರಂಭಕ್ಕೆ ಕರೆದೊಯ್ಯಲು ನಾನು ಹೆಮ್ಮೆ ಪಡುತ್ತೇನೆ," ಎಂದು ಹೇಳಿದ್ದರು. ಅಮರೀಂದರ್ ಸಿಂಗ್ ಅವರು ಸಂಜೆ 4: 30 ಕ್ಕೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹೇಳಿದ್ದಾರೆ.

  ಮುಖ್ಯಮಂತ್ರಿಯ ವಿರುದ್ಧದ ದೂರುಗಳ ನಡುವೆ ಕಾಂಗ್ರೆಸ್ ಸಿಎಲ್‌ಪಿ ಸಭೆಗೆ ಕರೆ ನೀಡಿದ್ದರೂ ಸಹ ಈ ಪ್ರಕ್ಷುಬ್ಧತೆಯು ಇಂದು ಮುನ್ನೆಲೆಗೆ ಬಂದಿದೆ. ಕ್ಯಾಪ್ಟನ್ ಪಕ್ಷದಲ್ಲಿನ ತನ್ನ ಸ್ನೇಹಿತರಾದ ಕಮಲ್ ನಾಥ್ ಮತ್ತು ಮನೀಶ್ ತಿವಾರಿ ಅವರಿಗೆ "ಈ ರೀತಿಯ ಅವಮಾನದಿಂದ ಪಕ್ಷದಲ್ಲಿ ಮುಂದುವರಿಯಲು ಸಾಧ್ಯವಿಲ್ಲ" ಎಂದು ಹೇಳಿದ ಕೆಲವು ಗಂಟೆಗಳ ನಂತರ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಾಜಿ ಕ್ಯಾಬಿನೆಟ್ ಸಚಿವ ಮಾಸ್ಟರ್ ಮೋಹನ್ ಲಾಲ್ ಸಿಂಗ್ ಅವರು ಸಿಂಗ್ ಅವರಿಗೆ ಭಾರತೀಯ ಜನತಾ ಪಕ್ಷಕ್ಕೆ ಸೇರಿ ಮತ್ತು ಅಧಿಕಾರ ವಹಿಸಿಕೊಳ್ಳಲು ಆಹ್ವಾನಿಸಿದರು. ಏತನ್ಮಧ್ಯೆ, ಪಕ್ಷದ ವೀಕ್ಷಕರಾದ ದೆಹಲಿಯಿಂದ ಬಂದ ಅಜಯ್ ಮಾಕೆನ್ ಮತ್ತು ಮನೀಶ್ ತಿವಾರಿ ಅವರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಚಂಡೀಗಢದ Chandigarh ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.

  ಇದನ್ನು ಓದಿ: Punjab Crisis- ಕ್ಯಾಪ್ಟನ್ ರಾಜೀನಾಮೆ ಸಾಧ್ಯತೆ; ಹೊಸ ಪಂಜಾಬ್ ಸಿಎಂ ಯಾರೆಂಬುದು ಗಾಂಧಿ ಕುಟುಂಬಕ್ಕೆ ಮಾತ್ರ ಗೊತ್ತು

  ಇದಕ್ಕೂ ಮುನ್ನ ನ್ಯೂಸ್18 ವಾಹಿನಿಗೆ ಇಬ್ಬರು ಪಂಜಾಬ್ ಕಾಂಗ್ರೆಸ್ ಮುಖಂಡರು ಈ ವಿಚಾರವನ್ನು ಖಚಿತಪಡಿಸಿದ್ದರು. ಹೆಸರು ಬಹಿರಂಪಡಿಸಬಾರದೆಂದು ಕೋರಿ ವಾಹಿನಿ ಜೊತೆ ಮಾತನಾಡಿದ ಈ ಇಬ್ಬರು ನಾಯಕರು, ಪಂಜಾಬ್ ಸಿಎಂ ತಲೆದಂಡವಾಗುವ ಸಾಧ್ಯತೆ ಇರುವುದನ್ನು ಖಚಿತಪಡಿಸಿದರು. “ಒಂದು ವಿಚಾರವಂತೂ ಸ್ಪಷ್ಟವಾಗಿದೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಕೆಳಗಿಳಿಯಲಿದ್ದಾರೆ” ಎಂದು ಈ ಇಬ್ಬರು ನಾಯಕರು ಹೇಳಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನ ಕರೆದಿರುವುದು ಹಾಗೂ ಹೈಕಮಾಂಡ್​ನಿಂದ ಈ ಸಭೆಗೆ ಇಬ್ಬರು ವೀಕ್ಷಕರನ್ನ ಕಳುಹಿಸಿರುವುದು ಇದೇ ಕಾರಣಕ್ಕೆ. ಸಿಎಲ್​ಪಿ ಸಭೆ ನಡೆದು ಬಹಳ ಕಾಲವಾಗಿ ಹೋಗಿತ್ತು. ಈಗ ದಿಢೀರ್ ಸಭೆ ಕರೆಯಲಾಗಿದೆ. ಇದು ನಾಯಕತ್ವ ಬದಲಾವಣೆಯ ಉದ್ದೇಶದಿಂದಲೇ ನಡೆಯಲಿರುವ ಸಭೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಕುತೂಹಲವೆಂದರೆ ನ್ಯೂಸ್18 ಜೊತೆ ಮಾತನಾಡಿದ ಈ ಇಬ್ಬರು ಪಂಜಾಬ್ ಕಾಂಗ್ರೆಸ್ ನಾಯಕರ ಹೆಸರು ಸಿಎಂ ರೇಸ್​ನಲ್ಲಿದೆಯಂತೆ. ಆದರೆ, ಅದನ್ನ ಅವರು ಸ್ಪಷ್ಟವಾಗಿ ಒಪ್ಪಿಕೊಳ್ಳಲಿಲ್ಲ. ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಅಷ್ಟು ಸುಲಭವಾಗಿ ರಾಜೀನಾಮೆ ನೀಡುವುದಿಲ್ಲ. ಅವರಿಂದ ರಾಜೀನಾಮೆ ಕೊಡುಸುವುದು ದೊಡ್ಡ ಸವಾಲು ಎಂದು ಭಾವಿಸಲಾಗಿತ್ತು. ಆದರೆ, ಆ ಎಲ್ಲ ನಿರೀಕ್ಷೆಗಳು ಅಮರೀಂದರ್ ಸಿಂಗ್ ರಾಜೀನಾಮೆಯೊಂದಿಗೆ ಹುಸಿಯಾಗಿವೆ.
  Published by:HR Ramesh
  First published: