Punjab Political Crisis| ರಾಷ್ಟ್ರೀಯವಾದಿ ಕ್ಯಾಪ್ಟನ್ ಅಮರೀಂದರ್​ ಸಿಂಗ್ ಅವರನ್ನು ಬಿಜೆಪಿ ಸ್ವಾಗತಿಸುತ್ತದೆ; ಅಶ್ವನಿ ಶರ್ಮಾ

ಪಂಜಾಬ್​ನಲ್ಲಿ ಅಕಾಲಿದಳವನ್ನು ಹೊರತುಪಡಿಸಿ ಎಲ್ಲಾ ರಾಜಕೀಯ ಆಯ್ಕೆಗಳನ್ನು ತನಗೆ ಮುಕ್ತ ಎಂದು ಕ್ಯಾಪ್ಟನ್ ಅಮರೀಂದರ್​ ಸಿಂಗ್ ಹೇಳಿದ್ದರು. ಹೀಗಾಗಿ ಅವರು ಈಗ ಬಿಜೆಪಿ ಪಕ್ಷಕ್ಕೆ ಸೇರುತ್ತಾರೆಯೇ? ಎಂಬ ಸಂಶಯ ಮನೆ ಮಾಡಿದೆ.

ಬಿಜೆಪಿ ನಾಯಕ ಅಶ್ವನಿ ಶರ್ಮಾ.

ಬಿಜೆಪಿ ನಾಯಕ ಅಶ್ವನಿ ಶರ್ಮಾ.

  • Share this:
    ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ (Captain Amarinder Singh) ಅವರನ್ನು ಕಾಂಗ್ರೆಸ್​ ಹೈಕಮಾಂಡ್​ ಸಿಎಂ ಸ್ಥಾನದಿಂದ ಕೆಳಗಿಳಿಸಿದೆ. ಅಲ್ಲದೆ, ಆ ಸ್ಥಾನಕ್ಕೆ ಚರಣ್​ಜೀತ್​ ಸಿಂಗ್ ಚೆನ್ನಿ ಅವರನ್ನು ಹೊಸ ಸಿಎಂ ಆಗಿ ನೇಮಕ ಮಾಡಿದೆ. ಈ ಮೂಲಕ ಚರಣ್​ಜೀತ್ ಸಿಂಗ್ ಚೆನ್ನಿ (charanjit singh channi) ಪಂಜಾಬ್​ನ (Punjab) ಮೊದಲ ದಲಿತ ಸಿಎಂ ಎಂದು ಹೆಸರಾಗಿದ್ದಾರೆ. ಆದರೆ, ಕಾಂಗ್ರೆಸ್​ ಹೈಕಮಾಂಡ್​ನ (Congress) ಈ ನಿರ್ಧಾರ ಸಾಮಾನ್ಯವಾಗಿ ಅಮರೀಂದರ್​ ಸಿಂಗ್ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ್ದ ಅಮರೀಂದರ್ ಸಿಂಗ್, "ಪಂಜಾಬ್​ನಲ್ಲಿ ಅಕಾಲಿದಳವನ್ನು (Akali Dal) ಹೊರತುಪಡಿಸಿ ಎಲ್ಲಾ ರಾಜಕೀಯ ಆಯ್ಕೆಗಳನ್ನು ತನಗೆ ಮುಕ್ತ" ಎಂದು ಹೇಳಿದ್ದರು. ಹೀಗಾಗಿ ಅಮರೀಂದರ್​ ಸಿಂಗ್ ಬಿಜೆಪಿ (BJP) ಪಕ್ಷಕ್ಕೆ ಸೇರುತ್ತಾರೆಯೇ? ಎಂಬ ಸಂಶಯ ಮನೆ ಮಾಡಿದೆ.

    ಈ ಬಗ್ಗೆ ನ್ಯೂಸ್ 18 ಗೆ ವಿಶೇಷ ಸಂದರ್ಶನದಲ್ಲಿ ಉತ್ತರಿಸಿರುಬ ಪಂಜಾಬ್ ಬಿಜೆಪಿ ಮುಖ್ಯಸ್ಥ ಅಶ್ವನಿ ಶರ್ಮಾ, "ಕಾಲ್ಪನಿಕ ಅಥವಾ ಕಾಲ್ಪನಿಕ ಸನ್ನಿವೇಶಗಳ ಬಗ್ಗೆ ಉತ್ತರಿಸುವುದಿಲ್ಲ" ಎಂದಿದ್ದಾರೆ. ಆದರೆ, ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್​ ಸಿಂಗ್ ಸುದೀರ್ಘವಾಗಿ ರಾಜಕೀಯ ಮಾಡಿರುವ ಉನ್ನತ ಮಟ್ಟದ ನಾಯಕ ಮತ್ತು ಬಿಜೆಪಿ ಯಾವಾಗಲೂ ರಾಷ್ಟ್ರೀಯತೆಯನ್ನು ಮಾತನಾಡುವವರನ್ನು ಸ್ವಾಗತಿಸುತ್ತದೆ" ಎಂದು ಹೇಳುವ ಮೂಲಕ ಅಮರೀಂದರ್ ಸಿಂಗ್ ಅವರನ್ನು ಬಿಜೆಪಿಗೆ ಸ್ವಾಗತಿಸಿದ್ದಾರೆ.

    ಅಲ್ಲದೆ, "2022 ರ ವೇಳೆಗೆ ಚರಣ್​ಜೀತ್ ಸಿಂಗ್ ಚನ್ನಿ ತನ್ನ ಸಿಎಂ ಮುಖ ಎಂದು ಕಾಂಗ್ರೆಸ್ ಇನ್ನೂ ಸ್ಪಷ್ಟವಾಗಿ ಹೇಳುತ್ತಿಲ್ಲ ಮತ್ತು ಕಾಂಗ್ರೆಸ್ ಪಂಜಾಬ್‌ನಲ್ಲಿ ಎಸ್‌ಸಿ ಸಮುದಾಯವನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡಲಾಗುತ್ತಿದೆ" ಎಂದು ಅಶ್ವನಿ ಶರ್ಮಾ ತಿಳಿಸಿದ್ದಾರೆ.

    ಅಶ್ವನಿ ಶರ್ಮಾ ಸಂದರ್ಶನದ ಆಯ್ದ ಭಾಗಗಳು;

    ಪ್ರಶ್ನೆ 1);  ಪಂಜಾಬ್‌ನ ಮೊದಲ ದಲಿತ ಸಿಎಂ ಚರಣ್​ಜೀತ್ ಸಿಂಗ್ ಚನ್ನಿ ಅವರ ನೇಮಕವನ್ನು ಕಾಂಗ್ರೆಸ್ ಪಕ್ಷ ಒಂದು ದೊಡ್ಡ ಕ್ರಮವೆಂದು ಹೇಳುತ್ತಿದೆ.

    ಶರ್ಮಾ: ಕಾಂಗ್ರೆಸ್ ತನ್ನ ಕಹಿ ಅಂತಃಕಲಹವನ್ನು ಕೊನೆಗೊಳಿಸುವ ಪ್ರಯತ್ನದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದು ಕಾಂಗ್ರೆಸ್ ದಲಿತರ ಮೇಲಿನ ಪ್ರೀತಿಯನ್ನು ಬೆಳೆಸುವ ಪ್ರಕರಣವಲ್ಲ. ಬದಲಾಗಿ ಕಾಂಗ್ರೆಸ್​ ಮುಂದಿನ ಚುನಾವಣೆಯಲ್ಲಿ ನವಜೋತ್​ ಸಿಂಗ್ ಸಿಧು ಅವರನ್ನು ಚುನಾವಣಾ ಮುಖವನ್ನಾಗಿಸಲಿದೆ. ಕೇವಲ ನಾಲ್ಕು ತಿಂಗಳಿಗಾಗಿ ಮಾತ್ರ ಚರಣ್​ಜೀತ್​ ಸಿಂಗ್ ಚನ್ನಿ ಅವನ್ನು ಸಿಎಂ ಆಗಿ ನೇಮಕ ಮಾಡಿದೆ. ಆದರೆ, ಮುಂದಿನ ಚುನಾವಣೆಯನ್ನು ಕಾಂಗ್ರೆಸ್ ಅವರ ನಾಯಕತ್ವದಲ್ಲಿ ಎದುರುಗೊಳ್ಳುವುದಿಲ್ಲ. ದಲಿತ ಸಮಯದಾಯದ ಮತಗಳಿಗಾಗಿ ಕಾಂಗ್ರೆಸ್​ ತಪ್ಪು ಕಲ್ಪನೆಯನ್ನು ಹರಡಲು ಪ್ರಯತ್ನಿಸುತ್ತಿದೆ. ಇದು ನಿಜವಾದ ಉದ್ದೇಶ. ಆದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಹೇಗೆ ಹೋರಾಡುತ್ತದೆ ಎಂಬ ಬಗ್ಗೆ ರಾವತ್ ಹೇಳಿಕೆಯ ನಂತರ ಪಂಜಾಬಿಗಳು ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಿದ್ದಾರೆ.

    ಪ್ರಶ್ನೆ 2) ಆದರೆ ದೆಹಲಿಯ ಕಾಂಗ್ರೆಸ್ ನಾಯಕರು ಮುಂದಿನ ಚುನಾವಣೆಯನ್ನು ಚನ್ನಿ ಮತ್ತು ನವಜೋತ್​ ಸಿಂಗ್ ಸಿಧು ಇಬ್ಬರ ನಾಯಕತ್ವದಲ್ಲಿ ಎದುರಿಸುವ ಮಾತನ್ನಾಡಿದೆ.

    ಶರ್ಮಾ: ಕಾಂಗ್ರೆಸ್​ ಈಗಾಗಲೇ ಉಂಟಾಗಿರುವ ಹಾನಿಯನ್ನು ನಿಯಂತ್ರಿಸುವ ಸಲುವಾಗಿ ಇಂತಹ ಹೇಳಿಕೆ ನೀಡಿದೆ. ಆದರೆ, ಮುಂದಿನ ಚುನಾವಣೆಯಲ್ಲೂ ಚೆನ್ನಿ ಅವರೇ ಸಿಎಂ ಅಭ್ಯರ್ಥಿ ಎಂಬ ಬಗ್ಗೆ ಕಾಂಗ್ರೆಸ್​ ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಚುನಾವಣೆಯಲ್ಲಿ ಎರಡೂ ಮುಖಗಳು ಇರುತ್ತವೆ ಎಂಬ ಕಾಂಗ್ರೆಸ್ ಹೇಳಿಕೆಯ ಅರ್ಥವೇನು?. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೆಸರನ್ನು ಮುಂದಿಟ್ಟು ಚುನಾವಣೆಯಲ್ಲಿ ಹೋರಾಡಿತ್ತು. ಆ ಸಮಯದಲ್ಲಿ ಸುನಿಲ್ ಜಖರ್‌ನಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಆದರೆ ಪ್ರಚಾರದ ಕೇಂದ್ರ ಬಿಂದು ಕ್ಯಾಪ್ಟನ್ ಅಮರಿಂದರ್ ಅವರೇ ಆಗಿದ್ದರು. ಹಾಗಾದರೆ ಈ ಚುನಾವಣೆಯಲ್ಲಿ, ಯಾರು ಕಾಂಗ್ರೆಸ್ ನ ಮುಂಚೂಣಿಯಲ್ಲಿ ರುತ್ತಾರೆ? ಇದು ಇನ್ನೂ ಸ್ಪಷ್ಟವಾಗಿಲ್ಲ. ಚನ್ನಿ ಸಿಎಂ ಆದ ಮೇಲೆ ನಾವು ಅಭಿನಂದಿಸಿದ್ದೇವೆ. ಅವರಿಗೆ ಸಂಬಂಧಿಸಿದ ಕೆಲವು ವಿವಾದಗಳಿವೆ. ಆದರೆ, ಆ ಕುರಿತು ಮಾತನಾಡಲು ಇದು ಸರಿಯಾದ ಕ್ಷಣವಲ್ಲ.

    ಪ್ರಶ್ನೆ 3); ಅಕಾಲಿ ದಳವನ್ನು ಹೊರತುಪಡಿಸಿ ತನಗೆ ರಾಜಕೀಯ ಆಯ್ಕೆಗಳು ತೆರೆದಿವೆ ಎಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿಕೆಯನ್ನು ನೀವು ಹೇಗೆ ನೋಡುತ್ತೀರಿ?ಬಿಜೆಪಿಗೆ ಕ್ಯಾಪ್ಟನ್ ಬಗ್ಗೆ ಆಸಕ್ತಿ ಇದೆಯೇ?

    ಶರ್ಮಾ: ನಾನು ಕಾಲ್ಪನಿಕ ಅಥವಾ ಕಾಲ್ಪನಿಕ ಸನ್ನಿವೇಶಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಕ್ಯಾಪ್ಟನ್ ರಾಜಕೀಯದಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದಾರೆ ಮತ್ತು ಅವರು ದೊಡ್ಡ ಮಟ್ಟದ ನಾಯಕ ಎಂಬುದರಲ್ಲಿ ಯಾವುದೇ ಸಂದೇಹ ಇಲ್ಲ. ಅವರು ಕಾಂಗ್ರೆಸ್ ನಿಂದ ಅವಮಾನಕ್ಕೊಳಗಾಗಿದ್ದಾರೆ ಎಂಬುದನ್ನು ಅವರೇ ಹೇಳಿದ್ದಾರೆ.  ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಮಾರ್ಗವನ್ನು ಆಯ್ಕೆ ಮಾಡುವ ಹಕ್ಕಿದೆ. ನಾನು ಹೆಚ್ಚು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಆದರೆ ಕ್ಯಾಪ್ಟನ್ ನವಜೋತ್​ ಸಿಂಗ್ ಸಿಧು ಮತ್ತು ಅವರಿಂದ ರಾಷ್ಟ್ರೀಯ ಭದ್ರತೆಗೆ ಆಗಬಹುದಾದ ಅಪಾಯದ ಬಗ್ಗೆ ಏನು ಹೇಳಿದ್ದಾರೆ ಎಂಬುದು ಮುಖ್ಯ. ಯಾವುದೇ ವ್ಯಕ್ತಿ ರಾಷ್ಟ್ರೀಯ ಭದ್ರತೆಗಿಂತ ದೊಡ್ಡವರಾಗಿರುವುದಿಲ್ಲ ಮತ್ತು ಯಾವುದೇ ವೈಯಕ್ತಿಕ ಸ್ನೇಹ ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕಿಂತ ಮೇಲಿರಲಾರದು. ಸಿಧು ಇಮ್ರಾನ್ ಖಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹೋಗುವುದರ ಬಗ್ಗೆ ಅಥವಾ ಪಾಕಿಸ್ತಾನದ ಸೇನಾ ಮುಖ್ಯಸ್ಥನನ್ನು ಅಪ್ಪಿಕೊಳ್ಳುವ ಬಗ್ಗೆ ಕ್ಯಾಪ್ಟನ್ ನೀಡಿರುವ ಹೇಳಿಕೆಯ ಜೊತೆಗೆ ಬಿಜೆಪಿ ಕೂಡ ನಿಂತಿದೆ.

    ಪ್ರಶ್ನೆ 4); ರಾಷ್ಟ್ರೀಯತೆಯ ಬಗೆಗಿನ ಬಿಜೆಪಿ ಮತ್ತು ಕ್ಯಾಪ್ಟನ್ ದೃಷ್ಟಿಕೋನಗಳು ಯಾವಾಗಲೂ ಹೊಂದಿಕೆಯಾಗುತ್ತವೆ.

    ಶರ್ಮಾ: ಕ್ಯಾಪ್ಟನ್ ರಾಷ್ಟ್ರೀಯತೆ ಮತ್ತು ಪಂಜಾಬ್‌ನ ಹಿತಾಸಕ್ತಿಗಳ ಬಗ್ಗೆ ಮಾತನಾಡುವಾಗ, ಮತ್ತು ಹಾಗೆ ಮಾಡಲು ಅವರ ಪಕ್ಷದಿಂದ ದೂರವಾದಾಗ, ಬಿಜೆಪಿಯಲ್ಲಿ ನಾವು ಯಾವಾಗಲೂ ಅವರ ಹೇಳಿಕೆಗಳನ್ನು ಸ್ವಾಗತಿಸುತ್ತೇವೆ. ಅವರ ಸೈನಿಕ ಹಿನ್ನೆಲೆಯು ರಾಷ್ಟ್ರವನ್ನು ಎಲ್ಲಕ್ಕಿಂತ ಹೆಚ್ಚಾಗಿ ಇರಿಸುವ ಅವರ ಹೇಳಿಕೆಗಳಲ್ಲಿ ಯಾವಾಗಲೂ ಪ್ರತಿಫಲಿಸುತ್ತದೆ.
    Published by:MAshok Kumar
    First published: