ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕ್ರಮೇಣ ಕಾಂಗ್ರೆಸ್ ಹೈಕಮಾಂಡ್ ಜೊತೆಗಿನ ಸಂಬಂಧ, ವಿಷಯಗಳಿಂದ ಪ್ರತ್ಯೇಕವಾಗಿರುವುದನ್ನು ಕಂಡುಕೊಂಡಿದ್ದಾರೆಯೇ? ಏಕೆಂದರೆ ಇತ್ತೀಚಿನ ಬೆಳವಣಿಗೆಯಲ್ಲಿ ಸದಾ ಹಿನ್ನಡೆಯನ್ನೇ ಅನುಭವಿಸುತ್ತಿರುವ ಕ್ಯಾಪ್ಟನ್ ಮಂಕಾಗಿದ್ದಾರೆಯೇ? ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಪ್ರಶಾಂತ್ ಕಿಶೋರ್ ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರರಾಗಿ ರಾಜೀನಾಮೆ ನೀಡಿರುವುದು ಸಹ ಸಿಂಗ್ ಅವರಿಗೆ ಉಂಟಾಗಿರುವ ಹಿನ್ನಡೆ ಎಂದೇ ಹೇಳಲಾಗುತ್ತಿದೆ.
ಕಿಶೋರ್ ಅವರು ಅಮರೀಂದರ್ ಅವರಿಗೆ ಗುರುವಾರ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ಅವರು "ಸಕ್ರಿಯ ರಾಜಕೀಯದಿಂದ ತಾತ್ಕಾಲಿಕ ವಿರಾಮ ತೆಗೆದುಕೊಳ್ಳುತ್ತಿರುವ ಕಾರಣ" ಸಲಹೆಗಾರನ ಸ್ಥಾನದಿಂದ ಕೆಳಗಿಳಿಯುವುದಾಗಿ ಹೇಳಿದ್ದಾರೆ.
ಆದರೆ ಕಿಶೋರ್ ರಾಜೀನಾಮೆ ಕೊಟ್ಟ ಕಅರಣದಿಂದ ಪಂಜಾಬ್ ಕಾಂಗ್ರೆಸ್‌ನಲ್ಲಿ ಸಿಎಂ ಈಗ ಹೆಚ್ಚು ಏಕಾಂಗಿಯಾಗುತ್ತಿದ್ದಾರೆ ಎಂಬ ಊಹಾಪೋಹಕ್ಕೆ ಕಾರಣವಾಗಿದೆ. ಪಂಜಾಬ್ ಕಾಂಗ್ರೆಸ್ ನ ಅಧ್ಯಕ್ಷಗಿರಿಯನ್ನು ನವಜೋತ್ ಸಿಂಗ್ ಸಿಧುಗೆ ವಹಿಸಿದ ಕೆಲ ದಿನಗಳ ನಂತರ ಕಿಶೋರ್ ರಾಜೀನಾಮೆ ನೀಡಿದ್ದಾರೆ. ಸಿಧು ಅವರ ಔಪಚಾರಿಕ ನೇಮಕಾತಿಗೆ ಮುಂಚೆಯೇ, ಕಿಶೋರ್ ಸಿಧು ಜೊತೆ ನೇರ ಸಂಪರ್ಕದಲ್ಲಿದ್ದರು ಎಂದು ಉನ್ನತ ಮೂಲಗಳು ಬಹಿರಂಗಪಡಿಸಿವೆ.
ಇದು ಪಕ್ಷದ ವ್ಯವಹಾರಗಳಲ್ಲಿ ಅಮರೀಂದರ್ ಅವರ ಪ್ರಭಾವ ಈ ಘಟನೆಗಳಿಂದ ಕಡಿಮೆಯಾಗುತ್ತಿದೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯ ಟಿಕೆಟ್ ವಿತರಣೆಯಲ್ಲಿ ಇವರ ಕೈಚಳಕ ನಡೆಯದೇ ಇರಬಹುದು ಎಂದು ಹೇಳಬಹುದು. "ಮೇಲ್ನೋಟಕ್ಕೆ, ಪಕ್ಷದ ಹೈಕಮಾಂಡ್ ಮೇಲೆ ಸಿಧು ಹೆಚ್ಚು ಹಿಡಿತ ಹೊಂದಿದ್ದಾರೆ ಮತ್ತು ಕಿಶೋರ್ ನಂತಹ ಹಳೆಯ ಸಹವರ್ತಿಗಳು ಕ್ಯಾಪ್ಟನ್ ಅವರನ್ನು ದೂರವಿಡುತ್ತಿದ್ದಾರೆ ಎಂದು ತೋರುತ್ತದೆ. ಅಂತಿಮವಾಗಿ, ಇದು ಟಿಕೆಟ್ ವಿತರಣೆಯಲ್ಲಿ ಪ್ರತಿಫಲಿಸುತ್ತದೆ, ”ಎಂದು ಮಾಲ್ವಾದ ನಾಯಕ ಹೇಳಿದರು.
ಅಮರೀಂದರ್ ಅವರನ್ನು ಮೂಲೆಗೆ ತಳ್ಳಿದ ನಂತರ ಅವರ ಮುಂದಿನ ನಡೆ ಹಾಗೂ ಬೆಳವಣಿಗೆಗಳ ಬಗ್ಗೆ ರಾಜಕೀಯ ವೀಕ್ಷಕರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. "ಅವರು ಮತ್ತೆ ಹೋರಾಡುತ್ತಾರೆಯೇ ಮತ್ತು ಪಕ್ಷ ರಾಜಕೀಯದಲ್ಲಿ ತಮ್ಮ ಪ್ರಭಾವವನ್ನು ಮತ್ತೆ ಸ್ಥಾಪಿಸುತ್ತಾರೆಯೇ ಅಥವಾ ರಾಜ್ಯ ಘಟಕದಲ್ಲಿ ಹೊರಹೊಮ್ಮಿರುವ ಹೊಸ ಶಕ್ತಿ ಕೇಂದ್ರಕ್ಕೆ ಶರಣಾಗುತ್ತಾರೆಯೇ, ಮುಂದಿನ ಎಲ್ಲಾ ಬೆಳವಣಿಗೆಗಳನ್ನು ನೋಡಲು ಆಸಕ್ತಿದಾಯಕವಾಗಿದೆ. ಅವರು ಯಾವ ಮಾರ್ಗವನ್ನು ಆರಿಸಿಕೊಂಡರೂ ಅದು ಪಂಜಾಬ್ ರಾಜಕೀಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ, ’’ ಎಂದು ಹಿರಿಯ ನಾಯಕರೊಬ್ಬರು ಟೀಕಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ