Punjab Politics- ಕಾಂಗ್ರೆಸ್ ತೊರೆದ ಕ್ಯಾಪ್ಟನ್; ಪಾಕ್ ಭಕ್ತನೆಂದು ಸಿಧುಗೆ ಲೇವಡಿ; ಹೊಸ ಪಕ್ಷದ ಹೆಸರು ಘೋಷಣೆ

Capt. Amarinder Singh’s resignation letter to Sonia Gandhi- ನವಜೋತ್ ಸಿಧು ಒಬ್ಬ ಪಾಕಿಸ್ತಾನ ಅನುಯಾಯಿ, ಹರೀಶ್ ರಾವತ್ ವಂಚಕ ವ್ಯಕ್ತಿ ಎಂದು ಟೀಕಿಸಿರುವ ಮಾಜಿ ಪಂಜಾಬ್ ಸಿಎಂ, ಸಿಧುಗೆ ರಾಹುಲ್, ಪ್ರಿಯಾಂಕಾ ಕೃಪೆ ಇದೆ ಎಂದು ಆರೋಪಿಸಿದ್ದಾರೆ.

ಕ್ಯಾಪ್ಟನ್ ಅಮರೀಂದರ್ ಸಿಂಗ್

ಕ್ಯಾಪ್ಟನ್ ಅಮರೀಂದರ್ ಸಿಂಗ್

 • News18
 • Last Updated :
 • Share this:
  ಅಮೃತಸರ್, ನ. 02: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ (Former Punjab CM Amarinder Singh Resigation to Congress) ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿ ತಮ್ಮನ್ನ ನಡೆಸಿಕೊಂಡ ರೀತಿ ಬಗ್ಗೆ ಬೇಸರ ತೋಡಿಕೊಂಡು ಏಳು ಪುಟಗಳ ಪತ್ರವನ್ನು ಅವರು ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ (Letter to Sonia Gandhi) ಅವರಿಗೆ ಬರೆದಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ನವಜೋತ್ ಸಿಧು, ಹರೀಶ್ ರಾವತ್ ಅವರ ಬಗ್ಗೆ ಈ ಪತ್ರದಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಜೊತೆಗೆ, ತಾನು ಸ್ಥಾಪಿಸಲು ಹೊರಟಿರುವ ಹೊಸ ಪಕ್ಷಕ್ಕೆ ಹೆಸರನ್ನೂ ಅವರು ಬಹಿರಂಗಪಡಿಸಿದ್ಧಾರೆ.

  ತಾನು ನಾಲ್ಕೂವರೆ ವರ್ಷ ಕಾಲ ಒಳ್ಳೆಯ, ಸ್ವಚ್ಛ ಹಾಗೂ ಪಾರದರ್ಶಕ ಆಡಳಿತ ನೀಡಿರುವ ಬಗ್ಗೆ ಅವರು ಪತ್ರದಲ್ಲಿ ಬರೆದಿದ್ದಾರೆ. ಸಾಧನೆಗಳು ಬಹಳಷ್ಟಿವೆ. ಕೋವಿಡ್ ಪಿಡುಗನ್ನು ಅತ್ಯುತ್ತಮವಾಗಿ ನಿಭಾಯಿಸಿದ ರಾಜ್ಯಗಳಲ್ಲಿ ಪಂಜಾಬ್ ಒಂದು. ಸಂಪನ್ಮೂಲ ಕೊರತೆ, ಪಾಕಿಸ್ತಾನದಿಂಂದ ಮಾದಕವಸ್ತು, ಶಸ್ತ್ರಾಸ್ತ್ರಗಳ ಸ್ಮಗ್ಲಿಂಗ್ ನಿರಂತರವಾಗಿ ನಡೆಯುತ್ತಿದ್ದರೂ ಪಂಜಾಬ್ ಉತ್ತಮವಾಗಿ ಆಡಳಿತ ನಡೆಸಿದೆ. ಒಬ್ಬ ಮುಖ್ಯಮಂತ್ರಿಯಾಗಿ ನಾನು ಇಷ್ಟು ಅಡೆತಡೆಗಳನ್ನ, ಅವಮಾನವನ್ನ ಎಂದೂ ಎದುರಿಸಿರಲಿಲ್ಲ ಎಂದು ತಮ್ಮ ಪತ್ರದಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಿಳಿಸಿದ್ದಾರೆ.

  ಪಾಕ್ ಅನುಯಾಯಿ ಸಿಧು:

  ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರನ್ನ ಪಾಕಿಸ್ತಾನದ ಭಕ್ತ, ಅನುಯಾಯಿ (Sidhu is a Pak Acolyte) ಎಂದು ಕ್ಯಾಪ್ಟನ್ ಟೀಕಿಸಿದ್ದಾರೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಬಾಜ್ವಾ ಮತ್ತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನ ಬಹಿರಂಗವಾಗಿ ಅಪ್ಪಿಕೊಂಡ ಸಿಧು ನಡೆಯ ಬಗ್ಗೆ ಕ್ಯಾಪ್ಟನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಭಾರತೀಯರನ್ನ ಕೊಲ್ಲಲು ಪಾಕ್ ಗಡಿ ಮೂಲಕ ಉಗ್ರರನ್ನು ಕಳುಹಿಸುತ್ತಿರುವುದಕ್ಕೆ ಖಾನ್ ಮತ್ತು ಬಾಜ್ವಾ ಹೊಣೆಗಾರರು. 2017ರಲ್ಲಿ ನನ್ನ ಸರ್ಕಾರ ಬಂದಾಗಿನಿಂದ ಜಮ್ಮು-ಕಾಶ್ಮೀರದಲ್ಲಿ 82 ಪಂಜಾಬೀ ಸೈನಿಕರು ಹುತಾತ್ಮರಾಗಿದ್ದಾರೆ” ಎಂದು ಮಾಜಿ ಪಂಜಾಬ್ ಸಿಎಂ ಹೇಳಿದ್ದಾರೆ.

  ಇದನ್ನೂ ಓದಿ: ಸಬ್​ಮೆರಿನ್​ ರಹಸ್ಯ ಮಾಹಿತಿ ರವಾನೆ: ಇಬ್ಬರು ನೌಕ ಕಮಾಂಡರ್​​ ಸೇರಿ 6ಜನರ ವಿರುದ್ಧ ಚಾರ್ಜ್​ಶೀಟ್​​

  “ಸಿಧುವಿನ ಒಂದೇ ಸಾಧನೆ ಎಂದರೆ ನನ್ನನ್ನು ಮತ್ತು ನನ್ನ ಸರ್ಕಾರವನ್ನು ಪದೇಪದೇ ನಿಂದಿಸುವುದು…. ನಾನು ಅವರ ಅಪ್ಪನ ವಯಸ್ಸಾದರೂ ಕೆಟ್ಟ ಭಾಷೆಯಲ್ಲಿ ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ನಿಂದಿಸುತ್ತಾರೆ” ಎಂದು ಕ್ಯಾಪ್ಟನ್ ಬೇಸರ ಪಟ್ಟಿದ್ದಾರೆ.

  ರಾಹುಲ್, ಪ್ರಿಯಾಂಕ ಕೃಪೆ:

  ನವಜೋತ್ ಸಿಧು ಅವರ ಆರ್ಭಟವನ್ನು ನಿಲ್ಲಿಸುವ ಬದಲು ರಾಹುಲ್ ಮತ್ತು ಪ್ರಿಯಾಂಕಾ ಪೋಷಿಸುವ (Rahul and Priyanka Patronised Sidhu) ಕೆಲಸ ಮಾಡಿದರು. ಸಿಧುಗೆ ರಾಹುಲ್ ಮತ್ತು ಪ್ರಿಯಾಂಕಾ ಕೃಪೆ ಇದೆ. ಸಿಧುವಂಥ ಅಸ್ಥಿರ ಮನಸ್ಸಿನ ವ್ಯಕ್ತಿಗೆ ಮಾನ್ಯತೆ ಕೊಟ್ಟಿದ್ದು ಎಂಥ ತಪ್ಪು ಎಂಬುದು ಮುಂದೆ ನಿಮಗೆ ತಿಳಿಯುತ್ತದೆ. ಈಗ ನಿಮಗೂ ಅರಿವಾಗುತ್ತಿರಬಹುದು ಎಂದು ಕ್ಯಾಪ್ಟನ್ ಮಾರ್ಮಿಕವಾಗಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

  ಹರೀಶ್ ರಾವತ್ ವಂಚಕ:

  ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಹಾಗೂ ಪಂಜಾಬ್ ಕಾಂಗ್ರೆಸ್​ನ ಉಸ್ತುವಾರಿ ಹರೀಶ್ ರಾವತ್ ವಿರುದ್ಧವೂ ಕ್ಯಾಪ್ಟನ್ ಹರಿಹಾಯ್ದಿದ್ದಾರೆ. ಹರೀಶ್ ರಾವತ್ ತಾನು ಕಂಡ ಅತ್ಯಂತ ವಂಚಕ ವ್ಯಕ್ತಿ (Harish Rawat is the most dubious person) ಎಂದು ಮಾಜಿ ಸಿಎಂ ತರಾಟೆಗೆ ತೆಗೆದುಕೊಂಡಿದ್ಧಾರೆ.

  ಇದನ್ನೂ ಓದಿ: Punjab Elections: ಹಿಡಿತ ಸಾಧಿಸುತ್ತಿರುವ ಚನ್ನಿ: ಪ್ರತಿ ಯೂನಿಟ್ ವಿದ್ಯುತ್ ಮೇಲೆ 3 ರೂ ಬೆಲೆ ಕಡಿತ

  ಹೊಸ ಪಕ್ಷದ ಹೆಸರು:

  ಭಾರತೀಯ ಸೇನೆಯ ನಿವೃತ್ತ ಯೋಧ ಕ್ಯಾಪ್ಟನ್ ಅಮರೀಂದರ್ ಸಿಂಗ್ ದಶಕಗಳ ಕಾಲ ಕಾಂಗ್ರೆಸ್ ಜೊತೆ ಜೋಡಿತಗೊಂಡವರು. ತಮ್ಮ ಕೊನೆಯ ರಾಜಕೀಯ ಕಾಲಘಟ್ಟದಲ್ಲಿ ಕಾಂಗ್ರೆಸ್ ತೊರೆಯಬೇಕಾದ ಸ್ಥಿತಿ ಬಂದಿದೆ. ತಮ್ಮ ರಾಜಕೀಯ ಇನ್ನಿಂಗ್ಸನ್ನ ಇಲ್ಲಿಗೇ ನಿಲ್ಲಿಸದ ಅಮರೀಂದರ್ ಸಿಂಗ್ ಹೊಸ ಪಕ್ಷ ಕಟ್ಟಲು ನಿರ್ಧರಿಸಿದ್ದಾರೆ. ಅವರ ಹೊಸ ಪಕ್ಷದ ಹೆಸರು ಪಂಜಾಬ್ ಲೋಕ್ ಕಾಂಗ್ರೆಸ್ (Punjab Lok Congress) ಎಂದು ಅವರು ಪ್ರಕಟಿಸಿದ್ದಾರೆ.

  ಪಂಜಾಬ್ ಬೆಳವಣಿಗೆಯತ್ತ ಒಂದು ನೋಟ:

  ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಸರ್ಕಾರದ ಪತನಕ್ಕೆ ನವಜೋತ್ ಸಿಂಗ್ ಸಿಧು ಅವರೇ ಕಾರಣರಾದರು. ಪಂಜಾಬ್ ಸರ್ಕಾರವನ್ನು ಪದೇ ಪದೇ ಟೀಕಿಸುತ್ತಾ ಬಂದಿದ್ದ ಸಿಧು ಅವರನ್ನ ಪಂಜಾಬ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಕೂರಿಸಲಾಯಿತು. ಅಲ್ಲಿಂದ ಅವರಿಬ್ಬರ ಮಧ್ಯೆ ವೈರತ್ವ ಹೆಚ್ಚಾಯಿತು. ಶಾಸಕರ ಬೆಂಬಲ ಪಡೆದು ಸಿಎಂ ಸ್ಥಾನದಿಂದ ಕ್ಯಾಪ್ಟನ್ ಕೆಳಗಿಳಿಸಿ ತಾನು ಸಿಎಂ ಸ್ಥಾನಕ್ಕೆ ಏರಲು ಸಿಧು ಯೋಜಿಸಿದರು. ಆದರೆ, ಅದರಲ್ಲಿ ಅರ್ಧ ಯಶಸ್ಸು ಸಿಕ್ಕಿತು.

  ಅಮರೀಂದರ್ ಅವರು ಸಿಎಂ ಸ್ಥಾನ ಕಳೆದುಕೊಂಡರು. ಆದರೆ, ಸಿಧುಗೆ ಸಿಎಂ ಸ್ಥಾನ ಒಲಿಯಲಿಲ್ಲ. ಚರಣಜೀತ್ ಸಿಂಗ್ ಚನ್ನಿ ಅವರನ್ನ ಸಿಎಂ ಮಾಡಲಾಗಿದೆ. ಆದರೆ, ಅಮರೀಂದರ್ ಅವರನ್ನ ಸಿಎಂ ಸ್ಥಾನದಿಂದ ಇಳಿಸಿದ ಸಮಾಧಾನ ಮಾತ್ರ ಸಿಧು ಅವರದ್ದಾಗಿದೆ.

  ಮುಂದಿನ ವರ್ಷ ಪಂಜಾಬ್ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಇದೆ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ಬೆಳವಣಿಗೆಗಳು ಬಹಳ ಮಹತ್ವ ಹೊಂದಿವೆ. ಒಂದೆಡೆ ಆಮ್ ಆದ್ಮಿ ಪಕ್ಷದ ಬಲ ದಿನೇ ದಿನೇ ವೃದ್ಧಿಸುತ್ತಿದೆ. ಇದು ಪಂಜಾಬ್ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲು ಯಶಸ್ವಿಯಾಗುತ್ತಾ ಎಂಬ ಬಗ್ಗೆ ಈಗಲೇ ಅನುಮಾನ ಮೂಡಿದೆ.
  Published by:Vijayasarthy SN
  First published: