ನಿರುದ್ಯೋಗಿಗಳಿಗೆ ಸಿಹಿಸುದ್ದಿ: ಕ್ಯಾಪ್​ಜೆಮಿನಿ ಕಂಪನಿಯಲ್ಲಿ 30 ಸಾವಿರ ಮಂದಿಗೆ ಉದ್ಯೋಗಾವಕಾಶ...!

2021ರಲ್ಲಿ ಭಾರತದಲ್ಲಿ ನೇಮಕ ಮಾಡಿಕೊಳ್ಳುವ 30,000 ಉದ್ಯೋಗದಲ್ಲಿ, ಎಂಜಿನಿಯರಿಂಗ್ ಮತ್ತು ಸಂಶೋಧನೆ, ಡೆವಲಪ್‌ಮೆಂಟ್‌, ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌, 5 ಜಿ, ಸೈಬರ್‌ ಸೆಕ್ಯುರಿಟಿ ಸೇರಿ ಮುಂತಾದ ಡಿಜಿಟಲ್‌ ಕ್ಷೇತ್ರಗಳಿಗೆ ಈ ವರ್ಷದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

Jobs

Jobs

 • Share this:
  ಕೊರೋನಾ ಸೋಂಕಿನ ಆರ್ಭಟಕ್ಕೆ 2020ರಲ್ಲಿ ಲಕ್ಷಾಂತರ ಜನರು ಈ ಸೋಂಕಿಗೆ ಬಲಿಯಾಗಿದ್ದರು. ಸೋಂಕಿನ ಆತಂಕದಿಂದ ಸಾವಿರಾರು ಕಂಪನಿಗಳನ್ನು ಮುಚ್ಚಲಾಗಿತ್ತು. ಇದರಿಂದಾಗಿ ಹಲವು ಕಂಪನಿಗಳು ಆರ್ಥಿಕ ನಷ್ಟವಾಗಿ ತನ್ನ ಉದ್ಯೋಗಿಗಳನ್ನು ಕಡಿತಗೊಳಿಸುವ ನಿರ್ಧಾರಕ್ಕೆ ಬಂದಿದ್ದವು. ಇನ್ನು, ಕೆಲವು ಕಂಪನಿಗಳು ತನ್ನ ಉದ್ಯೋಗಿಗಳಿಗೆ ವರ್ಕ್‌ಫ್ರಮ್‌ ಹೋಮ್‌ ಮೂಲಕ ಕೆಲಸ ಮಾಡಿಸಿಕೊಂಡಿದ್ದವು. ಕೊರೊನಾ ಸೋಂಕಿನ ಕಾರಣದಿಂದಾಗಿ ಸಾವಿರಾರು ಉದ್ಯೋಗಿಗಳು ತಮ್ಮ ಕೆಲಸವನ್ನು ಕಳೆದುಕೊಂಡು ಮನೆಯಲ್ಲಿ ಕುಳಿತುಕೊಳ್ಳುವಂತೆ ಆಗಿತ್ತು. 2021 ಇಸವಿ ಆರಂಭ ಆಗುತ್ತಿದ್ದಂತೆ ಉದ್ಯೋಗಿಗಳಿಗೆ ಅಲ್ಲಲ್ಲಿ ಉದ್ಯೋಗದ ಬಾಗಿಲು ತೆರೆಯುತ್ತಿವೆ. ಇನ್ನು, ಫ್ರಾನ್ಸ್‌ ದೇಶದ ಎಂಎನ್‌ಸಿ ಕಂಪನಿಯಾದ ಕ್ಯಾಪ್‌ಜೆಮಿನಿ (Capgemini) ಭಾರತದಲ್ಲಿ ಈ ವರ್ಷ 30,000 ಮಂದಿಗೆ ಉದ್ಯೋಗ ನೀಡಲು ಮುಂದಾಗಿದೆ. ಇದರಿಂದಾಗಿ ನಿರುದ್ಯೋಗಿಗಳಿಗೆ ಕೊಂಚ ಉಸಿರಾಡುವಂತೆ ಆಗಿದೆ.  2021ರಲ್ಲಿ 25% ರಷ್ಟು ಹೆಚ್ಚು ಉದ್ಯೋಗಿಗಳ ನೇಮಕ

  ಈ ಕುರಿತಾಗಿ ಸಂದರ್ಶನವೊಂದರಲ್ಲಿ ಭಾರತದ ಕ್ಯಾಪ್‌ಜೆಮಿನಿ ಮುಖ್ಯ ಕಾರ್ಯನಿರ್ವಾಹಕ ಅಶ್ವಿನ್ ಯಾರ್ಡಿ ನೀಡಿರುವ ಮಾಹಿತಿ ಪ್ರಕಾರ, ಕಳೆದ ವರ್ಷಕ್ಕಿಂತ 2021ರಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವಲ್ಲಿ 25% ರಷ್ಟು ಹೆಚ್ಚಳ ಮಾಡಲಾಗುತ್ತದೆ. ಇದರಲ್ಲಿ 50-50 ಫ್ರೆಶರ್‌ ಮತ್ತು ಅನುಭವಿ ಉದ್ಯೋಗಿಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇನ್ನು, ಕ್ಯಾಪ್‌ಜೆಮಿನಿ ಎಂಎನ್‌ಸಿ ಕಂಪನಿಯೂ ಮೂಲ ಸೌಕರ್ಯ, ಬಿಪಿಒ, ಕನ್ಸಲ್ಟೆನ್ಸಿ, ಮುಂತಾದ ಸೇವೆಗಳನ್ನು ನೀಡುತ್ತಿದೆ. 2021ರಲ್ಲಿ ನೇಮಕ ಮಾಡಿಕೊಳ್ಳುವ ಉದ್ಯೋಗಿಗಳಿಂದ ಕಂಪನಿಯ ಆದಾಯವು 7-9% ಹೆಚ್ಚಳ ಆಗುವ ಗುರಿ ಹೊಂದಲಾಗಿದೆ ಎಂದರು.

  ಭಾರತದಲ್ಲಿ 1,25,000 ಉದ್ಯೋಗಿಗಳನ್ನು ಹೊಂದಿದ ಫ್ರಾನ್ಸ್‌ ದೇಶದ ಏಕೈಕ ಕಂಪನಿ

  ಭಾರತದಲ್ಲಿ 125,000 ಉದ್ಯೋಗಿಗಳಿಗೆ ಕೆಲಸ ನೀಡಿರುವ ಫ್ರಾನ್ಸ್‌ ಮೂಲದ ಏಕೈಕ ಕಂಪನಿ ಕ್ಯಾಪ್‌ಜೆಮಿನಿಗೆ ಸಲ್ಲುತ್ತದೆ. ವಿಶ್ವದ 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕ್ಯಾಪ್‌ಜೆಮಿನಿ ಕಂಪನಿ ಕಾರ್ಯನಿರ್ವಹಿಸುತ್ತಿದೆ. ಕ್ಯಾಪ್‌ಜೆಮಿನಿ ಕಂಪನಿಯಲ್ಲಿ ಒಟ್ಟು 2,70,000ಕ್ಕೂ ಹೆಚ್ಚು ವಿಶ್ವದಾದ್ಯಂತ ಉದ್ಯೋಗಿಗಳನ್ನು ಹೊಂದಿದೆ. ಪ್ಯಾರಿಸ್‌ನ ಫ್ರಾನ್ಸ್‌ನಲ್ಲಿ ಕ್ಯಾಪ್‌ಜೆಮಿನಿ ಕಂಪನಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ.

  2021ರಲ್ಲಿ ಭಾರತದಲ್ಲಿ ನೇಮಕ ಮಾಡಿಕೊಳ್ಳುವ 30,000 ಉದ್ಯೋಗದಲ್ಲಿ, ಎಂಜಿನಿಯರಿಂಗ್ ಮತ್ತು ಸಂಶೋಧನೆ, ಡೆವಲಪ್‌ಮೆಂಟ್‌, ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌, 5 ಜಿ, ಸೈಬರ್‌ ಸೆಕ್ಯುರಿಟಿ ಸೇರಿ ಮುಂತಾದ ಡಿಜಿಟಲ್‌ ಕ್ಷೇತ್ರಗಳಿಗೆ ಈ ವರ್ಷದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

  ಇನ್ನು, 2021-22ರಲ್ಲಿ ಭಾರತದಲ್ಲಿ 24,000 ಕಾಲೇಜು ಪದವೀಧರರನ್ನು ನೇಮಿಸಿಕೊಳ್ಳುವುದಾಗಿ ಇನ್ಫೋಸಿಸ್‌ ಲಿಮಿಟೆಡ್‌ ತಿಳಿಸಿದೆ. ಇನ್ನು, ಭಾರತದಲ್ಲಿ 2,00,000ಕ್ಕೂ ಉದ್ಯೋಗಿಗಳನ್ನು ಹೊಂದಿರುವ ಕಾಗ್ನಿಜೆಂಟ್‌ ಟೆಕ್ನಾಲಜಿ ಸಲ್ಯೂಷನ್‌ ಕಂಪನಿಯೂ 2021ರಲ್ಲಿ 23,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಗುರಿಯನ್ನು ಹೊಂದಿದೆ. ಇದು ಕಳೆದ ವರ್ಷಕ್ಕಿಂತ ಶೇ.35ರಷ್ಟು ಹೆಚ್ಚಾಗಿದೆ.
  Published by:Latha CG
  First published: