HOME » NEWS » National-international » CANT GUARANTEE ANYTHING ON DISPUTE WITH CHINA BUT NOT AN INCH OF OUR LAND CAN BE TAKEN SAYS RAJNATH SINGH RH

ಜಗತ್ತಿನ ಯಾವುದೇ ಶಕ್ತಿ ಭಾರತದ ಒಂದೇ ಒಂದು ಇಂಚು ಜಾಗ ಮುಟ್ಟಲು ಸಾಧ್ಯವಿಲ್ಲ; ರಕ್ಷಣಾ ಸಚಿವ ರಾಜನಾಥ್ ಸಿಂಗ್

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಜುಲೈ 3ರಂದು ಲಡಾಕ್​ಗೆ ದಿಢೀರ್ ಭೇಟಿ ನೀಡಿ ಸೈನಿಕರೊಂದಿಗೆ ಸಂವಾದ ನಡೆಸಿದ ಎರಡು ವಾರಗಳ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಡಾಕ್​ಗೆ ಭೇಟಿ ನೀಡಿದ್ದಾರೆ. ಜುಲೈ 3ರಂದೇ ರಾಜನಾಥ್ ಸಿಂಗ್ ಲಡಾಕ್​ಗೆ ಭೇಟಿ ನೀಡಲು ದಿನಾಂಕ ನಿಗದಿಯಾಗಿತ್ತು. ಆದರೆ, ಆ ಭೇಟಿ ರದ್ದಾಗಿತ್ತು.

news18-kannada
Updated:July 17, 2020, 4:36 PM IST
ಜಗತ್ತಿನ ಯಾವುದೇ ಶಕ್ತಿ ಭಾರತದ ಒಂದೇ ಒಂದು ಇಂಚು ಜಾಗ ಮುಟ್ಟಲು ಸಾಧ್ಯವಿಲ್ಲ; ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್
  • Share this:
ಲಡಾಕ್; ಭಾರತ ದುರ್ಬಲ ರಾಷ್ಟ್ರವಲ್ಲ. ಮತ್ತು ನಮ್ಮ ದೇಶದ ಒಂದೇ ಒಂದು ಇಂಚು ಭೂ ಭಾಗವನ್ನುಜಗತ್ತಿನ ಯಾವ ಶಕ್ತಿಗಳು ಮುಟ್ಟಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದರು.

ಭಾರತ ಮತ್ತು ಚೀನಾ ನಡುವೆ ಉಂಟಾಗಿರುವ ಗಡಿ ಸಂಘರ್ಷ ಸಂಬಂಧ ಶುಕ್ರವಾರ ಲಡಾಕ್​ಗೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಮಗ್ರವಾಗಿ ಸಮಾಲೋಚನೆ ನಡೆಸಿದರು. ಈ ವೇಳೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಆರ್ಮಿ ಮುಖ್ಯಸ್ಥ ಜನರಲ್ ಎಂಎಂ ನಾರವಾನೆ ಉಪಸ್ಥಿತರಿದ್ದರು.

ಗಡಿ ಸಂಘರ್ಷ ಪರಿಹಾರಕ್ಕೆ ಮಾತುಕತೆ ನಡೆಯುತ್ತಿದೆ. ಆದರೆ, ಅದು ಎಷ್ಟರಮಟ್ಟಿಗೆ ಪರಿಹಾರವಾಗಬಲ್ಲದು ಎಂಬುದನ್ನು ನಾನು ಖಾತರಿಪಡಿಸಲಾರೆ. ಈ ಜಗತ್ತಿನ ಯಾವುದೇ ಶಕ್ತಿಗಳು ನಮ್ಮ ನೆಲದಲ್ಲಿ ಒಂದೇ ಒಂದು ಇಂಚು ಜಾಗವನ್ನು ಮುಟ್ಟಲು ಸಾಧ್ಯವಿಲ್ಲ ಎಂಬುದನ್ನು ನಾನು ಭರವಸೆ ನೀಡುತ್ತೇನೆ ಎಂದು ರಕ್ಷಣಾ ಪಡೆಗಳೊಂದಿಗಿನ ಸಂವಾದದಲ್ಲಿ ಸಚಿವ ರಾಜನಾಥ್ ಸಿಂಗ್ ಹೇಳಿದರು.

ಮಾತುಕತೆಯ ಮೂಲಕವೇ ಸಂಘರ್ಷ ಪರಿಹಾರವಾದರೆ ಅದಕ್ಕಿಂತ ಉತ್ತಮವಾದದು ಬೇರೆಯದಿಲ್ಲ ಎಂದು ರಕ್ಷಣಾ ಸಚಿವರು ಇದೇ ವೇಳೆ ಹೇಳಿದರು. ಹಾಗಯೇ ನಮ್ಮ ಸೈನಿಕರ ತ್ಯಾಗ ವ್ಯರ್ಥವಾಗಲು ಭಾರತ ಬಿಡುವುದಿಲ್ಲ ಎಂದೂ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಜುಲೈ 3ರಂದು ಲಡಾಕ್​ಗೆ ದಿಢೀರ್ ಭೇಟಿ ನೀಡಿ ಸೈನಿಕರೊಂದಿಗೆ ಸಂವಾದ ನಡೆಸಿದ ಎರಡು ವಾರಗಳ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಡಾಕ್​ಗೆ ಭೇಟಿ ನೀಡಿದ್ದಾರೆ. ಜುಲೈ 3ರಂದೇ ರಾಜನಾಥ್ ಸಿಂಗ್ ಲಡಾಕ್​ಗೆ ಭೇಟಿ ನೀಡಲು ದಿನಾಂಕ ನಿಗದಿಯಾಗಿತ್ತು. ಆದರೆ, ಆ ಭೇಟಿ ರದ್ದಾಗಿತ್ತು.

ಇದನ್ನು ಓದಿ: ರಾಜಸ್ಥಾನ ರಾಜಕೀಯ ನಾಟಕ; ಆಡಿಯೋ ಲೀಕ್ ಬೆನ್ನಲ್ಲೇ ಇಬ್ಬರು ಕಾಂಗ್ರೆಸ್ ಶಾಸಕರ ಅಮಾನತು
ಭಾರತ ಮತ್ತು ಚೀನಾದ ಸೈನಿಕರು ಮೇ 5 ರಿಂದ ಎಂಟು ವಾರಗಳಿಗಿಂತ ಹೆಚ್ಚು ಕಾಲ ಪೂರ್ವ ಲಡಾಖ್‌ನ ಹಲವಾರು ಸ್ಥಳಗಳಲ್ಲಿ ಬೀಡುಬಿಡುವ ಮೂಲಕ ಉಭಯ ಗಡಿಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
Published by: HR Ramesh
First published: July 17, 2020, 4:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories