ಮಹಾರಾಷ್ಟ್ರದಲ್ಲಿ ಈ ವರ್ಷ ಗಣೇಶೋತ್ಸವಕ್ಕೆ ಅನುಮತಿ ಅಸಾಧ್ಯ: ಸುಪ್ರೀಂ ಕೋರ್ಟ್

ಮಹಾರಾಷ್ಟ್ರದಲ್ಲಿ ನಡೆಯುವ ಗಣೇಶೋತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಜನ ಸೇರುವುದರಿಂದ ನಿಯಂತ್ರಣ ಅಸಾಧ್ಯ. ಹೀಗಾಗಿ, ಈ ವರ್ಷ ಇದಕ್ಕೆ ಅನುಮತಿ ನೀಡುವ ಇರಾದೆ ತಮಗಿಲ್ಲ ಎಂದು ಸುಪ್ರೀಂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

news18-kannada
Updated:August 21, 2020, 5:21 PM IST
ಮಹಾರಾಷ್ಟ್ರದಲ್ಲಿ ಈ ವರ್ಷ ಗಣೇಶೋತ್ಸವಕ್ಕೆ ಅನುಮತಿ ಅಸಾಧ್ಯ: ಸುಪ್ರೀಂ ಕೋರ್ಟ್
ಗಣಪತಿ ಮೆರವಣಿಗೆ
  • Share this:
ನವದೆಹಲಿ(ಆ. 21): ಮಹಾರಾಷ್ಟ್ರದಲ್ಲಿ ಗಣೇಶೋತ್ಸವ ಅತ್ಯಂತ ಅದ್ಧೂರಿಯಾಗಿ ನಡೆಯುತ್ತದೆ. ಆದರೆ, ಈಗ ಕೊರೋನಾ ಸಾಂಕ್ರಾಮಿಕ ರೋಗದ ಬಿಕ್ಕಟ್ಟು ಇರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಅಲ್ಲಿನ ಸರ್ಕಾರ ಹಲವು ನಿರ್ಬಂಧಗಳೊಂದಿಗೆ ಗಣಪತಿ ಉತ್ಸವಕ್ಕೆ ಅನುಮತಿ ನೀಡಿದೆ. ಸುಪ್ರೀಂ ಕೋರ್ಟ್ ಕೂಡ ಮಹಾರಾಷ್ಟ್ರದಲ್ಲಿ ಗಣೇಶೋತ್ಸವ ಮೆರವಣಿಗೆ ಈ ವರ್ಷ ಸಾಧುವಲ್ಲ ಎಂದು ಅಭಿಪ್ರಾಯಪಟ್ಟಿದೆ. ಮಹಾರಾಷ್ಟ್ರದಲ್ಲಿ ಗಣೇಶೋತ್ಸವಕ್ಕೆ ಜನರು ಸೇರುವ ಪ್ರಮಾಣ ನೋಡಿದರೆ ಅವರ ನಿಯಂತ್ರಣ ಅಸಾಧ್ಯ. ಅಲ್ಲಿ ಗಣಪತಿ ಹಬ್ಬಕ್ಕೆ ಅನುಮತಿ ನೀಡುವ ಇರಾದೆ ನಮಗಿಲ್ಲ ಎಂದು ಮುಖ್ಯನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಹೇಳಿದ್ಧಾರೆ.

ಮುಂಬೈನ ಕೆಲ ಜೈನ ಮಂದಿರಗಳಲ್ಲಿ ಜನ ಸಮುದಾಯದ ಪರ್ಯೂಷಣ ಆಚರಣೆಗೆ ಅವಕಾಶ ಮಾಡಿಕೊಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಮನವಿ ಅರ್ಜಿಗಳ ವಿಚಾರಣೆಯ ವೇಳೆ ಸುಪ್ರೀಂ ನ್ಯಾಯಪೀಠ ಗಣೇಶೋತ್ಸವದ ವಿಚಾರವನ್ನು ಪ್ರಸ್ತಾಪಿಸಿ ಮೇಲಿನಂತೆ ಅಭಿಪ್ರಾಯಪಟ್ಟಿತು.

ನ್ಯಾಯಪೀಠ ತನ್ನ ತೀರ್ಪಿನಲ್ಲಿ ಜೈನ ಸಮುದಾಯದ ಆಚರಣೆಗೆ ಅನುಮತಿ ನೀಡಿತು. ಮುಂಬೈನ ದಾದರ್, ಚೆಂಬೂರ್ ಮತ್ತು ಬೈಕುಲಾದಲ್ಲಿ 3 ಜೈನ ಮಂದಿರಗಳನ್ನ ತೆರೆಯಲು ಒಪ್ಪಿಗೆ ನೀಡಿತು. ಏಕ ಕಾಲದಲ್ಲಿ ಮಂದಿರದಲ್ಲಿ ಗರಿಷ್ಠ ಐದಕ್ಕಿಂತ ಹೆಚ್ಚು ಮಂದಿ ಇರಬಾರದು ಎಂಬುದು ಸೇರಿದಂತೆ ನಿಗದಿತ ನಿಬಂಧನೆಗಳಿಗೆ ಮಂದಿರಗಳು ಒಳಪಡಬೇಕು ಎಂಬ ಸೂಚನೆಯೊಂದಿಗೆ ನ್ಯಾಯಪೀಠ ಸಮ್ಮತಿಸಿತು. ಆದರೆ, ಮಹಾರಾಷ್ಟ್ರ ಸರ್ಕಾರ ಇದಕ್ಕೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿತು.

ಇದನ್ನೂ ಓದಿ: Parliament Monsoon session : ಸೆಪ್ಟೆಂಬರ್ 14 ರಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ ಸಾಧ್ಯತೆ

ಒಂದು ಸಮುದಾಯದ ಆಚರಣೆಗೆ ಒಪ್ಪಿಗೆ ನೀಡಿದರೆ ಬೇರೆ ಸಮುದಾಯದವರೆಲ್ಲರೂ ಇದೇ ತೀರ್ಪನ್ನ ಆಧಾರವಾಗಿಟ್ಟುಕೊಂಡು ಬೇಡಿಕೆ ಮುಂದಿಡುತ್ತಾರೆ. ಆಗ ಪರಿಸ್ಥಿತಿ ನಿಯಂತ್ರಿಸಲು ಕಷ್ಟವಾಗುತ್ತದೆ ಎಂದು ಮಹಾರಾಷ್ಟ್ರ ಸರ್ಕಾರ ವಾದಿಸಿತು. ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಗಣೇಶೋತ್ಸವವನ್ನು ಉದಹಾರಣೆಯನ್ನಾಗಿ ನೀಡಿದರು.ಆಗ ಸ್ಪಷ್ಟನೆ ನೀಡಲು ಮುಂದಾದ ನ್ಯಾಯಪೀಠ, ಗಣಪತಿ ಉತ್ಸವದ ವಿಚಾರವೇ ಬೇರೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ನಡೆಯುವ ಗಣೇಶೋತ್ಸವಕ್ಕೆ ಈ ತೀರ್ಪು ಅನ್ವಯ ಆಗಬಾರದು ಎಂದಿತು.ಇದನ್ನೂ ಓದಿ: Srisailam Fire Accident: ಶ್ರೀಶೈಲಂ ಜಲವಿದ್ಯುತ್​ ಕೇಂದ್ರದಲ್ಲಿ ಅಗ್ನಿ ಅವಘಡ; 6 ಮಂದಿ ಸಾವು, ಮೂವರಿಗಾಗಿ ಶೋಧ ಕಾರ್ಯ

“ಈ ಆದೇಶವನ್ನು ಬೇರೆ ಯಾವುದೇ ಪ್ರಕರಣಕ್ಕೆ ಅನ್ವಯಿಸಬಾರದು. ಅದರಲ್ಲೂ ಜನರು ಹೆಚ್ಚು ಸೇರುವ ಮತ್ತು ನಿಯಂತ್ರಣ ಸಾಧ್ಯವಿಲ್ಲದ ಆಚರಣೆಗಳಿಗೆ ಸುತಾರಾಂ ಇಲ್ಲ. ಅದರಲ್ಲೂ ಗಣೇಶ ಚತುರ್ಥಿಯಂಥ ಮೆರವಣಿಗೆಗಳೆಂದು ಇಲ್ಲಿ ನಿರ್ದಿಷ್ಟವಾಗಿ ಹೇಳಬಹುದು. ಇಂಥ ಆಚರಣೆಗಳ ಬಗ್ಗೆ ರಾಜ್ಯ ಸರ್ಕಾರವೇ ತೀರ್ಮಾನ ತೆಗೆದುಕೊಳ್ಳುತ್ತದೆ” ಎಂದು ಸಿಜೆಐ ಬೋಬ್ಡೆ ನೇತೃತ್ವದ ನ್ಯಾಯಪೀಠ ಹೇಳಿತು.

ಮಹಾರಾಷ್ಟ್ರದಲ್ಲಿ ಶನಿವಾರ ಪ್ರಾರಂಭವಾಗುವ ಗಣೇಶೋತ್ಸವ ಸಾಮಾನ್ಯವಾಗಿ 10 ದಿನಗಳ ಕಾಲ ಭರ್ಜರಿಯಾಗಿ ನಡೆಯುತ್ತದೆ. ಪ್ರತೀ ದಿನವೂ ವಿಶೇಷ ಕಾರ್ಯಕ್ರಮಗಳಿರುತ್ತವೆ. ಗಣಪತಿ ವಿಸರ್ಜನೆ ವೇಳೆ ನಡೆಯುವ ಮೆರವಣಿಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಕೆಲವೊಮ್ಮೆ ಒಂದು ಮೆರವಣಿಗೆಯಲ್ಲಿ ಲಕ್ಷ ಮಂದಿ ಪಾಲ್ಗೊಳ್ಳುವುದುಂಟು. ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಬಾರದು ಎಂದು ಮಹಾರಾಷ್ಟ್ರ ಸರ್ಕಾರ ಅಪ್ಪಣೆ ಮಾಡಿದೆ. ಕರ್ನಾಟಕದಲ್ಲೂ ಇದೇ ರೀತಿ ಕೆಲ ಮಾರ್ಗಸೂಚಿಗಳೊಂದಿಗೆ ಗಣಪತಿ ಹಬ್ಬ ಆಚರಣೆಗೆ ಅವಕಾಶ ಮಾಡಿಕೊಡಲಾಗಿದೆ.
Published by: Vijayasarthy SN
First published: August 21, 2020, 5:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading