2019ರ ಪರಿಸ್ಥಿತಿ ಕಷ್ಟ, ಯಾರು ಪ್ರಧಾನಿಯೋ ಗೊತ್ತಿಲ್ಲ; ಮೋದಿ ಮತ್ತೆ ಪಿಎಂ ಆಗುವ ಭರವಸೆ ಬಾಬಾ ರಾಮ್​ದೇವ್​​​ಗೂ ಇಲ್ಲ!

ನಾನು ಯಾವುದೇ ಪಕ್ಷ ಅಥವಾ ವ್ಯಕ್ತಿಯನ್ನು ಬೆಂಬಲಿಸುತ್ತಿಲ್ಲ ಎಂಬುದನ್ನು ಒತ್ತಿ ಹೇಳುತ್ತಿದ್ದೇನೆ. ಆದರೆ ಈಗ ರಾಜಕೀಯ ಬಿಕ್ಕಟ್ಟು ಏರ್ಪಡುವ ಲಕ್ಷಣ ಗೋಚರವಾಗುತ್ತಿದೆ ಎಂದರು ರಾಮ್​ದೇವ್​.

Rajesh Duggumane | news18
Updated:December 26, 2018, 8:59 AM IST
2019ರ ಪರಿಸ್ಥಿತಿ ಕಷ್ಟ, ಯಾರು ಪ್ರಧಾನಿಯೋ ಗೊತ್ತಿಲ್ಲ; ಮೋದಿ ಮತ್ತೆ ಪಿಎಂ ಆಗುವ ಭರವಸೆ ಬಾಬಾ ರಾಮ್​ದೇವ್​​​ಗೂ ಇಲ್ಲ!
ಬಾಬಾ ರಾಮ್​ದೇವ್​
  • News18
  • Last Updated: December 26, 2018, 8:59 AM IST
  • Share this:
ರಾಮೇಶ್ವರಂ (ಡಿ.26): 2019ರ ಲೋಕಸಭಾ ಚುನಾವಣೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ನರೇಂದ್ರ ಮೋದಿ ಅವರೇ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎಂದು ಬಿಜೆಪಿ ಬೆಂಬಲಿಗರು ಹೇಳಿಕೊಳ್ಳುತ್ತಿದ್ದಾರೆ. ಕಮಲ ಪಾಳೆಯವನ್ನು ಸೋಲಿಸಲೇ ಬೇಕು ಎನ್ನುವ ಹಠಕ್ಕೆ ಬಿದ್ದಿರುವ ವಿಪಕ್ಷಗಳು ಮಹಾಮೈತ್ರಿ ರಚನೆಗೆ ಮುಂದಾಗಿವೆ. ಹಾಗಾಗಿ ಮೋದಿ ಮತ್ತೆ ಅಧಿಕಾರಕ್ಕೇರುವುದು ಕಷ್ಟದ ವಿಚಾರ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈಗ ಆಧ್ಯಾತ್ಮ ಗುರು ಬಾಬಾ ರಾಮ್​ದೇವ್ ಕೂಡ ಇದೇ ರೀತಿಯ ಅನುಮಾನ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನ ರಾಮೇಶ್ವರಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಮ್​ದೇವ್​​ ಮಾತನಾಡಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾರೀ ಫೈಟ್ ನಡೆಯಲಿದೆ ಎಂದು ಅಭಿಪ್ರಾಯಪಟ್ಟಿರುವ ಅವರು, “2019ರಲ್ಲಿ ರಾಜಕೀಯ ಬೆಳವಣಿಗೆ ಬೆರೇ ರೀತಿಯಲ್ಲೆ ಸಾಗಲಿದೆ. ಯಾರು ಪ್ರಧಾನಿಯಾಗುತ್ತಾರೆ, ಯಾರು ದೇಶವನ್ನು ಮುನ್ನಡೆಸುತ್ತಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಪರಿಸ್ಥಿತಿ ತುಂಬಾ ಆಸಕ್ತಿದಾಯಕವಾಗಿದೆ. ರಾಜಕೀಯದಲ್ಲಿ ಜಿದ್ದಾಜಿದ್ದಿಯ ಸ್ಥಿತಿ ಇದೆ” ಎಂದರು.

ಇದನ್ನೂ ಓದಿ: ದೇವೇಗೌಡರು ಆರಂಭಿಸಿದ ಸೇತುವೆ ಉಧ್ಘಾಟಿಸಿ ಪೂರ್ತಿ ಹೆಸರು ಪಡೆದ ಮೋದಿ-ಗೌಡರ ವಿಷಾದ

ಇನ್ನು, ತಾವು ಯಾವುದೇ ಪಕ್ಷಗಳ ಪರವಾಗಿ ಮಾತನಾಡುತ್ತಿಲ್ಲ ಎಂದಿದ್ದಾರೆ ರಾಮ್​ದೇವ್. “ನಾನು ರಾಜಕೀಯ ಪರಿಸ್ಥಿತಿಗಳ ಬಗ್ಗೆ ಮಾತನಾಡಬಹುದು. ಆದರೆ ನಾನು ಯಾವುದೇ ಪಕ್ಷಕ್ಕಾಗಲೀ ಅಥವಾ ಯಾವುದೇ ವ್ಯಕ್ತಿಗಾಗಲಿ ಬೆಂಬಲ ನೀಡುತ್ತಿಲ್ಲ” ಎಂದು ಹೇಳಿದರು.

ಈ ರೀತಿ ಪರಿಸ್ಥಿತಿ ಭಾರತಕ್ಕೆ ಉತ್ತಮವಲ್ಲ ಎನ್ನುವ ಅಭಿಪ್ರಾಯ ಪಟ್ಟಿರುವ ರಾಮ್​ದೇವ್, “ನಾನು ಯಾವುದೇ ಪಕ್ಷ ಅಥವಾ ವ್ಯಕ್ತಿಯನ್ನು ಬೆಂಬಲಿಸುತ್ತಿಲ್ಲ ಎಂಬುದನ್ನು ಒತ್ತಿ ಹೇಳುತ್ತಿದ್ದೇನೆ. ಈಗ ರಾಜಕೀಯ ಬಿಕ್ಕಟ್ಟು ಏರ್ಪಡುವ ಲಕ್ಷಣ ಗೋಚರವಾಗುತ್ತಿದೆ. ಆ ಬಗ್ಗೆ ನನಗೆ ಕಾಳಜಿ ಇದೆ. ಇದು ಭಾರತದ ಪಾಲಿಗೆ ಒಳ್ಳೆಯದಲ್ಲ” ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ: ವಿಶ್ವಕ್ಕೆ ಯೋಗದ ಮಹತ್ವ ಸಾರಿದ ಬಾಬಾ ರಾಮ್​ದೇವ್!

First published:December 26, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading