ರಾಜೀವ್​ ಗಾಂಧಿ ಹಂತಕರನ್ನು ಬಿಡುಗಡೆಗೊಳಿಸಲು ಸಾಧ್ಯವಿಲ್ಲ; ಸುಪ್ರೀಂಗೆ ಕೇಂದ್ರದ ಉತ್ತರ

news18
Updated:August 10, 2018, 2:12 PM IST
ರಾಜೀವ್​ ಗಾಂಧಿ ಹಂತಕರನ್ನು ಬಿಡುಗಡೆಗೊಳಿಸಲು ಸಾಧ್ಯವಿಲ್ಲ; ಸುಪ್ರೀಂಗೆ ಕೇಂದ್ರದ ಉತ್ತರ
news18
Updated: August 10, 2018, 2:12 PM IST
ನ್ಯೂಸ್​ 18 ಕನ್ನಡ

ನವದೆಹಲಿ (ಆ.10): ರಾಜೀವ್​ ಗಾಂಧಿ ಹತ್ಯೆಗೈದು ತಮಿಳುನಾಡಿನ ಜೈಲಿನಲ್ಲಿ ಜೀವವಾಧಿ ಶಿಕ್ಷೆ ಅನುಭವಿಸುತ್ತಿರುವ ಏಳು ಅಪರಾಧಿಗಳನ್ನು ಬಿಡುಗಡೆಗೊಳಿಸಲು ಸಾಧ್ಯವಿಲ್ಲ ಸುಪ್ರೀಂಕೋರ್ಟ್​ಗೆ ಕೇಂದ್ರ ಸರ್ಕಾರ ತಿಳಿಸಿದೆ.

ದೇಶದಲ್ಲಿ ನಡೆದ ಹತ್ಯೆಯಲ್ಲಿ ಇದು  ಘೋರ ಹತ್ಯೆಯಾಗಿದ್ದು ಈ ಪ್ರಕರಣದ ಆರೋಪಿಗಳನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಭಾರತ ಪ್ರಜಾಪ್ರಭುತ್ವದಲ್ಲಿ ಇದು ಹೀನಾಯ ಭಯಾನಕ ಘಟನೆಯಾಗಿದ್ದು ಘಟನೆಯಲ್ಲಿ 16 ಮುಗ್ದರು ಬಲಿಯಾಗಿದ್ದು, ಅನೇಕರು ಹಾನಿಗೆ ಒಳಗಾದರು.ಮಹಿಳೆಯನ್ನು ಬಳಸಿಕೊಂಡು ಮಾಡಿದ ಈ ಕೃತ್ಯ ಒಂದು ಭಯಾನಕ,  ಅಮಾನವೀಯ ಬಾಂಬ್​ ಸ್ಪೋಟ ಪ್ರಕರಣವಾಗಿದೆ. ಈ ಚುನಾವಣೆಯಿಂದ ಲೋಕಸಭಾ ಚುನಾವಣೆಯನ್ನು ಮುಂದೂಡಲಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

27 ವರ್ಷಗಳಿಂದ ಸೆರೆವಾಸ ಅನುಭವಿಸುತ್ತಿರುವ ಅಪರಾಧಿಗಳನ್ನು ಖುಲಾಸೆಗೊಳಿಸುವ ಸಂಬಂಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್​ಗೆ ಪತ್ರ ಬರೆದಿತ್ತು. ಈ ಮನವಿಯನ್ನು ಪಡೆದ ಸುಪ್ರೀಂಕೋರ್ಟ್​ನ ತ್ರಿ ಸದಸ್ಯ ಪೀಠ ಈ ಕುರಿತು ಕೇಂದ್ರ ಸರ್ಕಾರಕ್ಕೆ ಸಲಹೆ ಕೇಳಿತು.

ಈ ಕುರಿತು ಉತ್ತರಿಸಿರುವ ಕೇಂದ್ರ ಸರ್ಕಾರ ಅವರನ್ನು ಬಿಡುಗಡೆಗೊಳಿಸಿದರೆ ಜಗತ್ತಿಗೆ ತಪ್ಪು ಸಂದೇಶ ರವಾನಿಸಿದಂತೆ ಆಗುತ್ತದೆ ಎಂದರು.

2016ರಲ್ಲಿ ಸುಪ್ರೀಂ ಕೋರ್ಟ್​ಗೆ ಮನವಿ ಮಾಡಿದ ತಮಿಳುನಾಡಿನ ಅರ್ಜಿಯನ್ನು ಎರಡು ವರ್ಷಗಳ ಬಳಿಕ ಸುಪ್ರೀಂ ಕೋರ್ಟ್​ 2018ರಲ್ಲಿ ಕೈಗೆತ್ತಿಕೊಂಡಿತ್ತು.
Loading...

 
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...