ಕೋಲ್ಕತ್ತಾ: ಸಾಮಾನ್ಯವಾಗಿ ವಿವಾಹವೆಂದರೆ (Marriage), ಆಡಂಬರ, ಅದ್ದೂರಿ, ಸಂಭ್ರಮ ಎಲ್ಲವೂ.. ಇನ್ನೂ ವಿವಾಹದ ವೇಳೆ, ವಧು (Bride), ವರರು (Groom) ಬೆಲೆ ಬಾಳುವ ವಸ್ತ್ರ, ಆಭರಣಗಳನ್ನು ಹಾಕಿಕೊಂಡು ಮಿಂಚುತ್ತಾರೆ. ಅಲ್ಲದೇ ಮದುವೆ ದಿನ ಕಲ್ಯಾಣ ಮಂಟಪಕ್ಕೆ ಗ್ರ್ಯಾಂಡ್ ಆಗಿ ಅಲಂಕರಿಸಿದ್ದ ದೊಡ್ಡ ಕಾರಿನಲ್ಲಿ ಆಗಮಿಸುತ್ತಾರೆ ಮತ್ತು ವಧುವನ್ನು ಕಾರಿನಲ್ಲಿಯೇ (Car) ಕರೆದುಕೊಂಡು ಹೋಗುವುದನ್ನು ನಾವು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಯುವಕ ಮದುವೆ ಮಂಟಪಕ್ಕೆ (Marriage Hall) ಬೈಕ್ನಲ್ಲಿಯೇ (Bike) ತೆರಳಿ ಪ್ರೀತಿಸಿದವಳೊಂದಿಗೆ (Love) ವಿವಾಹವಾಗಿದ್ದಾನೆ. ಅಲ್ಲದೇ ಮದುವೆ ನಂತರ ಬೈಕ್ನಲ್ಲಿಯೇ ಪತ್ನಿಯನ್ನು (Wife) ಕರೆದುಕೊಂಡು ಮನೆಗೆ ವಾಪಾಸ್ ಬಂದಿದ್ದಾನೆ. ಬೈಕ್ನಿಂದಲೇ ಶುರುವಾದ ಪ್ರೀತಿಯನ್ನು ಉಳಿಸಿಕೊಂಡ ಯುವಕ (Young man) ತನ್ನ ಮನದರಸಿಯ ವಿವಾಹವಾಗಿ ಬೈಕ್ನಲ್ಲಿಯೇ ಮನೆಗೆ (House) ಹಿಂದಿರುಗಿದ್ದಾನೆ.
ಮದುವೆಯಾಗಲು ಬೈಕ್ನಲ್ಲೇ ತೆರಳಿದ ಯುವಕ
ಹೌದು, ಬೈಕ್ ಮೇಲೆ ಅಪಾರ ಪ್ರೀತಿ ಹೊಂದಿರುವ ಕ್ಯಾನಿಂಗ್ನ ಮಮತಾ ಪಲ್ಲಿಯ ಯುವಕ ಬಿಸ್ವಜಿತ್ ಸರ್ಕಾರ್ ತನ್ನ ಮದುವೆಗೆ ಬೈಕ್ನಲ್ಲಿಯೇ ತೆರಳಿದ್ದಾನೆ. ಇನ್ನೂ ಈ ದೃಶ್ಯ ನೋಡಲು ಊರಿನ ಜನವೆಲ್ಲಾ ರಸ್ತೆ ಬದಿ ನಿಂತು ಜಮಾಯಿಸಿದ್ದರು. ಅಲ್ಲದೇ ಇಂತಹ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಶಾಲಾ ದಿನದಿಂದಲೇ ಯುವತಿಯೊಂದಿಗೆ ಲವ್ವಿ-ಡವ್ವಿ
ಕ್ಯಾನಿಂಗ್ನ ಮಟ್ಲಾ 2 ಪಂಚಾಯತ್ನ ಮಮತಾ ಪಲ್ಲಿ ನಿವಾಸಿ ಅಕ್ಷಯ್ ಸರ್ಕಾರ್ ಮತ್ತು ಅವರ ಪತ್ನಿ ಕಾನನ್ ದೇವಿ ಅವರ ಏಕೈಕ ಪುತ್ರ ಬಿಸ್ವಜಿತ್. ಮೊದಲಿನಿಂದಲೂ ಬಿಸ್ವಜಿತ್ ಅಧ್ಯನದಲ್ಲಿ ಎತ್ತಿದ ಕೈ. ಹಾಗೆಯೇ ತಮ್ಮ ಶಾಲಾ ದಿನಗಳಿಂದಲೇ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಕ್ಯಾನಿಂಗ್ನ ಹಳೆಯ ಖೇಯಾಘಾಟ್ನ ಪಕ್ಕದ ಪ್ರದೇಶದಲ್ಲಿ ಬಿಸ್ವಜಿತ್ ಅವರಿಗೆ ಪೌಲ್ಮಿ ಬೇರಾ ಎಂಬ ಹುಡುಗಿಯ ಪರಿಚಯವಾಗಿತ್ತು. ನಂತರ ಇಬ್ಬರ ಮಧ್ಯೆ ಪ್ರೀತಿ ಅರಳಿತು. ಇದೀಗ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೊರಳಿಗೆ ಮದುವಣಗಿತ್ತಿ ಹಾರ ಹಾಕಿಕೊಂಡು ಬೈಕ್ನಲ್ಲೇ ನವದಂಪತಿ ಪ್ರಯಾಣ
ವಿಶೇಷವೆಂದರೆ ಇವರ ಮದುವೆ ದಿನವೇ ವರನ ಮೋಟಾರ್ ಬೈಕ್ಗೆ ಹೂಗಳಿಂದ ಸಿಂಗರಿಸಲಾಗಿತ್ತು. ಅಲ್ಲದೇ ಈ ಮೋಟಾರ್ ಬೈಕ್ನಲ್ಲಿಯೇ ಮದುವೆ ಬಳಿಕ ವರ ಮತ್ತು ವಧು ಕೊರಳಿಗೆ ಮದುವಣಗಿತ್ತಿ ಹಾರ ಹಾಕಿಕೊಂಡು ಬೈಕ್ ಏರಿ ಮನೆಗೆ ತೆರಳಿದರು. ಇವರಿಬ್ಬರ ಮದುವೆ ಕ್ಯಾನಿಂಗ್ನಲ್ಲಿರುವ ಚರ್ಚ್ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆಯಿತು.
ವೈರಲ್ ಆಗಿತ್ತು ಮದುವೆ ಮಂಟಪಕ್ಕೆ ವಿಭಿನ್ನ ಎಂಟ್ರಿ ಕೊಟ್ಟಿದ್ದ ವಧು-ವರ ವೀಡಿಯೋ
ಈಗೀಗ ಮದುವೆಯಾಗುವ ವಧು, ವರರು ಪ್ರೀ ವೆಡ್ಡಿಂಗ್ ಶೂಟ್ ಅನ್ನೇ ಸಾಕಷ್ಟು ಡಿಫರೆಂಟ್ ಆಗಿ ಮಾಡಿಸುತ್ತಾರೆ. ಕೆಲ ದಿನಗಳ ಹಿಂದೆ ಮದುವೆ ಮಂಟಪಕ್ಕೆ ಬೈಕ್ನಲ್ಲಿ ವಿಭಿನ್ನವಾಗಿ ಎಂಟ್ರಿ ನೀಡಿದ್ದ ವಧು, ವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ರಮಣೀಯವಾದ ಸ್ಥಳಗಳಿಗೆ ಹೋಗಿ ವಧು ವರರು ಮದುವೆಗೂ ಮುಂಚಿತವಾಗಿ ಫೋಟೋಶೂಟ್ ಮಾಡಿಸಿಕೊಳ್ಳುವುದನ್ನು ನಾವೆಲ್ಲಾ ನೋಡಿರುತ್ತೇವೆ. ಆದರೆ ವಿಭಿನ್ನವಾಗಿರಲೆಂದು ಜೋಡಿಯೊಂದು ಫಿಲ್ಮಿ ಸ್ಟೈಲ್ ನಲ್ಲಿ ಬೈಕ್ ಮೇಲೆ ಕುಳಿತು ಕ್ರೇನ್ ನ ಸಹಾಯದಿಂದ ಸ್ಟಂಟ್ ಮಾಡಿತ್ತು. ಆದರೆ ನೀವು ಇಂತಹ ಬಾಲಿವುಡ್ ಸ್ಟೈಲ್ ನಲ್ಲಿ ನಂಬಲಾಗದಷ್ಟು ಆಕ್ಷನ್ ಅನ್ನು ಒಳಗೊಂಡಿರುವ ಮದುವೆ ಪ್ರೀ ಫೋಟೋಶೂಟ್ ಅನ್ನು ನೀವು ನೋಡಿರಲು ಸಾಧ್ಯವೇ ಇಲ್ಲ ಅಂತ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ