• Home
 • »
 • News
 • »
 • national-international
 • »
 • Dr Shanta Passes Away - ಭಾರತದ ಕ್ಯಾನ್ಸರ್ ಚಿಕಿತ್ಸೆಯ ದಿಗ್ಗಜೆ ಡಾ. ಶಾಂತಾ ನಿಧನ

Dr Shanta Passes Away - ಭಾರತದ ಕ್ಯಾನ್ಸರ್ ಚಿಕಿತ್ಸೆಯ ದಿಗ್ಗಜೆ ಡಾ. ಶಾಂತಾ ನಿಧನ

ಡಾ. ವಿ ಶಾಂತಾ

ಡಾ. ವಿ ಶಾಂತಾ

ಭಾರತದಲ್ಲಿ ಕ್ಯಾನ್ಸರ್ ಚಿಕಿತ್ಸೆ ಬಡವರ ಕೈಗೆಟಕುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕ್ಯಾನ್ಸರ್ ಇನ್ಸ್​ಟಿಟ್ಯೂಟ್​ನ ಮುಖ್ಯಸ್ಥೆ ಡಾ. ವಿ ಶಾಂತಾ ಅವರು ಇಂದು ಅನಾರೋಗ್ಯದಿಂದ ಚೆನ್ನೈನಲ್ಲಿ ಮೃತಪಟ್ಟಿದ್ದಾರೆ.

 • News18
 • Last Updated :
 • Share this:

  ಚೆನ್ನೈ(ಜ. 19): ಭಾರತದಲ್ಲಿ ಕ್ಯಾನ್ಸರ್ ಚಿಕಿತ್ಸೆಯ ಕ್ರಾಂತಿಕಾರಿ ಎಂದೇ ಪರಿಗಣಿಸಲಾಗಿರುವ ಕ್ಯಾನ್ಸರ್ ಇನ್ಸ್​ಟಿಟ್ಯೂಟ್​ನ ಅಧ್ಯಕ್ಷೆ ಡಾ. ವಿ ಶಾಂತಾ ಇಂದು ಇಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 94 ವರ್ಷ ವಯಸ್ಸಾಗಿದ್ದ ಅವರು ಬೆಳಗಿನ ಜಾವ 3:55ಕ್ಕೆ ಕೊನೆಯುಸಿರೆಳೆದಿರುವುದು ತಿಳಿದುಬಂದಿದೆ. ಉಸಿರಾಡಲು ಕಷ್ಟಪಡುತ್ತಿದ್ದ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ರಕ್ತನಾಳದಲ್ಲಿ ಇದ್ದ ತಡೆಯನ್ನು ತೆಗೆದುಹಾಕಲು ಯತ್ನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಪ್ರದವಾಗದೇ ಅವರು ಮೃತಪಟ್ಟಿದ್ದಾರೆ.


  ಸದ್ಯ ಅವರ ಪಾರ್ಥಿವ ಶರೀರರವನ್ನು ಕ್ಯಾನ್ಸರ್ ಸಂಸ್ಥೆಯ ಹಳೆಯ ಕಟ್ಟಡದಲ್ಲಿ ಇರಿಸಲಾಗಿದೆ. ಇಲ್ಲಿ 65 ವರ್ಷಗಳ ಹಿಂದೆ ಡಾ. ಶಾಂತಾ ಅವರು ರೆಸಿಡೆಂಟ್ ಮೆಡಿಕಲ್ ಆಫೀಸರ್ ಆಗಿ ಸೇವೆ ಆರಂಭಿಸಿದ್ದರು. “ಸಂಸ್ಥೆಯ ಮಾಜಿ ಮುಖ್ಯಸ್ಥ ಡಾ. ಎಸ್. ಕೃಷ್ಣಮೂರ್ತಿ ಅವರ ಮೃತದೇಹ ಇರಿಸಲಾಗಿರುವ ಹಾಲ್​ನಲ್ಲೇ ಡಾ. ಶಾಂತಾ ಅವರ ದೇಹವನ್ನು ಇರಿಸಿದ್ದೇವೆ. ಶಾಂತಾ ಅವರಿಗೆ ಕೃಷ್ಣಮೂರ್ತಿ ಅವರು ಹಲವು ರೀತಿಯಲ್ಲಿ ಪ್ರೇರಣೆಯಾಗಿದ್ದರು” ಎಂದು ಕ್ಯಾನ್ಸರ್ ಇನ್ಸ್​ಟಿಟ್ಯೂಟ್​ನ ಸೀನಿಯರ್ ಎಪಿಡೆಮಿಯಾಲಜಿಸ್ಟ್ ಡಾ. ಆರ್ ಸ್ವಾಮಿನಾಥನ್ ಹೇಳಿದ್ದಾರೆ.


  ಇದನ್ನೂ ಓದಿ: Vaccine Drive - ಸೆರಮ್ ಇನ್ಸ್​ಟಿಟ್ಯೂಟ್​ನಿಂದ ಭಾರತಕ್ಕೆ 1 ಕೋಟಿ ಉಚಿತ ವ್ಯಾಕ್ಸಿನ್


  ನೊಬೆಲ್ ವಿಜೇತ ವಿಜ್ಞಾನಿಗಳಾದ ಸಿ ವಿ ರಾಮನ್ ಮತ್ತು ಎಸ್ ಚಂದ್ರಶೇಖರ್ ಅವರ ಕುಟುಂಬಕ್ಕೆ ಸೇರಿದ ಡಾ. ವಿ ಶಾಂತಾ ಅವರು 1927, ಮಾರ್ಚ್ 11ರಂದು ಜನಿಸಿದ್ದರು. ಗ್ರಂಥಿಶಾಸ್ತ್ರ (Oncology) ವೈದ್ಯೆಯಾದ ಅವರು ಕ್ಯಾನ್ಸರ್ ಮತ್ತು ಆನ್ಕಾಲಜಿ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದು ಆ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನ ತಂದಿದ್ದರು. ಭಾರತದಲ್ಲಿ ಬಹಳ ದುಬಾರಿ ಎನಿಸುತ್ತಿದ್ದ ಕ್ಯಾನ್ಸರ್ ಚಿಕಿತ್ಸೆ ಕೈಗೆಟುವಂತಾಗಲು ಇವರ ಕೊಡುಗೆ ಬಹಳ ಇದೆ. ಕ್ಯಾನ್ಸರ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲೂ ಇವರ ಶ್ರಮ ಇದೆ.


  ಇದನ್ನೂ ಓದಿ: Indo-China Conflict: ಅರುಣಾಚಲ ಪ್ರದೇಶದ ಗಡಿಯಲ್ಲಿ ಪುಟ್ಟ ಗ್ರಾಮವನ್ನೇ ನಿರ್ಮಿಸಿದ ಚೀನಾ!


  12 ಬೆಡ್​ಗಳ ಪುಟ್ಟ ಆಸ್ಪತ್ರೆಯಾಗಿದ್ದ ಅಡ್ಯಾರ್ ಕ್ಯಾನ್ಸರ್ ಇನ್ಸ್​ಟಿಟ್ಯೂಟ್ ಅನ್ನು ಇಂದು ದೊಡ್ಡ ಮಟ್ಟಕ್ಕೆ ಬೆಳೆಸಲು ಡಾ. ಶಾಂತಾ ಮತ್ತು ಅವರ ಗುರು ಡಾ. ಕೃಷ್ಣಮೂರ್ತಿ ಅವರ ಪರಿಶ್ರಮ ಇದೆ. ಡಾ. ಶಾಂತಾ ಅವರು ಪದ್ಮವಿಭೂಷಣ, ರೇಮನ್ ಮ್ಯಾಗ್ಸೆಸೆ ಮೊದಲಾದ ಹಲವು ಪ್ರಶಸ್ತಿಗಳನ್ನ ಪಡೆದಿದ್ದಾರೆ.

  Published by:Vijayasarthy SN
  First published: