Cancer Treatment: ಕ್ಯಾನ್ಸರ್​ಗೂ ಸಿಕ್ತು ಔಷಧ! ಭಾರತೀಯ ಮೂಲದ ಮಹಿಳೆ ಗುಣಮುಖ

ಕ್ಲಿನಿಕಲ್ ಲೀಡ್ ಆಗಿ ಕೆಲಸ ಮಾಡುತ್ತಿದ್ದ ಅವರಿಗೆ ಇಬ್ಬರು ಮಕ್ಕಳಿದ್ದಾರೆ. 2017 ರ ನವೆಂಬರ್ ತಿಂಗಳಲ್ಲಿ ಅವರಿಗೆ ಸ್ತನ ಕ್ಯಾನ್ಸರ್ ಕಂಡುಬಂದಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವೈದ್ಯಕೀಯ ಸಂಶೋಧನೆಗಳು ದಿನೇ ದಿನೇ ಅಭಿವೃದ್ಧಿ ಹೊಂದುತ್ತಿವೆ. ಗುಣಪಡಿಸಲೇ ಆಗದ ಖಾಯಿಲೆ ಎನಿಸಿದ್ದ ಕ್ಯಾನ್ಸರ್​ಗೂ ನಿಧಾನವಾಗಿ ಔಷಧಗಳನ್ನು ಕಂಡುಹಿಡಿಯಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ  ಸ್ತನ ಕ್ಯಾನ್ಸರ್​ನಿಂದ (Breast Cancer Treatment) ಬಳಲುತ್ತಿದ್ದ ಮಹಿಳೆಯೋರ್ವರಿಗೆ ಕೆಲವೇ ತಿಂಗಳುಗಳ ಕಾಲ ಬದುಕುತ್ತಾರೆ ಎಂದು ವೈದ್ಯರು ಹೇಳಿದ್ದರು. ಆದರೆ ಈಗ ಆ ಮಹಿಳೆಯಲ್ಲಿ ಕ್ಯಾನ್ಸರ್​ನ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾಗಿ ವರದಿಯಾಗಿದೆ. ಸ್ತನ ಕ್ಯಾನ್ಸರ್​ನಿಂದ ಬಳಸುತ್ತಿದ್ದ ಮಹಿಳೆ ಇದೀಗ ಪ್ರಯೋಗಾತ್ಮಕ ಔಷಧದಿಂದ (Drug Trial) ಸಂಪೂರ್ಣ ಗುಣಮುಖವಾಗಿದ್ದಾರೆ ಎಂದು ತಿಳಿದುಬಂದಿದೆ. ಭಾರತೀಯ ಮೂಲದ ಮಹಿಳೆಯೊಬ್ಬರು ಯುಕೆ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಪ್ರಯೋಗದ ನಂತರ ಸ್ತನ ಕ್ಯಾನ್ಸರ್‌ನ ಯಾವುದೇ ಪುರಾವೆಗಳನ್ನು ತೋರಿಸುತ್ತಿಲ್ಲ ಎಂದು ವೈದ್ಯರು ಹೇಳಿದ ನಂತರ ಸೋಮವಾರ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

    ಮ್ಯಾಂಚೆಸ್ಟರ್‌ನ ಫಾಲೋಫೀಲ್ಡ್‌ನಿಂದ ಜಾಸ್ಮಿನ್ ಡೇವಿಡ್ ಎಂಬ 51 ವರ್ಷದ ಮಹಿಳೆಯೇ ಕ್ಯಾನ್ಸರ್​ನಿಂದ ಗುಣಮುಖರಾದವರು. ರಾಷ್ಟ್ರೀಯ ಆರೋಗ್ಯ ಸೇವೆ (NHS) ಪ್ರಯೋಗದ ನಂತರ ಸೆಪ್ಟೆಂಬರ್‌ನಲ್ಲಿ ತನ್ನ 25 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಎದುರು ನೋಡುತ್ತಿದ್ದಾರೆ.

    ಯಾವ ಔಷಧ ನೀಡಲಾಗಿತ್ತು?
    ಕ್ರಿಸ್ಟಿ NHS ಫೌಂಡೇಶನ್ ಟ್ರಸ್ಟ್‌ನಲ್ಲಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಅಂಡ್ ಕೇರ್ ರಿಸರ್ಚ್ (NIHR) ಮ್ಯಾಂಚೆಸ್ಟರ್ ಕ್ಲಿನಿಕಲ್ ರಿಸರ್ಚ್ ಫೆಸಿಲಿಟಿಯಲ್ಲಿ (CRF) ಡೇವಿಡ್ ಅವರು ಎರಡು ವರ್ಷಗಳ ಪ್ರಯೋಗಾತ್ಮಕ ಚಿಕಿತ್ಸೆ ನೀಡಿದ್ದರು. ಅಟೆಝೋಲಿಜುಮಾಬ್ ಜೊತೆಗೆ ಇಂಟ್ರಾವೆನಸ್ ಮೂಲಕ ಇಮ್ಯುನೊಥೆರಪಿ ಔಷಧವನ್ನು ಒಳಗೊಂಡಿರುವ ಪ್ರಾಯೋಗಿಕ ಔಷಧವನ್ನು ಕ್ಯಾನ್ಸರ್​ಗೆ ಮದ್ದನ್ನಾಗಿ ನೀಡಲಾಗಿತ್ತು.

    2017ರಲ್ಲಿ ಪತ್ತೆಯಾಗಿತ್ತು ಸ್ತನ ಕ್ಯಾನ್ಸರ್
    ಕ್ಲಿನಿಕಲ್ ಲೀಡ್ ಆಗಿ ಕೆಲಸ ಮಾಡುತ್ತಿದ್ದ ಅವರಿಗೆ ಇಬ್ಬರು ಮಕ್ಕಳಿದ್ದಾರೆ. 2017 ರ ನವೆಂಬರ್ ತಿಂಗಳಲ್ಲಿ ಅವರಿಗೆ ಸ್ತನ ಕ್ಯಾನ್ಸರ್ ಕಂಡುಬಂದಿತ್ತು.

    ಭವಿಷ್ಯಕ್ಕಾಗಿ ತ್ಯಾಗ ಮಾಡಲು ನಿರ್ಧರಿಸಿದೆ
    ನನಗೆ ಈ ಪ್ರಯೋಗಾತ್ಮಕ ಚಿಕಿತ್ಸೆಯ ಸಲಹೆಯನ್ನು ನೀಡಿದಾಗ ಅದು ನನಗೆ ಕೆಲಸ ಮಾಡಬಹುದೇ ಎಂದು ನನಗೆ ತಿಳಿದಿರಲಿಲ್ಲ. ಆದರೆ ನಾನು ಇತರರಿಗೆ ಸಹಾಯ ಮಾಡಲು ಮತ್ತು ಮುಂದಿನ ಪೀಳಿಗೆಗೆ ನನ್ನ ದೇಹದ ಮೂಲಕ ಹೊಸ ಔಷಧವನ್ನು ರವಾನಿಸಲು ಏನಾದರೂ ಮಾಡಬಹುದು ಎಂದು ನಾನು ಭಾವಿಸಿದೆ ಎಂದು ಅವರು ತಿಳಿಸಿದರು.

    ಇದನ್ನೂ ಓದಿ: Nupur Sharma: ನೂಪುರ್ ಶರ್ಮಾ ಬಗ್ಗೆ ಸುಪ್ರೀಂಕೋರ್ಟ್ ಜಡ್ಜ್ ಅಭಿಪ್ರಾಯಕ್ಕೆ ನಿವೃತ್ತ ಜಡ್ಜ್​ಗಳ ವಿರೋಧ

    ಮೊದಲಿಗೆ, ನಾನು ತಲೆನೋವು ಮತ್ತು ಇನ್ನಿತರ ಅನೇಕ ಭಯಾನಕ ಅಡ್ಡಪರಿಣಾಮಗಳನ್ನು ಹೊಂದಿದ್ದೆ. ಆದ್ದರಿಂದ ನಾನು ಕ್ರಿಸ್ಮಸ್ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗಿ ಅವರು ನೀಡುವ ಪ್ರಯೋಗಾತ್ಮಕ ಚಿಕಿತ್ಸೆ ಪಡೆಯಲು ಒಪ್ಪಿಗೆ ಸೂಚಿಸಿದೆ ಎಂದು ಅವರು ತಿಳಿಸಿದರು.

    ಇದನ್ನೂ  ಓದಿ: ATM Robbery: ಎಟಿಎಂ ದರೋಡೆ ತಡೆದ ನಾಯಿ! ಉಳಿಸಿದ್ದು ಬರೋಬ್ಬರಿ 27 ಲಕ್ಷ

    ಅದೃಷ್ಟವಶಾತ್ ನಾನು ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸಲು ಪ್ರಾರಂಭಿಸಿದೆ. ಈ ಪ್ರಯೋಗಾತ್ಮಕ ಚಿಕಿತ್ಸೆಯಿಂದ ನನ್ನ ಜೀವನವೇ ಬದಲಾಯಿತು ಎಂದು ಅವರು ಹೇಳಿದರು.

    ಕ್ಯಾನ್ಸರ್ ಶ್ವಾಸಕೋಶಗಳು, ದುಗ್ಧರಸ ಗ್ರಂಥಿಗಳು ಮತ್ತು ಎದೆಯ ಮೂಳೆಗಳಿಗೆ ಹರಡಿತ್ತು. ಅವರು ಬದುಕಲು ಒಂದು ವರ್ಷಕ್ಕಿಂತ ಕಡಿಮೆ ಸಮಯವಿದೆ ಎಂಬ ಆಘಾತಕಾರಿ  ವಿಷಯ ತಿಳಿದ ಎರಡು ತಿಂಗಳ ನಂತರ ಬೇರೆ ಯಾವುದೇ ಆಯ್ಕೆಗಳಿಲ್ಲದೆ ಕ್ಲಿನಿಕಲ್ ಪ್ರಯೋಗದಲ್ಲಿ ಭಾಗವಹಿಸಲು ಅವರು ಒಪ್ಪಿದರು.

    ಚಿಕಿತ್ಸೆ ನಡುವೆಯೇ 50ನೇ ವರ್ಷದ ಹುಟ್ಟುಹಬ್ಬ
    ಚಿಕಿತ್ಸೆಯ ಮಧ್ಯದಲ್ಲಿಯೇ ಫೆಬ್ರವರಿ 2020 ರಲ್ಲಿ ನಾನು ನನ್ನ 50 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡೆ. ಎರಡೂವರೆ ವರ್ಷಗಳ ಹಿಂದೆ ನಾನು ನನ್ನ ಅಂತ್ಯ ಬಂದಿದೆ ಭಾವಿಸಿದ್ದೆ. ಆದರೆ ಈಗ ನಾನು ಮರುಜನ್ಮ ಪಡೆದಿದ್ದೇನೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
    Published by:guruganesh bhat
    First published: