ದಂಪತಿಯ ಕೋಣೆಯಲ್ಲಿದ್ದ ಮೇಜಿನ ಮೇಲೆ ಡೆತ್ ನೋಟ್ ಒಂದು ಸಿಕ್ಕಿದೆ. ಅದರಲ್ಲಿ ನಮ್ಮ ಸಾವಿನೆ ನಾವೇ ಕಾರಣ, ನಾವಿಬ್ಬರೂ ಸ್ವ ಇಚ್ಛೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದುಕೊಂಡಿದ್ದಾರೆ. ಟೇಬಲ್ ಮೇಲೆ ವೈದ್ಯಕೀಯ ರಿಪೋರ್ಟ್ ಇದೆ. ಅದನ್ನು ಓದಿದರೆ ನಮ್ಮ ಆತ್ಮಹತ್ಯೆಗೆ ನೈಜ ಕಾರಣ ತಿಳಿಯುತ್ತದೆ ಅಂತಲೂ ಬರೆದಿದ್ದಾರೆ.
ಉತ್ತರ ಪ್ರದೇಶ: ಅವರಿಬ್ಬರು ಪ್ರೀತಿಸಿ (Love) ಮದುವೆಯಾಗಿದ್ದರು (Marriage). ಹೀಗೆ ಮದ್ವೆಯಾಗಿ ಬಹಳ ವರ್ಷಗಳೇನೂ ಆಗಿರಲ್ಲಿ, ಸ್ವಲ್ಪ ಟೈಮ್ (Time) ಆಗಿತ್ತು ಅಷ್ಟೇ. ಇಡೀ ಇಡೀ ಜನ್ಮ ಅಲ್ಲ, ಏಳೇಳು ಜನ್ಮನೂ ಒಟ್ಟಿಗೆ ಇರಬೇಕು ಅಂತ ಅವರಿಬ್ಬರು ಕನಸು (Dreams) ಕಂಡಿದ್ದರು. “ನೀನೆಲ್ಲೋ ನಾನಲ್ಲೇ” ಅಂತ ಪ್ರೀತಿಸಿ ಮದುವೆಯಾದ ಅವರು, ಕಷ್ಟ ಸುಖದಲ್ಲಿ ಒಬ್ಬರಿಗೊಬ್ಬರು ಹೆಗಲು ಕೊಟ್ಟು ಬದುಕೋಣ ಎಂದುಕೊಂಡಿದ್ದರು, ಹಾಗೇ ಬಾಳುತ್ತಿದ್ದರೂ ಕೂಡ. ಆದರೆ ಅವರ ಪ್ರೀತಿ ಮೇಲೆ ಯಾರ ಕಣ್ಣು ಬಿತ್ತೋ, ಅವರ ಮೇಲೆ ಯಾರು ಅಸೂಯೆ (Jealousy) ಪಟ್ಟರೋ. ಪ್ರೀತಿಸಿ ಮದುವೆಯಾದ ದಂಪತಿ (Couple) ಇದೀಗ ಆತ್ಮಹತ್ಯೆ (Suicide) ದಾರಿ ಹಿಡಿದಿದ್ದಾರೆ. ಹಾಗಾದರೆ ಪ್ರೀತಿಸಿ ಮದುವೆಯಾದವರು ಪ್ರಾಣ ತೆಗೆದುಕೊಂಡಿದ್ದೇಕೆ? ಅದು ಇಬ್ಬರೂ ಒಟ್ಟಿಗೆ ಸೂಸೈಡ್ ಮಾಡಿಕೊಂಡಿದ್ದು ಏಕೆ? ಅಲ್ಲೇ ಅವರ ಮನೆಯ ಟೇಬಲ್ ಮೇಲಿದ್ದ ಡೆತ್ ನೋಟ್ನಲ್ಲಿತ್ತು (Death Note) ಸಾವಿನ ಸೀಕ್ರೆಟ್ (Secret)!
ನೋಯ್ಡಾದಲ್ಲಿ ಆತ್ಮಹತ್ಯೆಗೆ ಶರಣಾದ ನವ ದಂಪತಿ
ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 22ರಲ್ಲಿ ಪ್ರೀತಿಸಿ ಮದುವೆಯಾದ ಜೋಡಿಯೊಂದು ದಾರುಣವಾಗಿ ಅಂತ್ಯ ಕಂಡಿರುವ ನಡೆದಿದೆ. ಮೂರು ವರ್ಷಗಳ ಹಿಂದೆ ಮದುವೆಯಾಗಿರುವ 29 ವರ್ಷದ ಶಶಿಕಲಾ ಮತ್ತು 31 ವರ್ಷದ ಅರುಣ್ ಸಿಂಗ್ ಎಂಬ ದಂಪತಿಯೇ ಆತ್ಮಹತ್ಯೆಗೆ ಶರಣಾದವರು. ಎಲ್ಲರೊಂದಿಗೂ ಚೆನ್ನಾಗಿಯೇ ಇದ್ದ ದಂಪತಿ ಹೀಗೆ ಇದ್ದಕ್ಕಿದ್ದಂತೆ ಆತ್ಮಹತ್ಯೆ ನಿರ್ಧಾರ ಕೈಗೊಂಡಿರುವುದು ಅವರ ಕುಟುಂಬಸ್ಥರನ್ನಷ್ಟೇ ಅಲ್ಲ, ಅಕ್ಕಪಕ್ಕದ ನಿವಾಗಳಿಗೂ ಆಘಾತ ತಂದಿದೆ.
ಫ್ಯಾನ್ಗೆ ನೇಣು ಬಿಗಿದುಕೊಂಡು ಸೂಸೈಡ್
ಅರುಣ್ ಹಾಗೂ ಶಶಿಕಲಾ ದಂಪತಿ ರಾತ್ರಿ ತಮ್ಮ ಮನೆಯ ಫ್ಯಾನ್ ಒಂದಕ್ಕೆ ಒಟ್ಟಿಗೆ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ದಂಪತಿಯ ಕೋಣೆಯಲ್ಲಿದ್ದ ಮೇಜಿನ ಮೇಲೆ ಡೆತ್ ನೋಟ್ ಒಂದು ಸಿಕ್ಕಿದೆ. ಅದರಲ್ಲಿ ನಮ್ಮ ಸಾವಿನೆ ನಾವೇ ಕಾರಣ, ನಾವಿಬ್ಬರೂ ಸ್ವ ಇಚ್ಛೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದುಕೊಂಡಿದ್ದಾರೆ. ಟೇಬಲ್ ಮೇಲೆ ವೈದ್ಯಕೀಯ ರಿಪೋರ್ಟ್ ಇದೆ. ಅದನ್ನು ಓದಿದರೆ ನಮ್ಮ ಆತ್ಮಹತ್ಯೆಗೆ ನೈಜ ಕಾರಣ ತಿಳಿಯುತ್ತದೆ ಅಂತಲೂ ಬರೆದಿದ್ದಾರೆ.
ಖಾಸಗಿ ಕಂಪನಿವೊಂದರಲ್ಲಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ ಅರುಣ್ ಅವರಿಗೆ ಕ್ಯಾನ್ಸರ್ ಕಾಣಿಸಿಕೊಂಡಿದ್ದೇ ಈ ದುರಂತ ಅಂತ್ಯಕ್ಕೆ ಕಾರಣವಾಗಿದೆ. ಅರುಣ್ ಅವರಿಗೆ ಕೆಲ ದಿನಗಳ ಹಿಂದೆ ತೀವ್ರ ಗಂಟಲು ನೋವು ಕಾಣಿಸಿಕೊಂಡಿತ್ತು. ಇದು ಕಡಿಮೆ ಆಗದೇ ಇದ್ದಾಗ ಡಾಕ್ಟರ್ ಬಳಿ ತೋರಿಸಿದ್ದಾರೆ. ಅದಾಗಲೇ ಕ್ಯಾನ್ಸರ್ ಕೊನೆಯ ಸ್ಟೇಜ್ನಲ್ಲಿ ಇರುವುದು ತಿಳಿದಿದೆ. ಡಾಕ್ಟರ್ ಕೊಟ್ಟ ರಿಪೋರ್ಟ್ ನೋಡಿ ದಂಪತಿ ಕಂಗಾಲಾಗಿ ಹೋಗಿದ್ದಾರೆ.
ಗಂಡ ಸತ್ತರೆ ಬದುಕು ಕಷ್ಟ ಎಂದುಕೊಂಡ ಹೆಂಡತಿ
ಇನ್ನು ಅರುಣ್ ಬದುಕುವುದು ಕಷ್ಟ ಎಂದು ಇಬ್ಬರಿಗೂ ತಿಳಿದಿದೆ. ಪತಿ ಸತ್ತು ಹೋದರೆ ತಮ್ಮ ಭವಿಷ್ಯ ಏನು ಎಂಬ ಚಿಂತೆ ಶಶಿಕಲಾ ಅವರಿಗೆ ಕಾಡಿದೆ. ಇದರಿಂದ ದಂಪತಿ ಅನೇಕ ದಿನಗಳಿಂದ ಮಾನಸಿಕವಾಗಿ ಒತ್ತಡಕ್ಕೊಳಗಾಗಿದ್ದರು. ಇದರಿಂದ ಇಬ್ಬರೂ ಸಾಯುವ ನಿರ್ಧಾರಕ್ಕೆ ಬಂದಿದ್ದಾರೆ. ಕೊನೆಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇಬ್ಬರನ್ನೂ ಕಳೆದುಕೊಂಡು ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರು ಕಣ್ಣೀರು ಹಾಕಿದ್ದಾರೆ. . ಎಲ್ಲರೊಂದಿಗೂ ಚೆನ್ನಾಗಿಯೇ ಇದ್ದ ದಂಪತಿ ಹೀಗೆ ಇದ್ದಕ್ಕಿದ್ದಂತೆ ಆತ್ಮಹತ್ಯೆ ನಿರ್ಧಾರ ಕೈಗೊಂಡಿರುವುದು ಅವರ ಕುಟುಂಬಸ್ಥರನ್ನಷ್ಟೇ ಅಲ್ಲ, ಅಕ್ಕಪಕ್ಕದ ನಿವಾಗಳಿಗೂ ಆಘಾತ ತಂದಿದೆ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ