ಸಾರ್ವಜನಿಕರ ಹಿತದೃಷ್ಟಿ ಕಾಪಾಡುವ ಸಲುವಾಗಿ ಕೆನಡಾದ ಪೊಲೀಸರು (Police) ತೀವ್ರ ಹಿಂಸಾಚಾರಕ್ಕೆ ಸಂಬಂಧಿಸಿರುವ ದೇಶದ ಅತ್ಯಂತ ಅಪಾಯಕಾರಿ ಅಪರಾಧಿಗಳ ಪಟ್ಟಿಯನ್ನು (List of Criminals) ಬಿಡುಗಡೆ ಮಾಡಿದ್ದಾರೆ. ಕ್ರಿಮಿನಲ್ ಹಿಂಸಾಚಾರಕ್ಕೆ ಸಂಬಂಧಿಸಿದ ಗ್ಯಾಂಗ್‌ಗಳು ಮತ್ತು ಹಲವಾರು ಅಪರಾಧ ಪ್ರಕರಣಗಳಲ್ಲಿ 11 ಆರೋಪಿಗಳ ಬಗ್ಗೆ ಕೆನಡಾದ ಪೊಲೀಸರು (Canada Police) ಎಚ್ಚರಿಸಿದ್ದಾರೆ. ಅಚ್ಚರಿ ಎನ್ನುವಂತೆ ಕೆನಡಾ ಖಾಕಿಗಳು ಬಿಡುಗಡೆ ಮಾಡಿರುವ ಪಟ್ಟಿಯ 11 ಪುರುಷರಲ್ಲಿ ಒಂಬತ್ತು ಮಂದಿ ಭಾರತೀಯ (Indians) ಮೂಲದವರಾಗಿದ್ದಾರೆ. ಹೌದು, ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಕೆಲವು ವ್ಯಕ್ತಿಗಳ ಫೋಟೋ, ಹೆಸರುಗಳನ್ನು ಬಿಡುಗಡೆ ಮಾಡಿರುವ ಕೆನಡಾ ಭದ್ರತಾ ಇಲಾಖೆ (Canada Security Department), ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ಹೊರಡಿಸಿದೆ.
ಟ್ವಿಟ್ಟರ್ ನಲ್ಲಿ ಕ್ರಿಮಿನಲ್ ಗಳ ಹೆಸರು, ಫೋಟೋ ಬಿಡುಗಡೆ
"ಗ್ಯಾಂಗ್ ಘರ್ಷಣೆಗಳು ಮತ್ತು ತೀವ್ರತರವಾದ ಹಿಂಸಾಚಾರದ ಸಂಪರ್ಕದಿಂದಾಗಿ ಸಾರ್ವಜನಿಕ ಸುರಕ್ಷತೆಗೆ ಗಮನಾರ್ಹ ಅಪಾಯವನ್ನುಂಟುಮಾಡುವ 11 ವ್ಯಕ್ತಿಗಳನ್ನು ಗುರುತಿಸುವ @VancouverPD, @BCRCMP ಪಾಲುದಾರಿಕೆಯಲ್ಲಿ ಸಾರ್ವಜನಿಕ ಸುರಕ್ಷತಾ ಎಚ್ಚರಿಕೆಯನ್ನು ನೀಡಲಾಗಿದೆ" ಎಂದು CFSEU-BC ಟ್ವೀಟ್ ಮೂಲಕ ತಿಳಿಸಿದೆ. ಅವರುಗಳ ಹೆಸರಿನ ಜೊತೆ ವ್ಯಕ್ತಿಗಳ ಫೋಟೋಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಸಾರ್ವಜನಿಕರಿಗೆ ಇವರನ್ನು ಸುಲಭವಾಗಿ ಗುರುತಿಸಲು ಸಹಕಾರಿಯಾಗುತ್ತದೆ.
ಇದನ್ನೂ ಓದಿ: China ಜೊತೆಗಿನ ಉದ್ವಿಗ್ನತೆ ಮಧ್ಯೆ ತೈವಾನ್‌ನ ಉನ್ನತ ಕ್ಷಿಪಣಿ ವಿಜ್ಞಾನಿ ಹೋಟೆಲ್ನಲ್ಲಿ ಶವವಾಗಿ ಪತ್ತೆ!
ಈ ದರೋಡೆಕೋರರು ಹಲವಾರು ಕೊಲೆಗಳು ಮತ್ತು ಅಪರಾಧಗಳಲ್ಲಿ ಆರೋಪಿಗಳಾಗಿದ್ದಾರೆ ಎಂದು ಬ್ರಿಟಿಷ್ ಕೊಲಂಬಿಯಾ ಪೊಲೀಸರು ತಿಳಿಸಿದ್ದಾರೆ. ಈ ಕಾರಣದಿಂದ ಸಾರ್ವಜನಿಕರು ಅವರ ಬಳಿ ವಾಸ ಮಾಡುವುದನ್ನು ತಪ್ಪಿಸುವಂತೆ ಕೋರಲಾಗಿದೆ.
11 ಭಯಾನಕ ವ್ಯಕ್ತಿಗಳಲ್ಲಿ 9 ಮಂದಿ ಭಾರತದವರು
ಕೆನಡಾ ಪೊಲೀಸರು ಬಿಡುಗಡೆ ಮಾಡಿದ ಭಯಾನಕ 11 ವ್ಯಕ್ತಿಗಳಲ್ಲಿ 9 ಮಂದಿ ಭಾರತದ ಪಂಜಾಬ್ ಮೂಲದವರಾಗಿದ್ದಾರೆ.
ಪಟ್ಟಿಯಲ್ಲಿರುವ ವ್ಯಕ್ತಿಗಳು
ಕೆನಡಾ ಪೊಲೀಸರು ಬಿಡುಗಡೆ ಮಾಡಿದ ಪಟ್ಟಿಯಲ್ಲಿರುವ ಹೆಸರುಗಳೆಂದರೆ ಶಕೀಲ್ ಬಸ್ರಾ (28), ಅಮರಪ್ರೀತ್ ಸಮ್ರಾ (28), ಜಗದೀಪ್ ಚೀಮಾ (30), ರವೀಂದರ್ ಶರ್ಮಾ (35) ಬರಿಂದರ್ ಧಲಿವಾಲ್ (39) ಆಂಡಿ ಸೇಂಟ್ ಪಿಯರ್ (40) ಗುರುಪ್ರೀತ್ ಧಲಿವಾಲ್ (35) ರಿಚರ್ಡ್ ಜೋಸೆಫ್ ವಿಟ್ಲಾಕ್ ( 40), ಅಮರೂಪ್ ಗಿಲ್ (29), ಸುಖದೀಪ್ ಪನ್ಸಾಲ್ (33) ಮತ್ತು ಸುಮ್ದೀಶ್ ಗಿಲ್ (28) ಪ್ರಮುಖರಾಗಿದ್ದಾರೆ.
A public safety warning has been issuing in partnership with @VancouverPD @BCRCMP identifying 11 individuals who pose a significant threat to public safety due to their ongoing involvement in gang conflicts and connection to extreme levels of violence #endganglife pic.twitter.com/Nt57E3SVmz
— CFSEU-BC (@cfseubc) August 3, 2022
ಈ ಜನರ ಹತ್ತಿರ ಸಂಪರ್ಕದಲ್ಲಿರುವವರು ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ ಎಂದು ಪೊಲೀಸರು ಎಚ್ಚರಿಸಿದ್ದಾರೆ. "ನಿರ್ದಿಷ್ಟ ಆಪಾದಿತ ಅಪರಾಧಿಗಳಿಂದ ದೂರವಿರಲು ಎಚ್ಚರಿಕೆಗಳನ್ನು ನೀಡಿದ್ದರು ಸಹ ಜನರು ಅದಕ್ಕೆ ಗಮನ ನೀಡಿರಲಿಲ್ಲ , ಆದರೆ ಇತ್ತೀಚಿನ ವರ್ಷಗಳಲ್ಲಿ ನಿಧಾನವಾಗಿ ಹಿಂಸಾಚಾರ ಪ್ರಕರಣಗಳು ಹೆಚ್ಚುತ್ತಿವೆ” ಎಂದು ಇಲಾಖೆ ತಿಳಿಸಿದೆ.
ಕಳೆದ ವರ್ಷದ ಪಟ್ಟಿಯಲ್ಲಿ ಯಾರ‍್ಯಾರು ಇದ್ದರು?
ಕಳೆದ ವರ್ಷವೂ ಕೆನಡಾ ಸರ್ಕಾರ ಇದೇ ರೀತಿಯ ಪಟ್ಟಿ ಬಿಡುಗಡೆ ಮಾಡಿತ್ತು. ಆ 11 ಜನರ ಪಟ್ಟಿಯಲ್ಲಿದ್ದ ಮೆನೀಂದರ್ ಧಲಿವಾಲ್, ಪ್ರವಾಸಿಗರು ಮತ್ತು ಸಂದರ್ಶಕರನ್ನು ಹಿಂಸಿಸುತ್ತಿದಿದ್ದು ಬೆಳಕಿಗೆ ಬಂದಿತ್ತು. ಗುಂಡಿನ ದಾಳಿಯಲ್ಲಿ ಕಳೆದ ತಿಂಗಳ ಕೊನೆಯಲ್ಲಿ ವಿಸ್ಲರ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಆತನ ಸಹೋದರ ಹರ್‌ಪ್ರೀತ್ ಕಳೆದ ವರ್ಷ ವ್ಯಾಂಕೋವರ್‌ನ ಕೋಲ್ ಹಾರ್ಬರ್ ನೆರೆಹೊರೆಯಲ್ಲಿ ಗುಂಡಿಕ್ಕಿ ಕೊಂದ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಬ್ಬ ಸಹೋದರ 35 ವರ್ಷದ ಗುರುಪ್ರೀತ್ ಧಲಿವಾಲ್ ಈ ವರ್ಷದ ಪಟ್ಟಿಯಲ್ಲಿದ್ದಾರೆ.
ಇದನ್ನೂ ಓದಿ: Crime News: ಮಿಲಿಯನೇರ್ ಎಂದು ನಂಬಿಸಿ ಒಂಟಿ ಮಹಿಳೆಯರಿಗೆ ಮಂಕುಬೂದಿ ಎರಚುತ್ತಿದ್ದ ಆಸಾಮಿ ಅಂದರ್
CFSEU ಅಸಿಸ್ಟೆಂಟ್ ಕಮಾಂಡರ್ ಮನ್ನಿ ಮನ್ ಅವರು ಪ್ರತಿಸ್ಪರ್ಧಿ ದರೋಡೆಕೋರರು ಹಿಂಸಾಚಾರದಿಂದ ಪಟ್ಟಿ ಮಾಡಲಾದ ಪುರುಷರನ್ನು ಗುರಿಯಾಗಿಸುವ ಅವಕಾಶವಿದೆ ಎಂದು ಹೇಳಿದರು ಮತ್ತು ಪಟ್ಟಿ ಮಾಡಲಾದ ಪುರುಷರು ಅವರ ಸ್ನೇಹಿತರು ಮತ್ತು ಕುಟುಂಬಕ್ಕೆ ಮತ್ತು ಪ್ರೇಕ್ಷಕರಿಗೆ ಅಪಾಯವನ್ನುಂಟುಮಾಡಬಹುದು ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ