ಕಳೆದ ವರ್ಷ ಕೊರೋನಾದಿಂದಾಗಿ ಲಾಕ್ಡೌನ್ ಪರಿಚಯವಾದಗಿನಿಂದ ಎಲ್ಲವೂ ಡಿಜಿಟಲ್ ಮಯವಾಗಿವೆ. ಮನೆಯಿಂದಲೇ ಕೆಲಸ, ವಿಡಿಯೋ ಕಾನ್ಫರೆನ್ಸ್ಗಳ ಮೂಲಕವೇ ಸಭೆಗಳು, ಝೂಮ್ ಕಾಲ್ಗಳಲ್ಲೇ ಎಲ್ಲರ ಭೇಟಿ ಎನ್ನುವಂತಾಗಿದೆ. ಸೋಂಕು ಹರಡುವುದನ್ನು ತಪ್ಪಿಸಲು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಇಡೀ ವಿಶ್ವವೇ ಡಿಜಿಟಲ್ ಮೊರೆ ಹೋಗಿದೆ. ಕಳೆದೊಂದು ವರ್ಷದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಸರ್ಕಾರದ ಸಭೆಗಳು ನಡೆಯುತ್ತಿವೆ. ಮಕ್ಕಳಿಗೆ ಆನ್ಲೈನ್ ಮೂಲಕವೇ ಪಾಠ ಮಾಡಲಾಗುತ್ತಿದೆ. ವರ್ಚುವಲ್ ಮೀಟಿಂಗ್ಗಳ ಮೇಲೆಯೇ ಹೆಚ್ಚಾಗಿ ಅವಲಂಬಿತವಾಗಿರುವುದರಿಂದ ಕೆಲವೊಂದು ಅಭಾಸಗಳು ನಡೆಯುತ್ತಿವೆ.
ಇಲ್ಲೊಬ್ಬರು ಸಂಸದರು ವಿಡಿಯೋ ಕಾನ್ಫರೆನ್ಸ್ ವೇಳೆ ಅಸಭ್ಯವಾಗಿ ನಡೆದುಕೊಂಡು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸರ್ಕಾರದ ವರ್ಚುವಲ್ ಮೀಟಿಂಗ್ ನಡೆಯುತ್ತಿರುವ ವೇಳೆ ಕಾಫಿ ಕಪ್ನಲ್ಲಿ ಮೂತ್ರ ವಿಸರ್ಜಿಸಿದ್ದಾರೆ. ಸಂಸದನ ಈ ಕೃತ್ಯದಿಂದ ಸಭೆಯಲ್ಲಿದ್ದವರೆಲ್ಲಾ ದಂಗಾಗಿದ್ದಾರೆ. ಕೂಡಲೇ ಸಭೆಯನ್ನು ಮೊಟಕುಗೊಳಿಸಿ ಅಸಭ್ಯವಾಗಿ ನಡೆದುಕೊಂಡ ಸಂಸದನಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಈ ಘಟನೆ ನಡೆದಿರುವುದು ಕೆನಡಾ ಸರ್ಕಾರದ ವರ್ಚುವಲ್ ಮೀಟಿಂಗ್ನಲ್ಲಿ.
ಇದನ್ನೂ ಓದಿ: ರಾತ್ರಿ ಇಡೀ ಗಂಡ ಹೇಗೆಲ್ಲಾ ಕಾಟ ಕೊಡ್ತಾನೆ ಅಂತ ವಿಡಿಯೋ ಮಾಡಿದ ಸಾನಿಯಾ ಮಿರ್ಜಾ ತಂಗಿ!
ಕೆನಡಿಯನ್ ಸಂಸದ ಮಿಲಿಯಮ್ ಅಮೋಸ್ ಎಂಬುವರು ಕಾನ್ಫರೆನ್ಸ್ ವೇಳೆ ಕಾಫಿ ಕಪ್ನಲ್ಲಿ ಮೂತ್ರ ವಿಸರ್ಜಿಸಿದ್ದಾರೆ. ಇದು ಮೀಟಿಂಗ್ನಲ್ಲಿದ್ದ ಎಲ್ಲರಿಗೂ ಕಾಣಿಸಿದೆ. ಕೆನಡಾ ಸರ್ಕಾರದಲ್ಲಿ ಈ ಪ್ರಕರಣ ಕೋಲಾಹಲವನ್ನೇ ಎಬ್ಬಿಸಿದೆ. ಸಂಸದನ ವರ್ತನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಮಿಲಿಯಮ್ ಅಮೋಸ್ ತಮ್ಮ ಕೃತ್ಯದ ಬಗ್ಗೆ ಕ್ಷಮೆಯಾಚಿಸಿದ್ದಾರೆ. ನಾನು ಉದ್ದೇಶ ಪೂರ್ವಕವಾಗಿ ಆ ರೀತಿ ಮಾಡಿಲ್ಲ. ಕ್ಯಾಮರಾ ಆನ್ ಇದ್ದಿದ್ದು ನನ್ನ ಅರಿವಿಗೆ ಬಂದಿಲ್ಲ. ಘಟನೆಯಿಂದ ನನಗೂ ಮುಜುಗರವಾಗಿದೆ, ಸರ್ಕಾರಕ್ಕೂ ಮುಜುಗರವಾಗಿರುವ ಬಗ್ಗೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಸಂಸದ ಇದೇ ಮೊದಲಲ್ಲ, ಕಳೆದ ವಾರವೂ ಬೆತ್ತಲೆಯಾಗಿ ವಿಡಿಯೋ ಕಾನ್ಫರೆನ್ಸ್ನಲ್ಲಿ ಕಾಣಿಸಿಕೊಂಡಿದ್ದರು. ಆಗಲೂ ಅಚಾನಕ್ ಆಗಿ ಆದ ಪ್ರಮಾದವೆಂದು ಸಮಾಜಾಯಿಷಿ ನೀಡಿದ್ದರು. ಘಟನೆ ನಡೆದು ವಾರ ಕಳೆಯುವುದರೊಳಗೆ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಸಂಸದನ ನಡವಳಿಕೆ ಬಗ್ಗೆ ಜನಾಕ್ರೋಶ ವ್ಯಕ್ತವಾಗಿದೆ. ಬೇಜವಾಬ್ದಾರಿ ಸಂಸದನನ್ನು ವಜಾ ಮಾಡಬೇಕೆಂಬ ಕೂಗು ಕೇಳಿ ಬಂದಿದೆ.
![]()
ಬೆತ್ತಲೆಯಾಗಿ ಕಾಣಿಸಿಕೊಂಡಿದ್ದ ಸಂಸದ
ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 1,73,790 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,77,29,247ಕ್ಕೆ ಏರಿಕೆ ಆಗಿದೆ. ಶುಕ್ರವಾರ ಒಂದೇ ದಿನ ಕೊರೋನಾ 3,617 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 3,22,512ಕ್ಕೆ ಏರಿಕೆ ಆಗಿದೆ. ಈವರೆಗೆ 2,51,78,011 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಇನ್ನೂ 22,28,724 ಆಕ್ಟಿವ್ ಕೇಸುಗಳಿವೆ. ದೇಶದಲ್ಲಿ ಕೊರೋನಾ ಲಸಿಕೆ ಪಡೆದುಕೊಂಡವರ ಸಂಖ್ಯೆ 20 ಕೋಟಿ ದಾಟಿದೆ. ಈವರೆಗೆ 20,89,02,445 ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದೆ. ದೇಶದಲ್ಲಿ ಸದ್ಯ ಗುಣಮುಖ ಆದದವರ ಪ್ರಮಾಣ ಶೇಕಡಾ 90.80ಕ್ಕೆ ಏರಿಕೆ ಆಗಿದೆ. ವಾರದ ಪಾಸಿಟಿವಿಟಿ ದರ ಶೇಕಡಾ 9.84ಕ್ಕೆ ಇಳಿಕೆ ಆಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾನು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ