Chief Candy Officer: ಟಾಫಿ, ಕ್ಯಾಂಡಿ ತಿಂದು ಟೇಸ್ಟ್​ ಹೇಳಿ... ಪ್ರತಿ ತಿಂಗಳು ಸಿಗುತ್ತೆ ಆರೂವರೆ ಲಕ್ಷ ರೂಪಾಯಿ ಸ್ಯಾಲರಿ!

ಈ ಕೆಲಸಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. 5 ವರ್ಷದ ಮಗು ಕೂಡ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಹೀಗಿದ್ದರೂ, ಪೋಷಕರ ಅನುಮತಿ ಅಗತ್ಯವಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 31. ನೀವು ಕ್ಯಾಂಡಿ ತಿನ್ನಲು ಇಷ್ಟಪಡುತ್ತಿದ್ದರೆ, ಈ ಉದ್ಯೋಗವು ನಿಮ್ಮ ಕನಸಿನ ಕೆಲಸವಾಗಬಹುದು. ಕಂಪನಿಯು ಈ ಉದ್ಯೋಗಕ್ಕಾಗಿ ಜಾಹೀರಾತು ಕೂಡ ನೀಡಿದೆ.

 ಕ್ಯಾಂಡಿ ತಿನ್ನುವ ಉದ್ಯೋಗ

ಕ್ಯಾಂಡಿ ತಿನ್ನುವ ಉದ್ಯೋಗ

  • Share this:
ಕೆನಡಾ(ಆ.03): ನೀವು ಟಾಫಿ ತಿನ್ನಲು ಇಷ್ಟಪಡುತ್ತಿದ್ದರೆ ಈ ಉದ್ಯೋಗವು ನಿಮ್ಮ ಕನಸಿನ ಕೆಲಸವಾಗಿರಬಹುದು. ವಾಸ್ತವವಾಗಿ, ಕಂಪನಿಯೊಂದು ಕ್ಯಾಂಡಿ ತಿನ್ನುವುದಕ್ಕೆ ಬದಲಾಗಿ ಲಕ್ಷ ರೂಪಾಯಿಗಳ ಉದ್ಯೋಗವನ್ನು ನೀಡುತ್ತಿದೆ. ಅದಕ್ಕಾಗಿ ಜಾಹೀರಾತು ಕೂಡ ಕೊಟ್ಟಿದೆ. ಕ್ಯಾಂಡಿ ಫನ್‌ಹೌಸ್ ಹೆಸರಿನ ಈ ಕಂಪನಿಯು ಟಾಫಿಗಳನ್ನು ತಿನ್ನಲು ಇಷ್ಟಪಡುವ ಮತ್ತು ಕ್ಯಾಂಡಿಯ ರುಚಿಯನ್ನು ಅನ್ವೇಷಿಸುವ ಉದ್ಯೋಗಿಗಳನ್ನು ನಿಯೋಜಿಸಲು ಬಯಸುತ್ತದೆ.

ಉದ್ಯೋಗಿಗಳು ಕ್ಯಾಂಡಿಯನ್ನು ಪರೀಕ್ಷಿಸಬೇಕು ಮತ್ತು ಅವರ ರುಚಿಯ ಬಗ್ಗೆ ವಿಮರ್ಶೆಯನ್ನು ನೀಡಬೇಕು. ಅಂದರೆ, ಉದ್ಯೋಗಿಯ ಕೆಲಸವು ರುಚಿ ಪರೀಕ್ಷಕನದ್ದಾಗಿರುತ್ತದೆ. ಅವರಿಗೆ ಕ್ಯಾಂಡಿಯನ್ನು ಸವಿದು ಪರೀಕ್ಷಿಸಿ, ರುಚಿ ಹೇಳಿದ್ದಕ್ಕೆ ಹಣ ನೀಡಲಾಗುತ್ತದೆ. ಅದೂ ವಾರ್ಷಿಕ 78 ಲಕ್ಷ ರೂ. ವೇತನ. ಅಂದರೆ, ತಿಂಗಳಿಗೆ ಸುಮಾರು 6.5 ಲಕ್ಷ ರೂ ಮೊತ್ತ ಜೇಬು ಸೇರೋದು ಪಕ್ಕಾ.

ಇದನ್ನೂ ಓದಿ: Viral News: ಕೂದಲು ಕೊಟ್ರೆ ಈತ ಬದಲಿಗೆ ಕೊಡ್ತಾನೆ ಕಾಟನ್ ಕ್ಯಾಂಡಿ, ಏನಿದು ಮ್ಯಾಜಿಕ್

ಮನೆಯಿಂದಲೇ ಕೆಲಸ ಮಾಡಬಹುದು

ಈ ಆನ್‌ಲೈನ್ ರಿಟೇಲ್ ಕಂಪನಿಯು ಕೆನಡಾದಲ್ಲಿ ನೆಲೆಗೊಂಡಿದೆ, ಇದು ತನ್ನ ಉದ್ಯೋಗಿಗಳಿಗೆ ವರ್ಷವಿಡೀ ಕ್ಯಾಂಡಿ ತಿನ್ನಲು 78 ಲಕ್ಷ ಸಂಬಳವನ್ನು ನೀಡುತ್ತದೆ. ಕಂಪನಿಯು ನೀಡುತ್ತಿರುವ ಈ ಉದ್ಯೋಗದ ಹೆಸರು 'ಚೀಫ್ ಕ್ಯಾಂಡಿ ಆಫೀಸರ್'. ಉದ್ಯೋಗಿ ಕೆಲಸಕ್ಕಾಗಿ ಕಚೇರಿಗೆ ಹೋಗಬೇಕಾಗಿಲ್ಲ, ಅವನು ಈ ಕೆಲಸವನ್ನು ಮನೆಯಿಂದಲೇ ಮಾಡಬಹುದು. ಕಂಪನಿಯ ಲಿಂಕ್ಡ್‌ಇನ್ ಪೋಸ್ಟ್ ಪ್ರಕಾರ, ಆಯ್ಕೆಯಾದ ಅರ್ಜಿದಾರರು ಪ್ರತಿ ತಿಂಗಳು ಸುಮಾರು 3,500 ಉತ್ಪನ್ನಗಳ ರುಚಿಯನ್ನು ಪರೀಕ್ಷಿಸುತ್ತಾರೆ.


ಉದ್ಯೋಗಕ್ಕೆ ಈ ಅರ್ಹತೆ ಹೊಂದಿರಬೇಕು

CNBC ಯ ವರದಿಯ ಪ್ರಕಾರ, ಈ ಕೆಲಸಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. 5 ವರ್ಷದ ಮಗು ಕೂಡ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಆದಾಗ್ಯೂ, ಪೋಷಕರ ಅನುಮತಿ ಅಗತ್ಯವಿದೆ. ಹೆಚ್ಚುವರಿಯಾಗಿ, ಅರ್ಜಿದಾರರು ಉತ್ತರ ಅಮೆರಿಕಾದ ನಿವಾಸಿ ಮತ್ತು ಕ್ಯಾಂಡಿ ಪ್ರೇಮಿಯಾಗಿರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 31.

ಇದನ್ನೂ ಓದಿ: Squid Game ವೆಬ್ ಸೀರೀಸ್‌ನಿಂದ ಡಾಲ್ಗೋನಾ ಕ್ಯಾಂಡಿ ಹೇಗೆ ಪ್ರಸಿದ್ಧಿ ಪಡೆದುಕೊಂಡಿತು..? ಇಲ್ಲಿದೆ ವಿವರ

ಕ್ಯಾಂಡಿ ಫನ್‌ಹೌಸ್‌ನ ಸಿಇಒ ಪ್ರಕಾರ, ಅವರು ಈ ಜಾಹೀರಾತಿಗೆ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದಾರೆ ಮತ್ತು ಅನೇಕ ಜನರು ಅವರಿಗೆ ಉದ್ಯೋಗ ಕೊಡುವಂತೆ ಅರ್ಜಿಗಳನ್ನು ಕಳುಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಉದ್ಯೋಗಾವಕಾಶದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ ಎಂದಿದ್ದಾರೆ.

ಅದೇ ಸಮಯದಲ್ಲಿ, US ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ ಮತ್ತು ಹೆಲ್ತ್ ಅಂಡ್ ಹ್ಯೂಮನ್ ಸರ್ವೀಸಸ್ ನೀಡಿದ ಆಹಾರದ ಮಾರ್ಗಸೂಚಿಗಳ ಪ್ರಕಾರ, ಈ ಕೆಲಸಕ್ಕೆ ಉದ್ಯೋಗಿಯು ದೈನಂದಿನ ಸಕ್ಕರೆಯ ಐದು ಪಟ್ಟು ಹೆಚ್ಚು ಸೇವಿಸುವ ಅಗತ್ಯವಿರುತ್ತದೆ ಎಂದಿದೆ,.
Published by:Precilla Olivia Dias
First published: