Canada Visa Backlog: ಕೆನಡಾ ವಿಸಾಗಾಗಿ ಕಾಯ್ತಿದ್ದಾರೆ ಸಾವಿರಾರು ಭಾರತೀಯರು!

ವರದಿಯಾಗಿರುವಂತೆ ಜಗತ್ತಿನಾದ್ಯಂತ ಹಲವು ದೇಶಗಳ ಜನರು ಕೆನಡಾಗೆ ತೆರಳಲು ವಿಸಾಗಾಗಿ ಕಾಯುತ್ತಿದ್ದಾರೆನ್ನಲಾಗಿದ್ದು ಅದರಲ್ಲಿ ಭಾರತ ದೇಶದ ಹೆಚ್ಚಿನ ಜನರು ಕೆನಡಾದ ಈ ವಿಳಂಬತೆಯಿಂದಾಗಿ ದೇಶಕ್ಕೆ ಪ್ರವೇಶಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇನ್ನೂ ವಿಸಾ (Visa) ಪ್ರಕ್ರಿಯೆಗೊಳಪಡದೆ ಬಾಕಿ ಉಳಿದಿರುವ ಕಾಗದ ಪತ್ರಗಳಿಂದಾಗಿ ಲಕ್ಷಾನುಗಟ್ಟಲೇ ಭಾರತೀಯರು (Indians) ಕೆನಡಾಗೆ (Canada) ತೆರಳಲು ಈಗಲೂ ಕಾಯುತ್ತಿದ್ದಾರೆಂಬ ಸುದ್ದಿ ವರದಿಯಾಗಿದೆ. ಹೀಗೆ ವಿಸಾ ಪಡೆಯಲು ಕಾಯುತ್ತಿರುವವರಲ್ಲಿ ಭಾರತದ ಮಾಜಿ ಫಾರ್ಮುಲಾ ಒನ್ ಸ್ಪರ್ಧಿಯಾಗಿರುವ ಕರುಣ ಚಂದೋಕ್ ಅವರಿಂದ ಹಿಡಿದು ಹಲವು ಅಧಿಕಾರಿ ವರ್ಗದ ಜನರು ಹಾಗೂ ಸಾಮಾನ್ಯ ಜನರು (People) ಸೇರಿದ್ದಾರೆನ್ನಲಾಗಿದೆ. ವರದಿಯಾಗಿರುವಂತೆ ಜಗತ್ತಿನಾದ್ಯಂತ ಹಲವು ದೇಶಗಳ ಜನರು ಕೆನಡಾಗೆ ತೆರಳಲು ವಿಸಾಗಾಗಿ ಕಾಯುತ್ತಿದ್ದಾರೆನ್ನಲಾಗಿದ್ದು ಅದರಲ್ಲಿ ಭಾರತ ದೇಶದ ಹೆಚ್ಚಿನ ಜನರು ಕೆನಡಾದ ಈ ವಿಳಂಬತೆಯಿಂದಾಗಿ ದೇಶಕ್ಕೆ ಪ್ರವೇಶಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

ಅಂಕಿ-ಅಂಶಗಳ ಪ್ರಕಾರ ಕೆನಡಾ ಇನ್ನೂ 2.4 ಮಿಲಿಯನ್ ಜನರ ವಿಸಾ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದ್ದು ಅದರಲ್ಲಿ ಏನಿಲ್ಲವೆಂದರೂ ಭಾರತ ದೇಶವೊಂದರಿಂದಲೇ ಏಳು ಲಕ್ಷ ಭಾರತೀಯರಿಗೆ ವಿಸಾ ನೀಡುವ ಸಂಬಂಧ ಕಾಗದಗಳ ಪ್ರಕ್ರಿಯೆ ಕೆನಡಾ ಆರಂಭಿಸಬೇಕಾಗಿದೆ.

ಇದುವರೆಗೆ ಆರಂಭವಾಗದ ಕಾಗದ-ಪತ್ರಗಳ ಪ್ರಕ್ರಿಯೆ
ಭಾರತೀಯ ಮೂಲದ ಮಾಜಿ ಫಾರ್ಮುಲಾ ಒನ್ ರೇಸರ್ ಆಗಿರುವ ಸದ್ಯ ಲಂಡನ್ ನಲ್ಲಿ ನೆಲೆಸಿರುವ ಚಂದೋಕ್ ಅವರೂ ಸಹ ಈ ಬಾರಿ ವಿಸಾ ದೊರೆಯದೆ ಕೆನಡಾಗೆ ಹೋಗಲು ಸಾಧ್ಯವಾಗಿಲ್ಲ. ಅಷ್ಟಕ್ಕೂ ಅವರು ಕೆನಡಾದಲ್ಲಿರುವ ಮಾಂಟ್ರಿಯಲ್ ಗ್ರ್ಯಾಂಡ್ ಪ್ರಿಕ್ಸ್ ಮೋಟರ್ ಸ್ಪೋರ್ಟ್ ಸ್ಪರ್ಧೆಯಲ್ಲಿ ವಿಶ್ಲೇಷಕರಾಗಿ ತೆರಳಬೇಕಾಗಿತ್ತು.

ಇದನ್ನೂ ಓದಿ: Sri Lanka crisis: ಪೆಟ್ರೋಲ್‍ಗಾಗಿ ಕ್ಯೂ ನಿಂತ ಜನರಿಗೆ ಟೀ-ಬನ್ ನೀಡಿದ ಮಾಜಿ ಕ್ರಿಕೆಟಿಗ!

ಈ ಮುಂಚೆ ಅವರು ಕಳೆದ ಡಿಸೆಂಬರ್ ನಲ್ಲಿ ಅವಧಿ ಮುಕ್ತಾಯಗೊಂಡಿದ್ದ ಅವರ ಕೆನಡಾದ ಹತ್ತು ವರ್ಷಗಳ ವಿಸಿಟರ್ ವಿಸಾವನ್ನು ರಿನ್ಯೂ ಮಾಡಲು ಕಾಗದ ಪತ್ರಗಳನ್ನು ಸಲ್ಲಿಸಿದ್ದು ಇದುವರೆಗೂ ಅವರ ಕಾಗದ-ಪತ್ರಗಳ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಅವರು "ಇದು ಮುಂಚೆ ಹೀಗಾಗುತ್ತಿರಲಿಲ್ಲ. ನೀವು ವಿಸಾಗೆ ಅಪ್ಲೈ ಮಾಡುತ್ತಿದ್ದಿರಿ, ಮೂರು ವಾರಗಳಲ್ಲಿ ನಿಮಗೆ ವಿಸಾ ದೊರೆಯುತ್ತಿತ್ತು, ತದನಂತರ ನೀವು ತೆರಳುತ್ತಿದ್ದಿರಿ, ಇದು ಸರಳವಾಗಿತ್ತು" ಎಂದು ಹೇಳಿದ್ದಾರೆ.

ಇನ್ನೂ ತಪಾಸಣೆಯ ಪ್ರಕ್ರಿಯೆಯಲ್ಲಿರುವ ವಿಸಾ ಅರ್ಜಿಗಳು
ಕೋವಿಡ್-19 ಸಂಕಷ್ಟ ಆರಂಭವಾದ ದಿನಗಳಿಂದಲೇ ವಿಸಾಗೆ ಸಂಬಂಧಿಸಿದಂತೆ ಕೆನಡಾದ ಇಮಿಗ್ರೇಷನ್ ವಿಭಾಗದಲ್ಲಿ ವಿಸಾದ ಅರ್ಜಿಗಳು ಪ್ರಾಸಸ್ ಆಗದೆ ಉಳಿಯಲು ಪ್ರಾರಂಭಿಸಿದವು ಎನ್ನಲಾಗಿದೆ. ಈಗ ಅದು ಮಿಲಿಯನ್ ಸಂಖ್ಯೆವರೆಗೆ ಏರಿದೆ ಎನ್ನಲಾಗಿದೆ. ಈ ಮಧ್ಯೆ ಕೆನಡಾದ ಟೊರಾಂಟೋದಲ್ಲಿ ಜೂನ್ 13 ಮತ್ತು 14 ರಂದು 'ಪ್ರಾಸ್ಪೆಕ್ಟರ್ಸ್ ಆಂಡ್ ಡೆವೆಲಪರ್ಸ್ ಅಸೋಸಿಯೇಷನ್ ಆಫ್ ಕೆನಡಾ ಕಾನ್ಫರೆನ್ಸ್-2022' ನಡೆದಿದ್ದು ಅದರಲ್ಲಿ ಭಾರತದಿಂದ ಹಲವು ಅಧಿಕಾರಿಗಳು ಭಾಗವಹಿಸಬೇಕಾಗಿತ್ತು. ಆದರೆ ಅವರೆಲ್ಲರಿಗೂ ವಿಸಾ ಸಿಗದ ಕಾರಣ ಹೋಗಲು ಸಾಧ್ಯವಾಗಿಲ್ಲ.

ಇದಲ್ಲದೆ ಹಲವು ಭಾರತೀಯರು ಇತರೆ ಕಾರಣಗಳಿಗಾಗಿ ಕೆನಡಾಗೆ ಹೋಗಬಯಸಿದ್ದವರು ವಿಸಾಗಾಗಿ ಅರ್ಜಿ ಸಲ್ಲಿಸಿದ್ದರೂ ಇನ್ನೂ ವರೆಗೆ ಅವರ ವಿಸಾ ಸಂಬಂಧಿ ಪ್ರಕ್ರಿಯೆಗಳು ಮುಗಿದೇ ಇಲ್ಲ. ದೆಹಲಿ ಮೂಲದ ಗೌರವ್ ಎಂಬ ಆರ್ಥಿಕ ಸಲಹಾಗಾರರು ಕುಟುಂಬದ ವಿವಾಹ ಸಮಾರಂಭವೊಂದನ್ನು ಅಟೆಂಡ್ ಮಾಡಲು ಕೆನಡಾಗೆ ತೆರಳಬೇಕಾಗಿತ್ತು ಹಾಗೂ ಅದಕ್ಕಾಗಿ ಅವರು ಕಳೆದ ಡಿಸೆಂಬರ್ ನಲ್ಲಿಯೇ ವಿಸಾಗಾಗಿ ಅರ್ಜಿ ಸಲ್ಲಿಸಿದ್ದರು. ಈಗಲೂ ಆನ್ಲೈನ್ ನಲ್ಲಿ ಪರೀಕ್ಷಿಸಿದರೆ ಅವರ ವಿಸಾ ಅರ್ಜಿ ಇನ್ನೂ ತಪಾಸಣೆಯ ಪ್ರಕ್ರಿಯೆಯಲ್ಲಿದೆ ಎಂಬುದು ತೋರಿಸುತ್ತಿರುವುದಾಗಿ ಗೌರವ್ ತಿಳಿಸುತ್ತಾರೆ.

ಬಾಕಿ ಇರುವ ವಿಸಾ ಅರ್ಜಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಚಿಂತನೆ
ಕೆನಡಾ ಸರ್ಕಾರಕ್ಕೆ ಸದ್ಯ ಉದ್ಭವವಾಗಿರುವ ಈ ಸಮಸ್ಯೆಯ ಬಗ್ಗೆ ಸ್ಪಷ್ಟವಾಗಿ ಗೊತ್ತಿದ್ದು ಇದನ್ನು ಆದಷ್ಟು ಬೇಗನೆ ಬಗೆಹರಿಸುವತ್ತ ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ. ಈ ಸಂಬಂಧ ಕೆನಡಾ ಇನ್ನಷ್ಟು ಮಾನವ ಸಂಪನ್ಮೂಲಗಳನ್ನು ನೇಮಕ ಮಾಡಿಕೊಂಡು ಬಾಕಿ ಇರುವ ವಿಸಾ ಅರ್ಜಿಗಳ ದೊಡ್ಡ ಸಂಖ್ಯೆಯನ್ನು ಕಡಿಮೆ ಮಾಡಲು ಚಿಂತಿಸುತ್ತಿದೆ. ಅಲ್ಲದೆ, ಕೆನಡಾದ ಇಮಿಗ್ರೇಷನ್ ವಿಭಾಗವು ತಂಡವೊಂದನ್ನು ಸದ್ಯದಲ್ಲೇ ಭಾರತಕ್ಕೆ ಕಳುಹಿಸಿ ಸಮಸ್ಯೆಯನ್ನು ಬಗೆಹರಿಸಲು ಯೋಜಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: Washington DC Shooting: ಅಮೆರಿಕಾದಲ್ಲಿ ಮತ್ತೊಂದು ಗುಂಡಿನ ದಾಳಿ, ರಸ್ತೆಗಳಲ್ಲಿ ಎದ್ದುಬಿದ್ದು ಓಡಿದ ಜನ!

ಆದರೆ, ಈ ಸಮಸ್ಯೆ ಅಷ್ಟೊಂದು ಸುಲಭವಾಗಿ ಬಗೆ ಹರಿಸುವ ಯಾವುದೇ ಲಕ್ಷಣವಿಲ್ಲ ಎಂದು ನುಡಿಯುತ್ತಾರೆ ಟೊರಾಂಟೋ ಮೂಲದ ಐಸಿಸಿ ಇಮಿಗ್ರೇಶನ್ ಸಂಸ್ಥೆಯ ನಿರ್ದೇಶಕರಾದ ಮನು ದತ್ತಾ ಅವರು. ದತ್ತಾ ಅವರ ಪ್ರಕಾರ, ಇದು ಶೀಘ್ರದಲ್ಲಿಯೇ ಬಗೆಹರಿಯುವ ಸಮಸ್ಯೆ ಅಲ್ಲವಾಗಿದ್ದು ಏನಿಲ್ಲವೆಂದರೂ ಮತ್ತೆ ಸಹಜ ಸ್ಥಿತಿ ಮರಳುವವರೆಗೆ ಕನಿಷ್ಠ ಒಂದು ವರ್ಷಾವದರೂ ಕಾಯಬೇಕಾಗಿದೆ.

ಇನ್ನು ಗೌರವ್ ಅವರ ಬಗ್ಗೆ ಹೇಳುವುದಾದರೆ, "ಒಂದು ವೇಳೆ ಯಾವುದೇ ವ್ಯಕ್ತಿಯ ಕುಟುಂಬವೊಂದು ಅಲ್ಲಿದ್ದು ಆ ವ್ಯಕ್ತಿಗೆ ತುರ್ತು ಪರಿಸ್ಥಿಯಿಂದಾಗಿ ಅಲ್ಲಿಗೆ ಹೋಗ ಬೇಕೆಂದಿರುವಾಗ ಏನಾಗುತ್ತಿತ್ತು" ಎಂದು ಪ್ರಶ್ನಿಸುತ್ತ ಇದು ಒಟ್ಟಾರೆ ವ್ಯವಸ್ಥೆಯ ಅಸಫಲತೆ ಎಂದು ಹೇಳುತ್ತಾರೆ.
Published by:Ashwini Prabhu
First published: