• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Canada: ನಕಲಿ ಕಾಲೇಜು ಪ್ರವೇಶ ಪತ್ರ ಪಡೆದ ಪ್ರಕರಣ; ಭಾರತೀಯ ವಿದ್ಯಾರ್ಥಿಯ ಗಡಿಪಾರಿಗೆ ಮುಂದಾದ ಕೆನಡಾ!

Canada: ನಕಲಿ ಕಾಲೇಜು ಪ್ರವೇಶ ಪತ್ರ ಪಡೆದ ಪ್ರಕರಣ; ಭಾರತೀಯ ವಿದ್ಯಾರ್ಥಿಯ ಗಡಿಪಾರಿಗೆ ಮುಂದಾದ ಕೆನಡಾ!

ನಕಲಿ ಕಾಲೇಜು ಪ್ರವೇಶ ಪತ್ರ ಪ್ರಕರಣ

ನಕಲಿ ಕಾಲೇಜು ಪ್ರವೇಶ ಪತ್ರ ಪ್ರಕರಣ

ಕೆನಡಾದ ವಲಸೆ ಮತ್ತು ನಿರಾಶ್ರಿತರ ಮಂಡಳಿಯು ಕರಮ್‌ಜೀತ್ ಕೌರ್ ಅವರನ್ನು ಮೇ 29, 2023 ರೊಳಗೆ ಗಡಿಪಾರು ಮಾಡಲಾಗುವುದು ಎಂದು ತೀರ್ಪು ನೀಡಿದ್ದು, ಇದೀಗ ಕರಮ್‌ಜೀತ್ ಆತಂಕಕ್ಕೆ ಒಳಗಾಗಿದ್ದಾರೆ.

  • Share this:

ನಕಲಿ ಕಾಲೇಜು ಪ್ರವೇಶ ಪತ್ರ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ವಿದ್ಯಾರ್ಥಿನಿಯನ್ನು ಕೆನಡಾದಿಂದ ಗಡಿಪಾರು (Deport) ಮಾಡಲು ಅಲ್ಲಿನ ಸರ್ಕಾರ ಮುಂದಾಗಿದೆ. ಕೆನಡಾದಲ್ಲಿ (Canada) ವಿದ್ಯಾಭ್ಯಾಸ ಮಾಡುತ್ತಿರುವ ಕರಮ್‌ಜೀತ್ ಸಿಂಗ್ (25) ಕಳೆದ ಐದು ವರ್ಷಗಳಿಂದ ಅಲ್ಲೇ ವಾಸಿಸುತ್ತಿದ್ದಾರೆ. ಆದರೆ ತನ್ನ ಕಾಲೇಜು ಪ್ರವೇಶ ಪತ್ರ ನಕಲಿ ಎಂದು ತನಗೆ ತಿಳಿದಿಲ್ಲ ಎಂದು ಕರಮ್‌ಜಿತ್ ಹೇಳಿದ್ದಾರೆ.


ಕೆನಡಾದ ವಲಸೆ ಮತ್ತು ನಿರಾಶ್ರಿತರ ಮಂಡಳಿಯು ಕರಮ್‌ಜೀತ್ ಕೌರ್ ಅವರನ್ನು ಮೇ 29, 2023 ರೊಳಗೆ ಗಡೀಪಾರು ಮಾಡಲಾಗುವುದು ಎಂದು ತೀರ್ಪು ನೀಡಿದ್ದು, ಇದೀಗ ಕರಮ್‌ಜೀತ್ ಆತಂಕಕ್ಕೆ ಒಳಗಾಗಿದ್ದಾರೆ.


ಇದನ್ನೂ ಓದಿ: Amit Shah: ಆಧುನಿಕ ಭಾರತದ ಇತಿಹಾಸಕ್ಕೆ 4 ಗುಜರಾತಿಗಳು ಬಹುದೊಡ್ಡ ಕೊಡುಗೆ ನೀಡಿದ್ದಾರೆ: ಅಮಿತ್ ಶಾ


ಕೆನಡಾ ಬಾರ್ಡರ್ ಸರ್ವಿಸಸ್ ಏಜೆನ್ಸಿ ತನ್ನ ವಿದ್ಯಾರ್ಥಿ ವೀಸಾವನ್ನು ಪಡೆದುಕೊಂಡಿದ್ದ ಟೊರೊಂಟೊದ ಸೆನೆಕಾ ಕಾಲೇಜಿನ ಪ್ರವೇಶ ಪತ್ರವು ನಕಲಿ ಎಂದು ಆಕೆಗೆ ತಿಳಿಸಿದ್ದು, ಅದಾಗ್ಯೂ ಕೌರ್ ಅಂತಿಮವಾಗಿ ಎಡ್ಮಂಟನ್‌ನಲ್ಲಿರುವ ನಾರ್ಕ್ವೆಸ್ಟ್ ಕಾಲೇಜಿಗೆ ವರ್ಗಾವಣೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆ ಕಾಲೇಜಿನಲ್ಲಿ ಕರಮ್‌ಜಿತ್ ಕೌರ್ ಅವರು ವ್ಯಾಪಾರ ಮತ್ತು ಆಡಳಿತ ನಿರ್ವಹಣೆ ವಿಷಯದಲ್ಲಿ 2020 ರಲ್ಲಿ ಪದವಿ ಪಡೆದರು. ತನ್ನ ಅಧ್ಯಯನದ ನಂತರ, ಕರಮ್‌ಜೀತ್ ಎಡ್ಮಂಟನ್‌ನಲ್ಲಿರುವ ಕಂಪನಿಯೊಂದರಲ್ಲಿ ಮೇಲ್ವಿಚಾರಕರಾಗಿ ಉದ್ಯೋಗವನ್ನು ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೇ ಕೆನಡಾದ ಪ್ರಜೆಯನ್ನು ವಿವಾಹವೂ ಆಗಿದ್ದರು.


ಸದ್ಯ ಕರಮ್‌ಜೀತ್ ಕೆನಡಾದ ಎಡ್ಮಂಟನ್‌ನಲ್ಲಿ ವಾಸಿಸುತ್ತಿದ್ದಾರೆ. ಬಡ ಮತ್ತು ಗ್ರಾಮೀಣ ಪಂಜಾಬಿ ಕುಟುಂಬದಿಂದ ಬಂದ ಅವರು ತಮ್ಮ ಜೀವನದ ಉಳಿತಾಯವನ್ನು ಸಮಾಜ ಸೇವೆಗಾಗಿ ಮೀಸಲಿಟ್ಟಿದ್ದರು. 2023ರಲ್ಲಿ ಕರಮ್‌ಜೀತ್‌ ಅವರ ಕೆಲಸದ ಪರವಾನಿಗೆ ಮುಕ್ತಾಯವಾಗುತ್ತಿದೆ ಅನ್ನೋವಷ್ಟರಲ್ಲಿ ಅದಕ್ಕೂ ಮೊದಲು ಅವರು ಕೆನಡಾದ ಖಾಯಂ ನಿವಾಸಿಯಾಗಲು ಹೊರಟಿದ್ದರು. ಶಾಶ್ವತ ನಿವಾಸಕ್ಕಾಗಿ ಕರಮ್‌ಜೀತ್ ಅರ್ಜಿ ಸಲ್ಲಿಸಿದ ನಂತರ, ಆಕೆಗೆ ಪರಿಸ್ಥಿತಿಯ ಬಗ್ಗೆ ತಿಳಿಸಲಾಯಿತು. ಅಲ್ಲದೇ ಕೆನಡಾ ಬಾರ್ಡರ್ ಸರ್ವಿಸಸ್ ಏಜೆನ್ಸಿಯು ಆಕೆಗೆ ವಿದ್ಯಾರ್ಥಿ ವೀಸಾ ಪಡೆಯಲು ಸಹಾಯ ಮಾಡಿದ ಸೆನೆಕಾ ಕಾಲೇಜಿನ ಪ್ರವೇಶ ಪತ್ರವು ನಕಲಿ ಎಂದು ತಿಳಿಸಿತು. 


ಇದನ್ನೂ ಓದಿ: Crime News: 5 ವರ್ಷದ ಬಾಲಕಿ ಮೇಲೆ ತಂದೆ, ಚಿಕ್ಕಪ್ಪನಿಂದ ಅತ್ಯಾಚಾರ! 84 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌

top videos



    ಈ ಮಧ್ಯೆ ಭಾರತೀಯ ವಿದ್ಯಾರ್ಥಿಗಳ ಗಡೀಪಾರು ವಿರೋಧಿಸಿ ಕೆನಡಾದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈ ಪ್ರತಿಭಟನೆಯ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಕರಮ್‌ಜೀತ್, “ವಲಸೆ ಪ್ರಕ್ರಿಯೆಯು ತುಂಬಾ ಕಟ್ಟುನಿಟ್ಟಾಗಿದೆ ಮತ್ತು ಅವರು ವೀಸಾ ನೀಡುವಾಗ ಎಲ್ಲವನ್ನೂ ಪರಿಶೀಲಿಸುತ್ತಾರೆ ಎಂದು ನಾವು ಭಾವಿಸಿದ್ದೇವೆ ಎಂದು ಹೇಳಿದ್ದಾರೆ.

    First published: