Canada Murder: ಕೆನಡಾದಲ್ಲಿ ಚಾಕುವಿನಿಂದ ಇರಿದು 10 ಜನರ ಹತ್ಯೆ, 15 ಮಂದಿಗೆ ಗಾಯ: ಕೊಲೆಗಾರ ಪರಾರಿ

ಶಂಕಿತ ಆರೋಪಿಗಳು

ಶಂಕಿತ ಆರೋಪಿಗಳು

ಕೆನಡಾದಲ್ಲಿ, ಭಾನುವಾರ ರಾತ್ರಿ, ಸಾಸ್ಕಾಚೆವಾನ್ ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬ ಹಲವಾರು ಜನರಿಗೆ ಇರಿದಿದ್ದು, ಇದರಲ್ಲಿ 10 ಜನರು ಸಾವನ್ನಪ್ಪಿದ್ದಾರೆ ಮತ್ತು 15 ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ರಾಯಲ್ ಕೆನಡಿಯನ್ ಮೌಂಟೇನ್ ಪೊಲೀಸ್ ಅಪಾಯಕಾರಿ ಈ ವಿಚಾರವಾಗಿ ಅಲರ್ಟ್​ ಘೋಷಿಸಿದೆ.

ಮುಂದೆ ಓದಿ ...
  • Share this:

ಕೆನಡಾ(ಸೆ.05): ಕೆನಡಾದಿಂದ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಕೆನಡಾದ ಸಸ್ಕಾಚೆವಾನ್ ಪ್ರಾಂತ್ಯದಲ್ಲಿ, ವಿವಿಧ ಸ್ಥಳಗಳಲ್ಲಿ ನಡೆದ ಚಾಕು ದಾಳಿಯಲ್ಲಿ 10 ಜನರು ಸಾವನ್ನಪ್ಪಿದ್ದಾರೆ ಮತ್ತು 15 ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ದಾಳಿಕೋರ ತಲೆಮರೆಸಿಕೊಂಡಿದ್ದಾನೆ. ರಾಯಲ್ ಕೆನಡಿಯನ್ ಮೌಂಟೇನ್ ಪೊಲೀಸ್ (RCMP) ಈ ವಿಚಾರವಾಗಿ ಅಲರ್ಟ್​ ಘೋಷಿಸಿದೆ. ಸಾಸ್ಕಾಚೆವಾನ್ ಪ್ರಾಂತ್ಯದ ಜೇಮ್ಸ್ ಸ್ಮಿತ್ ಕ್ರೀ ನೇಷನ್ ಮತ್ತು ವೆಲ್ಡನ್‌ನಲ್ಲಿ ವಿವಿಧ ಸ್ಥಳಗಳಲ್ಲಿ ನಡೆದ ಆಘಾತಕಾರಿ ಘಟನೆಯ ನಂತರ ರಾಜ್ಯಾದ್ಯಂತ ಶಂಕಿತರಿಗೆ ಆರ್‌ಸಿಎಂಪಿ ಎಚ್ಚರಿಕೆ ನೀಡಿದೆ. ಸಾಸ್ಕಾಚೆವಾನ್‌ನ ಈಶಾನ್ಯದಲ್ಲಿರುವ ಜೇಮ್ಸ್ ಸ್ಮಿತ್ ಕ್ರೀ ನೇಷನ್ ಮತ್ತು ವೆಲ್ಡನ್ ವಿಲೇಜ್‌ನಲ್ಲಿ ಹಲವಾರು ಇರಿತಗಳು ನಡೆದಿವೆ ಎಂದು ಪೊಲೀಸರು ಹೇಳುತ್ತಾರೆ.


ಇದನ್ನೂ ಓದಿ: ಒಂದೇ ರಾತ್ರಿಯಲ್ಲಿ ಬಿದ್ದಿತ್ತು ಎರಡು ಹೆಣ! ಬಟ್ಟೆ ಬಿಚ್ಚಿಸಿ, ಥಳಿಸಿ ಸ್ನೇಹಿತರನ್ನು ಕೊಂದವರು ಯಾರು?


ಆರ್‌ಸಿಎಂಪಿ ಪ್ರಕಾರ ಶಂಕಿತರನ್ನು ಡೇಮಿಯನ್ ಸ್ಯಾಂಡರ್ಸನ್ ಮತ್ತು ಮೈಲ್ಸ್ ಸ್ಯಾಂಡರ್ಸನ್ ಎಂದು ಗುರುತಿಸಲಾಗಿದೆ. ಆತನ ಪತ್ತೆಗಾಗಿ ಇಡೀ ರಾಜ್ಯದಲ್ಲಿ ಎಚ್ಚರಿಕೆ ನೀಡಲಾಗಿದೆ. ಶಂಕಿತರ ಉದ್ದೇಶ ಏನೆಂಬುದು ಇನ್ನೂ ತಿಳಿದುಬಂದಿಲ್ಲ. RCMP ಸಾಸ್ಕಾಚೆವಾನ್ ಸಹಾಯಕ ಕಮಿಷನರ್ ರೊಂಡಾ ಬ್ಲ್ಯಾಕ್‌ಮೋರ್, ಕೆಲವು ಸಂತ್ರಸ್ತರನ್ನ ಗುರಿಯಾಗಿಸಿ ದಾಳಿ ನಡೆಸಿದ್ದಾನೆ, ಆದರೆ ಇತರರು ನಿರ್ಭಯವಾಗಿ ಓಡಾಡಿಕೊಂಡಿದ್ದರೆನ್ನಲಾಗಿದೆ. ಆದರೆ ಇಲ್ಲೇನಾಗಿತಯ್ತೋ ಅದು ಬಹಳ ಭಯಾನಕವಾಗಿತ್ತು ಎಂದು ಬ್ಲ್ಯಾಕ್‌ಮೋರ್ ಹೇಳಿದರು.


ಇದನ್ನೂ ಓದಿ: ಇನಿಯನ ಜೊತೆ ಸಿಕ್ಕಿ ಬಿದ್ದಿದ್ದಕ್ಕೆ 22 ವರ್ಷದ ಮಗನ ಉಸಿರು ನಿಲ್ಲಿಸಿದ ತಾಯಿ!


ಗಾಯಾಳುಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಬ್ಲ್ಯಾಕ್‌ಮೋರ್ ಹೇಳಿದ್ದಾರೆ. ದಾಳಿಕೋರರನ್ನು ಬಂಧಿಸಲು ನಾವು ನಮ್ಮ ಎಲ್ಲಾ ವಿಧಾನಗಳೊಂದಿಗೆ ವ್ಯಾಪಕ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು. ಇಬ್ಬರು ಶಂಕಿತರು ರೆಜಿನಾದಲ್ಲಿನ ಅರ್ಕೋಲಾ ಅವೆನ್ಯೂದಲ್ಲಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಇದೆ ಎಂದು ಆರ್‌ಸಿಎಂಪಿ ಹೇಳಿದೆ. ರಾತ್ರಿ 11.20 ರ ಸುಮಾರಿಗೆ ಇಬ್ಬರೂ ಶಂಕಿತರು ಕಾಣಿಸಿಕೊಂಡಿದ್ದಾರೆ ಎಂದು ರೆಜಿನಾ ಪೊಲೀಸರು ಹೇಳುತ್ತಾರೆ. ಶಂಕಿತ ಆರೋಪಿ ತಲೆಮರೆಸಿಕೊಂಡಿರುವುದರಿಂದ ಮ್ಯಾನಿಟೋಬಾ ಮತ್ತು ಅಲ್ಬರ್ಟಾ ಪ್ರಾಂತ್ಯದಲ್ಲಿ ಎಚ್ಚರಿಕೆಯನ್ನೂ ನೀಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಶಂಕಿತರು ಸಾಸ್ಕಾಚೆವಾನ್ ನಂಬರ್ ಪ್ಲೇಟ್ ಹೊಂದಿರುವ ನಿಸ್ಸಾನ್ ರೋಗ್ ಕಾರಿನಲ್ಲಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಶಂಕಿತರು ಇನ್ನೂ ವಾಹನ ಪಡೆಯುಉವ ಸಾಧ್ಯತೆ ಇದೆ ಹೀಗಾಗಿ ಇತರ ರಾಜ್ಯಗಳಲ್ಲೂ ಎಚ್ಚರಿಕೆ ನೀಡಲಾಗಿದೆ ಎಂದಿದ್ದಾರೆ.


ಊರಿಗೆ ಬಾ ಅಂತ ಕರೆದ ಯುವತಿ ಸಹೋದರರು, ನಂಬಿ ಬಂದ ಪ್ರಿಯಕರ ವಾಪಸ್ ಹೋಗಲೇ ಇಲ್ಲ!


ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ಕಂಗಾಲಾಗಿರುವ ಈ ತಾಯಿಗೆ ಇದೀಗ ದಿಕ್ಕೆ ತೋಚದಂತಾಗಿದೆ. ಪತಿಯನ್ನು ಅನೇಕ ವರ್ಷಗಳ ಹಿಂದೆಯೇ ಕಳೆದುಕೊಂಡಿದ್ದ ಮಹಿಳೆಗೆ, ಮಗನೆ ಆಧಾರವಾಗಿದ್ದ. ಆದ್ರೆ ಇದೀಗ ಪ್ರೀತಿಯ ಪಾಶಕ್ಕೆ ಸಿಲುಕಿದ ಮಗ ಕೊಲೆಯಾಗಿರುವ ಸುದ್ದಿ ಕೇಳಿ, ತಾಯಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ.


ಕ್ರಿಮಿನಾಶಕ ಕುಡಿಸಿ ಕೊಲೆ


ಮಗನನ್ನು ಕಳೆದುಕೊಂಡು ಮುಂದೇನು ಅನ್ನೋ ಚಿಂತೆಯಲ್ಲಿರುವ ಈ ಮಹಿಳೆಯ ಹೆಸರು ಯಲ್ಲಮ್ಮಾ ಪೂಜಾರಿ ಅಂತ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರ ನಿವಾಸಿ. ಈ ಮಹಿಳೆಯ ನೋವಿಗೆ ಕಾರಣವಾಗಿದ್ದು, ಈಕೆಯ ಹಿರಿಯ ಮಗ ದುಷ್ಕರ್ಮಿಗಳ ಮೋಸದ ಜಾಲಕ್ಕೆ ಸಿಲುಕಿ ಕೊಲೆಯಾಗಿದ್ದು. ಹೌದು ಯಲ್ಲಮ್ಮ ಪೂಜಾರಿಯ ಇಪ್ಪತ್ನಾಲ್ಕು ವರ್ಷದ ಹಿರಿಯ ಮಗ ಚಂದ್ರಕಾಂತ್ ಪೂಜಾರಿ ನಿನ್ನೆ ರಾತ್ರಿ ಕೊಲೆಯಾಗಿದ್ದಾನೆ. ಗಾಣಗಾಪುರದಲ್ಲಿ ಲಾಡ್ಜ್ ನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಕಾಂತ್ ನಿಗೆ ಕ್ರಿಮಿನಾಶಕ ಕುಡಿಸಿ, ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.


ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕೊಲೆ


ಅಫಜಲಪುರ ತಾಲೂಕಿನ ಇಂಗಳಗಿ ಗ್ರಾಮದ ಹೊರವಲಯದಲ್ಲಿರುವ ಕೃಷಿ ಜಮೀನಿನಲ್ಲಿ ಇಂದು ಮುಂಜಾನೆ ಚಂದ್ರಕಾಂತ್ ಶವ ಪತ್ತೆಯಾಗಿದೆ. ನಿನ್ನೆ ಸಂಜೆ ಏಳು ಗಂಟೆಗೆ ಮನೆಯಿಂದ ಹೋಗಿದ್ದ ಚಂದ್ರಕಾಂತ್ ಮತ್ತೆ ಮನೆಗೆ ಬಂದಿರಲಿಲ್ಲಾ. ರಾತ್ರಿ 9 ಗಂಟೆವರಗೆ ಆತನ ಮೊಬೈಲ್ ಆನ್ ಆಗಿತ್ತು. ಆದ್ರೆ ತಾಯಿ ಕರೆ ಮಾಡಿದ್ರು ಕೂಡಾ ಕರೆ ಸ್ವೀಕರಿಸಿರಲಿಲ್ಲಾ. ಆದ್ರೆ 9 ಗಂಟೆ ನಂತರ ಪೋನ್ ಸ್ವಿಚ್ ಆಪ್ ಆಗಿತ್ತು. ಹೀಗಾಗಿ ರಾತ್ರಿಯೆಲ್ಲಾ ತಾಯಿ ಮಗನಿಗಾಗಿ ಹುಡುಕಾಡಿದ್ದಳು. ಆದ್ರೆ ರಾತ್ರಿ ಕಳೆದು ಬೆಳಗಾಗೋದರಲ್ಲಿ ಚಂದ್ರಕಾಂತ್ ಕೊಲೆಯಾಗಿದ್ದ ಗೊತ್ತಾಗಿದೆ...

top videos
    First published: