ಮ್ಯಾಟ್ರಿಮೋನಿ ವಂಚನೆ: ಚಿನ್ನ ಕೊಡಿಸುವ ಆಸೆ ತೋರಿಸಿ ಲಕ್ಷಗಟ್ಟಲೇ ಹಣ ನುಂಗಿದ ಭೂಪ...!

ಯುವತಿಗೆ ನಮ್ಮ ಮದುವೆ ನಿಶ್ಚಿತಾರ್ಥ ಅದ್ಧೂರಿಯಾಗಿ ಆಗಬೇಕು ಎಂದು ಯುವಕ ಹೇಳಿಕೊಂಡಿದ್ದನು. ಅಷ್ಟೇ ಅಲ್ಲದೇ ಮದುವೆ ಮುನ್ನವೇ 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ನಿನಗೆ ಗಿಫ್ಟ್ ಆಗಿ ನೀಡುವೆ ಎಂದು ಮಹಿಳೆಗೆ ಆತ ಆಸೆ ಹುಟ್ಟಿಸಿದ್ದನು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಆನ್​ಲೈನ್​​ನಲ್ಲಿ ಇತ್ತೀಚೆಗೆ ವಂಚನೆಯ ಪ್ರಕರಣಗಳು ಹೆಚ್ಚಾಗುತ್ತಿವೆ. ಸೈಬರ್ ಪ್ರಕರಣಗಳನ್ನು ಕಡಿಮೆ ಮಾಡಲು ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಹಲವು ರೀತಿಯ ಸಲಹೆಗಳನ್ನು ನೀಡಲಾಗುತ್ತಿದೆ. ಆದರೂ ಮೋಸ ಹೋಗುವವರ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಅಪರಿಚಿತ ವ್ಯಕ್ತಿಗಳನ್ನು ನಂಬಿ ನಿಮ್ಮ ವಿವರಗಳನ್ನು ನೀಡಬೇಡಿ ಎಂದು ಪೊಲೀಸರು ಹಲವು ಬಾರಿ ಎಚ್ಚರಿಕೆ ನೀಡಿದರೂ ಕೆಲವು ಆನ್ಲೈನ್ ಸೈಟ್ಗಳನ್ನು ನಂಬಿ ಮೋಸ ಹೋಗುವ ಜನರಿದ್ದಾರೆ. ಇನ್ನು, ಹೈದರಾಬಾದ್ನ ಯುವತಿಯೊಬ್ಬಳು ಕೆಲವು ದಿನಗಳ ಹಿಂದೆ ಅಷ್ಟೇ ಮ್ಯಾಟ್ರಿಮೋನಿ ಮೂಲಕ ಪರಿಚಯ ಆದ ವ್ಯಕ್ತಿಯನ್ನು ನಂಬಿ ಮೋಸ ಹೋಗಿದ್ದಳು. ಈ ಪ್ರಕರಣ  ಮಾಸುವ ಮುನ್ನವೇ ಮತ್ತೊಂದು ಇದೇ ರೀತಿಯ ಪ್ರಕರಣ ನಗರದಲ್ಲಿ ನಡೆದಿದೆ.

  ಹೈದರಾಬಾದ್​​ನ ಮಹಿಳೆಯೊಬ್ಬರು ಕೆಲವು ತಿಂಗಳ ಮ್ಯಾಟ್ರಿಮೋನಿಗೆ ರಿಜಿಸ್ಟರ್ ಆಗಿ ತನ್ನ ಫೋಟೋವನ್ನು ಮ್ಯಾಟ್ರಿಮೋನಿ ಸೈಟ್ನಲ್ಲಿ ಹಂಚಿಕೊಂಡಿದ್ದಳು. ಇದಾದ ಕೆಲವು ದಿನಗಳ ಬಳಿಕ ಮಹಿಳೆಗೆ 2020ರ ಅಕ್ಟೋಬರ್ ತಿಂಗಳಿನಲ್ಲಿ ಕೆನಡಾ ಮೂಲದ ವ್ಯಕ್ತಿಯೊಬ್ಬರು ತಾನು ವೃತ್ತಿಯಲ್ಲಿ ವೈದ್ಯ ಎಂದು ಹೇಳಿಕೊಂಡು ಮಹಿಳೆಗೆ ಪರಿಚಯ ಆಗಿ ಆಕೆಯೊಂದಿಗೆ ಚಾಟ್ ಮಾಡಲು ಶುರು ಮಾಡಿದ್ದಾನೆ.

  ಲಸಿಕೆ ಪಡೆದ ಪ್ರಧಾನಿ; ಇಂದಿನಿಂದ 27 ಕೋಟಿ ಮಂದಿಗೆ ವ್ಯಾಕ್ಸಿನ್ ನೀಡುವ ಮಹಾ ಅಭಿಯಾನ

  1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಆಸೆ ಹುಟ್ಟಿಸಿದ ಮೋಸಗಾರ!

  ಇಬ್ಬರ ಸಂಬಂಧ ಪ್ರೀತಿಗೆ ತಿರುಗಿ ಮದುವೆ ಆಗುವ ಹಂತಕ್ಕೆ ತಲುಪಿದೆ. ಯುವತಿಗೆ ನಮ್ಮ ಮದುವೆ ನಿಶ್ಚಿತಾರ್ಥ ಅದ್ಧೂರಿಯಾಗಿ ಆಗಬೇಕು ಎಂದು ಯುವಕ ಹೇಳಿಕೊಂಡಿದ್ದನು. ಅಷ್ಟೇ ಅಲ್ಲದೇ ಮದುವೆ ಮುನ್ನವೇ 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ನಿನಗೆ ಗಿಫ್ಟ್ ಆಗಿ ನೀಡುವೆ ಎಂದು ಮಹಿಳೆಗೆ ಆತ ಆಸೆ ಹುಟ್ಟಿಸಿದ್ದನು. ಇದಾದ ಬಳಿಕ ಮಹಿಳೆಗೆ ದೆಹಲಿ ಏರ್ಪೋರ್ಟ್ನಿಂದ ಕರೆ ಮಾಡುತ್ತಿದ್ದೇವೆ. ನಿಮಗೆ ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಬಂದಿದೆ. ಆದರೆ, ನಿಯಮದ ಪ್ರಕಾರ ನೀವು ಟ್ಯಾಕ್ಸ್ ಹಣ 10.69 ಲಕ್ಷ ರೂ. ನೀಡದೇ ನಿಮಗೆ ಗೋಲ್ಡ್ ನೀಡಲು ಆಗುವುದಿಲ್ಲ ಎಂದು ಮಹಿಳೆಗೆ ಹೇಳಿದ್ದಾರೆ.

  ವಂಚಕರನ್ನು ನಂಬಿ ಮಹಿಳೆ 10.69 ಲಕ್ಷ ರೂ. ವರ್ಗಾವಣೆ

  ಆಗ ಯೋಚನೆ ಮಾಡದೇ ಮಹಿಳೆ 10.69 ಲಕ್ಷ ರೂ. ವರ್ಗಾವಣೆ ಮಾಡಿದ್ದಾಳೆ. ಹಣ ವರ್ಗಾವಣೆ ಮಾಡಿದ ಬಳಿಕ ದೆಹಲಿ ಏರ್ಪೋರ್ಟ್ನಿಂದ ಕರೆ ಮಾಡುತ್ತಿದ್ದೇವೆ ಎಂದ ನಂಬರ್ಗೆ ಕರೆ ಮಾಡಿದಾಗ ಆ ನಂಬರ್ ಸ್ವಿಚ್ಡ್ ಆಫ್ ಬಂದಿದೆ. ಕರೆ ಮಾಡಿ ಹಲವು ಬಾರಿ ಯತ್ನಿಸಿದರೂ ಕರೆ ವಿಫಲವಾಯಿತು. ಕೊನೆಗೆ ಮಹಿಳೆಗೆ ಪರಿಚಯ ಆಗಿದ್ದ ಕೆನಡಾ ಮೂಲಕ ವ್ಯಕ್ತಿಗೆ ಕರೆ ಮಾಡಿದರೂ ಆ ನಂಬರ್ ಕೂಡ ಸ್ವಿಚ್ಡ್ ಆಫ್ ಬಂದಿದೆ. ಹಲವು ಬಾರಿ ಕರೆ ಮಾಡಿ ಪ್ರಯತ್ನಿಸಿದರೂ ಕರೆ ಕನೆಕ್ಟ್ ಆಗದ್ದಕ್ಕೆ ಮಹಿಳೆ ಕೊನೆಗೆ ಸೈಬರ್ ಕ್ರೈಮ್ನಲ್ಲಿ ಪ್ರಕರಣ ದಾಖಲಿಸಿದ್ದಾರೆ.

  ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿ ಉತ್ತರ ಪ್ರದೇಶದ ಬರೇಲಿ ಮೂಲದ ಮೊಹಮ್ಮದ್ ಹಸೀನ್ ಎಂಬುವರನ್ನು ಬಂಧಿಸಿದ್ದಾರೆ. ಇನ್ನು, ಅಪರಿಚಿತ ವ್ಯಕ್ತಿಗಳಿಗೆ ಮಹಿಳೆಯರು ತಮ್ಮ ವೈಯಕ್ತಿಕ ಮಾಹಿತಿಯನ್ನು ನೀಡುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಹೇಳಿದ್ದಾರೆ.
  Published by:Latha CG
  First published: