Coronavirus: ಭಾರತದಿಂದ ಕೆನಡಾ ಹೋಗಲು ಇನ್ನೂ ಕೂಡಿ ಬಂದಿಲ್ಲ ಕಾಲ: ವಿಮಾನ ನಿರ್ಬಂಧ ಮುಂದುವರಿಕೆ

Flight Ban: ಭಾರತದಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಯಾಣ ನಿರ್ಬಂಧಗಳನ್ನು ಹಾಕಿದ ಮೊದಲ ದೇಶ ಕೆನಡಾ ಅಲ್ಲ. ಭಾರತದಿಂದ ಆಗಮಿಸುವ ಪ್ರಯಾಣಿಕರಿಗೆ ಮತ್ತು ವಿಶೇಷವಾಗಿ ಈ ಹಿಂದೆ ಕೊರೊನಾ ಸೋಂಕಿಗೆ ತುತ್ತಾದವರಿಗೆ ಪ್ರವೇಶ ಅಥವಾ ಸಾರಿಗೆಯನ್ನು ನಿರ್ಬಂಧಿಸಿರುವ ಹಲವು ದೇಶಗಳಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕೆನಡಾ ಸರ್ಕಾರ ಭಾರತದಿಂದ ಬರುವ ಪ್ರಯಾಣಿಕರ ವಿಮಾನಗಳ ಮೇಲಿನ ನಿಷೇಧವನ್ನು ಸೆಪ್ಟೆಂಬರ್ 21 ರವರೆಗೆ ವಿಸ್ತರಿಸಲಾಗಿದೆ ಎಂದು ಫೆಡರಲ್ ಸಾರಿಗೆ ಸಚಿವಾಲಯ ತಿಳಿಸಿದೆ. ಮೊದಲು ಏಪ್ರಿಲ್ 22 ರಂದು  ವಿಮಾನ ಹಾರಾಟಕ್ಕೆ ನಿಷೇಧ ಹೇರಲಾಗಿತ್ತು.  ಅಲ್ಲದೇ, ಈಗಾಗಲೇ  ವಿಮಾನದ ಮೇಲೆ ನಿಷೇಧವನ್ನು ಹಲವಾರು  ಬಾರಿ ಕೆನೆಡಾ ಜಾರಿಗೊಳಿಸಲಾಗಿದೆ. ಆದರೆ ಈ  ನಿಷೇಧ ಸರಕು ವಿಮಾನಗಳು ಮತ್ತು ವೈದ್ಯಕೀಯ  ವಸ್ತುಗಳ ವರ್ಗಾವಣೆ ಮಾಡುವ ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದು ಕೆನಡಾ ಹೇಳಿದೆ.

ಈ ಮೊದಲು, ಕೆನಡಾದ ಸರ್ಕಾರವು ಜುಲೈನಲ್ಲಿ ನೀಡಲಾದ ಜಾಗತಿಕ ಪ್ರಯಾಣ ಸಲಹೆಯಲ್ಲಿ ಜುಲೈ 21 ರವರೆಗೆ ಭಾರತ-ಕೆನಡಾ ನೇರ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿತು.  ಈ ಅವಧಿಯಲ್ಲಿ ಕೆನಡಾಕ್ಕೆ ಹೋಗಬೇಕಾದಲ್ಲಿ ಭಾರತೀಯ ಪ್ರಯಾಣಿಕರು ಬೇರೆ ಮಾರ್ಗವನ್ನು ಮೂಲಕ ವಿಮಾನವನ್ನು ಕಾಯ್ದಿರಿಸಬೇಕಾಗಿತ್ತು.  ಈಗ ಹೊಸ  ಅಧಿಕೃತ ಪ್ರಯಾಣ ಸಲಹೆಯ ಪ್ರಕಾರ, ಕೆನಡಾ ಭಾರತದ ಕೊರೊನಾ ಪರೀಕ್ಷಾ ವರದಿಯನ್ನು ಸ್ವೀಕರಿಸುವುದಿಲ್ಲ. ಆದ್ದರಿಂದ, ಪ್ರಯಾಣಿಕರು ಕೆನಡಾಕ್ಕೆ ತಮ್ಮ ಪ್ರಯಾಣವನ್ನು ಮುಂದುವರಿಸುವ ಮೊದಲು ಬೇರೆ ದೇಶದಲ್ಲಿ ಕೊರೊನಾ ವೈರಸ್ ಪರೀಕ್ಷೆಗೆ ಒಳಗಾಗಬೇಕು. ಅಲ್ಲಿಯ ವರದಿ ಅನುಸಾರ ಕೆನಡಾ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.

ಇದನ್ನೂ ಓದಿ: ಅಮೆರಿಕದ ಆಂಬ್ರಿ ಸಂಸ್ಥೆಯಲ್ಲಿ ರಿಲಾಯನ್ಸ್​ನ RNESL ಹೂಡಿಕೆ

ಮಾಹಿತಿಯ ಪ್ರಕಾರ, ಈ ಹಿಂದೆ ಕೊರೊನಾ  ವೈರಸ್ ಪಾಸಿಟಿವ್ ಬಂದ ರೋಗಿಗಳು ಮತ್ತು ಭಾರತದಿಂದ ಕೆನಡಾಕ್ಕೆ ಪ್ರಯಾಣಿಸುವ ಪ್ರಯಾಣಿಕರು ಪ್ರಯಾಣ ಆರಂಭಿಸುವ 14 ರಿಂದ 90 ದಿನಗಳ ಮೊದಲು ನಡೆಸಿದ ಕೊರೊನಾ ವೈರಸ್ ಪರೀಕ್ಷಾ ವರದಿಯನ್ನು ನೀಡಬೇಕಾಗುತ್ತದೆ.  ಭಾರತೀಯ ಪ್ರಯಾಣಿಕರು ಕೆನಡಾಕ್ಕೆ ತಮ್ಮ ಪ್ರಯಾಣವನ್ನು ಮುಂದುವರಿಸುವ ಮೊದಲು  ಬೇರೆ ದೇಶದಲ್ಲಿ ಪರೀಕ್ಷೆ ನಡೆಸಿ ವರದಿ ಪಡೆಯಬೇಕು. ಅಲ್ಲದೇ ನೀವು ಬೇರೆ ದೇಶದಲ್ಲಿ ಕನಿಷ್ಠ 14 ದಿನಗಳ ಕಾಲ ಇರಬೇಕಾಗಬಹುದು ಎಂದು ಕೆನಡಾ ತಿಳಿಸಿದೆ.

ಇನ್ನು ಭಾರತದಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಯಾಣ ನಿರ್ಬಂಧಗಳನ್ನು ಹಾಕಿದ ಮೊದಲ ದೇಶ ಕೆನಡಾ ಅಲ್ಲ. ಭಾರತದಿಂದ ಆಗಮಿಸುವ ಪ್ರಯಾಣಿಕರಿಗೆ ಮತ್ತು ವಿಶೇಷವಾಗಿ ಈ ಹಿಂದೆ ಕೊರೊನಾ ಸೋಂಕಿಗೆ ತುತ್ತಾದವರಿಗೆ ಪ್ರವೇಶ ಅಥವಾ ಸಾರಿಗೆಯನ್ನು ನಿರ್ಬಂಧಿಸಿರುವ ಹಲವು ದೇಶಗಳಿವೆ. ಪ್ರಯಾಣಿಕರ ಪ್ರಯಾಣದ ಸಮಯದಲ್ಲಿ ಸೋಂಕು ಪತ್ತೆಯಾದಲ್ಲಿ ಕ್ವಾರೆಂಟೈನ್ ಮಾಡಲಾಗುತ್ತದೆ ಅಥವಾ ಮರಳಿ ಅವರ ಸ್ಥಳಕ್ಕೆ ಕಳುಹಿಸಲಾಗುತ್ತಿದೆ.

ಇದನ್ನೂ ಓದಿ: ಕೋವಿಡ್‌ನಿಂದ ಇಡೀ ವಿಶ್ವವೇ ಶಿಕ್ಷಣ ಬಿಕ್ಕಟ್ಟನ್ನು ಎದುರಿಸಲಿದೆ: ತಜ್ಞರ ಎಚ್ಚರಿಕೆ..!

ಇನ್ನೊಂದು ಪ್ರಮುಖ ಅಂಶ ಎಂದರೆ,  ಯುಕೆ ಭಾರತವನ್ನು ಕೆಂಪು ಪಟ್ಟಿಯಿಂದ ತೆಗೆದುಹಾಕಿದ್ದು, ಭಾರತದಿಂದ ಯುಕೆಗೆ ಪ್ರಯಾಣಿಸಲು ಈಗ ಅವಕಾಶ ನೀಡಲಾಗಿದೆ. ಆದರೆ ಕೆಲ ನಿಯಮಗಳನ್ನು ಪಾಲಿಸಬೇಕು.

ಭಾರತದಲ್ಲಿ ಕೊರೊನಾ ಮೂರನೇ ಅಲೆಯ ಭೀತಿ ಈಗಾಗಲೇ ಎದುರಾಗಿದೆ. ಮಹಾರಾಷ್ಟ್ರ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಡೆಲ್ಟಾ ಪ್ಲಸ್ ರೂಪಾಂತರ ಸೋಂಕು ಹೆಚ್ಚಾಗಿದ್ದು, 45 ಜನರು ಈ ಸೋಂಕಿಗೆ ತುತ್ತಾಗಿದ್ದಾರೆ. ಈಗಾಗಲೇ ಕರ್ನಾಟಕ, ಕೇರಳ ಮತ್ತು ಕೆಲ ರಾಜ್ಯಗಳಲ್ಲಿ ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂಗಳನ್ನು ಜಾರಿ ಮಾಡಿದ್ದು, ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇನ್ನು ಕರ್ನಾಟಕದಲ್ಲಿ ಗಡಿ ಜಿಲ್ಲೆಗಳಲ್ಲಿ ಪ್ರಕರಣಗಳ ಸಂಕ್ಯೆ ಏರಿಕೆಯಾಗಿದ್ದು, ನೆರೆ ರಾಜ್ಯಗಳಿದ್ದ ಬರುವ ಪ್ರಯಾಣಿಕರಿಗೆ ನಿಷೇಧ ಹೇರಲಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: