ಕೆನಡಾದ (Canada) ಸರ್ಕಾರವು ವಿದೇಶಿಗರು (Foreigners) ದೇಶದಲ್ಲಿ ವಸತಿ (Home) ಆಸ್ತಿಗಳನ್ನು (Property) ಖರೀದಿಸುವುದನ್ನು ನಿಷೇಧಿಸಿದೆ. ಈ ನಿಷೇಧವು ಭಾನುವಾರದಂದು ಜಾರಿಗೆ ಬಂದಿದೆ ಎಂದು ಸುದ್ದಿಮಾಧ್ಯಮ ವರದಿ ಮಾಡಿದೆ. ಸಾಂಕ್ರಾಮಿಕ ರೋಗ ಕೊರೊನಾ (Corona) ಪ್ರಾರಂಭವಾದ ನಂತರ ಮನೆಯ ಬೆಲೆಗಳು ಹೆಚ್ಚಾದ ಕಾರಣ ಕೆನಡಾ ಸರ್ಕಾರ ಈ ಕಾನೂನನ್ನು ಅಂಗೀಕರಿಸಿದೆ. ಅಷ್ಟಕ್ಕೂ ಖರೀದಿದಾರರು ತಮ್ಮ ಹೂಡಿಕೆಯ ಭಾಗವಾಗಿ ಮನೆಗಳನ್ನು ತ್ವರಿತವಾಗಿ ಖರೀದಿಸಲು ಮುಂದಾಗಿದ್ದಕ್ಕೆ ಈ ರೀತಿ ಬೆಲೆ ಏರಿಕೆಯಾಗಲು ಕಾರಣವಾಗಿದೆ ಎಂದು ಅಲ್ಲಿನ ರಾಜಕೀಯ ಮುಖಂಡರು ತಿಳಿಸಿದ್ದಾರೆ.
ಯಾರಿಗೆಲ್ಲಾ ವಿನಾಯಿತಿ
ಕೋವಿಡ್-19 ಸಾಂಕ್ರಾಮಿಕ ರೋಗದ ಆರಂಭದಿಂದಲೇ ದೇಶದಲ್ಲಿ ನಿವೇಶನಗಳ ಬೆಲೆ ಏರಿಕೆಯಾಗಿದ್ದು ಈ ಹಿನ್ನೆಲೆಯಲ್ಲಿ ವಿದೇಶಿಗರು ಮನೆ ಖರೀದಿಸದಂತೆ ನಿಷೇಧವನ್ನು ಕೆನಡಾ ಸೂಚಿಸಿದೆ.
ಸಿಎನ್ಎನ್ ವರದಿಯ ಪ್ರಕಾರ ಹೊಸ ನಿಷೇಧವು ಕೆನಡಾದ ನಾಗರಿಕರಲ್ಲದ ವಲಸಿಗರು ಹಾಗೂ ಖಾಯಂ ನಿವಾಸಿಗಳಿಗೆ ವಿನಾಯಿತಿಯನ್ನು ಹೊಂದಿದೆ ಎಂದು ತಿಳಿದುಬಂದಿದೆ.
ನಿವೇಶನಗಳು ಹೂಡಿಕೆದಾರರಿಗೆ ಅಲ್ಲ
ಕೆನಡಾದಲ್ಲಿರುವ ನಿವೇಶನಗಳ ಆಕರ್ಷಣೆಯು ಲಾಭದಾಯಕರು, ಶ್ರೀಮಂತ ಸಂಸ್ಥೆಗಳು ಮತ್ತು ವಿದೇಶಿ ಹೂಡಿಕೆದಾರರನ್ನು ಸೆಳೆಯುತ್ತಿದೆ ಎಂದು ಕಳೆದ ವರ್ಷ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಪಕ್ಷದ ಪ್ರಚಾರ ಸೈಟ್ ಹೇಳಿತ್ತು.
ಇದರಿಂದ ಕಡಿಮೆ ಬಳಕೆಯ ಹಾಗೂ ಖಾಲಿ ನಿವೇಶನ, ಅತಿರೇಕದ ಸುದ್ದಿ ಹಬ್ಬಿಸುವಿಕೆ, ಹೆಚ್ಚಿನ ಬೆಲೆಗಳಿಗೆ ಕಾರಣವಾಗುತ್ತದೆ ಮತ್ತು ನಿಜವಾದ ಸಮಸ್ಯೆ ಉದ್ಭವಗೊಳ್ಳುತ್ತದೆ. ನಿವೇಶನಗಳು ಜನರಿಗೆ ವಾಸಿಸಲು ಇರಬೇಕಾಗಿದ್ದು ಹೂಡಿಕೆದಾರರಿಗೆ ಅಲ್ಲ ಎಂದು ವೆಬ್ಸೈಟ್ ಉಲ್ಲೇಖಿಸಿದೆ.
ಕಾನೂನು ಅನ್ವಯವಾಗುವ ಮುನ್ನವೇ 2020 ಹಾಗೂ 2021 ರ ನಿವೇಶನಗಳ ಬೆಲೆ ಏರಿಕೆಯು 2022 ರಲ್ಲಿ ಇನ್ನಷ್ಟು ಹೆಚ್ಚಾಗಿದೆ.
ಕೆನಡಾದಲ್ಲಿ ಮನೆಗಳ ಬೆಲೆ ಹಾಗೂ ಬಡ್ಡಿ ದರಗಳು
ಕೆನಡಿಯನ್ ರಿಯಲ್ ಎಸ್ಟೇಟ್ ಅಸೋಸಿಯೇಷನ್ (CREA) ಪ್ರಕಾರ, ಫೆಬ್ರವರಿ 2022 ರಲ್ಲಿ ಕೆನಡಾದಲ್ಲಿ ಸರಾಸರಿ ಮನೆಯ ಬೆಲೆ $800,000 ಕೆನಡಿಯನ್ಗಿಂತ ಹೆಚ್ಚಾಗಿದೆ. ನಂತರ ಬೆಲೆಗಳು ಸುಮಾರು 13% ದಷ್ಟು ಕುಸಿತ ಕಂಡವು.
ಬ್ಯಾಂಕ್ ಆಫ್ ಕೆನಡಾ ಬಡ್ಡಿದರಗಳನ್ನು ಹೆಚ್ಚಿಸುತ್ತಿದ್ದು ಇದರಿಂದ ದೇಶದಲ್ಲಿ ದರ ಏರಿಕೆ ಕಂಡುಬಂದಿದೆ. CREA ದ ಬೆಲೆ ಸೂಚ್ಯಂಕವು ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ 2019 ರ ಅಂತ್ಯದಿಂದ ಇನ್ನೂ 38% ಹೆಚ್ಚಾಗಿದೆ.
ರಿಯಲ್ ಎಸ್ಟೇಟ್ ಕಳವಳ
ವಿನಾಯಿತಿಗಳನ್ನು ಹೊರತುಪಡಿಸಿ ಈ ಕಾನೂನಿನ ಕುರಿತು ರಿಯಲ್ ಎಸ್ಟೇಟ್ ಅಸೋಸಿಯೇಷನ್ ಕಳವಳ ವ್ಯಕ್ತಪಡಿಸಿದೆ. ಕೆನಡಿಯನ್ನರು, ವಿಶೇಷವಾಗಿ ಕೆನಡಾದ ನಿವೃತ್ತ ನಾಗರಿಕರು ಅಮೆರಿಕ ಹಾಗೂ ಮೆಕ್ಸಿಕೊದಂತಹ ದೇಶಗಳಲ್ಲಿ ನಿವೇಶನಗಳನ್ನು ಹುಡುಕುತ್ತಾರೆ.
ಈ ಸಮಯದಲ್ಲಿ ಕೆನಡಾದ ನಿಷೇಧವು ಯುನೈಟೆಡ್ ಸ್ಟೇಟ್ಸ್ ಮತ್ತು ಮೆಕ್ಸಿಕೊದ ವಿರುದ್ಧ ಪ್ರತಿಕಾರಕ್ಕಾಗಿರಬಹುದೇನೋ ಎಂದು ಅಸೋಸಿಯೇಷನ್ ತಿಳಿಸಿದೆ.
ಅಮೆರಿಕಾದ ಆಸ್ತಿಗಳ ಅತಿದೊಡ್ಡ ವಿದೇಶಿ ಖರೀದಿದಾರರು ಕೆನಡಾದ ಪ್ರಜೆಗಳು
ಕೆನಡಾದ ನಿವೃತ್ತ ನಾಗರಿಕರು ವಿಶೇಷವಾಗಿ US ನಲ್ಲಿ ವಸತಿ ಆಸ್ತಿಗಳನ್ನು ಖರೀದಿಸುತ್ತಾರೆ ಎಂದು ಸಂಸ್ಥೆ ತಿಳಿಸಿದ್ದು, ಫ್ಲೋರಿಡಾ ಮತ್ತು ಅರಿಝೋನಾದಲ್ಲಿ ಕೆನಡಿಯನ್ನರು ಖರೀದಿಸಿದ ಅರ್ಧಕ್ಕಿಂತ ಹೆಚ್ಚು ಆಸ್ತಿಗಳೊಂದಿಗೆ ಕೆನಡಿಯನ್ನರು ಅಮೆರಿಕಾದ ಆಸ್ತಿಗಳ ಅತಿದೊಡ್ಡ ವಿದೇಶಿ ಖರೀದಿದಾರರಾಗಿದ್ದಾರೆ ಎಂದು CREA ತಿಳಿಸಿದೆ.
ಹೊಸ ಕಾನೂನಿನ ಪ್ರಕಾರ, ಕೆನಡಿಯನ್ನರಲ್ಲದವರು ವಸತಿ ಆಸ್ತಿಯನ್ನು ಖರೀದಿಸುವ ನಿಷೇಧವು ದೇಶದ ಮೇಲೆ ಪರಿಣಾಮವನ್ನು ಬೀರಬಹುದು ಎಂದು ಅಸೋಸಿಯೇಷನ್ ತಿಳಿಸಿದೆ.
ಹಣ ಉಳಿತಾಯ ಮಾಡುವ ವಿಧಾನ
ಚಳಿಗಾಲದಲ್ಲಿ ಈ ದೇಶಗಳಲ್ಲಿರುವ ನಿವೇಶನಗಳು ಕೆನಡಾದ ಜನರಿಗೆ ವಾಸ್ತವ್ಯಕ್ಕೆ ಅನುಕೂಲವನ್ನುಂಟು ಮಾಡಿಕೊಡುತ್ತವೆ ಹಾಗೂ ಕೆನಡಾದ ನಿವೃತ್ತ ನಾಗರಿಕರಿಗೆ ಹಣ ಉಳಿತಾಯ ಮಾಡುವ ಒಂದು ಮಾರ್ಗವಾಗಿ ಕೂಡ ಸಹಾಯಕವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: Aadhar Update: ಆಧಾರ್ ಅಪ್ಡೇಟ್ನಲ್ಲಿ ಪ್ರಮುಖ ಬದಲಾವಣೆ, ಆ ದಾಖಲೆಗಳು ಇನ್ಮುಂದೆ ಕೆಲಸಕ್ಕೆ ಬರಲ್ಲ!
ಕೆನಡಾದಲ್ಲಿ ಆಸ್ತಿಹೊಂದಿರುವ ಅಮೆರಿಕನ್ನರ ಮೇಲೆ ಕೆನಡಾ ನಿಷೇಧವನ್ನು ಹೇರಿದರೆ ಅಮೆರಿಕಾ ಕೂಡ ಕೆನಡಾದ ಪ್ರಜೆಗಳ ಮೇಲೆ ಹಾಗೆಯೇ ಪ್ರತಿಕ್ರಿಯಿಸುತ್ತದೆ ಎಂಬುದು ಅಸೋಸಿಯೇಷನ್ ಕಳವಳವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ