• Home
  • »
  • News
  • »
  • national-international
  • »
  • Canada Citizens: ಭಾರತದ ಈ ರಾಜ್ಯಗಳಿಗೆ ಹೋಗದಂತೆ ತನ್ನ ನಾಗರಿಕರಿಗೆ ಕೆನಡಾ ಸಲಹೆ! ಕಾರಣ ಏನು ಗೊತ್ತಾ?

Canada Citizens: ಭಾರತದ ಈ ರಾಜ್ಯಗಳಿಗೆ ಹೋಗದಂತೆ ತನ್ನ ನಾಗರಿಕರಿಗೆ ಕೆನಡಾ ಸಲಹೆ! ಕಾರಣ ಏನು ಗೊತ್ತಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಭಾರತದ ಕೆಲವು ರಾಜ್ಯಗಳಿಂದ ದೂರವಿರುವಂತೆ ತನ್ನ ಪ್ರಜೆಗಳಿಗೆ ಕೆನಡಾ ಸರ್ಕಾರ ಹೇಳಿದೆ. ಲ್ಯಾಂಡ್‌ ಮೈನ್‌ಗಳ ಉಪಸ್ಥಿತಿ ಹಾಗೂ ಭದ್ರತಾ ಪರಿಸ್ಥಿತಿಯ ಕಾರಣ ನೀಡಿ ಆ ರಾಜ್ಯಗಳಿಗೆ ಪ್ರಯಾಣಿಸದಂತೆ ತನ್ನ ದೇಶದ ನಾಗರಿಕರಿಗೆ ಸಲಹೆ ನೀಡಿದೆ.

  • Share this:

ಇತ್ತೀಚಿಗಷ್ಟೇ ಕೆನಡಾದಲ್ಲಿ (Canada) ಭಾರತೀಯರನ್ನು (India) ಗುರಿಯಾಗಿಸಿ ಗಲಭೆ, ಹಿಂಸಾಚಾರ ನಡೆದ ಬೆನ್ನಲ್ಲೇ ಜಾಗರೂಕರಾಗಿರುವಂತೆ ಭಾರತ ಕೆನಡಾದಲ್ಲಿರುವ ತನ್ನ ನಾಗರಿಕರಿಗೆ ತಿಳಿಸಿತ್ತು. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಮಾಡಿತ್ತು. ಇದೀಗ ಅದಕ್ಕೆ ಪ್ರತಿಯಾಗಿ ಎಂಬಂತೆ, ಕೆನಡಾ ಕೂಡ ತನ್ನ ನಾಗರಿಕರಿಗೆ ಭಾರತದ ಕೆಲ ರಾಜ್ಯಗಳಿಗೆ ಪ್ರಯಾಣ (Travel) ಮಾಡದಂತೆ ಸಲಹೆ ನೀಡಿದೆ. ಕೆನಡಾ, ಭಾರತದ ಕೆಲವು ರಾಜ್ಯಗಳಿಂದ ದೂರವಿರುವಂತೆ ತನ್ನ ಪ್ರಜೆಗಳಿಗೆ (citizen) ಹೇಳಿದೆ. ಲ್ಯಾಂಡ್‌ ಮೈನ್‌ ಗಳ ಉಪಸ್ಥಿತಿ ಹಾಗೂ ಭದ್ರತಾ ಪರಿಸ್ಥಿತಿಯ ಕಾರಣ ನೀಡಿ ಆ ರಾಜ್ಯಗಳಿಗೆ ಪ್ರಯಾಣಿಸದಂತೆ ತನ್ನ ದೇಶದ ನಾಗರಿಕರಿಗೆ ಸಲಹೆ ನೀಡಿದೆ.


ಪಾಕ್‌ ಗಡಿ ಹಂಚಿಕೊಂಡ ರಾಜ್ಯಗಳಿಂದ ದೂರವಿರಿ!
ಗುಜರಾತ್‌, ಪಂಜಾಬ್‌ ಹಾಗೂ ರಾಜಸ್ತಾನ ಸೇರಿದಂತೆ ಪಾಕಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ರಾಜ್ಯಗಳಿಗೆ ಪ್ರಯಾಣ ಬೇಡ ಎಂದಿದೆ. ಆದರೆ ಆಶ್ಚರ್ಯಕರ ಸಂಗತಿಯೆಂದರೆ ಈ ಪ್ರಯಾಣದ ಎಚ್ಚರಿಕೆಯಲ್ಲಿ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಅನ್ನು ಹೊರಗಿಡಲಾಗಿದೆ. ಇನ್ನು, ತೀರಾ ಅಗತ್ಯವಿಲ್ಲದೇ ಹೋದಲ್ಲಿ ಅಸ್ಸಾಂ ಹಾಗೂ ಮಣಿಪುರಕ್ಕೆ ಹೋಗುವುದನ್ನೂ ಅವಾಯ್ಡ್‌ ಮಾಡಿದೆ ಎಂದಿದೆ. ಇಲ್ಲಿ ಭಯೋತ್ಪಾದನೆ ಹಾಗೂ ದಂಗೆ ಅಪಾಯದ ಕಾರಣದಿಂದಾಗಿ ಈ ಸಲಹೆ ನೀಡಿರುವುದಾಗಿ ಕೆನಡಾ ಹೇಳಿಕೊಂಡಿದೆ.


ಅನಿರೀಕ್ಷಿತ ಭದ್ರತಾ ಪರಿಸ್ಥಿತಿ ಮತ್ತು ನೆಲಬಾಂಬ್‌ಗಳು ಮತ್ತು ಶಸ್ತ್ರಾಸ್ತ್ರಗಳ ಇರುವಿಕೆಯಿಂದಾಗಿ ಈ ರಾಜ್ಯಗಳ ಹಾಗೂ ಪಾಕಿಸ್ತಾನದೊಂದಿಗಿನ ಗಡಿಯ 10 ಕಿಮೀ ವ್ಯಾಪ್ತಿಯಲ್ಲಿರುವ ಪ್ರದೇಶಗಳಿಗೆ ಪ್ರಯಾಣ ತಪ್ಪಿಸಿ ಅಂತಾ ಸಲಹೆ ನೀಡಿದೆ. ಇನ್ನು ಕೆನಡಾದ ಸರ್ಕಾರದ ಈ ಟ್ರಾವೆಲ್‌ ಅಡ್ವೈಸ್‌ ಅನ್ನು ಇತ್ತೀಚಿಗೆ ಅಂದರೆ ಸೆಪ್ಟೆಂಬರ್ 27 ರಂದು ನವೀಕರಿಸಲಾಗಿದೆ. ದೇಶದಾದ್ಯಂತ ಭಯೋತ್ಪಾದಕ ದಾಳಿಯ ಅಪಾಯದ ಕಾರಣ ಹೇಳಿ ಭಾರತದಲ್ಲಿ ತೀವ್ರ ಎಚ್ಚರಿಕೆಯಿಂದ ಇರುವಂತೆ ತನ್ನ ಜನರಿಗೆ ಹೇಳಿದೆ.


ಕೆನಡಾದಲ್ಲಿ ನಡೆದಿತ್ತು ಭಾರತೀಯರ ಮೇಲೆ ಹಿಂಸಾಚಾರ
ಈ ಮಧ್ಯೆ, ಸೆಪ್ಟೆಂಬರ್ 23 ರಂದು, ಕೆನಡಾದಲ್ಲಿ ಅಪರಾಧಗಳು ಮತ್ತು ಭಾರತೀಯ ವಿರೋಧಿ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗರೂಕರಾಗಿರಿ ಎಂದು ಭಾರತವು ಭಾರತೀಯ ನಾಗರಿಕರು ಮತ್ತು ಕೆನಡಾದಲ್ಲಿರುವ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿತ್ತು.


ಇದನ್ನೂ ಓದಿ:  Shocking Incident: ಅಮೆರಿಕಾದಲ್ಲಿ ಒಂದೇ ಕುಟುಂಬದ ನಾಲ್ವರು ಭಾರತೀಯರ ಮೃತದೇಹ ಪತ್ತೆ; ಹೆಚ್ಚಾಯ್ತು ಆತಂಕ


ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಕೆನಡಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಈ ಘಟನೆಗಳನ್ನು ಪ್ರಸ್ತಾಪಿಸಿ ಈ ಅಪರಾಧಗಳ ಬಗ್ಗೆ ಪರಿಶೀಲಿಸುವಂತೆ ಕೆನಡಾದ ಅಧಿಕಾರಿಗಳನ್ನು ಕೇಳಿಕೊಂಡಿದ್ದವು. ಆದರೆ ಕೆನಡಾದಲ್ಲಿ ಇನ್ನೂ ಕೂಡ ಈ ದುಷ್ಕೃತ್ಯಗಳಿಗೆ ಕಾರಣರಾದ ಅಪರಾಧಿಗಳನ್ನು ವಿಚಾರಣೆಗೆ ಒಳಪಡಿಸಲಾಗಿಲ್ಲ ಎಂಬುದು ಗಮನಾರ್ಹ ಅಂಶ.


ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ ಕೆನಡಾದಲ್ಲಿ ದ್ವೇಷದ ಅಪರಾಧಗಳು, ಪಂಥೀಯ ಹಿಂಸಾಚಾರ ಮತ್ತು ಭಾರತೀಯ ವಿರೋಧಿ ಚಟುವಟಿಕೆಗಳು ಸದ್ಯ ಹೆಚ್ಚಾಗಿವೆ. ಈ ನಿದರ್ಶನಗಳ ಬಗ್ಗೆ ಕೆನಡಾದ ಅಧಿಕಾರಿಗಳನ್ನು MEA ಮತ್ತು ಭಾರತದ ಹೈಕಮಿಷನ್‌ಗಳು, ಕಾನ್ಸುಲೇಟ್ ಜನರಲ್ ಅವರು ಸಂಪರ್ಕಿಸಿದ್ದಾರೆ. ಅವರು ಘಟನೆಗಳನ್ನು ಪರಿಶೀಲಿಸಲು ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.


ವಿದ್ಯಾರ್ಥಿಗಳಿಗೆ ಭಾರತೀಯ ಹೈಕಮಿಷನ್ ಆಫೀಸ್‌ ನಲ್ಲಿ ನೋಂದಾಯಿಸಿಕೊಳ್ಳಲು ಸಲಹೆ
ಇನ್ನು ಕೆನಡಾದಲ್ಲಿರುವ ಭಾರತೀಯ ನಾಗರಿಕರು ಮತ್ತು ಕೆನಡಾದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಒಟ್ಟಾವಾದಲ್ಲಿನ ಭಾರತೀಯ ಹೈಕಮಿಷನ್ ಆಫೀಸ್‌ ನಲ್ಲಿ ನೋಂದಾಯಿಸಿಕೊಳ್ಳಲು ಸಲಹೆ ನೀಡಲಾಗಿದೆ. ಅಲ್ಲದೇ ಟೊರೊಂಟೊ ಮತ್ತು ವ್ಯಾಂಕೋವರ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಅಥವಾ MADAD ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲು ಹೇಳಲಾಗಿದೆ.


ಇದನ್ನೂ ಓದಿ:  Economy: ಚೀನಾದ ಕೈಗಾರಿಕಾ ಯೋಜನೆ ತನ್ನೆಡೆ ಸೆಳೆಯಲು ಭಾರತದ ಬಿಗ್ ಪ್ಲಾನ್!


ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳಲ್ಲಿ ಭಾರತೀಯರಿದ್ದಾರೆ. ಕೆಲಸಕ್ಕೋ ಅಥವಾ ಶಿಕ್ಷಣ ಪಡೆಯಲೋ ಹೀಗೆ ವಿವಿಧ ಕಾರಣದಿಂದ ಅಲ್ಲಿ ಹೋಗಿ ನೆಲೆಸಿದ್ದಾರೆ. ಆದರೆ ಎಲ್ಲ ರಾಷ್ಟ್ರಗಳೂ ಎಲ್ಲರಿಗೂ ಸೇಫ್‌ ಅಲ್ಲ ಅನ್ನೋ ವಿಚಾರ ಹೊಸದೇನಲ್ಲ. ಹಲವಾರು ದೇಶಗಳಲ್ಲಿ ಈಗಾಗಲೇ ಹೊರದೇಶದವರನ್ನು ಕೇಂದ್ರವಾಗಿಸಿ ಹಲವಾರು ಗಲಭೆ ಗಳು ನಡೆದಿವೆ. ಬೇರೆ ದೇಶದವರ ಮೇಲೆ ಹಿಂಸಾಚಾರಗಳೂ ನಡೆದಿವೆ. ಅಂಥ ಸಂದರ್ಭಗಳಲ್ಲಿ ವಿದೇಶಾಂಗ ಕಾರ್ಯಾಲಯಗಳು ಸಹಾಯಕ್ಕೆ ಬಂದರೂ ಎಲ್ಲವನ್ನೂ ಸರಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವಿರುವುದು ಮಾತ್ರ ಉತ್ತಮ.

Published by:Ashwini Prabhu
First published: