Russia-Ukraine War: ‘ನಾವು ಪುಟಿನ್​ರನ್ನು ಯುದ್ಧ ನಿಲ್ಲಿಸುವಂತೆ ಕೇಳಬಹುದಾ?,‘ ಭಾರತೀಯರನ್ನ ರಕ್ಷಿಸಲು ಚೀಫ್ ಜಸ್ಟೀಸ್ ಪ್ರಶ್ನೆ

ನಮ್ಮ ದೇಶದ ಮುಖ್ಯ ನ್ಯಾಯಾಧೀಶರಾಗಿರುವ ಎನ್.ವಿ ರಮಣ ಅವರು ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆಯೊಂದರ ಸಂದರ್ಭದಲ್ಲಿ ಈ ರೀತಿ ಕೇಳಿದ್ದಾರೆ.

ರಷ್ಯಾ ಅಧ್ಯಕ್ಷ ಪುಟಿನ್​​

ರಷ್ಯಾ ಅಧ್ಯಕ್ಷ ಪುಟಿನ್​​

 • Share this:
  ಈಗಾಗಲೇ ಜಗತ್ತಿನಾದ್ಯಂತ ಹಲವಾರು ದೇಶಗಳು, ಸಾಮಾಜಿಕ ಸಂಸ್ಥೆ-ಸಂಘಟನೆಗಳು, ಜನರು ರಷ್ಯಾ (Russia) ಕುರಿತು ಉಕ್ರೇನ್ (Ukraine) ಮೇಲೆ ಮಾಡುತ್ತಿರುವ ಯುದ್ಧ (War) ನಿಲ್ಲಿಸಿ ಎಂದು ಗಟ್ಟಿಯಾಗಿ ಕೂಗುತ್ತಲೇ ಇದ್ದಾರೆ. ಆದರೂ ರಷ್ಯಾ ತನ್ನ ದಾಳಿಯನ್ನು ಹಾಗೆಯೇ ಮುಂದುವರೆಸಿದೆ. ಇದೀಗ ಭಾರತದಲ್ಲಿ ಮುಖ್ಯ ವ್ಯಕ್ತಿಯೊಬ್ಬರು ಸಹ ಇದಕ್ಕೆ ಸಂಬಂಧಿಸಿದಂತೆ ತಮ್ಮ ಒಂದು ಅಭಿಪ್ರಾಯ ಹಂಚಿಕೊಂಡಿದ್ದು ಎಲ್ಲೆಡೆ ಗಮನ ಸೆಳೆಯುತ್ತಿದೆ. ಹೌದು, ನಮ್ಮ ದೇಶದ ಮುಖ್ಯ ನ್ಯಾಯಾಧೀಶರಾಗಿರುವ ಎನ್.ವಿ ರಮಣ (chief justice n v Ramana)  ಅವರು ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆಯೊಂದರ ಸಂದರ್ಭದಲ್ಲಿ ಈ ರೀತಿ ಕೇಳಿದ್ದಾರೆ.

  ‘ಪುಟಿನ್ ಅವರನ್ನು ಯುದ್ಧ ನಿಲ್ಲಿಸುವಂತೆ ಕೇಳಬಹುದೆ‘

  ನ್ಯಾಯಾಲದಲ್ಲಿ ಉಕ್ರೇನ್ ದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಸಂಬಂಧದ ಅರ್ಜಿಯ ವಿಚಾರಣೆಯೊಂದು ನಡೆಯುತ್ತಿದ್ದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಅವರಿಗೆ ಸಂಬಂಧಿದಂತಹ ಪೋಸ್ಟ್ ಒಂದರ ಪ್ರತಿಯಾಗಿ ಅವರು ಈ ರೀತಿ ಕೇಳಿದ್ದಾರೆಂದು ತಿಳಿದುಬಂದಿದೆ.

  ಸಾಮಾಜಿಕ ಮಾಧ್ಯಮವೊಂದರಲ್ಲಿ, ಒಂದು ವಿಡಿಯೊ ಹಂಚಿಕೊಳ್ಳಲಾಗಿದ್ದು ಅದರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳು ಏನು ಮಾಡುತ್ತಿದ್ದಾರೆ, ಅವರು ಭಾರತೀಯರನ್ನು ಕರೆತರಲು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂಬುದನ್ನು ಕೇಳಲಾಗಿದ್ದು ಆ ವಿಡಿಯೊಗೆ ಪ್ರತಿಕ್ರಿಯಿಸುತ್ತ ಮುಖ್ಯ ನ್ಯಾಯಮೂರ್ತಿಗಳು "ನಾವು ಪುಟಿನ್ ಅವರನ್ನು ಯುದ್ಧ ನಿಲ್ಲಿಸುವಂತೆ ಕೇಳಬಹುದೆ?" ಅಚ್ಚರಿಯ ಅಭಿಪ್ರಾಯ ನೀಡಿದ್ದಾರೆ.

  ಇದನ್ನೂ ಓದಿ: Kharkivನಲ್ಲಿ 200 ಮಂದಿ ಕನ್ನಡಿಗರ ಪರದಾಟ, ವಿದ್ಯಾರ್ಥಿಗಳಿಗೆ ಫೋನ್​ ಮಾಡಿ ಧೈರ್ಯ ತುಂಬಿದ CM ಬೊಮ್ಮಾಯಿ

  ಮುಖ್ಯ ನ್ಯಾಯಮೂರ್ತಿ ರಮಣ ಅವರ ಅಭಿಪ್ರಾಯ

  ಮುಖ್ಯ ನ್ಯಾಯಮೂರ್ತಿ ರಮಣ ಜೊತೆಗೆ ಎ.ಎಸ್ ಬೋಪಣ್ಣ ಹಾಗೂ ಹಿಮಾ ಕೊಹ್ಲಿ ಅವರೊಳಗೊಂಡ ತ್ರಿಪೀಠ ಸದಸ್ಯರಿರುವ ನ್ಯಾಯಾಲಯದಲ್ಲಿ ಉಕ್ರೇನ್ ನಲ್ಲಿ ಸಿಲುಕಿ ಹಾಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಸಂಬಂಧಿಸಿದಂತೆ ಹಾಕಲಾದ ಅರ್ಜಿಯ ವಿಚಾರಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ವಕೀಲರು, ನ್ಯಾಯಮೂರ್ತಿಗಳನ್ನು ಕುರಿತು, "ಈಗಾಗಲೇ ರಕ್ಷಣಾ ಕಾರ್ಯಾಚರಣೆಯ ಫ್ಲೈಟುಗಳು ಉಕ್ರೇನ್ ಗಡಿಯ ಪೋಲ್ಯಾಂಡ್, ಹಂಗೇರಿ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ರೋಮೆನಿಯಾದಿಂದ ಸಾಧ್ಯವಾಗುತ್ತಿಲ್ಲ. ಇಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳಲ್ಲಿ ಅನೇಕ ಸಂಖ್ಯೆಯಲ್ಲಿ ಹೆಣ್ಣು ಮಕಳು ಸಹ ಇದ್ದು ಅವರಿಗೆ ಯಾವುದೇ ರೀತಿಯ ಸೌಲಭ್ಯ ಸಿಗುತ್ತಿಲ್ಲ" ಎಂದು ಹೇಳಿದರು.

  ‘ನ್ಯಾಯಾಲಯ ಏನು ತಾನೇ ಮಾಡಬಹುದು‘

  ಈ ಸಂದರ್ಭದಲ್ಲಿ ಅರ್ಜಿದಾರರ ಅಹವಾಲನ್ನು ಕೇಳಿದ ನ್ಯಾಯಪೀಠವು "ಅವರ ಬಗ್ಗೆ ನಮಗೆ ಎಲ್ಲಾ ರೀತಿಯ ಸಹಾನುಭೂತಿ ಇದೆ. ಆದರೆ ನ್ಯಾಯಾಲಯ ಏನು ತಾನೇ ಮಾಡಬಹುದು," ಎಂದು ಪ್ರಶ್ನೆ ಕೇಳಿದೆ. ಅಲ್ಲದೆ,

  ಪೀಠವು ವಕೀಲರ ಸಲ್ಲಿಕೆಗಳನ್ನು ಗಮನಿಸಿದ್ದು ಮತ್ತು ರೊಮೇನಿಯಾ ಗಡಿಯ ಬಳಿ ಸಿಲುಕಿರುವ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಸಹಾಯ ಮಾಡಲು ತಮ್ಮ ಕಚೇರಿಯನ್ನು ಬಳಸಿಕೊಳ್ಳುವಂತೆ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರಿಗೆ ಸೂಚಿಸಿತು.

  ‘ಭಾರತೀಯ ವಿದ್ಯಾರ್ಥಿಗಳು ಪರಿಸ್ಥಿತಿ ಹೇಗಿದೆ?’

  ಈ ನಡುವೆ ಭಾರತ ಸರ್ಕಾರವು ವಾಯುಪಡೆಯನ್ನು ಇದರಲ್ಲಿ ಹೊತ್ತು ತಂದಿದ್ದು ತನ್ನ ನಾಗರಿಕರನ್ನು ಯುದ್ಧ ವಲಯದಿಂದ ಸ್ಥಳಾಂತರಿಸುವ ಪ್ರಯತ್ನಗಳನ್ನು ಹೆಚ್ಚಿಸಿದೆ. ರಷ್ಯಾ ಉಕ್ರೇನಿಯನ್ ನಗರಗಳ ಮೇಲೆ ಬಾಂಬ್ ದಾಳಿ ನಡೆಸುತ್ತಿರುವುದರಿಂದ ಖಾರ್ಕಿವ್‌ನಿಂದ ಹತ್ತಿರದ ಮೂರು ಸ್ಥಳಗಳಿಗೆ "ಕಾಲ್ನಡಿಗೆಯಲ್ಲಿಯೂ" ತುರ್ತಾಗಿ ತೊರೆಯುವಂತೆ ಭಾರತವು ತನ್ನ ಪ್ರಜೆಗಳನ್ನು ಕೇಳಿಕೊಂಡಿದೆ.

  ಈ ನಡುವೆ ಅನೇಕ ವಿದ್ಯಾರ್ಥಿಗಳು ತಮ್ಮನ್ನು ಒದ್ದು, ಬೆದರಿಸಿ, ನಗರದಿಂದ ಹೊರಡುವ ರೈಲುಗಳಲ್ಲಿ ಪ್ರವೇಶಿಸಲು ಬಿಡುತ್ತಿಲ್ಲ ಎಂದು ದೂರುತ್ತಿರುವ ವಿಚಾರ ಬೆಳಕಿಗೆ ಬರುತ್ತಿವೆ. ಅವರಲ್ಲಿ ಅನೇಕರು ಭಾರತ ಸರ್ಕಾರವು ನಿರ್ದಿಷ್ಟಪಡಿಸಿದ ಮೂರು ಸ್ಥಳಗಳನ್ನು ತಲುಪಲು 11 ರಿಂದ 16 ಕಿಮೀ ದೂರದವರೆಗೆ ನಡೆದುಕೊಂಡು ಹೋಗಬೇಕಾಗಿದೆ ಎಂದು ಅನೇಕ ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.

  ಇದನ್ನೂ ಓದಿ: ಮತ್ತೆ ಆಪತ್ಬಾಂಧವನಾದ ನಟ ಸೋನು ಸೂದ್: Ukraineನಲ್ಲಿ ಸಿಲುಕಿರುವವರಿಗೆ ಹೇಗೆಲ್ಲಾ ಸಹಾಯ ಮಾಡ್ತಿದ್ದಾರೆ ನೋಡಿ..

  ಇದಕ್ಕೂ ಮುಂಚೆ ಮುಂಜಾನೆ, ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿ ಇರಿಸಲಾಗಿದೆ ಎಂಬ ವರದಿಗಳು ಬರುತ್ತಿದ್ದವು. ಭಾರತ ಸರ್ಕಾರವು ಅದನ್ನು ನಿರಾಕರಿಸಿದ್ದು

  ‘ಯಾರನ್ನು ಒತ್ತೆಯಾಳು ಮಾಡಿಕೊಂಡಿಲ್ಲ’

  "ಯಾವುದೇ ವಿದ್ಯಾರ್ಥಿಗೆ ಸಂಬಂಧಿಸಿದಂತೆ ಯಾವುದೇ ಒತ್ತೆಯಾಳು ಪರಿಸ್ಥಿತಿಯ ವರದಿಗಳು ನಮಗೆ ಬಂದಿಲ್ಲ. ಖಾರ್ಕಿವ್ ಮತ್ತು ನೆರೆಯ ಪ್ರದೇಶಗಳಿಂದ ದೇಶದ ಪಶ್ಚಿಮ ಭಾಗಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ಯಲು ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡುವಲ್ಲಿ ನಾವು ಉಕ್ರೇನಿಯನ್ ಅಧಿಕಾರಿಗಳ ಬೆಂಬಲವನ್ನು ಕೋರಿದ್ದೇವೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಹೇಳಿದ್ದಾರೆ.

  ವಾಸ್ತವಿಕವಾಗಿ ರಷ್ಯಾದ ನಿಯಂತ್ರಣದಲ್ಲಿರುವ ಪೂರ್ವ ಉಕ್ರೇನಿಯನ್ ನಗರವಾದ ಖಾರ್ಕಿವ್‌ನಲ್ಲಿ ಉಕ್ರೇನಿಯನ್ ಪಡೆಗಳು ಭಾರತೀಯ ವಿದ್ಯಾರ್ಥಿಗಳ ದೊಡ್ಡ ಗುಂಪನ್ನು "ಒತ್ತೆಯಾಳುಗಳಾಗಿ" ಇರಿಸಿಕೊಂಡಿವೆ ಎಂದು ರಷ್ಯಾ ಸರ್ಕಾರ ಹೇಳಿಕೊಂಡ ನಂತರ ಈ ಸ್ಪಷ್ಟೀಕರಣವು ಬಂದಿದೆ. ಸುಮಾರು 8,000 ಭಾರತೀಯರು, ಮುಖ್ಯವಾಗಿ ವಿದ್ಯಾರ್ಥಿಗಳು, ಇನ್ನೂ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಮಂಗಳವಾರ ಹೇಳಿದ್ದರು.
  Published by:Pavana HS
  First published: