ಬಹುಮತ ಸಾಬೀತುಪಡಿಸ್ತಾರಾ ಕಮಲ್​ನಾಥ್? ಇಲ್ಲಿದೆ ನಂಬರ್ ಗೇಮ್​ನ ಅಸಲಿ ಆಟ

Madhya Pradesh Political Crisis: ಪ್ರಸ್ತುತ 230 ಶಾಸಕ ಸ್ಥಾನಗಳಿರುವ ಮಧ್ಯಪ್ರದೇಶ ವಿಧಾನಸಭೆಯಲ್ಲಿ 228 ಶಾಸಕರಿದ್ದಾರೆ. ಅಂದರೆ ಬಹುಮತಕ್ಕೆ ಬೇಕಿರುವುದು 115 ಸ್ಥಾನಗಳು. ಸದ್ಯ ಕಾಂಗ್ರೆಸ್​ ಮತ್ತು ಇತೆ ಬೆಂಬಲಿಗರನ್ನು ಸೇರಿ 121 ಸ್ಥಾನ ಹೊಂದಿದೆ. ಆದರೆ 22 ಶಾಸಕರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ, ಈ ಸ್ಥಾನ 92ಕ್ಕೆ ಕುಸಿದಿದೆ. ಅಂದರೆ ಕಮಲ್​ ನಾಥ್​ ಸರ್ಕಾರ ಮೇಲ್ನೋಟಕ್ಕಂತೂ ಬಹುಮತ ಕಳೆದುಕೊಂಡಿರುವುದು ಸ್ಪಷ್ಟ

ಸಿಎಂ ಕಮಲನಾಥ್

ಸಿಎಂ ಕಮಲನಾಥ್

 • Share this:
  ಭೋಪಾಲ್: ಮಧ್ಯಪ್ರದೇಶದಲ್ಲಿ ನಡೆದ ಬಿರುಸಿನ ರಾಜಕೀಯ ಬೆಳವಣಿಗೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ರಾಹುಲ್ ಗಾಂಧಿ ಆಪ್ತ ಜ್ಯೋತಿರಾದಿತ್ಯ ಸಿಂಧಿಯಾ ಮಂಗಳವಾರ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೆ ಅವರಿಗೆ ಬೆಂಬಲವಾಗಿ 22 ಕಾಂಗ್ರೆಸ್ ಶಾಸಕರು ಸಹ ರಾಜೀನಾಮೆಯನ್ನು ನೀಡಿದ್ದಾರೆ.

  ಇದರಿಂದಾಗಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನವಾಗುವ ಸಮಯ ಸನ್ನಿಹಿತವಾಗಿದೆ. 9 ತಿಂಗಳ ಹಿಂದೆ ಕರ್ನಾಟಕದಲ್ಲಿನ ಕಾಂಗ್ರೆಸ್ ಮತ್ತು ಜನತದಳ ನೇತೃತ್ವದ ಮೈತ್ರಿ ಸರ್ಕಾರವನ್ನು ಬಿಜೆಪಿ ಆಪರೇಷನ್ ಕಮಲದ ಮೂಲಕ ಬೀಳಿಸಿದ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಸಹ ಆಪರೇಷನ್ ಕಮಲದ ಹೊಗೆಯಾಡುತ್ತಿದೆ.

  ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಸಿಂಧಿಯಾ, ರಾಜೀನಾಮೆ ಪತ್ರದಲ್ಲಿ ನಾನು ನನ್ನ ರಾಜಕೀಯ ಜೀವನದಲ್ಲಿ ಮುಂದುವರಿಯಲು ಇದು ಸರಿಯಾದ ಸಮಯ. ಕಾಂಗ್ರೆಸ್ ಪಕ್ಷದಲ್ಲಿ ದೇಶಕ್ಕೆ ಸೇವೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರವನ್ನು ವ್ಯಕ್ತಪಡಿಸಿದ್ದರು.

  ರಾಜೀನಾಮೆ ನೀಡಿದ ಸಿಂಧಿಯಾ, ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಆದರೆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಅವರು ಇಂದು ಬಿಜೆಪಿಗೆ ಸೇರಲಿದ್ದಾರೆ.

  ಪ್ರಸ್ತುತ 230 ಶಾಸಕ ಸ್ಥಾನಗಳಿರುವ ಹೊಂದಿರುವ ಪ್ರಭಲ ಮಧ್ಯಪ್ರದೇಶ ವಿಧಾನಸಭೆಯಲ್ಲಿ 228 ಶಾಸಕರಿದ್ದಾರೆ. ಅದರಲ್ಲಿ 115 ಸ್ಥಾನಗಳು ಬಹುಮತ ಸಾಬೀತುಪಡಿಸಲು ಬೇಕಾಗಿದೆ. ಮಧ್ಯಪ್ರದೇಶದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್​ಗೆ ನಾಲ್ವರು ಪಕ್ಷೇತರರು, ಇಬ್ಬರು ಬಿಎಸ್ಪಿ ಶಾಸಕರು ಮತ್ತು ಒಂದು ಎಸ್ಪಿ ಶಾಸಕರನ್ನೊಳಗೊಂಡು 121 ಶಾಸಕರ ಬೆಂಬಲವಿತ್ತು.

  Can Kamal Nath manage to prove majority in floor test
  ಮಧ್ಯಪ್ರದೇಶದ ನಂಬರ್​ ಗೇಮ್​ ಮತ್ತು ಬಿಜೆಪಿ - ಕಾಂಗ್ರೆಸ್​ ಪಕ್ಷಗಳ ಬಲಾಬಲ


  ಬೆಂಗಳೂರಿನ ರೆಸಾರ್ಟ್​ನಲ್ಲಿರುವ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಎನ್​ಪಿ ಪ್ರಜಾಪತಿ ಅಂಗೀಕರಿಸಿದ್ದಲ್ಲಿ, ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲಾಬಲವು 92ಕ್ಕೆ ಇಳಿಯಲಿದೆ.

  ಕಾಂಗ್ರೆಸ್ ಕರೆದಿದ್ದ ಶಾಸಕಾಂಗ ಸಭೆಯಲ್ಲಿ ಸುಮಾರು 100 ಶಾಸಕರು ಹಾಜರಿದ್ದರು ಎಂದು ಪಿಟಿಐ ವರದಿ ಮಾಡಿದೆ. ಆದರೆ ಎಸ್ಪಿ, ಬಿಎಸ್ಪಿ ಶಾಸಕರು ಸೇರಿದಂತೆ ಯಾವುದೇ ಬಂಡಾಯ ಶಾಸಕರು ಸಹ ಸಭೆಯಲ್ಲಿ ಭಾಗವಹಿಸಿರಲಿಲ್ಲ ಎಂದು ಮೂಲಗಳು ಹೇಳುತ್ತವೆ.

  ಕಾಂಗ್ರೆಸ್ ಸಭೆಯಲ್ಲಿ 100 ಶಾಸಕರು ಪಾಲ್ಗೊಂಡಿದ್ದರು ಎನ್ನುವುದನ್ನು ನಂಬಿದರೂ ಸಹ ಅದು ಬಹುಮತಕ್ಕೆ ಬೇಕಾದ ಸಂಖ್ಯೆಗಿಂತಲೂ ಕಡಿಮೆಯೇ ಇದೆ. ಸಿಂಧಿಯಾ ಬೆಂಬಲಿಗ 22 ಶಾಸಕರ ರಾಜೀನಾಮೆ ಅಂಗೀಕಾರವಾದರೆ ವಿಧಾನ ಸಭೆ 206 ಸ್ಥಾನಕ್ಕಿಳಿಯಲಿದೆ. ಅಂದರೆ ಮ್ಯಾಜಿಕ್​ ನಂಬರ್​ 104 ಆಗಲಿದೆ. ಕಾಂಗ್ರೆಸ್​ನ ಬಲ ಕೇವಲ 92ಕ್ಕಿಳಿಯಲಿದೆ. ಇತ್ತ ಬಿಜೆಪಿಗೆ 107 ಸದಸ್ಯರ ಬೆಂಬಲವಿದೆ. ಈ ಹಿನ್ನೆಲೆಯಲ್ಲಿ 107 ಸದಸ್ಯರನ್ನು ಹೊಂದಿರುವ ಬೆಜೆಪಿಗಿಂತಲೂ ಕಾಂಗ್ರೆಸ್​ 15 ಸದಸ್ಯ ಸ್ಥಾನ ಕಡಿಮೆ ಹೊಂದಿದಂತಾಗುತ್ತದೆ. ಇಂಥಹ ಸನ್ನಿವೇಶದಲ್ಲಿ ಕಮಲ್ ನಾಥ್ ಸರ್ಕಾರ ಬಹುಮತ ಕಳೆದುಕೊಂಡು ವಿಶ್ವಾಸಮತಯಾಚನೆಯಲ್ಲಿ ಸೋಲುವುದು ಖಚಿತ.

  ಈ ಎಲ್ಲಾ ಲೆಕ್ಕಾಚಾರಗಳ ಹಿನ್ನೆಲೆಯಲ್ಲೇ ಕಮಲ್​ನಾಥ್​ ಅತೃಪ್ತ ಶಾಸಕರನ್ನು ವಜಾಗೊಳಿಸುವಂತೆ ಸ್ಪೀಕರ್​ಗೆ ಮನವಿ ಮಾಡಿದ್ದಾರೆ. ಆ ಪತ್ರದಲ್ಲಿ ಸಿಂಧಿಯಾ ಅವರಿಗೆ ನಿಷ್ಠರಾಗಿದ್ದ ಇಮಾರ್ತಿ ದೇವಿ, ತುಳಸಿ ಸಿಲಾವತ್, ಗೋವಿಂದ್ ಸಿಂಗ್ ರಜಪೂತ್ ಸೇರಿದಂತೆ ಮಹೇಂದ್ರ ಸಿಂಗ್ ಸಿಸೋಡಿಯಾ, ಪ್ರದ್ಯೂನ್ಮ್ ಸಿಂಗ್ ತೋಮಾರ್, ಪ್ರಭುರಾಮ್ ಚೌಧರಿ ಇವರುಗಳ ಹೆಸರಗಳನ್ನು ಉಲ್ಲೇಖಿಸಿ ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಕೋರಿದ್ದಾರೆ.

  ಇದಿಷ್ಟೇ ಅಲ್ಲದೇ ರಾಜೀನಾಮೆ ನೀಡಿರುವ ಹರ್ದೀಪ್ ಸಿಂಗ್ ದಾಂಗ್, ಬ್ರಜೇಂದ್ರ ಸಿಂಗ್ ಯಾದವ್, ಜಸ್ಪಾಲ್ ಜಜ್ಜಿ, ಸುರೇಶ್ ದಕಡ್, ಜಸ್ವಂತ್ ಜತ್ವ, ರಕ್ಷಾ ಸಂತ್ರಾಮ್ ಸೇರಿದಂತೆ ಮುನ್ನಲಾಲ್ ಗೊಯಲ್, ರಣ್ವೀರ್ ಸಿಂಗ್ ಜತ್ವ, ಭಡೋರಿಯಾ, ಗಿರಿರಾಜ್ , ಕಮಲೇಶ್ ಮುಂತಾದವರನ್ನು ವಜಾ ಮಾಡಲು ಆಗ್ರಹಿಸಿದ್ದಾರೆ.

  ಇದರ ನಡುವೆ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ, ಸದನದಲ್ಲಿ ಬಹುಮತ ಸಾಬೀತುಪಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ಸಾಬೀತು ಮಾಡುವುದಲ್ಲದೇ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಆಪರೇಷನ್ ಕಮಲಕ್ಕೆ ಸರ್ಕಾರಗಳು ಬಲಿಯಾಗಿರುವುದು ಇದೇ ಮೊದಲೇನಲ್ಲ. 9 ತಿಂಗಳ ಹಿಂದೆ ಕರ್ನಾಟಕದಲ್ಲಿನ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಸಹ ಆಪರೇಷನ್ ಕಮಲದಿಂದಲೇ ಉರುಳಿತ್ತು ಎಂಬುದನ್ನು ಮರೆಯುವಂತಿಲ್ಲ.

  (ವರದಿ: ಸಂಧ್ಯಾ ಎಂ)
  First published: