OPINION | ಪ್ರತಿಭಟನೆ ಹೆಸರಿನಲ್ಲಿ ಸಾಂಪ್ರದಾಯಿಕ ಉದ್ಯಮಗಳ ದುರ್ಬಳಕೆ, ಸಂಪತ್ತು ನಾಶದಿಂದ ಭಾರತದ ಆರ್ಥಿಕತೆ ಸುಧಾರಿಸಲಿದೆಯೇ?

ರಾಜಕೀಯ ವಿರೋಧ ಪಕ್ಷಗಳು ಗ್ರಾಮೀಣ ಭಾರತದ ಬಗ್ಗೆ ಪ್ರಾಮಾಣಿಕವಾಗಿ ಕಾಳಜಿ ವಹಿಸುತ್ತಿದ್ದರೆ, ಬುದ್ದಿಹೀನ ಪ್ರತಿಭಟನೆಯ ಹೆಸರಿನಲ್ಲಿ ಮೂಲಸೌಕರ್ಯಗಳ ನಾಶಕ್ಕೆ ಮುಂದಾಗುವ ಬದಲು ಭಾರತೀಯ ಕೃಷಿಯಲ್ಲಿ ಹೂಡಿಕೆ ಮಾಡುವ ಸಮಯವನ್ನು ಅರಿತುಕೊಳ್ಳಬೇಕು. ಮೋದಿ ಸರ್ಕಾರದ ವಿರೋಧದ ಹೆಸರಿನಲ್ಲಿ, ಅಜಾಗರೂಕತೆಯಿಂದ ಚೀನಾಕ್ಕೆ ಮೇಲುಗೈ ಆಗುವಂತೆ ವರ್ತಿಸುತ್ತಿದ್ದಾರೆ.

ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ.

ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ.

 • Share this:
  ಕೃಷಿ ಆಂದೋಲನದ ಹೆಸರಿನಲ್ಲಿ ಸಾವಿರಾರು ಟೆಲಿಕಾಂ ಟವರ್​ಗಳು ನಾಶವಾದರೆ ಇದರಿಂದ ಯಾರು ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ? ಭಾರತದಲ್ಲಿ ಐಫೋನ್ ಗುತ್ತಿಗೆ ತಯಾರಕ ಕಾರ್ಖಾನೆಯ ಆವರಣದಲ್ಲಿ ಹಿಂಸಾಚಾರ, ವಿಧ್ವಂಸಕ ಕೃತ್ಯದಲ್ಲಿ ಕೊನೆಗೊಂಡರೆ ಅದರಿಂದ ಯಾರು ಪ್ರಯೋಜನ ಪಡೆಯಲಿದ್ದಾರೆ. ಮತ್ತು ಜಾಗತಿಕ ಉತ್ಪಾದಕರನ್ನು ತಮ್ಮ ಉತ್ಪಾದನಾ ನೆಲೆಗಳನ್ನು ಚೀನಾದಿಂದ ಭಾರತಕ್ಕೆ ಆಹ್ವಾನಿಸಲು ಸರ್ಕಾರದ ದಣಿವರಿಯದ ಪ್ರಯತ್ನಗಳನ್ನು ಸಂಪೂರ್ಣವಾಗಿ ಅಪಾಯಕ್ಕೆ ತಳ್ಳಿದರೆ ಯಾರು ಹೆಚ್ಚು ಅದರ ಪ್ರಯೋಜನ ಪಡೆಯುತ್ತಾರೆ?

  2030-32ರ ವೇಳೆಗೆ ಭಾರತದ ಆರ್ಥಿಕತೆಯನ್ನು 10 ಟ್ರಿಲಿಯನ್ ಗಡಿ ದಾಟಲು ಭಾರತದ ಪ್ರಯತ್ನಗಳಿಗೆ ಬ್ರೇಕ್ ಹಾಕುವಂತಹ ಕೆಟ್ಟ ತಪ್ಪು ಮಾಹಿತಿ ಅಭಿಯಾನದ ಮೂಲಕ ಭಾರತದ ಕೆಲವು ದೊಡ್ಡ ವ್ಯಾಪಾರ ಸಂಸ್ಥೆಗಳ ಖ್ಯಾತಿಯು ಉದ್ದೇಶಪೂರ್ವಕವಾಗಿ ಹಾನಿಗೊಳಗಾದರೆ ಯಾರಿಗೆ ಲಾಭ? ಆಂದೋಲನ, ಅಶಾಂತಿ ಮತ್ತು ನಿರ್ಣಾಯಕ ವ್ಯವಹಾರ ಸ್ವತ್ತುಗಳ ನಾಶದಿಂದಾಗಿ ಜಾಗತಿಕ ಹೂಡಿಕೆದಾರರು ಹೂಡಿಕೆ ತಾಣವಾಗಿ ಭಾರತದ ಮೇಲಿನ ವಿಶ್ವಾಸವನ್ನು ಕಳೆದುಕೊಂಡರೆ ಅದರ ಗರಿಷ್ಠ ಲಾಭವನ್ನು ಯಾರು ಪಡೆಯಲಿದ್ದಾರೆ? ಇಷ್ಟೆಲ್ಲಾ ಪ್ರಶ್ನೆಗಳಿಗೆ ಕೇಳಿಬರುವ ಒಂದೇ ಹೆಸರು ಅದು ಚೀನಾ!

  ಇದನ್ನು ಪರಿಗಣಿಸಿ: 2020 ರ ಅಕ್ಟೋಬರ್‌ನಲ್ಲಿ, ರಿಲಯನ್ಸ್ ಮುಖ್ಯಸ್ಥರಾದ ಮುಖೇಶ್ ಅಂಬಾನಿ ಅವರು ಭಾರತೀಯ ಮೊಬೈಲ್ ಸಮಾವೇಶದಲ್ಲಿ ರಿಲಯನ್ಸ್ ಜಿಯೋ 2021 ರ ದ್ವಿತೀಯಾರ್ಧದಲ್ಲಿ ಭಾರತದಲ್ಲಿ 5 ಜಿ ನೆಟ್‌ವರ್ಕ್ ಅನ್ನು ಹೊರತರುವುದಾಗಿ ಘೋಷಿಸಿದ್ದರು. ನೆಟ್ವರ್ಕ್ ಅಭಿವೃದ್ಧಿಗೆ ಚೀನಾದ ಟೆಲಿಕಾಂ ಮೂಲಸೌಕರ್ಯ ಪೂರೈಕೆದಾರರನ್ನು ಅವಲಂಬಿಸಿದ ಭಾರತ ಇನ್ನು ಮುಂದೆ ಸ್ವತಂತ್ರವಾಗಿ 5 ಜಿ ನೆಟ್​ವರ್ಕ್ ನೀಡಲು ಮುಂದಾಗಿತ್ತು. ಇದು ನಿಜಕ್ಕೂ ಭಾರತಕ್ಕೆ ಹೆಮ್ಮೆಯ ವಿಷಯವಾಗಿತ್ತು.

  ಕೋವಿಡ್ ಸಾಂಕ್ರಾಮಿಕತೆ ಯಥೇಚ್ಚವಾಗಿದ್ದಾಗಲೂ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಡುವೆಯೂ, ರಿಲಯನ್ಸ್ ಜಿಯೋ ಶೇ. 25 ಶೇಕಡಾ ಪಾಲನ್ನು ಸುಮಾರು 1.18 ಲಕ್ಷ ಕೋಟಿ ರೂ.ಗೆ ಮಾರಾಟ ಮಾಡುವ ಮೂಲಕ ದಾಖಲೆ ನಿರ್ಮಿಸಿತು. ಆ ಮೂಲಕ ಕಂಪನಿ ಮೌಲ್ಯ 5.16 ಲಕ್ಷ ಕೋಟಿ ರೂ. ದಾಟಿತು. ಇದು ಇತ್ತೀಚಿನ ದಿನಗಳಲ್ಲಿ ಭಾರತೀಯ ಕಂಪನಿಯೊಂದರಲ್ಲಿ ಅತಿದೊಡ್ಡ ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ.

  ಬ್ಲಾಕ್ಬಸ್ಟರ್ ಪಾಲು ಮಾರಾಟಕ್ಕೆ ಮುಂಚಿತವಾಗಿ, ರಿಲಯನ್ಸ್ ಜಿಯೋ ಟೆಲಿಕಾಂ ದರಗಳು ಮತ್ತು ಡೇಟಾ ಶುಲ್ಕಗಳನ್ನು ತೀವ್ರವಾಗಿ ತಗ್ಗಿಸುವ ಮೂಲಕ ಭಾರತೀಯ ಟೆಲಿಕಾಂನಲ್ಲಿ ಕ್ರಾಂತಿಯನ್ನುಂಟು ಮಾಡಿತು. ಇದರಿಂದಾಗಿ ಸಾಧಾರಣ ಆದಾಯದೊಂದಿಗೆ ಹೆಚ್ಚಿನ ಭಾರತೀಯರಿಗೆ ಕೈಗೆಟುಕುವ ದರದಲ್ಲಿ ಬ್ರಾಡ್​ಬ್ಯಾಂಡ್ ಸೇವೆ ನೀಡಿತು. ಇಂದು ಆ ಕೈಗೆಟುಕುವ ಬ್ರಾಡ್‌ಬ್ಯಾಂಡ್ ಅನ್ನು ಬುದ್ದಿಹೀನ ಅಭಿಯಾನದ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಕಪ್ಪುಮಸಿ ಬಳಿಯುವ ಪ್ರಯತ್ನಗಳು ನಡೆಯುತ್ತಿವೆ.

  ಕೈಗೆಟುಕುವ ದೂರಸಂಪರ್ಕಕ್ಕೆ ಅನುಕೂಲವಾಗುವಂತಹ ನಿರ್ಣಾಯಕ ಟೆಲಿಕಾಂ ಮೂಲಸೌಕರ್ಯವನ್ನು ಪ್ರತಿಭಟನೆಯ ಹೆಸರಿನಲ್ಲಿ ಉದ್ದೇಶಪೂರ್ವಕವಾಗಿ ನಾಶಪಡಿಸಲಾಗುತ್ತಿದೆ. ಇಂತಹ ಘಟನೆಗಳು ಆರ್ಥಿಕ ಚೇತರಿಕೆಯತ್ತ ಸಾಗುತ್ತಿರುವ ಭಾರತದ ಪ್ರಯಾಣದ ಮೇಲೆ ಎಷ್ಟು ವಿನಾಶಕಾರಿ ಪರಿಣಾಮ ಬೀರುತ್ತವೆ. ಭಾರತ 10 ಟ್ರಿಲಿಯನ್ ಆರ್ಥಿಕತೆಯತ್ತ ಸಾಗುತ್ತದೆಯೇ? ರಿಲಯನ್ಸ್‌ನಂತಹ ಸಂಸ್ಥೆಗಳ ತಮ್ಮ 5 ಜಿ ಆಕಾಂಕ್ಷೆಗಳು ಈಡೇರುತ್ತವೆಯೇ?

  ಇದನ್ನು ಓದಿ: Opinion | ಭಾರತದ ಚೀನಾ ಏಜೆಂಟೆರು ರೈತರ ಪೂರ್ವಭಾವಿ ಪ್ರತಿಭಟನೆ ಮೂಲಕ ಯುದ್ಧ ಆರಂಭಿಸಿದ್ದಾರೆ

  ರಾಜಕೀಯ ವಿರೋಧ ಪಕ್ಷಗಳು ಗ್ರಾಮೀಣ ಭಾರತದ ಬಗ್ಗೆ ಪ್ರಾಮಾಣಿಕವಾಗಿ ಕಾಳಜಿ ವಹಿಸುತ್ತಿದ್ದರೆ, ಬುದ್ದಿಹೀನ ಪ್ರತಿಭಟನೆಯ ಹೆಸರಿನಲ್ಲಿ ಮೂಲಸೌಕರ್ಯಗಳ ನಾಶಕ್ಕೆ ಮುಂದಾಗುವ ಬದಲು ಭಾರತೀಯ ಕೃಷಿಯಲ್ಲಿ ಹೂಡಿಕೆ ಮಾಡುವ ಸಮಯವನ್ನು ಅರಿತುಕೊಳ್ಳಬೇಕು. ಮೋದಿ ಸರ್ಕಾರದ ವಿರೋಧದ ಹೆಸರಿನಲ್ಲಿ, ಅಜಾಗರೂಕತೆಯಿಂದ ಚೀನಾಕ್ಕೆ ಮೇಲುಗೈ ಆಗುವಂತೆ ವರ್ತಿಸುತ್ತಿದ್ದಾರೆ.
  Published by:HR Ramesh
  First published: