ಕೇಸರಿ ಸೀರೆ ತೊಟ್ಟಾಕ್ಷಣ ನನ್ನ ಹೆಸರಿನ ಹಿಂದೆ ‘ಸಾಧ್ವಿ’ ಸೇರಿಸಲು ಸಾಧ್ಯವೇ?; ಪ್ರಗ್ಯಾ ಠಾಕೂರ್​ಗೆ ಸ್ವರ ಭಾಸ್ಕರ್ ಪ್ರಶ್ನೆ

ಕೇಸರಿ ಸೀರೆ ತೊಟ್ಟಾಕ್ಷಣ ನನ್ನ ಹೆಸರಿನ ಹಿಂದೆ ‘ಸಾಧ್ವಿ’ ಎಂದು ಸೇರಿಸಲು ಸಾಧ್ಯವೇ. ಬಳಿಕ ನೀವು ನನ್ನ ಸಾಧ್ವಿ ಸ್ವರ ಭಾಸ್ಕರ್​​ ಎಂದು ಕರೆಯಲಾದೀತೆ? ಎಂದು ಸ್ವರ ಪ್ರಶ್ನಿಸಿದ್ದಾರೆ.

Ganesh Nachikethu | news18
Updated:May 6, 2019, 5:18 PM IST
ಕೇಸರಿ ಸೀರೆ ತೊಟ್ಟಾಕ್ಷಣ ನನ್ನ ಹೆಸರಿನ ಹಿಂದೆ ‘ಸಾಧ್ವಿ’ ಸೇರಿಸಲು ಸಾಧ್ಯವೇ?; ಪ್ರಗ್ಯಾ ಠಾಕೂರ್​ಗೆ ಸ್ವರ ಭಾಸ್ಕರ್ ಪ್ರಶ್ನೆ
ನಟಿ ಸ್ವರ ಭಾಸ್ಕರ್​​​
Ganesh Nachikethu | news18
Updated: May 6, 2019, 5:18 PM IST
ನವದೆಹಲಿ(ಮೇ.06): ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಠಾಕೂರ್​​​ಗೆ ಬಾಲಿವುಡ್​​ ನಟಿ ಸ್ವರ ಭಾಸ್ಕರ್ ತಪರಾಕಿ ಬಾರಿಸಿದ್ದಾರೆ. ಕೇಸರಿ ಸೀರೆ ತೊಟ್ಟಾಕ್ಷಣ ನನ್ನ ಹೆಸರಿಗೆ ‘ಸಾಧ್ವಿ’ ಸೇರಿಸಲು ಸಾಧ್ಯವೇ? ಎಂದು ಪ್ರಶ್ನಿಸುವ ಮೂಲಕ ಸ್ವರ ಭಾಸ್ಕರ್​​ ಪ್ರಗ್ಯಾ ಠಾಕೂರ್​ ಕಾಲೆಳೆದಿದ್ದಾರೆ.

ಭೋಪಾಲ್​​ನಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತಾಡಿದ ನಟಿ ಸ್ವರ ಭಾಸ್ಕರ್​​​, ಭಯೋತ್ಪಾಧನೆಗೆ ಯಾವುದೇ ಧರ್ಮವಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತ ಯಾರೇ ಆಗಲಿ ಭಯೋತ್ಪಾದನೆ ಹೆಸರಿನಲ್ಲಿ ಹಿಂಸಾಚಾರ ಮಾಡಿದ್ದಲ್ಲಿ ಉಗ್ರರು ಎಂದು ಕರೆಯಬೇಕಾಗುತ್ತದೆ. ತನ್ನಷ್ಟಕ್ಕೇ ತಾನು ಹಿಂದೂ ಎಂದು ಭಾವಿಸುವ ಪ್ರಗ್ಯಾ ಕೂಡ ಭಯೋತ್ಪಾದಕ ಪ್ರಕರಣವೊಂದರಲ್ಲಿ ಆರೋಪಿ. ಹಾಗಾಗಿ ನಾವು ಆಕೆಯನ್ನು ಶಂಕಿತ ಹಿಂದೂ ಟೆರರ್​​​ ಎನ್ನಬಹುದು ಎಂದು ಹೇಳಿದ್ದಾರೆ.

ಕೇಸರಿ ಸೀರೆ ತೊಟ್ಟ ಕೂಡಲೇ ಯಾರೂ ಸಾಧ್ವಿಯಾಗಲು ಸಾಧ್ಯವಿಲ್ಲ. ಈಗ ನಾನು ಕೂಡ ಕೇಸರಿ ಸೀರೆ ತೊಟ್ಟಾಕ್ಷಣ ನನ್ನ ಹೆಸರಿನ ಹಿಂದೆ ‘ಸಾಧ್ವಿ’ ಎಂದು ಸೇರಿಸಲು ಸಾಧ್ಯವೇ. ಬಳಿಕ ನೀವು ನನ್ನ ಸಾಧ್ವಿ ಸ್ವರ ಭಾಸ್ಕರ್​​ ಎಂದು ಕರೆಯಲಾದೀತೆ? ಎಂದು ಸ್ವರ ಪ್ರಶ್ನಿಸಿದ್ದಾರೆ.

ಇತ್ತೀಚೆಗಷ್ಟೇ ಸಾಧ್ವಿ ಪ್ರಗ್ಯಾ ಠಾಕೂರ್​​​ಗೆ 72 ಗಂಟೆಗಳ ಕಾಲ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳದಂತೆ ಚುನವಣಾ ಆಯೋಗ ನಿಷೇಧ ಹೇರಿತ್ತು. ಬಿಜೆಪಿ ಹುರಿಯಾಳು ವಿರುದ್ಧ ದಾಖಲಾಗಿರುವ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ವಿಚಾರಣೆ ನಡೆಸಿದ ಬಳಿಕ ಆಯೋಗ ಈ ಮಹತ್ವದ ತೀರ್ಪು ನೀಡಿತ್ತು.

ಇದನ್ನೂ ಓದಿ: 'ಫನಿ ಸೈಕ್ಲೋನ್​​' ಬಗ್ಗೆ ಮೋದಿ ಜತೆ ಚರ್ಚೆಗೆ ದೀದಿ ನಕಾರ; ನಾನೇನು ಸರ್ವೆಂಟ್​​​ ಅಲ್ಲ ಎಂದ ಮಮತಾ ಬ್ಯಾನರ್ಜಿ

ಮಹಾರಾಷ್ಟ್ರ ಎಟಿಎಸ್​ ಮುಖ್ಯಸ್ಥ ಹುತಾತ್ಮ ಹೇಮಂತ್ ಕರ್ಕರೆ ಹಾಗೂ ಬಾಬರಿ ಮಸೀದಿ ದ್ವಂಸ ಪ್ರಕರಣ ಕುರಿತ ಪ್ರಗ್ಯಾ ಠಾಕೂರ್ ಹೇಳಿಕೆಗೆ ಆಯೋಗ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಇನ್ನೊಮ್ಮೆ ಭವಿಷ್ಯದಲ್ಲಿ ಇಂತಹ ಬೇಜಾವಾಬ್ದಾರಿ ಹೇಳಿಕೆಗಳನ್ನು ನೀಡದಂತೆಯೂ ಎಚ್ಚರಿಕೆ ಕೊಟ್ಟಿತ್ತು.

ಇನ್ನು ಮಾತು ಮುಂದುವರೆಸಿದ ಸ್ವರ ಭಾಸ್ಕರ್​​​, ಕೇಸರಿ ಬಟ್ಟೆ ತೊಟ್ಟು ಮೊದಲಿಗೆ ಹಿಂಸಾಚಾರದಲ್ಲಿ ಭಾಗಿಯಾಗುತ್ತಾರೆ. ನಂತರ ರಾಮರಾಮ ಎಂದು ಘೋಷಣೆ ಕೂಗುತ್ತಾರೆ. ನನ್ನ ಪ್ರಕಾರ ಯಾರೇ ಭಯೋತ್ಪಾದನೆ ಕೃತ್ಯ ಎಸಗಿದ್ದಲ್ಲಿ ಉಗ್ರರೇ ಆಗುತ್ತಾರೆ. ಹಾಗೆಯೇ ಯಾರಾದರೂ ಧರ್ಮದ ಹೆಸರಿನಲ್ಲಿ ಹಿಂಸಾಚಾರ ಮಾಡಿ, ರಾಮನ ಹೆಸರು ಬಳಸಿದರೆ ಹಿಂದೂ ಧರ್ಮಕ್ಕೆ ಮಾಡುವ ಅಪಮಾನ ಎಂದು ಅಭಿಪ್ರಾಯಪಟ್ಟರು.
Loading...

ಇದನ್ನೂ ಓದಿ: ಚುನಾವಣೆ ಮುಗಿದರೂ ನಿಂತಿಲ್ಲ ಮಂಡ್ಯ ಕಾವು; ಕೇಂದ್ರ ಮಂತ್ರಿ ಆಗಲಿದ್ದಾರಂತೆ ಸುಮಲತಾ ಅಂಬರೀಶ್​​

ನಟಿ ಸ್ವರ ಭಾಸ್ಕರ್​​​ ಇತ್ತೀಚೆಗೆ ಬಿಹಾರದ ಬೇಗುಸರಾಯ್​​ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಎನ್​​ಯು ಮಾಜಿ ವಿದ್ಯಾರ್ಥಿ ಕನ್ನಯ್ಯ ಪರ ಪ್ರಚಾರ ಮಾಡಿದ್ದರು. ಬಳಿಕ ಸ್ವರ ಭಾಸ್ಕರ್​ರನ್ನು ತುಕ್ಡೆ ಗ್ಯಾಂಗ್​ ಸದಸ್ಯೆ ಎಂದು ಟ್ರೋಲ್​​ ಕೂಡ ಮಾಡಲಾಗಿತ್ತು.
---------------
First published:May 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...