ಶಿಫಾರಸ್ಸುಗಳನ್ನು ಒಪ್ಪಿಕೊಳ್ಳುವುದು ಅಪರಾಧವೇ? ಚಿದಂಬರಂ ಬಂಧನದ ವಿರುದ್ಧ ಮತ್ತೆ ಧ್ವನಿ ಎತ್ತಿದ ಮನಮೋಹನ್​ ಸಿಂಗ್​

ಪ್ರಕರಣದಲ್ಲಿ ಸರ್ಕಾರದ ಆರು ಜನ ಕಾರ್ಯದರ್ಶಿಗಳು ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ಅಧಿಕಾರಿಗಳು ಇದರ ಪರಿಶೀಲನೆ ನಡೆಸಿ ಶಿಫಾರಸ್ಸು ಮಾಡಿ ಚಿದಂಬಂರ ಮುಂದೆ ಪ್ರಸ್ತಾಪ ಸಲ್ಲಿಸಿದ್ದರು. ಈ  ಶಿಫಾರಸ್ಸಿಗೆ  ಚಿದಂಬರಂ ಅವಿರೋಧವಾಗಿ ಒಪ್ಪಿಗೆ ಸೂಚಿಸಿದರು ಅಷ್ಟೇ

Seema.R
Updated:September 23, 2019, 10:06 PM IST
ಶಿಫಾರಸ್ಸುಗಳನ್ನು ಒಪ್ಪಿಕೊಳ್ಳುವುದು ಅಪರಾಧವೇ? ಚಿದಂಬರಂ ಬಂಧನದ ವಿರುದ್ಧ ಮತ್ತೆ ಧ್ವನಿ ಎತ್ತಿದ ಮನಮೋಹನ್​ ಸಿಂಗ್​
ಮನಮೋಹನ್​ ಸಿಂಗ್​
  • Share this:

ನವದೆಹಲಿ (ಸೆ.23): ಐಎನ್​ಎಕ್ಸ್​ ಪ್ರಕರಣದಲ್ಲಿ ನ್ಯಾಯಾಲಯ ಬಂಧನಕ್ಕೆ ಒಳಗಾಗಿರುವ ತಮ್ಮ ಪಕ್ಷದ ನಾಯಕ ಪಿ ಚಿದಂಬರಂ ಪರ ಮತ್ತೊಮ್ಮೆ ಧ್ವನಿ ಎತ್ತಿರುವ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅವರು ನ್ಯಾಯಾಲಯ ಅವರಿಗೆ ಸೂಕ್ತ ನ್ಯಾಯ ಒದಗಿಸುವ ಭರವಸೆ ಇದೆ ಎಂದರು.


ನಿನ್ನೆಯಷ್ಟೇ ಮಾಜಿ ಗೃಹಸಚಿವ ಪಿ.ಚಿದಂಬರಂ ಅವರನ್ನು ತಿಹಾರ್​ ಜೈಲಿನಲ್ಲಿ ತಮ್ಮ ಪಕ್ಷದ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಭೇಟಿ ಮಾಡಿದ ಮನಮೋಹನ್​ ಸಿಂಗ್​ ಅವರು, ಭಾರತದಲ್ಲಿ ಎಂದೂ ಏಕ ವ್ಯಕ್ತಿಯ ನಿರ್ಣಯ  ಕೈಗೊಂಡಿಲ್ಲ. ಶಿಫಾರಸ್ಸುಗಳನ್ನು ಸಚಿವರು ಒಪ್ಪಿ ಸಹಿ ಹಾಕಿದ ಮಾತ್ರಕ್ಕೆ ಅವರು ತಪ್ಪು ಮಾಡಿದ್ದಾರೆ ಎಂದು ಆರೋಪಿಸುವುದು ಸರಿಯಲ್ಲ ಎಂದರು.ಒಂದು ವೇಳೆ ಸಚಿವರಾಗಿ ಅವರು ಶಿಫಾರಸ್ಸಿಗೆ ಸಹಿಹಾಕಲು ಹಿಂದೆ ಸರಿದಿದ್ದರೆ ಸರ್ಕಾರದ ಸಂಪೂರ್ಣ ವ್ಯವಸ್ಥೆಯೇ ಕುಸಿದು ಬೀಳುತ್ತಿತ್ತು ಎಂದರು. 


ಪಿ ಚಿದಂಬರಂ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಣೆ ಮಾಡುತ್ತಿರುವ ಬಗ್ಗೆ ನಮಗೆ ಕಳವಳವಿದೆ. ದೇಶದ ಸರ್ಕಾರದ ವ್ಯವಸ್ಥೆಯಲ್ಲಿ ಯಾವುದೇ ಒಬ್ಬ ವ್ಯಕ್ತಿಯ ನಿರ್ಧಾರವನ್ನು ಎಂದು ತೆಗೆದುಕೊಂಡಿಲ್ಲ. ಇದು ಎಲ್ಲರೂ ಕೂಡಿ ಒಮ್ಮತದಿಂದ ಮಾಡಿದ ನಿರ್ಧಾರ. ಈ ಬಗ್ಗೆ ದಾಖಲೆಗಳು ಇವೆ ಎಂದರು.


ಪ್ರಕರಣದಲ್ಲಿ ಸರ್ಕಾರದ ಆರು ಜನ ಕಾರ್ಯದರ್ಶಿಗಳು ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ಅಧಿಕಾರಿಗಳು ಇದರ ಪರಿಶೀಲನೆ ನಡೆಸಿ ಶಿಫಾರಸ್ಸು ಮಾಡಿ ಚಿದಂಬಂರ ಮುಂದೆ ಪ್ರಸ್ತಾಪ ಸಲ್ಲಿಸಿದ್ದರು. ಈ  ಶಿಫಾರಸ್ಸಿಗೆ  ಚಿದಂಬರಂ ಅವಿರೋಧವಾಗಿ ಒಪ್ಪಿಗೆ ಸೂಚಿಸಿದರು ಅಷ್ಟೇ ಎಂದರು.


ಇದನ್ನು ಓದಿ: ಜಾಗತಿಕ ತಾಪಮಾನ ಬದಲಾವಣೆಗೆ ಮಾತಿಗಿಂತ ಕಾರ್ಯದ ಅಗತ್ಯವಿದೆ; ಪ್ರಧಾನಿ ನರೇಂದ್ರ ಮೋದಿ

ಪ್ರಕರಣದಲ್ಲಿ ಅಧಿಕಾರಿಗಳ ತಪ್ಪಿಲ್ಲ ಎಂದರೆ, ಇದನ್ನು ಅವಿರೋಧವಾಗಿ ಒಪ್ಪಿದ ಸಚಿವರದ್ದು ಹೇಗೆ ಅಪರಾಧವಾಗುತ್ತದೆ ಎಂದು ಊಹಿಸುತ್ತೀರಾ ಎಂದು ಪ್ರಶ್ನಿಸಿದರು.

ಪ್ರಕರಣದಲ್ಲಿ ನ್ಯಾಯ ಸಿಗಲಿದೆ ಎಂಬ ಸಂಪೂರ್ಣ ವಿಶ್ವಾಸ, ನಂಬಿಕ ನಮಗೆ ಇದೆ ಎಂದು ಇದೇ ವೇಳೆ ತಿಳಿಸಿದರು.


First published: September 23, 2019, 10:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading