HOME » NEWS » National-international » CALL FOR DONATIONS FOR CONSTRUCTION OF RAM MANDIR AT AYODHYA COLLECT 600 CRORES IN 19 DAYS MAK

Ram Mandir: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆಗೆ ಕರೆ; 19 ದಿನಗಳಲ್ಲಿ 600 ಕೋಟಿ ಹಣ ಸಂಗ್ರಹ!

ರಾಮ ಮಂದಿರವನ್ನು ಪುರಾಣ ಕಾಲದ ಅಯೋಧ್ಯೆಯಂತೆಯೇ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ 1,100 ಕೋಟಿ ಹಣ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಪ್ರಮುಖ ದೇವಾಲಯ ನಿರ್ಮಾಣಕ್ಕೆ 300 ರಿಂದ 400 ಕೋಟಿ ಹಣ ಖರ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

news18-kannada
Updated:February 9, 2021, 8:38 PM IST
Ram Mandir: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆಗೆ ಕರೆ; 19 ದಿನಗಳಲ್ಲಿ 600 ಕೋಟಿ ಹಣ ಸಂಗ್ರಹ!
ರಾಮ ಮಂದಿರ ಬ್ಲ್ಯೂ ಪ್ರಿಂಟ್.
  • Share this:
ಅಯೋಧ್ಯೆ (ಫೆಬ್ರವರಿ 09; ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಿಗೆ ಕೇಂದ್ರ ಸರ್ಕಾರವೇ ಮುಂದೆ ನಿಂತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಅಲ್ಲದೆ, ರಾಮ ಮಂದಿರ ನಿರ್ಮಾಣಕ್ಕೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಹ ನೇಮಕ ಮಾಡಲಾಗಿತ್ತು. ಈ ಟ್ರಸ್ಟ್ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಜನರಿಂದ ದೇಣಿಗೆಗೆ ಕರೆ ನೀಡಲಾಗಿದ್ದು, ಕೇವಲ 20 ದಿನಗಳಲ್ಲಿ 600 ಕೋಟಿ ಹಣವನ್ನು ಸಂಗ್ರಹಿಸಲಾಗಿದೆ ಎಂದು ವರದಿಯಾಗಿದೆ.

ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿಗಳು ಸೋಮವಾರ ಮಾಹಿತಿ ನೀಡಿದ್ದು, ಕಳೆದ 19 ದಿನಗಳಲ್ಲಿ ಹಣ ಸಂಗ್ರಹಿಸುವ ಕೆಲಸ ಅತ್ಯಂತ ವೇಗವಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಜನವರಿ 14 ರಿಂದ ಫೆಬ್ರವರಿ 27ರ ವರೆಗೆ ಜನ ಸಾಮಾನ್ಯರು ಸಹ ದೇವಾಲಯ ನಿರ್ಮಾಣ ಕಾರ್ಯಕ್ಕೆ ದೇಣಿಗೆ ನೀಡುವಂತೆ ಕರೆ ನೀಡಿದೆ.

ಇದನ್ನೂ ಓದಿ: CoronaVirus: ಕಳೆದ 24 ಗಂಟೆಗಳಲ್ಲಿ 15 ರಾಜ್ಯಗಳಿಂದ ಯಾವುದೇ ಕೊರೋನಾ ವೈರಸ್​ ಸಾವು ವರದಿಯಾಗಿಲ್ಲ: ಕೇಂದ್ರ ಸರ್ಕಾರ

ಜನವರಿ 15 ರಿಂದ ದೇಣಿಗೆ ನೀಡುವ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ಆರಂಭವಾಗಿದ್ದು, ದೇಶದ ರಾಷ್ಟ್ರಪತಿ ರಾಮನಾಥ ಕೋವಿಂದ್ ಮೊದಲಿಗರಾಗಿ 5,00,100 ರೂ ದೇಣಿಗೆ ನೀಡುವ ಮೂಲಕ ಈ ಕೆಲಸಕ್ಕೆ ಚಾಲನೆ ನೀಡಿದರು. ಆನಂತರ ಸ್ವಯಂ ಸೇವಕರು ದೇಶದಾದ್ಯಂತ ಓಡಾಡಿ ಹಣ ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ರಾಮ ಮಂದಿರವನ್ನು ಪುರಾಣ ಕಾಲದ ಅಯೋಧ್ಯೆಯಂತೆಯೇ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ 1,100 ಕೋಟಿ ಹಣ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಪ್ರಮುಖ ದೇವಾಲಯ ನಿರ್ಮಾಣಕ್ಕೆ 300 ರಿಂದ 400 ಕೋಟಿ ಹಣ ಖರ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Published by: MAshok Kumar
First published: February 9, 2021, 8:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories