ಎಲ್ಲೆಲ್ಲೂ ದೀದಿ: ಕೇರಳದಲ್ಲಿ ಕಾಣಿಸಿಕೊಂಡ "ಕಾಲ್ ದೀದಿ ಸೇವ್ ಇಂಡಿಯಾ, ದೆಹಲಿ ಚಲೋ" ಬೃಹತ್​ ಬ್ಯಾನರ್​!!

ಮತ್ತೊಂದೆಡೆ, "ಮಮತಾ ಎಂದಿಗೂ ಪ್ರಧಾನಿಯಾಗುವುದಿಲ್ಲ,  ಟಿಎಂಸಿಯ ಈ ಎಲ್ಲಾ ಕನಸುಗಳು ಎಂದಿಗೂ ನನಸಾಗುವುದಿಲ್ಲ" ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಕೇರಳದ ಕೊಚ್ಚಿಯಲ್ಲಿ ಹಾಕಿರುವ ಮಮತಾ ಬ್ಯಾನರ್ಜಿ ಬೃಹತ್​ ಬ್ಯಾನರ್​

ಕೇರಳದ ಕೊಚ್ಚಿಯಲ್ಲಿ ಹಾಕಿರುವ ಮಮತಾ ಬ್ಯಾನರ್ಜಿ ಬೃಹತ್​ ಬ್ಯಾನರ್​

 • Share this:

  ತಮಿಳುನಾಡಿನ ನಂತರ, ಕೇರಳದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್  ಅಧಿನಾಯಕಿ  ಮಮತಾ ಬ್ಯಾನರ್ಜಿ ಅವರ ಭವ್ಯ ಪೋಸ್ಟರ್‌ಗಳು ಕಾಣಿಸಿಕೊಳ್ಳತೊಡಗಿವೆ. 1970 ರ ದಶಕದ ಹಿಂದಿನ ದಿನಗಳಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಬೃಹತ್ ಬ್ಯಾನರ್‌ಗಳು ಕೇರಳದ ಕೊಚ್ಚಿಯಲ್ಲಿ ಹೀಗೆ ಕಾಣಿಸಿಕೊಂಡಿದ್ದ ಇತಿಹಾಸವನ್ನು ಇದು ನೆನಪಿಸುತ್ತಿದೆ. ಅದರಂತೆ ಈಗ ಮಮತಾ ಬ್ಯಾನರ್ಜಿಯ ಮುಖವನ್ನು ಒಳಗೊಂಡ "ಕಾಲ್ ದೀದಿ ಸೇವ್ ಇಂಡಿಯಾ, ದೆಹಲಿ ಚಲೋ" ಪೋಸ್ಟರ್‌ಗಳು ವೇಗವಾಗಿ ಎಲ್ಲಾ ಕಡೆ ಕಾಣಿಸಿಕೊಳ್ಳುತ್ತಿವೆ.


  ಕೇರಳದಲ್ಲಿ ಹಾಕಿರುವ ದೀದಿಯ ಬ್ಯಾನರ್‌ಗಳು-ಎಡ ಸರ್ಕಾರದ ಅಡಿಯಲ್ಲಿರುವ ರಾಜ್ಯ ಕೇರಳ- ಬ್ಯಾನರ್ಜಿ ಅವರು ಕಮ್ಯೂನಿಸ್ಟ್ ಸಿದ್ಧಾಂತಕ್ಕೆ ತೀವ್ರ ವಿರೋಧ ಮಾಡುವುದರಲ್ಲಿ ಹೆಸರುವಾಸಿಯಾಗಿದ್ದರಿಂದ ಪಶ್ಚಿಮ ಬಂಗಾಳದಲ್ಲಿ 34 ವರ್ಷಗಳ ಕೆಂಪು ಆಡಳಿತವನ್ನು ಕಿತ್ತೊಗೆಯುವ ಮೂಲಕ ಅಧಿಕಾರಕ್ಕೆ ಏರಿದರು ಎನ್ನುವ ಕುತೂಹಲಕಾರಿ ರಾಜಕೀಯ ವ್ಯಂಗ್ಯ ಒಕ್ಕಣೆಯನ್ನು ಬರೆಯಲಾಗಿದೆ.


  "ಇದೇ ರೀತಿಯ ಪೋಸ್ಟರ್‌ಗಳು 1970 ರ ದಶಕದಲ್ಲಿ ಕಂಡು ಬರುತ್ತಿದ್ದವು. ಆಗ ‘ಇಂದಿರಾ ಸೇವ್ ಇಂಡಿಯಾ, ಚಲೋ ದೆಹಲಿ’ ಎಂದು ಘೋಷಣೆ ಕೂಗಲಾಗಿತ್ತು, ”ಎಂದು ಕೇರಳದ ಹಿರಿಯ ಪತ್ರಕರ್ತರೊಬ್ಬರು ಸಿಎನ್ಎನ್-ನ್ಯೂಸ್ 18 ಗೆ ತಿಳಿಸಿದರು.  ತೃಣಮೂಲ ಕಾಂಗ್ರೆಸ್‌ಗೆ ದಕ್ಷಿಣ ಭಾರತದಲ್ಲಿ ಒಂದು ಚೂರು ಅಡಿಪಾಯವಿಲ್ಲ, ಆದ್ದರಿಂದ ಈ ಬೆಳವಣಿಗೆಯ ಮೂಲಕ ದಕ್ಷಿಣ ಭಾರತದಲ್ಲೂ ಬ್ಯಾನರ್ಜಿಯ ಪ್ರಭಾವವನ್ನು ನೆಲೆಗೊಳಿಸುವ ತಂತ್ರ ಇರಬಹುದೇ, ಆ ಮೂಲಕ ಅವರ ನಾಯಕತ್ವದಲ್ಲಿ ಪಕ್ಷವು ದೊಡ್ಡ ಪಾನ್-ಇಂಡಿಯಾ  ಮಟ್ಟದ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದೇ ಹೇಳಬಹುದು.  "ಟಿಎಂಸಿ ಈಗ ಖಂಡಿತವಾಗಿಯೂ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಬಯಸುತ್ತದೆ ಮತ್ತು ಈ ರೀತಿಯ ಬೆಂಬಲ, ಪ್ರಚಾರ ಖಂಡಿತವಾಗಿಯೂ ನಮ್ಮನ್ನು ಉತ್ತೇಜಿಸುತ್ತದೆ" ಎಂದು ಹಿರಿಯ ಪಕ್ಷದ ನಾಯಕ ಮತ್ತು ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರಾಯ್ ಹೇಳಿದರು, ಬ್ಯಾನರ್ಜಿ ಅವರನ್ನು "ಸಾಮಾನ್ಯ ಜನರ ಮತ್ತು ಪ್ರಜಾಪ್ರಭುತ್ವದ ಸಂರಕ್ಷಕಿ ಎಂದು ದೇಶಾದ್ಯಂತ ಸ್ವೀಕರಿಸಲಾಗುತ್ತಿದೆ’’ ಎಂದು ಅವರು ಹೇಳಿದರು.


  "ಅಗತ್ಯ ವಸ್ತುಗಳ ಬೆಲೆ ಹಿಂದೆಂದೂ ಕಾಣದಷ್ಟು ಗಗನಕ್ಕೇರಿದೆ, ನಿರುದ್ಯೋಗ, ಆಮ್ಲಜನಕವನ್ನು ಪೂರೈಸುವಲ್ಲಿ ಬೃಹತ್ ವೈಫಲ್ಯ ಮತ್ತು ಲಸಿಕೆ ಕಾರ್ಯಕ್ರಮದ ವೈಫಲ್ಯತೆ; ಬ್ಯಾಂಕುಗಳು, ವಿಮೆ, ತೈಲ ಮತ್ತು ಗಣಿ ವಲಯ, ವಿಮಾನ ನಿಲ್ದಾಣಗಳು ಮತ್ತು ಏರ್ ಇಂಡಿಯಾ, ಬಂದರುಗಳು ಮತ್ತು ದೇಶದಾದ್ಯಂತ ಇರುವ ಬೃಹತ್ ಟ್ರ್ಯಾಕ್‌ಗಳು, 400 ರೈಲು ನಿಲ್ದಾಣಗಳು ಮತ್ತು ನೂರಾರು ರೈಲು ಮಾರ್ಗಗಳು, 28 ಪಿಎಸ್​ಯುಗಳು, 15 ಶಸ್ತ್ರಾಸ್ತ್ರ ಕಾರ್ಖಾನೆಗಳು ಸೇರಿದಂತೆ ಇಡೀ ದೇಶದ ಜನ ಸಾಮಾನ್ಯನ ಆಸ್ತಿ ಇತ್ಯಾದಿಗಳನ್ನು ಬಂಡವಾಳಶಾಹಿಗಳಿಗೆ ಮಾರಾಟ ಮಾಡಲಾಗಿದೆ. ಸಾಮಾನ್ಯ ಜನರ ಮತ್ತು ನಮ್ಮ ಯುವ ಪೀಳಿಗೆಯ ಜೀವನವನ್ನು ಶೋಚನೀಯವಾಗಿಸಲಾಗಿದೆ, ಅವರಲ್ಲಿ ಅನೇಕರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಹ ಸಾಧ್ಯವಿಲ್ಲ ಅಷ್ಟು ಮಟ್ಟಕ್ಕೆ ಜರ್ಜರಿತವಾಗಿದ್ದಾರೆ, ಮಾನವ ಘನತೆಯಿಂದ ಬದುಕುವ ಬಗ್ಗೆ ಮಾತನಾಡಲು ಸಾಧ್ಯವಿಲ್ಲ, ಭಾರತೀಯ ಸಂವಿಧಾನವು ಎಲ್ಲಾ ಭಾರತೀಯ ನಾಗರಿಕರಿಗೆ ಖಾತರಿಪಡಿಸಿರುವ ವಿಧಿ 21 ರ ಅಡಿಯಲ್ಲಿ ಮೂಲಭೂತ ಹಕ್ಕನ್ನು ಸಹ ಕಸಿಯಲಾಗಿದೆ’’, ಎಂದು ಅವರು ಹೇಳಿದರು.

  ಮತ್ತೊಂದೆಡೆ, "ಮಮತಾ ಎಂದಿಗೂ ಪ್ರಧಾನಿಯಾಗುವುದಿಲ್ಲ,  ಟಿಎಂಸಿಯ ಈ ಎಲ್ಲಾ ಕನಸುಗಳು ಎಂದಿಗೂ ನನಸಾಗುವುದಿಲ್ಲ" ಎಂದು ಬಿಜೆಪಿ ವ್ಯಂಗ್ಯವಾಡಿದೆ.


  ಇದನ್ನೂ ಓದಿ: ಭಾರಿ ಮಳೆಯ ನಡುವೆ 7 ಕಿ.ಮೀ ನಡೆದುಕೊಂಡು ಹೋಗಿ ಸಂವಹನ ವ್ಯವಸ್ಥೆ ಸರಿಪಡಿಸಿದ ರೈಲ್ವೆ ಉದ್ಯೋಗಿ..!

  ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ಪಶ್ಚಿಮ ಬಂಗಾಳದ ಸಾಂಪ್ರದಾಯಿಕ ಎದುರಾಳಿ ಟಿಎಂಸಿ ಕಡೆಗೆ ಎಡಪಕ್ಷವು ವಾಲಿರುವ ಬಗ್ಗೆ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಪಕ್ಷದ ಹೇಳಿಕೆಗಳಿಂದ ಹಿಡಿದು ಸಿಪಿಐ-ಎಂ ನಾಯಕರ ಭಾಷಣಗಳವರೆಗೆ, ಎಡಪಕ್ಷಗಳು ಬಿಜೆಪಿಯನ್ನು ರಾಷ್ಟ್ರೀಯವಾಗಿ ಎದುರಿಸಲು ಬ್ಯಾನರ್ಜಿಯನ್ನು ಬೆಂಬಲಿಸಬಹುದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬ್ಯಾನರ್ಜಿ ಮತ್ತು ಅವರ ಪಕ್ಷವು ಈ ಹೊಸ ಬೆಂಬಲದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದು, ಇದನ್ನು ಹೇಗೆ ಸ್ವೀಕರಿಸುತ್ತದೆ ಎನ್ನುವ ಕುರಿತು ಪಕ್ಷದ ನಡೆ ಕುತುಹಲಕಾರಿಯಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: