• Home
  • »
  • News
  • »
  • national-international
  • »
  • California Mass Shooting: ಕ್ಯಾಲಿಫೋರ್ನಿಯಾದಲ್ಲಿ ಸಾಮೂಹಿಕ ಗುಂಡಿನ ದಾಳಿಗೆ 10 ಬಲಿ, ಜನರ ಜೀವ ತೆಗೆದು ಆತ್ಮಹತ್ಯೆ ಮಾಡಿಕೊಂಡ ಆರೋಪಿ

California Mass Shooting: ಕ್ಯಾಲಿಫೋರ್ನಿಯಾದಲ್ಲಿ ಸಾಮೂಹಿಕ ಗುಂಡಿನ ದಾಳಿಗೆ 10 ಬಲಿ, ಜನರ ಜೀವ ತೆಗೆದು ಆತ್ಮಹತ್ಯೆ ಮಾಡಿಕೊಂಡ ಆರೋಪಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಚೈನೀಸ್ ಹೊಸ ವರ್ಷದ ಪಾರ್ಟಿಯಲ್ಲಿ ಈ ಗುಂಡಿನ ದಾಳಿ ನಡೆದಿದೆ. ಈ ಸಾಮೂಹಿಕ ಗುಂಡಿನ ದಾಳಿಯಲ್ಲಿ ಹತ್ತು ಜನರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • Share this:

ಅಮೇರಿಕಾದ (America) ಕ್ಯಾಲಿಫೋರ್ನಿಯಾದ (california) ಮಾನೆಟರಿ ಪಾರ್ಕ್‌ನಲ್ಲಿ ಶನಿವಾರ (Saturday) ಚೀನಿಯರ ಹೊಸ ವರ್ಷದ ಪಾರ್ಟಿ ಮೇಲೆ ಗುಂಡಿನ ದಾಳಿ ನಡೆದಿದ್ದು, ಈ ಘಟನೆಯಲ್ಲಿ 10 ಜನರು ಸಾವಿಗೀಡಾಗಿದ್ದಾರೆ.  ವಿಚಿತ್ರ ಎಂದರೆ ಹತ್ತೂ ಮಂದಿಯನ್ನು ಸಹ ಓರ್ವ ವ್ಯಕ್ತಿ ಗುಂಡಿಕ್ಕಿ ಸಾಯಿಸಿದ್ದಾನಲ್ಲದೇ, ತಾನೂ ಸಹ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಮೂಹಿಕ ಗುಂಡಿನ ದಾಳಿಯ ಶಂಕಿತ ವ್ಯಕ್ತಿ ಕೂಡಾ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು (Police)  ತಿಳಿಸಿದ್ದಾರೆ.


ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಚೈನೀಸ್ ಹೊಸ ವರ್ಷದ ಪಾರ್ಟಿಯಲ್ಲಿ ಈ ಗುಂಡಿನ ದಾಳಿ ನಡೆದಿದೆ. ಈ ಸಾಮೂಹಿಕ ಗುಂಡಿನ ದಾಳಿಯಲ್ಲಿ ಹತ್ತು ಜನರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲೂನಾರ್ ಹೊಸ ವರ್ಷದ ಸಂಭ್ರಮದಲ್ಲಿ ಸ್ಥಳೀಯ ಸಮುದಾಯವೂ ಮಾಂಟೆರಿ ಪಾರ್ಕ್‌ನ ನೃತ್ಯ ಮಾಡುವ ಸ್ಥಳದಲ್ಲಿ ನೆರೆದಿದ್ದರು. ಈ ವೇಳೆ ರಾತ್ರಿ ಕ್ಲಬ್‌ಗೆ ನುಗ್ಗಿದ ಬಂದೂಕುಧಾರಿಯೊಬ್ಬ ಮನಸ್ಸೋ ಇಚ್ಛೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ


ಹುಯು ಕ್ಯಾನ್ ಟ್ರಾನ್ ಎಂಬ ವ್ಯಕ್ತಿಯಿಂದ ಕೃತ್ಯ
ಘಟನೆ ನಂತರ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಬರುತ್ತಿದ್ದಂತೆಯೇ ದುಷ್ಕರ್ಮಿ ಕೂಡ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ ಎಂದು ಲಾಸ್ ಏಂಜಲೀಸ್ ಪೊಲೀಸರು ತಿಳಿಸಿದ್ದಾರೆ.  ದಾಳಿ ನಡೆಸಿದಾತನ ಬಗ್ಗೆ ತನಿಖೆ ಆರಂಭಿಸಿದ್ದ ಪೊಲೀಸರಿಗೆ ದುಷ್ಕರ್ಮಿಯ ಚರಿತ್ರೆ ತಿಳಿದು ಬಂದಿದೆ, ದಾಳಿಕೋರನನ್ನು 72 ವರ್ಷದ ಹುಯು ಕ್ಯಾನ್ ಟ್ರಾನ್ ಎಂದು ಗುರುತಿಸಲಾಗಿದೆ. ಪೊಲೀಸರು ಟ್ರ್ಯಾಕ್ ಮಾಡುತ್ತಿದ್ದ ವ್ಯಾನ್ ಹತ್ತಿರ ಬರುತ್ತಿದ್ದಂತೆ ನಮಗೆ ವ್ಯಾನ್‌ನೊಳಗೆ ಗುಂಡಿನ ಶಬ್ದ ಕೇಳಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: ಇನ್ನೆರಡು ವರ್ಷ ಕಳೆದರೆ ಭಾರತದಲ್ಲಿ ಬದುಕೋಕೆ ಕಷ್ಟ ಆಗುತ್ತಂತೆ! ಕಾರಣವೇನು?


ಮಾನೆಟರಿ ಪಾರ್ಕ್‌ನಲ್ಲಿ ಚೀನಾದ ಮೊದಲ ಚಾಂದ್ರಮಾನ ಹೊಸ ವರ್ಷ ಆಚರಣೆ ನಡೆಯುತ್ತಿತ್ತು. ಈ ಸ್ಥಳದಲ್ಲಿ ನಡೆದ ಚೀನೀಯರ ಹೊಸ ವರ್ಷದ ಸಂಭ್ರಮದ ಉತ್ಸವದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಸುಮಾರು ರಾತ್ರಿ 10 ಗಂಟೆಗೆ ಇಲ್ಲಿಗೆ ಬಂದ ಬಂದೂಕುಧಾರಿ ದಾಳಿ ನಡೆಸಿ ಹತ್ತು ಜನರ ಪ್ರಾಣ ತೆಗೆದುಕೊಂಡಿದ್ದಾನೆ.
ಸ್ಥಳದ ಸುತ್ತಮುತ್ತ ಖಾಕಿ ಕಾವಲು
ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಘಟನೆಯ ವಿಡಿಯೋ ಹರಿದಾಡುತ್ತಿದ್ದು,  ರಕ್ಷಣಾ ಸಿಬ್ಬಂದಿ ಗಾಯಾಳುಗಳನ್ನು ಸ್ಟ್ರೆಚರ್‌ಗಳಲ್ಲಿ ಆಂಬ್ಯುಲೆನ್ಸ್‌ಗಳಿಗೆ ಸಾಗಿಸುತ್ತಿರುವುದನ್ನು ಅದರಲ್ಲಿ ನೋಡಬಹುದಾಗಿದೆ. ಸ್ಥಳದ ಸುತ್ತಮುತ್ತ ಪೊಲೀಸರು ಸುತ್ತುವರಿದಿದ್ದು ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.


ದಕ್ಷಿಣ ಕ್ಯಾಲಿಫೋರ್ನಿಯಾದ ಅತಿದೊಡ್ಡ ಕಾರ್ಯಕ್ರಮ
ದಕ್ಷಿಣ ಕ್ಯಾಲಿಫೋರ್ನಿಯಾದ ಅತಿದೊಡ್ಡ ಕಾರ್ಯಕ್ರಮಗಳಲ್ಲಿ ಒಂದಾದ ಎರಡು ದಿನಗಳ ಚಂದ್ರನ ಹೊಸ ವರ್ಷದ ಈವೆಂಟ್‌ಗಾಗಿ ಸಾವಿರಾರು ಜನ ಇಲ್ಲಿ ಜಮಾಯಿಸಿದ್ದರು. ಮಾನೆಟರಿ ಪಾರ್ಕ್, ಲಾಸ್ ಏಂಜಲಿಸ್ ಕೌಂಟಿಯಲ್ಲಿನ ಒಂದು ನಗರವಾಗಿದ್ದು, ಲಾಸ್ ಏಂಜಲಿಸ್ ಪಟ್ಟಣದಿಂದ ಸುಮಾರು 11 ಕಿಮೀ ದೂರದಲ್ಲಿದೆ. ಗುಂಡಿನ ದಾಳಿ ನಡೆದ ಗಾರ್ವಿ ಅವೆನ್ಯೂದಲ್ಲಿನ ಬೀದಿಯಲ್ಲಿ ಸೀಫುಡ್ ಬಾರ್ಬೆಕ್ಯೂ ರೆಸ್ಟೋರೆಂಟ್ ನಡೆಸುತ್ತಿರುವ ಸಿಯಂಗ್ ವೊನ್ ಚೋಯಿ, ತನ್ನ ರೆಸ್ಟೋರೆಂಟ್‌ಗೆ ಓಡಿ ಬಂದ ಮೂವರು, ಬಾಗಿಲು ಹಾಕುವಂತೆ ಸೂಚನೆ ನೀಡಿದ್ದರು ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ಜೋಶಿಮಠದ ದುರಂತ ಪತ್ತೆ ಹಚ್ಚಲು ಸ್ಯಾಟಲೈಟ್ ತಂತ್ರಜ್ಞಾನ ಹೇಗೆ ಸಹಾಯಕ? ಮುಂದಿನ ಅನಾಹುತ ತಪ್ಪುತ್ತಾ ಟೆಕ್ನಾಲಜಿ?


ಯುಎಸ್‌ನಲ್ಲಿ ʼಗನ್ʼ ಗುಂಡಾಗಿರಿ
ಯುನೈಟೆಡ್ ಸ್ಟೇಟ್ಸ್‌ನಲ್ಲಿ ಗನ್ ಹಿಂಸಾಚಾರವು ಒಂದು ದೊಡ್ಡ ಸಮಸ್ಯೆಯಾಗಿದ್ದು, ಇಂತಹ ಘಟನೆಗಳಿಗೆ ಯಾವಾಗಲೂ ಸಾಕ್ಷಿ ಆಗುತ್ತಲೇ ಇರುತ್ತದೆ. ಗನ್ ವಯಲೆನ್ಸ್ ಆರ್ಕೈವ್ ಪ್ರಕಾರ, 2020 ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ 43,000 ಕ್ಕೂ ಹೆಚ್ಚು ಗನ್ ಹಿಂಸಾಚಾರಗಳು ಸಂಭವಿಸಿವೆ, ಇದರ ಪರಿಣಾಮವಾಗಿ 110,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.

Published by:Sandhya M
First published: