• Home
  • »
  • News
  • »
  • national-international
  • »
  • Baby Elephant Viral Video: ಪಾಪ, ಈ ಪುಟ್ಟ ಆನೆಮರಿಯ ಸೊಂಡಿಲೇ ತುಂಡಾಗಿದೆ! ವಿಡಿಯೋ ವೈರಲ್

Baby Elephant Viral Video: ಪಾಪ, ಈ ಪುಟ್ಟ ಆನೆಮರಿಯ ಸೊಂಡಿಲೇ ತುಂಡಾಗಿದೆ! ವಿಡಿಯೋ ವೈರಲ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Viral Video: ಸದ್ಯ ವಿಡಿಯೋದಲ್ಲಿ ಕಾಣುವಂತೆ ಸೊಂಡಿಲು ತುಂಡಾದ ಆನೆ ಮರಿ ಆರೋಗ್ಯವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಈ ಆನೆಮರಿ ಆಹಾರ ಸೇವಿಸುವಾಗ ಸಮಸ್ಯೆ ಅನುಭವಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿವೆ.

  • Share this:

ತ್ರಿಶೂರ್: ಸೊಂಡಿಲು ತುಂಡಾಗಿರುವ ಪುಟ್ಟ ಆನೆಮರಿಯೊಂದರ ವಿಡಿಯೋ ಇದೀಗ ಭಾರೀ ವೈರಲ್ (Baby Elephant Without Trunk Viral Video) ಆಗ್ತಿದೆ. ಐದು ಆನೆಗಳ ಗುಂಪಿನಲ್ಲಿ ಇರುವ ಈ ಪುಟ್ಟ ಮರಿಯಾನೆಯ ಸೊಂಡಿಲು ತುಂಡಾಗಿದೆ. ಈ ವಿಡಿಯೋವನ್ನು ಕೇರಳದ (Kerala) ತ್ರಿಶೂರ್ ಬಳಿಯ ಅತಿರಪಿಲ್ಲಿ ಪ್ಲಾಂಟೇಶನ್‌ನ ತಾಳೆ ತೋಟದಲ್ಲಿ ಸೆರೆಹಿಡಿಯಲಾಗಿದೆ. ಆ  ತ್ರಿಶೂರ್ ಪಟ್ಟಣದಿಂದ 53 ಕಿಲೋಮೀಟರ್ ದೂರದಲ್ಲಿ ಕಣ್ಣನ್ನು ಒದ್ದೆ ಮಾಡಬಲ್ಲ ಸೊಂಡಿಲು ತುಂಡಾದ ಈ ಪುಟ್ಟ ಆನೆ ಮರಿ (Baby Elephant) ಕಾಣಿಸಿಕೊಂಡಿದೆ. 


ಮಂಗಳವಾರ ಕಂಡುಬಂದ  ಆನೆಗಳ ಹಿಂಡಿನಲ್ಲಿ ಸೊಂಡಿಲಿಲ್ಲದ ಮರಿ ತನ್ನ ತಾಯಿಯೊಂದಿಗೆ ಕಾಣಿಸಿಕೊಂಡಿದೆ. ಆದರೆ ಆನೆಮರಿಯ ಸೊಂಡಿಲು ತುಂಡಾಗಲು ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪ್ರಾಣಿಗಳ ದಾಳಿ ಅಥವಾ ಅಪಘಾತದಲ್ಲಿ ಆನೆಮರಿಯ ಸೊಂಡಿಲು ತುಂಡಾಗಿರಬಹುದು ಎಂದು ಅಂದಾಜಿಸಲಾಗಿದೆ.






ಇದನ್ನೂ ಓದಿ: Baby Elephant In Hassan: ಗ್ರಾಮಸ್ಥರೇ ತೋಡಿದ ಖೆಡ್ಡಾಕ್ಕೆ ಬಿದ್ದ ಮುದ್ದಿನ ಮರಿ ಕಾಡಾನೆ!


ಸ್ಥಳೀಯರಿಂದ ಅರಣ್ಯ ಇಲಾಖೆಗೆ ಮಾಹಿತಿ
ಸ್ಥಳೀಯರಾದ ಸಜಿಲ್ ಎಂಬುವವರು ಆನೆ ಮರಿಯನ್ನು ನೋಡಿದ್ದಾರೆ. ತಕ್ಷಣ ಸ್ಥಳೀಯರ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಜಿಲ್ಲಾ ಪೊಲೀಸ್ ವಿಶೇಷ ಶಾಖೆಯ ಅಧಿಕಾರಿ ಜಿಲೇಶ್ ಚಂದ್ರನ್ ಅವರು ಸ್ಥಳಕ್ಕೆ ಆಗಮಿಸಿ ಸೊಂಡಿಲು ತುಂಡಾದ ಆನೆಮರಿಯ ಫೋಟೋ, ವಿಡಿಯೋಗಳನ್ನು ತೆಗೆದಿದ್ದಾರೆ.


ಇದನ್ನೂ ಓದಿ: Hassan Baby Elephant: ಅಮ್ಮನ ಮಡಿಲು ಸೇರಿದ ಪುಟ್ಟ ಕಾಡಾನೆ ಮರಿ, ಖೆಡ್ಡಾದಲ್ಲೊಂದು ದಿನ ಹೀಗಿತ್ತು ನೋಡಿ


ಆನೆ ಮರಿ ಆರೋಗ್ಯ ಹೇಗಿದೆ?
ಸದ್ಯ ವಿಡಿಯೋದಲ್ಲಿ ಕಾಣುವಂತೆ ಸೊಂಡಿಲು ತುಂಡಾದ ಆನೆ ಮರಿ ಆರೋಗ್ಯವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಈ ಆನೆಮರಿ ಆಹಾರ ಸೇವಿಸುವಾಗ ಸಮಸ್ಯೆ ಅನುಭವಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿವೆ.


ಆದರೆ ಈ ಆನೆ ಮರಿ ಮುಂದಿನ ದಿನಗಳಲ್ಲಿ ಏನಾಗಬಹುದು? ಹೇಗೆ ಆಹಾರ ಸೇವಿಸಬಹುದು? ಎಂಬತಹ ಹಲವು ಪ್ರಶ್ನೆಗಳು ವೀಕ್ಷಕರಲ್ಲಿ ಮೂಡಿವೆ.


Hassan: ಮರಿಯನ್ನೇ ಮರೆತ ಕಾಡಾನೆ! ಅರಣ್ಯ ಇಲಾಖೆ ಕಾರ್ಯಕ್ಕೆ ಮೆಚ್ಚುಗೆ


ಎರಡು, ಮೂರು ದಿನಗಳ ಹಿಂದಷ್ಟೇ ಕಣ್ಬಿಟ್ಟ ಪುಟ್ಟ ಮರಿಯಾನೆ. ಆಕಡೆ ಹೋಗ್ಬೇಕೋ ಈಕಡೆ ಹೋಗ್ಬೇಕು ತಿಳಿಯದೇ ಕಂಗಾಲಾಗಿರೋ ಕಾಡಾನೆ ಮರಿ. ಅರಣ್ಯ ಇಲಾಖೆ ಸಿಬ್ಬಂದಿಯಿಂದ ಮತ್ತೆ ತಾಯಿ ಮಡಿಲು (Mother-Children) ಸೇರಿತು ನೋಡಿ ಈ ಪುಟ್ಟ ಮರಿ. ಹಾಸನ ಜಿಲ್ಲೆಯ (Hassan News) ಸಕಲೇಶಪುರ ತಾಲ್ಲೂಕಿನ ಬೈಕೆರೆ ಗ್ರಾಮದಲ್ಲಿ ಘಟನೆ (Baby Elephant Viral Video) ಇಂಥದ್ದೊಂದು ಅಪರೂಪದ ವಿದ್ಯಮಾನ (Rare Incident) ನಡೆದಿದೆ.


ತಾಯಾನೆಯಿಂದ ದೂರ ಉಳಿದಿದ್ದ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಒಂದುಗೂಡಿಸಿ ಮಾನವೀಯತೆ ಮೆರೆದಿದ್ದಾರೆ.


ಒಂಟಿಯಾಗಿ ಉಳಿದಿದ್ದ ಮರಿಯಾನೆ
ಕಾಡಾನೆಗಳ ಹಿಂಡು ವೇಗವಾಗಿ ಸಾಗುವಾಗ ಜೊತೆಯಲ್ಲಿ ವೇಗವಾಗಿ ಹೋಗಲಾಗದೆ ಮರಿಯಾನೆ ಒಂಟಿಯಾಗಿ ಉಳಿದಿತ್ತು. ಇದನ್ನ ಕಂಡ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದ ಅನತಿ ದೂರಕ್ಕೆ ಮರಿಯನ್ನು ಕರೆದೊಯ್ದಿದ್ದಾರೆ. ತನ್ನ ಮರಿಯನ್ನ ಕಂಡ ತಾಯಿ ಆನೆ ಕೂಡಲೇ ಮರಿಯನ್ನ ಕರೆದೊಯ್ದಿದೆ.


ವೈರಲ್ ಆಗ್ತಿದೆ ಈ ವಿಡಿಯೋ
ಕಾಡಾನೆ ತನ್ನ ಪುಟ್ಟ ಮರಿಯನ್ನು ಬಿಟ್ಟು ಹೋಗುವ ಹಾಗೂ ಮತ್ತೆ ಕರೆದೊಯ್ಯುವ ವಿಡಿಯೋ ವೈರಲ್ ಆಗ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿಯ ಮಾನವೀಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

Published by:ಗುರುಗಣೇಶ ಡಬ್ಗುಳಿ
First published: