ನಂದಿಗ್ರಾಮ ಚುನಾವಣೆ ಸೋಲು: ಮಮತಾ ಅರ್ಜಿಯನ್ನು ನವೆಂಬರ್‌ಗೆ ಮುಂದೂಡಿದ ಕಲ್ಕತ್ತಾ ಹೈಕೋರ್ಟ್

ಮಮತಾ ತನ್ನ ನಂದಿಗ್ರಾಮದ ಸೋಲನ್ನು ಪ್ರಶ್ನಿಸಿ ಜೂನ್ ನಲ್ಲಿ ಕಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಮುಂದೆ ತನ್ನ ಚುನಾವಣಾ ಅರ್ಜಿಯಲ್ಲಿ, ಮಮತಾ ಅವರು ಅಧಿಕಾರಿಯು "ಲಂಚ, ಅನಗತ್ಯ ಪ್ರಭಾವ, ದ್ವೇಷವನ್ನು ಹರಡುವುದು" ಮತ್ತು "ಧರ್ಮದ ಆಧಾರದ ಮೇಲೆ ಮತ ಕೇಳುವುದು" ಎಂಬ ಆರೋಪಗಳನ್ನು ಮಾಡಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

 • Share this:
  ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲ್ಲಿಸಿರುವ ಚುನಾವಣಾ ಅರ್ಜಿಯ ಕುರಿತಾದ ಪ್ರಕರಣದ ವಿಚಾರಣೆಯನ್ನು ಪಶ್ಚಿಮ ಬಂಗಾಳದಿಂದ ಹೊರಗೆ ವರ್ಗಾಯಿಸುವಂತೆ ಕೋರಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವ ಹಿನ್ನೆಲೆಯಲ್ಲಿ ಮಮತಾ ಅವರು ಸಲ್ಲಿಸಿದ್ದ ಚುನಾವಣಾ ಅರ್ಜಿಯ ವಿಚಾರಣೆಯನ್ನು ಕಲ್ಕತ್ತಾ ಹೈಕೋರ್ಟ್‌ ನವೆಂಬರ್‌ಗೆ ಮುಂದೂಡಿದೆ.
  ಸುವೇಂದು ಪರ ಹಾಜರಾದ ವಕೀಲ ಜಯದೀಪ್ ಕರ್ ಅವರು ಬ್ಯಾನರ್ಜಿಯವರ ಚುನಾವಣಾ ಅರ್ಜಿಯನ್ನು ಪಶ್ಚಿಮ ಬಂಗಾಳದಿಂದ ವರ್ಗಾಯಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು. ಆದ್ದರಿಂದ, ವರ್ಗಾವಣೆ ಅರ್ಜಿಯನ್ನು ನಿರ್ಣಯಿಸುವವರೆಗೆ ಚುನಾವಣಾ ಅರ್ಜಿಯನ್ನು ಮುಂದೂಡಬೇಕೆಂದು ಪ್ರಾರ್ಥಿಸಿದರು. ಈ ವಾದ ಮನ್ನಿಸಿದ ಶಂಪಾ ಸರ್ಕಾರ್‌ ಅವರಿದ್ದ ಏಕಸದಸ್ಯ ಪೀಠ ವಿಚಾರಣೆಯನ್ನು ನವೆಂಬರ್ 15ಕ್ಕೆ ಮುಂದೂಡಿತು.

  ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಿಂದ ಸುವೇಂದು ಅವರ ಗೆಲುವನ್ನು ಪ್ರಶ್ನಿಸಿ ಮಮತಾ ಅವರು ಚುನಾವಣಾ ಅರ್ಜಿಯನ್ನು ಸಲ್ಲಿಸಿದ್ದರು. 2020ರಲ್ಲಿ ಬಿಜೆಪಿ ಸೇರುವ ಮುನ್ನ ಬ್ಯಾನರ್ಜಿಯ ಆಪ್ತರಾಗಿದ್ದ ಸುವೇಂದು 2021ರ ಚುನಾವಣೆಯಲ್ಲಿ ಮಮತಾ ಅವರನ್ನು ತೀರಾ ಕಡಿಮೆ ಅಂತರದಲ್ಲಿ ಅಂದರೆ 1,956 ಮತಗಳ ಅಂತರದಿಂದ ಸೋಲಿಸಿದ್ದರು. ಫಲಿತಾಂಶ ಪ್ರಶ್ನಿಸಿ ಮಮತಾ ಅವರು ಪ್ರಸ್ತುತ ಅರ್ಜಿ ಸಲ್ಲಿಸಿದ್ದರು.
  ನ್ಯಾಯಮೂರ್ತಿ ಕೌಶಿಕ್‌ ಚಂದಾ ಅವರ ಪೀಠದೆದುರು ಪ್ರಕರಣವನ್ನು ಮೊದಲು ಪಟ್ಟಿ ಮಾಡಲಾಗಿತ್ತು. ಆದರೆ ಈ ಹಿಂದೆ ನ್ಯಾಯಮೂರ್ತಿಗಳು ಬಿಜೆಪಿಯ ಸಕ್ರಿಯ ಸದಸ್ಯರಾಗಿದ್ದನ್ನು ಪ್ರಸ್ತಾಪಿಸಿ ಅವರು ವಿಚಾರಣೆ ನಡೆಸಬಾರದೆಂದು ಮಮತಾ ಕೋರಿದ್ದರು. ಅಂತಿಮವಾಗಿ ನ್ಯಾಯಮೂರ್ತಿಗಳು ಪ್ರಕರಣದಿಂದ ಹಿಂದೆ ಸರಿದಿದ್ದರು. ನಂತರ ಪ್ರಕರಣವನ್ನು ನ್ಯಾ. ಶಂಪಾ ಸರ್ಕಾರ್‌ ಕೈಗೆತ್ತಿಕೊಂಡಿದ್ದರು.

  ಬಿಜೆಪಿ ತನ್ನ ಪರ ಸ್ಕೋರ್​ ಗಳಿಸಲು  ಪ್ರಯತ್ನಿಸುತ್ತಿದೆಯೇ?

  ಕಾನೂನಿನ ಅಡ್ಡಪರಿಣಾಮಗಳನ್ನು ಬದಿಗಿಟ್ಟು, ಈ ಹೆಜ್ಜೆಯು ಬಿಜೆಪಿ ಮತ್ತು ಸುವೇಂದು ಅಧಿಕಾರಿಗೆ ಪ್ರಮುಖ ರಾಜಕೀಯ ಹೆಜ್ಜೆಯನ್ನು ಮೂಡಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ, ಒಂದು ಕಾಲದಲ್ಲಿ ಬ್ಯಾನರ್ಜಿಯ ವಿಶ್ವಾಸಾರ್ಹ ಲೆಫ್ಟಿನೆಂಟ್ ಆಗಿದ್ದ ಇವರು, ಈಗ ದೀದಿಯ ಸಾಂಪ್ರದಾಯಿಕ ರಾಜಕೀಯ ಪ್ರತಿಸ್ಪರ್ಧಿಯಾಗಿ ಬದಲಾಗಿದ್ದಾರೆ.

  ಅಧಿಕಾರಿಯ ಜೇಬಿನಲ್ಲಿ 75 ಶಾಸಕರು ಇದ್ದಾರೆ, ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನು ತೃಣಮೂಲ ಕಾಂಗ್ರೆಸ್ ಉಸ್ತುವಾರಿಗಳಿಗೆ ಸಾಧ್ಯವಾದಷ್ಟು ಕಷ್ಟಕೊಡುತ್ತಾರೆ ಎಂಬುದು ಸ್ಪಷ್ಟವಾಗಿದೆ. ಚೆಂಡು ಈಗ ನ್ಯಾಯಯುತವಾಗಿ ನೋಡಿದರೆ ಮಮತಾ ಬ್ಯಾನರ್ಜಿಯ ಅಂಗಳದಲ್ಲಿ  ನಿಂತಿದೆ, ಆಕೆಯ ಮುಂದಿನ ನಡೆಗಾಗಿ ಕಾದು ನೋಡಲಾಗುತ್ತಿದೆ.

  ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಅಟ್ಟಹಾಸ: ಸ್ವದೇಶಕ್ಕೆ ಹೋಗಲು ಕಾತುರದಿಂದ ಕಾಯುತ್ತಿರುವ ಭಾರತದಲ್ಲಿರುವ ನಿರಾಶ್ರಿತರು

  ಮಮತಾ ತನ್ನ ನಂದಿಗ್ರಾಮದ ಸೋಲನ್ನು ಪ್ರಶ್ನಿಸಿ ಜೂನ್ ನಲ್ಲಿ ಕಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಮುಂದೆ ತನ್ನ ಚುನಾವಣಾ ಅರ್ಜಿಯಲ್ಲಿ, ಮಮತಾ ಅವರು ಅಧಿಕಾರಿಯು "ಲಂಚ, ಅನಗತ್ಯ ಪ್ರಭಾವ, ದ್ವೇಷವನ್ನು ಹರಡುವುದು" ಮತ್ತು "ಧರ್ಮದ ಆಧಾರದ ಮೇಲೆ ಮತ ಕೇಳುವುದು" ಎಂಬ ಆರೋಪಗಳನ್ನು ಮಾಡಿದ್ದಾರೆ.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.  Published by:HR Ramesh
  First published: