Stolen Pig: ಕೊಲ್ಕತ್ತಾ ಪೊಲೀಸರಿಗೆ ಹಂದಿ ಹುಡುಕೋ ಕೆಲಸ ಕೊಟ್ಟ ಹೈಕೋರ್ಟ್!

ಘಾನಾ ಜಿಲ್ಲಾ ನ್ಯಾಯಾಲಯದ ಪ್ರದೇಶದಿಂದ ಕದ್ದ ಹಂದಿಯನ್ನು ಪತ್ತೆಹಚ್ಚಲು ಕೊಲ್ಕತ್ತಾ ಹೈಕೋರ್ಟ್ ಪೊಲೀಸರಿಗೆ ನಿರ್ದೇಶಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಲ್ಕತ್ತಾ(ಜು.17): ಕೆಲವೊಮ್ಮೆ ನ್ಯಾಯಾಲಯದ (Court) ತೀರ್ಪು ಆದೇಶಗಳು ವಿಚಿತ್ರ ಎನಿಸುವಂತಹ ಘಟನೆಗಳು ನಡೆಯುತ್ತವೆ. ಇತ್ತೀಚೆಗೆ ತಮಿಳುನಾಡಿನಲ್ಲಿ  (Tamil Nadu)ಗಂಡ ಬದುಕಿದ್ದಾಗ ಹೆಂಡತಿ ತಾಳಿ ತೆಗೆಯುವುದು ಆತನ ವಿರುದ್ಧ ಮಾನಸಿಕ ಕ್ರೌರ್ಯ ಎಂದಿತ್ತು. ಹೀಗೆ ಹೊಸ ಹೊಸ ಪ್ರಕರಣಗಳು ಬಂದಾಗ ಕೋರ್ಟ್​ ನೀಡುವ ಸೂಚನೆ, ಆದೇಶಗಳು ಭಿನ್ನವಾಗಿರುತ್ತದೆ. ಈಗ ಕೊಲ್ಕತ್ತಾದ  (Kolkata) ಹೈಕೋರ್ಟ್ (High Court) ಸುದ್ದಿಯಾಗಿದೆ. ಕೋರ್ಟ್ ಕೊಟ್ಟಿರುವ ಆದೇಶವೊಂದು ಎಲ್ಲೆಡೆ ವೈರಲ್ ಆಗಿದೆ. ಘಾನಾ ಜಿಲ್ಲಾ ನ್ಯಾಯಾಲಯದ ಪ್ರದೇಶದಿಂದ ಕದ್ದ ಹಂದಿಯನ್ನು (Pig) ಪತ್ತೆಹಚ್ಚಲು ಕೊಲ್ಕತ್ತಾ ಹೈಕೋರ್ಟ್ ಪೊಲೀಸರಿಗೆ (Police) ನಿರ್ದೇಶಿಸಿದೆ.

ಮಾರ್ಚ್ 25 ರಂದು ಹಂದಿ ಕಳ್ಳತನಕ್ಕೆ ಸಂಬಂಧಿಸಿದಂತೆ ಕಲ್ಯಾಣಿ ನ್ಯಾಯಾಲಯದಿಂದ ಕೆಲವು ವಕೀಲರು ಸಲ್ಲಿಸಿದ ದೂರಿನ ಮೇರೆಗೆ ಕ್ರಮ ಕೈಗೊಳ್ಳುವಂತೆ ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ನಾಡಿಯಾ ಜಿಲ್ಲಾ ಪೊಲೀಸರಿಗೆ ಆದೇಶಿಸಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

ನಾಲ್ವರು ಸೇರಿ ಕದ್ದರಾ?

ಕಲ್ಯಾಣಿ ನ್ಯಾಯಾಲಯದ ವಕೀಲರು ಮತ್ತು ಉದ್ಯೋಗಿಗಳಿಂದ ಪ್ರೀತಿಯಿಂದ ‘ಘಾನಾ’ ಎಂದು ಹೆಸರಿಸಲ್ಪಟ್ಟ ಈ ಬೀದಿ ಹಂದಿಯು ನ್ಯಾಯಾಲಯದ ಕಟ್ಟಡದ ಅಂಗಳದಲ್ಲಿ ವಾಸಿಸುತ್ತಿತ್ತು. ಮಾರ್ಚ್ 25 ರಂದು ಬೆಳಿಗ್ಗೆ 5:40 ರ ಸುಮಾರಿಗೆ ನಾಲ್ವರು ಅವನನ್ನು ಕದ್ದಿದ್ದಾರೆ ಎಂದು ಅರ್ಜಿದಾರರಲ್ಲಿ ಒಬ್ಬರಾದ ವಕೀಲ ಶಿಬಾಜಿ ದಾಸ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಕಾರಿನಲ್ಲಿ ಬಂದು ಹಂದಿ ಕದ್ದೊಯ್ದ ಖದೀಮರು

“ನಾವೆಲ್ಲರೂ ಘಾನಾವನ್ನು ಇಷ್ಟಪಡುತ್ತಿದ್ದೆವು. ನಾವು ಅವನಿಗೆ ತಿನ್ನಿಸಿ ಆರೈಕೆ ಮಾಡುತ್ತಿದ್ದೆವು. ಅದು ನ್ಯಾಯಾಲಯದ ಆವರಣದಿಂದ ಹೊರಬರಲೇ ಇಲ್ಲ. ಅವನನ್ನು ಕದ್ದವರು ಬಿಳಿ ಸೆಡಾನ್‌ನಲ್ಲಿ ಬಂದರು. ಈ ಘಟನೆಯನ್ನು ಕಸಗುಡಿಸುವವರೊಬ್ಬರು ನೋಡಿ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

ವಿಡಿಯೋದಲ್ಲಿ ನಂಬರ್ ಪ್ಲೇಟ್ ಸೆರೆ

ಕಾರಿನ ನಂಬರ್ ಪ್ಲೇಟ್ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಕಳ್ಳರು ಪ್ರಾಣಿಗಳನ್ನು ನಿರ್ವಹಿಸುವಲ್ಲಿ ಪರಿಣತರು ಎಂದು ತೋರುತ್ತಿದೆ ಎಂದು ನ್ಯಾಯಮೂರ್ತಿ ಶಂಪಾ ಸರ್ಕಾರ್ ಅವರ ಹೈಕೋರ್ಟ್ ಏಕ ಪೀಠವು ಶುಕ್ರವಾರ ಆದೇಶ ನೀಡಿದ ನಂತರ ದಾಸ್ ಹೇಳಿದರು.

ಹಂದಿ ಕಳ್ಳತನದ ಕೇಸ್ ದಾಖಲು

ಕಲ್ಯಾಣಿ ಪೊಲೀಸ್ ಠಾಣೆಯಲ್ಲಿ ಔಪಚಾರಿಕವಾಗಿ ದೂರು ದಾಖಲಿಸಿದ್ದೇವೆ. ಪೊಲೀಸರು ಕಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದರೂ ನಂತರ ಏನೂ ಮಾಡಿಲ್ಲ. ಅಲ್ಲದೆ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಯಾವುದೇ ವಿಭಾಗವನ್ನು ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಸೇರಿಸಲಾಗಿಲ್ಲ. ಆದ್ದರಿಂದ, ನಾವು ಕೊಲ್ಕತ್ತಾ ಹೈಕೋರ್ಟ್‌ಗೆ ಮನವಿ ಮಾಡಬೇಕಾಯಿತು ಎಂದು ದಾಸ್ ಹೇಳಿದ್ದಾರೆ.

ಇದನ್ನೂ ಓದಿ: Minor Raped: ಅಪ್ರಾಪ್ತೆಯನ್ನು ರೇಪ್ ಮಾಡಿದ ವ್ಯಕ್ತಿ, ಆತನ ಪತ್ನಿಯಿಂದಲೇ ವಿಡಿಯೋ ಶೂಟ್

ಅರ್ಜಿದಾರರನ್ನು ಆಲಿಸಿದ ನ್ಯಾಯಮೂರ್ತಿ ಸರ್ಕಾರ್, ಕಲ್ಯಾಣಿ ವ್ಯಾಪ್ತಿಯಲ್ಲಿರುವ ರಾಣಾಘಾಟ್ ಪೊಲೀಸ್ ವರಿಷ್ಠಾಧಿಕಾರಿ ತನಿಖೆಯ ಮೇಲ್ವಿಚಾರಣೆ ನಡೆಸಬೇಕು ಎಂದು ಆದೇಶಿಸಿದರು. ಈ ಕಾಯ್ದೆಯ ಅಡಿಯಲ್ಲಿರುವ ಸೆಕ್ಷನ್‌ಗಳನ್ನು ಏಕೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಕೇಳಿದೆ.

"ನ್ಯಾಯಾಲಯದ ಆದೇಶದ ಪ್ರತಿಯನ್ನು ನೋಡುವ ಮೊದಲು ನಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ" ಎಂದು ಕಲ್ಯಾಣಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದರು.

ಆಹಾರವಾಗಿ ಹಂದಿ ಮಾಂಸ

ಹಂದಿಗಳು ಪ್ರಪಂಚದಲ್ಲಿ ಅತ್ಯಂತ ವ್ಯಾಪಕವಾಗಿ ತಿನ್ನುವ ಪ್ರಾಣಿಯಾಗಿದ್ದು, ಪ್ರಪಂಚದಾದ್ಯಂತ ಮಾಂಸ ಉತ್ಪಾದನೆಯಲ್ಲಿ ಸುಮಾರು 36% ನಷ್ಟಿದೆ. ಪರಿಣಾಮವಾಗಿ, ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ಹಂದಿಮಾಂಸ ಪಾಕವಿಧಾನಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಇದನ್ನೂ ಓದಿ: Panchayat Election: ಪಂಚಾಯತ್ ಎಲೆಕ್ಷನ್​ನಲ್ಲಿ ಕೇಂದ್ರ ಸಚಿವರ ಸಹೋದರಿಯನ್ನೇ ಸೋಲಿಸಿದ 23ರ ಯುವತಿ

ಜಾಮೊನ್, ಹಂದಿಯ ಹಿಂಗಾಲುಗಳಿಂದ ತಯಾರಿಸಲ್ಪಟ್ಟಿದೆ. ಇದು ಅತ್ಯಂತ ಪ್ರಸಿದ್ಧ ಸ್ಪ್ಯಾನಿಷ್ ಡ್ರೈ-ಕ್ಯೂರ್ಡ್ ಹ್ಯಾಮ್ ಆಗಿದೆ. ಫೀಜೋಡಾ, ಬ್ರೆಜಿಲ್‌ನ ರಾಷ್ಟ್ರೀಯ ಖಾದ್ಯ (ಪೋರ್ಚುಗಲ್‌ನಲ್ಲಿ ಫೇಮಸ್), ಸಾಂಪ್ರದಾಯಿಕವಾಗಿ ಹಂದಿಮಾಂಸದ ಟ್ರಿಮ್ಮಿಂಗ್‌ಗಳೊಂದಿಗೆ ತಯಾರಿಸಲಾಗುತ್ತದೆ.
Published by:Divya D
First published: