• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಕಾನೂನು ಉಲ್ಲಂಘಿಸಿ ಸಣ್ಣ ವರ್ತಕರಿಗೆ ಹಾನಿ ಮಾಡಿದ ಅಮೇಜಾನ್​ಗೆ 1.44 ಲಕ್ಷ ಕೋಟಿ ದಂಡ ವಿಧಿಸಿ: ಸಿಎಐಟಿ ಆಗ್ರಹ

ಕಾನೂನು ಉಲ್ಲಂಘಿಸಿ ಸಣ್ಣ ವರ್ತಕರಿಗೆ ಹಾನಿ ಮಾಡಿದ ಅಮೇಜಾನ್​ಗೆ 1.44 ಲಕ್ಷ ಕೋಟಿ ದಂಡ ವಿಧಿಸಿ: ಸಿಎಐಟಿ ಆಗ್ರಹ

ಅಮೆಜಾನ್

ಅಮೆಜಾನ್

ಅಮೇಜಾನ್ ಸಂಸ್ಥೆ ಭಾರತದ ಎಫ್​ಡಿಐ ನೀತಿ, ಫೆಮಾ ಕಾಯ್ದೆ ಮೊದಲಾದ ಕಾನೂನಗಳ ಉಲ್ಲಂಘನೆಗಳನ್ನ ಮಾಡಿದ್ದು ನಿಯಮ ಮೀರಿ ಕಡಿಮೆ ಬೆಲೆಗಳಿಗೆ ಸರಕುಗಳ ಮಾರಾಟ ಮಾಡಿ ಕೋಟ್ಯಂತರ ಸಣ್ಣ ವರ್ತಕರ ವ್ಯಾಪಾರಕ್ಕೆ ಸಂಚಕಾರ ತಂದಿದೆ ಎಂದು ಸಿಎಐಟಿ ಆರೋಪಿಸಿದೆ.

  • Share this:

ನವದೆಹಲಿ(ಡಿ. 07): ಆನ್​ಲೈನ್ ಮಾರಾಟ ಸಂಸ್ಥೆ ಅಮೇಜಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತದ ವ್ಯಾಪಾರಸ್ಥರ ಒಕ್ಕೂಟ ಸಿಎಐಟಿ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದು ಮನವಿ ಮಾಡಿದೆ. ಅಮೇಜಾನ್ ಸಂಸ್ಥೆ ಕಡಿಮೆ ಬೆಲೆಗಳಿಗೆ ಮಾರಾಟ ಮಾಡಿ ಸಣ್ಣ ವರ್ತಕರ ವ್ಯವಹಾರಕ್ಕೆ ಸಂಚಕಾರ ತಂದಿದೆ ಎಂದು ವರ್ತಕರ ಒಕ್ಕೂಟ ಆರೋಪಿಸಿದೆ. 2012ರಲ್ಲಿ ಭಾರತದಲ್ಲಿ ಅಮೇಜಾನ್ ಕಾಲಿಟ್ಟಾಗಿನಿಂದಲೂ ದೇಶದ ಕಾನೂನಿ, ನಿಯಮ ನಿಬಂಧನೆಗಳನ್ನ ಘಂಟಾಘೋಷವಾಗಿ ಉಲ್ಲಂಘಿಸುತ್ತಾ ಬಂದಿದೆ. ಕಡಿಮೆ ಬೆಲೆಗಳಿಗೆ ಮಾರಾಟ ಮಾಡುವ ಮೂಲಕ ದೇಶದ ಕೋಟ್ಯಂತರ ಸಣ್ಣ ವರ್ತಕರ ಬಾಳನ್ನು ನರಕ ಮಾಡಿದೆ. ಈ ಬಗ್ಗೆ ಎಲ್ಲಾ ರೀತಿಯ ಮಾಹಿತಿ ಮತ್ತು ದಾಖಲೆಗಳ ಸಮೇತ ತಾನು ಇಡಿ ತನಿಖಾ ಸಂಸ್ಥೆಗೆ ಪತ್ರ ಬರೆದಿರುವುದಾಗಿ ಸಿಎಐಟಿ ತಿಳಿಸಿದೆ.


ಅಮೇಜಾನ್ ಸಂಸ್ಥೆ ಪದೇ ಪದೇ ಕಾನೂನು ಉಲ್ಲಂಘನೆ ಮಾಡಿದರೂ ಅದರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದರಿಂದ ದೇಶದ ಏಳು ಕೋಟಿ ವರ್ತಕರು ಹಾಗು ಅವರೊಂದಿಗಿರುವ ಕಾರ್ಮಿಕರು ಮತ್ತು ಅವರ ವ್ಯವಹಾರಗಳಿಗೆ ಜೋಡಿತವಾಗಿರುವ ಜನರಿಗೆ ನಡುನೀರಲ್ಲಿ ಕೈಬಿಟ್ಟ ಪರಿಸ್ಥಿತಿ ಬಂದಿದೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟ ದೂರಿದೆ.


“ವಿದೇಶೀ ಇ-ಕಾಮರ್ಸ್ ದೈತ್ಯ ಸಂಸ್ಥೆಗಳಿಂದ ಆಗಿರುವ ಹಾನಿಯನ್ನು ಹಾಗೂ ಭಾರತದ ಚಿಲ್ಲರೆ ಮಾರಾಟಗಾರರ ಭಾವನೆಗಳನ್ನು ಗಮನಿಸಿದರೆ ತತ್​ಕ್ಷಣವೇ ಕ್ರಮ ಕೈಗೊಳ್ಳುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಸಹಾಯ ಕೋರಿ ಜಾರಿ ನಿರ್ದೇಶನಾಲಯಕ್ಕೆ ಮನವಿ ಮಾಡಲಾಗಿದೆ” ಎಂದು ಸಿಎಐಟಿ ಹೇಳಿದೆ.


ಇದನ್ನೂ ಓದಿ: Eluru Mystery Disease: ಆಂಧ್ರ ಪ್ರದೇಶದ ಎಲೂರಿನಲ್ಲಿ ನಿಗೂಢ ರೋಗ ಪತ್ತೆ; ಓರ್ವ ಸಾವು, 290 ರೋಗಿಗಳು ಅಸ್ವಸ್ಥ


ಅಮೇಜಾನ್ ಸಂಸ್ಥೆ ಮಾರುಕಟ್ಟೆಸ್ಥಳ ಆಧಾರಿತ ವ್ಯವಸ್ಥೆಯ (Marketplace based Model) ನೆಪದಲ್ಲಿ ಮಲ್ಟಿ ಬ್ರ್ಯಾಂಡ್ ರೀಟೇಲ್ ವ್ಯವಹಾರ ನಡೆಸುತ್ತಿದೆ. ಇದಕ್ಕಾಗಿ ಅಮೇಜಾನ್ ಸೆಲ್ಲರ್ ಸರ್ವಿಸಸ್ ಪ್ರೈ ಲಿ ಹಾಗೂ ತನ್ನ ಇತರ ಉಪಸಂಸ್ಥೆಗಳು ಮತ್ತು ಬೇನಾಮಿ ಸಂಸ್ಥೆಗಳನ್ನ ಅದು ಬಳಸಿಕೊಳ್ಳುತ್ತಿದೆ. ಇದು ಎಫ್​ಡಿಐ ನೀತಿ, ಫೆಮಾ ಕಾಯ್ದೆ, ನೀತಿ ನಿಬಂಧನೆಗಳ ಸಂಪೂರ್ಣ ಉಲ್ಲಂಘನೆ ಆಗಿದೆ. ಹಾಗೆಯೇ, ಮೋರ್ ರೀಟೇಲ್ ಲಿ ಸಂಸ್ಥೆಯಲ್ಲಿ ಅಮೇಜಾನ್ ಹೂಡಿಕೆ ಮಾಡಿರುವುದು ಹಾಗೂ ಬಂಡವಾಳ ಆಕರ್ಷಣೆಗೆಂದು SEBI ಕೊಟ್ಟಿರುವ ಅವಕಾಶವನ್ನ ದುರ್ಬಳಕೆ ಮಾಡಿಕೊಂಡು ಮೋರ್ ರೀಟೇಲ್​ನಂತ ಸಂಸ್ಥೆಗಳನ್ನ ನಿಯಂತ್ರಿಸುತ್ತಿರುವ ವಿಚಾರಗಳೆಲ್ಲವನ್ನೂ ತಾನು ಇಡಿ ಸಂಸ್ಥೆಗೆ ತಿಳಿಸಿರುವುದಾಗಿ ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಾಂಡೆಲ್​ವಲ್ ತಿಳಿಸಿದ್ದಾರೆ.


ಜಾರಿ ನಿರ್ದೇಶನಾಲಯ, ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಮತ್ತು ಡಿಪಿಐಐಟಿ ಸಂಸ್ಥೆಗಳೂ ಕೂಡ ಕೂಡಲೇ ಅಮೇಜಾನ್​ನ ಎಲ್ಲಾ ಒಪ್ಪಂದಗಳು ಹಾಗೂ ದಾಖಲೆಗಳನ್ನ ಪರಿಶೀಲಿಸಬೇಕು. ಕಾನೂನು, ನೀತಿ ನಿಯಮಗಳನ್ನ ಗಾಳಿಗೆ ತೂರಿರುವ ಆ ಸಂಸ್ಥೆಗೆ ದಂಡ ವಿಧಿಸಬೇಕು. ಅದರ ಅಕ್ರಮ ಹೂಡಿಕೆಯ ಮೊತ್ತವಾದ 48,500 ಕೋಟಿಯ ಮೂರು ಪಟ್ಟು ಮೊತ್ತವಾದ 1,44,500 ಕೋಟಿ ರೂ ದಂಡವನ್ನು ವಿಧಿಸಬೇಕು ಎಂದು ಸಿಎಐಟಿ ಆಗ್ರಹಿಸಿದೆ.

First published: