ನವದೆಹಲಿ (ಜನವರಿ 29): ಕಳಂಕಿತ ಇ- ಕಾಮರ್ಸ್ ಕಂಪೆನಿ ಅಮೆಜಾನ್ ಜತೆಗೆ ಕರ್ನಾಟಕ ಸರ್ಕಾರವು ಒಪ್ಪಂದ (MoU) ಮಾಡಿಕೊಳ್ಳುತ್ತಿರುವುದಕ್ಕೆ ಕಾನ್ಪಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ಪ್ರಬಲವಾಗಿ ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರದಿಂದ ಇ- ಕಾಮರ್ಸ್ ರಫ್ತು ನೆರವಿ ಉದ್ದೇಶದಿಂದ ಅಮೆಜಾನ್ನೊಂದಿಗೆ ಒಪ್ಪಂದದ ನಿರ್ಧಾರಕ್ಕೆ ಬರಲಾಗಿದೆ.
"ಅಮೆಜಾನ್ ಜತೆಗೆ ಕರ್ನಾಟಕ ಸರ್ಕಾರವು MoU (ಮ್ಯಾಮೊರೆಂಡಮ್ ಆಫ್ ಅಂಡರ್ಸ್ಟ್ಯಾಂಡ್) ಮಾಡಿಕೊಳ್ಳುತ್ತಿರುವುದನ್ನು ನಾವು ಪ್ರಬಲವಾಗಿ ಆಕ್ಷೇಪಿಸುತ್ತೇವೆ. ಆ ಕಂಪೆನಿಯು ತನಿಖಾ ಸಂಸ್ಥೆಗಳ ವಿಚಾರಣೆ ಎದುರಿಸುತ್ತಿದ್ದು, ಜತೆಗೆ ಕರ್ನಾಟಕ ಹೈಕೋರ್ಟ್ ನಲ್ಲಿ ಕೂಡ ಪ್ರಕರಣ ಇದೆ. ದುಷ್ಕೃತ್ಯಗಳಲ್ಲಿ ತೊಡಗಿರುವ, ಸ್ಪರ್ಧೆ ಇಲ್ಲದಂತೆ ಮಾಡುವ ಹಾಗೂ ದೇಶದ ಸಣ್ಣ ವರ್ತಕರನ್ನು ನಾಶಪಡಿಸುವ ಆರೋಪಗಳು ಅದರ ಮೇಲಿದೆ. ಇ -ಕಾಮರ್ಸ್ ಮಾತ್ರವಲ್ಲದೆ ದೇಶದ ರೀಟೇಲ್ ವ್ಯವಹಾರವನ್ನು ಸಹ ಹತೋಟಿಯಲ್ಲಿ ಇರಿಸಿಕೊಳ್ಳುವ ನೀತಿ ರೂಪಿಸಿಕೊಳ್ಳುತ್ತಿದೆ," ಎಂದು ಸಿಎಐಟಿ ಆರೋಪಿಸಿದೆ.
ಕರ್ನಾಟಕ ಸರ್ಕಾರಕ್ಕೆ ಈ ವಾಸ್ತವ ಗೊತ್ತಿಲ್ಲ ಎಂಬುದನ್ನು ನಂಬುವುದಕ್ಕೆ ಅಸಾಧ್ಯ. ಇದರ ಹೊರತಾಗಿ ಅಮೆಜಾನ್ ಜತೆ ಒಪ್ಪಂದ ಮಾಡಿಕೊಂಡಿದೆ. ಇದು ಕರ್ನಾಟಕದ ವರ್ತಕರ ಪಾಲಿಗೆ ಮಾತ್ರ ಅಲ್ಲ, ಇಡೀ ದೇಶದ ಪಾಲಿಗೆ ಗಂಭೀರ ಸಮಸ್ಯೆ. ಅಮೆಜಾನ್ ವಿರುದ್ಧ ಇರುವ ಆರೋಪ ಪಟ್ಟಿ ಮತ್ತು ತನಿಖೆಗಳನ್ನು ರಾಜ್ಯ ಸರ್ಕಾರ ಮೀರಲು ಹೇಗೆ ಸಾಧ್ಯ? ಎಂದು ಸಿಎಐಟಿ ಪ್ರಶ್ನಿಸಿದೆ.
ಇದನ್ನು ಓದಿ: Jio: ಆ್ಯಪಲ್, ಅಮೆಜಾನ್, ಡಿಸ್ನಿ, ಟೆನ್ಸೆಂಟ್, ಅಲಿಬಾಬಾ, ನೈಕಿ ಹಿಂದಿಕ್ಕಿ ವಿಶ್ವದ 5ನೇ ಪ್ರಬಲ ಬ್ರ್ಯಾಂಡ್ ಎನಿಸಿಕೊಂಡ ಜಿಯೋ!
ಜಾರಿ ನಿರ್ದೇಶನಾಲಯದಿಂದ ತನಿಖೆ ಆರಂಭಿಸಿದ ದಿನಗಳಲ್ಲೇ ಕರ್ನಾಟಕ ಸರ್ಕಾರವು ಅಮೆಜಾನ್ ಜತೆ ಒಪ್ಪಂದಕ್ಕೆ ಬಂದಿರುವುದು ಮುಜುಗರದ ಸಂಗತಿ. ವರ್ತಕರ ರಕ್ತದಲ್ಲಿ ಕೈ ತೋಯ್ದಿರುವ ಅಮೆಜಾನ್ ಬಗ್ಗೆ ವಿಶ್ವದಾದ್ಯಂತ ಕಾನೂನು ಮತ್ತು ನೀತಿಗಳನ್ನು ಮೀರಿದ ಆರೋಪಗಳಿವೆ ಎಂದು ಸಿಎಐಟಿ ರಾಷ್ಟೀಯ ಅಧ್ಯಕ್ಷ ಬಿ.ಸಿ ಭಾರ್ತಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ ವಾಲ್ ಜಂಟಿ ಹೇಳಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ