ನಿಯತ್ತಾಗಿ ಕೆಲಸ ಮಾಡಿದ್ದಕ್ಕೆ ಪೊಲೀಸ್ ಆಫೀಸರ್​ ಟ್ರಾನ್ಸ್​​ಫರ್​​: ಆನ್​ಲೈನ್​ ಡ್ರಗ್​​ ರಾಕೆಟ್​ ಬಯಲಿಗೆಳೆದಿದ್ದ ಅಧಿಕಾರಿ!

Amazon : ಮಧ್ಯಪ್ರದೇಶದ ಭಿಂದ್ ಠಾಣೆಯ ಪೊಲೀಸರು ಭೇದಿಸಿರುವ ರಾಕೆಟ್, ಮತ್ತೊಂದು ದುರದೃಷ್ಟಕರ ತಿರುವು ಪಡೆದುಕೊಂಡಿದೆ. ಈ ಸೂಕ್ಷ್ಮ ಪ್ರಕರಣವನ್ನು ಭೇದಿಸಿದ ಎಸ್‌ಪಿ ಭಿಂದ್ ಶ್ರೀ ಮನೋಜ್ ಕುಮಾರ್ ಸಿಂಗ್(Manoj Kumar Singh) ಅವರನ್ನು ಪಿಎಚ್‌ಕ್ಯುಗೆ ವರ್ಗಾಯಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆನ್​ಲೈನ್​ನಲ್ಲಿ ಡ್ರಗ್ಸ್(Drugs)​, ಗಾಂಜಾ(Ganja) ಮಾರಾಟ ಮಾಡೋದು ಈಗ ಕಾಮನ್ ಆಗೋಗಿದೆ. ಅದನ್ನು ಯಾರು ಪ್ರಶ್ನಿಸುವು ಗೋಜಿಗೂ ಹೋಗುವುದಿಲ್ಲ. ಇತಂಹ ಪ್ರಕರಣವೊಂದನ್ನು ಮಧ್ಯಪ್ರದೇಶ(Madhya Pradesh)ದ ಪೊಲೀಸ್​ ಅಧಿಕಾರಿಯೊಬ್ಬರು ಬೇಧಿಸಿದ್ದರು. ಈ ಆನ್​ಲೈನ್​ ಡ್ರಗ್ಸ್​​ ಮಾರಾಟ(Online drug Sale) ದಂಧೆಯನ್ನು ಬಯಲಿಗೆಳೆದಿದ್ದರು. ಆದರೆ , ಅವರಿಗೆ ಸಿಕ್ಕ ಬೆಲೆ ಏನು ಗೊತ್ತಾ. ಟ್ರಾನ್ಸ್​​ಫರ್​​. ಹೌದು, ನಿಯತ್ತಾಗಿ ಕೆಲಸ ಮಾಡಿದ್ದಕ್ಕೆ ಅ ಪೊಲೀಸ್​ ಅಧಿಕಾರಿಯನ್ನು ಟ್ರಾನ್ಸ್​ಫರ್(Transfer)​ ಮಾಡಲಾಗಿದೆ. ಅಮೇಜಾನ್ ಆನ್‌ಲೈನ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಗಾಂಜಾ ವಿತರಣೆಯ ಆಘಾತಕಾರಿ ಪ್ರಕರಣ, ಮಧ್ಯಪ್ರದೇಶದ ಭಿಂದ್ ಠಾಣೆಯ ಪೊಲೀಸರು ಭೇದಿಸಿರುವ ರಾಕೆಟ್, ಮತ್ತೊಂದು ದುರದೃಷ್ಟಕರ ತಿರುವು ಪಡೆದುಕೊಂಡಿದೆ. ಈ ಸೂಕ್ಷ್ಮ ಪ್ರಕರಣವನ್ನು ಭೇದಿಸಿದ ಎಸ್‌ಪಿ ಭಿಂದ್ ಶ್ರೀ ಮನೋಜ್ ಕುಮಾರ್ ಸಿಂಗ್(Manoj Kumar Singh) ಅವರನ್ನು ಪಿಎಚ್‌ಕ್ಯುಗೆ ವರ್ಗಾಯಿಸಲಾಗಿದೆ. ಇದನ್ನು ಖಂಡಿಸಿರುವ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ(CAIT) ಮಧ್ಯಪ್ರದೇಶ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಅಮೇಜಾನ್​ ಜೊತೆ ಶಾಮಿಲಾಗಿ ಮಧ್ಯಪ್ರದೇಶ ಸರ್ಕಾರ ಗಾಂಜಾ, ಡ್ರಗ್ಸ್​​ಗಳನ್ನು ಮಾರಾಟ ಮಾಡುತ್ತಿದೆ. ಇದನ್ನು ಬಯಲಿಗೆಳೆದ ಎಸ್​ಪಿ ಅವರನ್ನು ವರ್ಗಾವಣೆ ಮಾಡಿದೆ ಅಂತ ಆರೋಪಿಸಿ ಪ್ರತಿಭಟನೆ ಕೂಡ ನಡೆಸಿದರು.  ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.

‘ಮನೋಜ್​ ಸಿಂಗ್​ ಅವರ ವರ್ಗಾವಣೆ ಹಿಂಪಡೆಯಬೇಕು’

ಈ ಶ್ಲಾಘನೀಯ ಮಾದಕ ದ್ರವ್ಯ ದಂಧೆಯ ಹಿಂದೆ ಇದ್ದ ಅಧಿಕಾರಿ ಮನೋಜ್ ಸಿಂಗ್ ಅವರು ಇಡೀ ಅಮೆಜಾನ್ ಪ್ರಕರಣವನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದರು ಮತ್ತು ಈಗ ನಡೆಯುತ್ತಿರುವ ತನಿಖೆಯ ಮಧ್ಯದಲ್ಲಿ ಅವರನ್ನು PHQ ಪ್ರಧಾನ ಕಚೇರಿಗೆ ವರ್ಗಾಯಿಸಲಾಗಿದೆ. ಸಿಎಐಟಿಯ ರಾಷ್ಟ್ರೀಯ ಅಧ್ಯಕ್ಷ ಶ್ರೀ ಬಿ ಸಿ ಭಾರ್ತಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀ ಪ್ರವೀಣ್ ಖಂಡೇಲ್ವಾಲ್ ಅವರು ತನಿಖೆಯ ಇಂತಹ ನಿರ್ಣಾಯಕ ಸಮಯದಲ್ಲಿ ಇಂತಹ ದಕ್ಷ ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದು ತುಂಬಾ ಆಶ್ಚರ್ಯಕರವಾಗಿದೆ.  ಈ ರೀತಿ ನಿಯತ್ತಾಗಿ ಕೆಲಸ ಮಾಡಿದವರನ್ನು ವರ್ಗಾವಣೆ ಮಾಡಿ, ಸರ್ಕಾರ ತಮಾಷೆ ನೋಡುತ್ತಿದೆ ಅಂತ ಆರೋಪಿಸಿದ್ದಾರೆ.

ಇದನ್ನು ಓದಿ : ಅಮೆರಿಕದಲ್ಲಿ ಗುಂಡೇಟಿಗೆ ಕೇರಳ ಮೂಲದ ಯುವತಿ ಬಲಿ​..!

ಶೀಘ್ರದಲ್ಲೇ CAIT ಆಂದೋಲನ ಕಾರ್ಯಕ್ರಮ!

Amazon ವಿರುದ್ಧ ಕ್ರಮ ಮತ್ತು ವಿದೇಶಿ ಬಂಡವಾಳದ ದೈತ್ಯರ ಒತ್ತಡದಲ್ಲಿ ನಮ್ಮ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಈ ವ್ಯವಸ್ಥೆಯು ವಿದೇಶಿ ಬಂಡವಾಳ ಕಂಪನಿಗಳ ಕೈಯಲ್ಲಿ ವಶಪಡಿಸಿಕೊಂಡಂತೆ ತೋರುತ್ತಿದೆ. ಸಂಸದ ಮತ್ತು ದೇಶದ ವ್ಯಾಪಾರಿಗಳು ಇದನ್ನು ಲಘುವಾಗಿ ಪರಿಗಣಿಸುವುದಿಲ್ಲ ಮತ್ತು ಸಂಸದ ಸರ್ಕಾರದ ಇಂತಹ ಅನಗತ್ಯ ಕೃತ್ಯದ ವಿರುದ್ಧ CAIT ತನ್ನ ಆಂದೋಲನ ಕಾರ್ಯಕ್ರಮವನ್ನು ಶೀಘ್ರದಲ್ಲೇ ಪ್ರಕಟಿಸಲಿದೆ. ಇನ್ನೂ ತಪ್ಪಿತಸ್ಥರನನ್ನ ಇಲ್ಲಿನ ಸರ್ಕಾರವೇ ಬಚ್ಚಿಡುತ್ತಿದೆ ಅಂತ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಆರೋಪಿಸಿದೆ.

ಇದನ್ನು ಓದಿ : ಮ್ಯಾಟ್ರಿ`ಮನಿ’ ನೋಡಿ ಆಕೆ ಮೀಟ್​ ಮಾಡಿದ್ಳು: ಈತ ಕಾರ್​​ನಲ್ಲೇ ಮ್ಯಾಟರ್​ ಮುಗಿಸಿ ಎಸ್ಕೇಪ್​!

ಅಮೇಜಾನ್​ ವಿರುದ್ಧ ಕ್ರಮಕ್ಕೆ ಸಿಎಐಟಿ ಆಗ್ರಹ

ಯಾವುದೇ ರೂಲ್ಸ್​ಗೆ ಕೇರ್​ ಮಾಡದೇ ಅಮೇಜಾನ್​ ತಮಗಿಷ್ಟ ಬಂದ ಹಾಗೇ ನಡೆದುಕೊಳ್ಳುತ್ತಿದೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದೆ.  ಯುವ ಪೀಳಿಗೆಯನ್ನು ಇದು ಹಾಳು ಮಾಡುತ್ತಿದೆ. ಅಮೇಜಾನ್​ನಲ್ಲಿ ಗಾಂಜಾ, ಡ್ರಗ್ಸ್​ ಮಾರಾಟ ಮಾಡಲಾಗುತ್ತಿದೆ.ಇದನ್ನು ತಡೆಯಬೇಕು, ಇಲ್ಲವಾದರೆ ಇದು ಮುಂದೊಂದು ದಿನ ದೊಡ್ಡ ಸಮಸ್ಯೆಯಾಗಲಿದೆ. ಈ ದಂಧೆಯನ್ನು ಬಯಲಿಗೆಳೆದ ಪೊಲೀಸ್​ ಅಧಿಕಾರಿಯನ್ನೇ ವರ್ಗಾವಣೆ ಮಾಡಿಸಿ ಮಧ್ಯ ಪ್ರದೇಶ ಸರ್ಕಾರ ಉದ್ಧಟತನ ಪ್ರದರ್ಶಿಸಿದೆ. ಈ ಕೂಡಲೇ ಅಮೇಜಾನ್​ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಿಎಐಟಿ ಆಗ್ರಹಿಸಿದೆ.
Published by:Vasudeva M
First published: