ಕೇಂದ್ರ ಸಚಿವ ಸಂಪುಟ ಪುನಾರಚನೆ: ಪಿಯೂಷ್​ ಗೋಯಲ್​​ ನೂತನ ಹಣಕಾಸು ಸಚಿವ


Updated:May 14, 2018, 9:56 PM IST
ಕೇಂದ್ರ ಸಚಿವ ಸಂಪುಟ ಪುನಾರಚನೆ: ಪಿಯೂಷ್​ ಗೋಯಲ್​​ ನೂತನ ಹಣಕಾಸು ಸಚಿವ

Updated: May 14, 2018, 9:56 PM IST
-ನ್ಯೂಸ್​18 ಕನ್ನಡ

ನವದೆಹಲಿ(ಮೇ.14): ನಿರೀಕ್ಷೆಯಂತೆಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮತ್ತೆ  ಕೇಂದ್ರ ಸಚಿವ ಸಂಪುಟವನ್ನು ಪುನಾರಚನೆ ಮಾಡಿದೆ.  5 ಹಾಲಿ ಸಚಿವರಗಿ ಕೊಕ್  ನೀಡಿ, 5 ನೂತನ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡಿದೆ. ಇನ್ನು ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಕೇಂದ್ರ ಸಂಪುಟದಲ್ಲಿ ಅಧಿಕೃತವಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ.

ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರುಣ್​ ಜೇಟ್ಲಿ ಖಾತೆಯನ್ನು ಬದಲಾಯಿಸಿದ್ದಾರೆ. ಸದ್ಯ ಜೇಟ್ಲಿ ಬದಲಿಗೆ ಹೆಚ್ಚುವರೆ ಖಾತೆಯಾಗಿ ನೂತನ ಹಣಕಾಸು ಸಚಿವರಾಗಿ ಪಿಯೂಷ್​ ಗೋಯಲ್​ ಅಧಿಕಾರವಹಿಸಿಕೊಂಡಿದ್ದಾರೆ.

ರಾಜವರ್ಧನ್​ ರಾಥೋಡ್​ಗೆ ಮಾಹಿತಿ ಮತ್ತು ಪ್ರಸಾರ ಇಲಾಖೆ ನೀಡಿದ್ದು, ಎಸ್​.ಎಸ್​. ಅಹ್ಲುವಾಲಿಯಾಗೆ ಐಟಿ ಖಾತೆ ನೀಡಲಾಗಿದೆ. ಸ್ಮೃತಿ ಇರಾಣಿಗೆ ಜವಳಿ ಖಾತೆ ನೀಡಿದ್ದು, ಅರುಣ್​ ಜೇಟ್ಲಿ ಆರೋಗ್ಯದಲ್ಲಿ ಸುಧಾರಣೆ ಕಂಡ ಬಳಿಕ ತಮ್ಮ ಖಾತೆಗೆ ವಾಪಾಸ್​ ಮರಳಲಿದ್ದಾರೆ ಎನ್ನಲಾಗಿದೆ.

ನೂತನ ಕೇಂದ್ರ ಸಚಿವ ಸಂಪುಟ ಹೀಗಿದೆ:

ರಾಜವರ್ಧನ್​ ರಾಥೋಡ್​- ಮಾಹಿತಿ ಮತ್ತು ಪ್ರಸಾರ ಇಲಾಖೆ

ಎಸ್​ಎಸ್​ ಅಹ್ಲುವಾಲಿಯಾ- ಐಟಿ ಇಲಾಖೆ ಖಾತೆ
Loading...

ಸ್ಮೃತಿ ಇರಾನಿ- ಜವಳಿ ಖಾತೆ

ಪಿಯೂಷ್​ ಗೋಯಲ್- ನೂತನ ಹಣಕಾಸು ಸಚಿವ
First published:May 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ