• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • MSP Hike: ರೈತರಿಗೆ ಬಂಪರ್ ಸುದ್ದಿ: ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಕೇಂದ್ರ ಅನುಮೋದನೆ

MSP Hike: ರೈತರಿಗೆ ಬಂಪರ್ ಸುದ್ದಿ: ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಕೇಂದ್ರ ಅನುಮೋದನೆ

ಬೆಳೆ

ಬೆಳೆ

ದೆಹಲಿಯ ಗಡಿ ಪ್ರದೇಶದಲ್ಲಿ ರೈತರು ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡಬೇಕು ಎಂದು ಹೋರಾಟ ನಡೆಸುತ್ತಿರುವ ಈ ಹೊತ್ತಿನಲ್ಲಿ ಈ ಘೋಷಣೆ ಹೊರಡಿಸಲಾಗಿದೆ

 • Share this:

  ನವದೆಹಲಿ (ಸೆ. 8):  ಹಿಂಗಾರು ಬೆಳೆ ಮೇಲಿದ್ದ ಕನಿಷ್ಠ ಬೆಂಬಲ ಬೆಲೆಯನ್ನು (Minimum Support Prices (MSP) ಹೆಚ್ಚಿಸಲು ಕೇಂದ್ರ ಸರ್ಕಾರ ಅನುಮೋದಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Modi) ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರ ಸಂಪುಟ ಸಮಿತಿಯಲ್ಲಿ ಎಲ್ಲಾ ಹಿಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಅನುಮೋದನೆ ನೀಡಲಾಗಿದೆ. ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ಖಚಿತಪಡಿಸಿಕೊಳ್ಳಲು 2022-23ರ ಹಿಂಗಾರು ಕನಿಷ್ಠ ಬೆಂಬಲ ನೆಲೆ ಹೆಚ್ಚಿಸಲಾಗಿದೆ. ದೆಹಲಿಯ ಗಡಿ ಪ್ರದೇಶದಲ್ಲಿ ರೈತರು ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡಬೇಕು ಎಂದು ಹೋರಾಟ ನಡೆಸುತ್ತಿರುವ ಈ ಹೊತ್ತಿನಲ್ಲಿ ಈ ಘೋಷಣೆ ಹೊರಡಿಸಲಾಗಿದೆ


  ಹಿಂಗಾರು ಬೆಳೆಗಳಾದ ಗೋಧಿ, ಬೇಳೆ ಕಾಳು, ಸಾಸಿವೆ, ದ್ವಿದಳ ಧಾನ್ಯ, ಬೇಳೆ, ಬಾರ್ಲಿ ಬೆಳೆಗಳ ಮೇಲೆ ರೈತರ ಉತ್ಪಾದನಾ ವೆಚ್ಚ ಹೆಚ್ಚಿದೆ. ಈ ಹಿನ್ನಲೆ ಈ ಎಲ್ಲಾ ಅಂಶ ಮನಗಂಡು ಬೆಂಬಲ ಬೆಲೆ ಹೆಚ್ಚಿಸಲಾಗಿದೆ. ಕನಿಷ್ಠ ಬೆಂಬಲ ಬೆಲೆ ಹೆಚ್ಚಳದಿಂದಾಗಿ ರೈತರನ್ನು ಉತ್ತೇಜಿಸುವ ಗುರಿ ಹೊಂದಿದೆ, ಜೊತೆಗೆ ರೈತರ ಉತ್ಪನ್ನಗಳಿಗೆ ಲಾಭ ನೀಡುವಲ್ಲಿ ನೆರವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ. ಅದರಲ್ಲಿಯೂ ಬೆಳೆ ಮತ್ತು ಸಾಸಿವೆಗೆ (ಕ್ವಿಂಟಾಲ್​ಗೆ 400 ರೂ) ಹೆಚ್ಚಳ ಮಾಡಲಾಗಿದೆ. ನಂತರ ಕಡಲೆ ಕಾಳಿಗೆ (ಕ್ವಿಂಟಾಲ್​ಗೆ 130) ರೂ ಹೆಚ್ಚಿಸಿ ಶಿಫಾರಸು ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರತಿ ಕ್ವಿಂಟಾಲ್‌ಗೆ ರೂ 114 ಹೆಚ್ಚಳವಾಗಿದೆ ಈ ಮೂಲಕ ವೈವಿಧಯತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಸರ್ಕಾರ ತಿಳಿಸಿದೆ


  ಇದನ್ನು ಓದಿ: ಮುಂದಿನವಾರವೇ KPSC ಪರೀಕ್ಷೆ; ಸೋರಿಕೆ ತಡೆಯಲು ಈ ಬಾರಿ ಹೈ ಅಲರ್ಟ್


  ರೈತರ ಆದಾಯವನ್ನು ಹೆಚ್ಚಿಸುವ ಸಲುವಾಗಿ ಸರ್ಕಾರವು ಬುಧವಾರ ಎಮ್‌ಎಸ್‌ಪಿಯನ್ನು ಗೋಧಿಗೆ ಪ್ರತಿ ಕ್ವಿಂಟಾಲ್‌ಗೆ ರೂ 40 ರಿಂದ ರೂ 2, 015 ಕ್ಕೆ ಮತ್ತು ಸಾಸಿವೆ ಬೀಜಗಳಿಗೆ ರೂ 400 ರಿಂದ ರೂ 5, 050 ಕ್ಕೆ ಏರಿಸಿದೆ. ಸರ್ಕಾರವು ರೈತರಿಂದ ಧಾನ್ಯಗಳನ್ನು ಖರೀದಿಸಲು ಕನಿಷ್ಠ ಬೆಂಬಲ ಬೆಲೆ ನೀಡುತ್ತಿದೆ. ಪ್ರಸ್ತುತ ಮುಂಗಾರು ಮತ್ತು ಹಿಂಗಾರು ಋತುವಿನ 23 ಬೆಳೆಗಳಿಗೆ ಸರ್ಕಾರ ಕನಿಷ್ಟ ಬೆಂಬಲ ನೀಡುತ್ತಿದೆ.


  ಇದನ್ನು ಓದಿ: ಇಂದಿನಿಂದ ತಿರುಪತಿ ತಿಮ್ಮಪ್ಪನ ಉಚಿತ ದರ್ಶನ; ಭಕ್ತರಲ್ಲಿ ಸಂತಸ


  ದೇಶೀಯ ಉತ್ಪಾದನೆ ಮತ್ತು ರಫ್ತುಗಳನ್ನು ಉತ್ತೇಜಿಸುವ ಉದ್ದೇಶದಿಂದ ಜವಳಿ ಕ್ಷೇತ್ರಕ್ಕೆ 10, 683 ಕೋಟಿ ಮೌಲ್ಯದ ಉತ್ಪಾದನೆ-ಸಂಬಂಧಿತ ಪ್ರೋತ್ಸಾಹಕ (PLI) ಯೋಜನೆಯನ್ನು ಅನುಮೋದಿಸುವ ಕ್ಯಾಬಿನೆಟ್ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ  ಶ್ಲಾಘಿಸಿದರು. ಈ ವಲಯಕ್ಕೆ ಮತ್ತಷ್ಟು ಉತ್ತೇಜನ ನೀಡಲು ಮತ್ತು ಆತ್ಮನಿರ್ಭರ ಭಾರತ ರಚಿಸಲು ಜೊತೆಗೆ ನಮಮ ಪ್ರಯತ್ನವನ್ನು ಬಲಪಡಿಸಲು, ಕ್ಯಾಬಿನೆಟ್ ಇಂದು ಜವಳಿಗಾಗಿ ಉತ್ಪಾದನೆ-ಸಂಬಂಧಿತ ಪ್ರೋತ್ಸಾಹಕ ಯೋಜನೆಗೆ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದರು.


  ಕೇಂದ್ರ ಪ್ರಾಯೋಜಿತ ಖಾದ್ಯ ತೈಲಗಳ ರಾಷ್ಟ್ರೀಯ ಮಿಷನ್ –ಎಣ್ಣೆ ತಾಳೆ ಯೋಜನೆಯನ್ನು ಇತ್ತೀಚೆಗೆ ಸರ್ಕಾರ ಘೋಷಿಸಿದೆ. ಖಾದ್ಯ ತೈಲಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಖಾದ್ಯ ತೈಲಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಸ್ತರಣೆ ಮತ್ತು ಉತ್ಪಾದಕತೆಗೆ ನೆರವು ನೀಡುವುದಲ್ಲದೆ, ರೈತರ ಆದಾಯವನ್ನು ಹೆಚ್ಚಿಸುವ ಮೂಲಕ ಮತ್ತು ಹೆಚ್ಚುವರಿ ಉದ್ಯೋಗವನ್ನು ಸೃಷ್ಟಿಸುವ ಮೂಲಕ ಪ್ರಯೋಜನವನ್ನು ನೀಡುತ್ತದೆ

  Published by:Seema R
  First published: