Marriage Act: ಮಹಿಳೆಯರ ಕಾನೂನುಬದ್ಧ ವಿವಾಹ ವಯಸ್ಸನ್ನು 18 ರಿಂದ 21 ಕ್ಕೆ ಏರಿಸಲು ಸಂಪುಟ ಅನುಮೋದನೆ

Marriage Act: ಒಟ್ಟಾರೆ ಫಲವತ್ತತೆ ದರವು ಕಡಿಮೆಯಾಗುತ್ತಿದ್ದು ಜನಸಂಖ್ಯೆಯು ನಿಯಂತ್ರಣದಲ್ಲಿದೆ ಎಂಬುದನ್ನು ತಿಳಿಸಿದೆ. ಶಿಫಾರಸಿನ ಹಿಂದಿರುವ ಉದ್ದೇಶವು ಮಹಿಳೆಯರ ಸಬಲೀಕರಣವಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರಧಾನಿ ನರೇಂದ್ರ ಮೋದಿಯವರು (Prime Minister Narendra Modi) 2020 ರ ಸ್ವಾತಂತ್ರ್ಯ ಭಾಷಣದಲ್ಲಿ (Independence speech) ಪುರುಷರಂತೆಯೇ ಮಹಿಳೆಯರ ವಿವಾಹದ ಕಾನೂನುಬದ್ಧ ವಯಸ್ಸನ್ನು 18 ರಿಂದ 21 ವರ್ಷಗಳಿಗೆ ಹೆಚ್ಚಿಸುವ ಪ್ರಸ್ತಾಪವನ್ನು ಘೋಷಿಸಿದ ಒಂದು ವರ್ಷದ ನಂತರ, ಕೇಂದ್ರ ಕ್ಯಾಬಿನೆಟ್ ಈ (Cabinet approval,) ಪ್ರಸ್ತಾಪವನ್ನು ಅಂಗೀಕರಿಸಿದೆ. ಕ್ಯಾಬಿನೆಟ್ ಅನುಮೋದನೆಯ ನಂತರ, ಸರಕಾರವು (Government ) ಬಾಲ್ಯವಿವಾಹ ನಿಷೇಧ ಕಾಯ್ದೆ 2006 ರ ತಿದ್ದುಪಡಿಯನ್ನು ಪರಿಚಯಿಸುತ್ತದೆ ಹಾಗೂ ವಿಶೇಷ ವಿವಾಹ ಕಾಯ್ದೆ(Special Marriage Act) ಮತ್ತು ಹಿಂದೂ ವಿವಾಹ ಕಾಯ್ದೆ(Hindu Marriage Act) , 1955 ರಂತಹ ವೈಯಕ್ತಿಕ ಕಾನೂನುಗಳಿಗೆ ತಿದ್ದುಪಡಿಗಳನ್ನು ತರುತ್ತದೆ ಎಂದು ಸುದ್ದಿಮೂಲಗಳು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ.

ಮಹಿಳೆಯರ ಸಬಲೀಕರಣ ಉದ್ದೇಶ
ಜಯಾ ಜೇಟ್ಲಿ ನೇತೃತ್ವದ ಕೇಂದ್ರದ ಕಾರ್ಯಪಡೆಯು ಡಿಸೆಂಬರ್ 2020 ರಲ್ಲಿ ನೀತಿ ಆಯೋಗಕ್ಕೆ ಸಲ್ಲಿಸಿದ ಶಿಫಾರಸುಗಳನ್ನು ಆಧರಿಸಿ "ತಾಯ್ತನದ ವಯಸ್ಸಿಗೆ ಸಂಬಂಧಿಸಿದ ವಿಷಯಗಳು, MMR (ತಾಯಿಯ ಮರಣ ದರ) ಕಡಿಮೆ ಮಾಡುವ ಅಗತ್ಯತೆಗಳು, ಪೌಷ್ಟಿಕಾಂಶದ ಮಟ್ಟಗಳ ಸುಧಾರಣೆ ಮತ್ತು ಸಂಬಂಧಿತ ಸಮಸ್ಯೆಗಳನ್ನು ಪರಿಶೀಲಿಸಲು ರಚಿಸಲಾಗಿದೆ ಎಂದು ಅವರು ತಿಳಿಸಿದೆ.

ಇದನ್ನೂ ಓದಿ: ಗಟ್ಟಿಮೇಳವಿಲ್ಲ, ಪೂಜಾರಿ ಇಲ್ಲ.. ವರನಿಗೂ ಮಾಂಗಲ್ಯಧಾರಣೆ.. ಗಮನ ಸೆಳೆದ ಅಪರೂಪದ ವಚನ ಕಲ್ಯಾಣ

ಈ ಕುರಿತು ಇನ್ನಷ್ಟು ಮಾಹಿತಿಗಳನ್ನು ಮಾಧ್ಯಮಕ್ಕೆ ನೀಡಿದ ಅವರು, ಶಿಫಾರಸಿನ ಹಿಂದಿರುವ ಅಂಶವು ಜನಸಂಖ್ಯೆಯ ನಿಯಂತ್ರಣವಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದು, NFHS 5 (ರಾಷ್ಟ್ರೀಯ ಆರೋಗ್ಯ ಸಮೀಕ್ಷೆ) ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ಒಟ್ಟಾರೆ ಫಲವತ್ತತೆ ದರವು ಕಡಿಮೆಯಾಗುತ್ತಿದ್ದು ಜನಸಂಖ್ಯೆಯು ನಿಯಂತ್ರಣದಲ್ಲಿದೆ ಎಂಬುದನ್ನು ತಿಳಿಸಿದೆ. ಶಿಫಾರಸಿನ ಹಿಂದಿರುವ ಉದ್ದೇಶವು ಮಹಿಳೆಯರ ಸಬಲೀಕರಣವಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಕಡಿಮೆಯಾದ ಬಾಲ್ಯವಿವಾಹ
NFHS 5 ಉಲ್ಲೇಖಿಸಿರುವ ಮಾಹಿತಿಯ ಪ್ರಕಾರ, ಭಾರತವು ಇದೇ ಮೊದಲ ಬಾರಿಗೆ 2.0 ರ ಫಲವತ್ತತೆ ದರವನ್ನು ಗಳಿಸಿದ್ದು, TFR ನ ಬದಲಿ ಮಟ್ಟ 2.1 ಕ್ಕಿಂತ ಕಡಿಮೆಯಾಗಿದೆ, ಇದು ಮುಂಬರುವ ವರ್ಷಗಳಲ್ಲಿ ಜನಸಂಖ್ಯೆಯ ಸ್ಫೋಟವು ಅಸಂಭವವಾಗಿದೆ ಎಂದು ಸೂಚಿಸುತ್ತದೆ. ಬಾಲ್ಯವಿವಾಹವು 2015-16 ರಲ್ಲಿ 27% ದಿಂದ 2019-21 ರಲ್ಲಿ 23% ಕ್ಕೆ ಕಡಿಮೆಯಾಗಿದೆ ಎಂದು ಡೇಟಾ ಬಹಿರಂಗಪಡಿಸಿದೆ.

ಸಮತಾ ಪಕ್ಷದ ಮಾಜಿ ಅಧ್ಯಕ್ಷರಾಗಿರುವ ಜೇಟ್ಲಿ, "ತಜ್ಞರೊಂದಿಗೆ ವ್ಯಾಪಕವಾದ ಸಮಾಲೋಚನೆಯ ನಂತರ ಕಾರ್ಯಪಡೆಯ ಶಿಫಾರಸು ಮಾಡಲಾಗಿದೆ, ಮತ್ತು ಮುಖ್ಯವಾಗಿ ಯುವ ವಯಸ್ಕರು, ವಿಶೇಷವಾಗಿ ಯುವತಿಯರ ನಿರ್ಧಾರವು ನೇರವಾಗಿ ಪರಿಣಾಮ ಬೀರುತ್ತದೆ" ಎಂದು ತಿಳಿಸಿದ್ದಾರೆ. 16 ವಿಶ್ವವಿದ್ಯಾನಿಯಲಗಳಿಂದ ಈ ನಿಟ್ಟಿನಲ್ಲಿ ಸಮಿತಿಯು ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು, ಈ ಕುರಿತು ಯುವಜನರಿಗೆ ಮಾಹಿತಿ ನೀಡುವ ಸಲುವಾಗಿ 15 ಕ್ಕಿಂತಲೂ ಹೆಚ್ಚಿನ NGO ಗಳನ್ನು ತೊಡಗಿಸಿಕೊಂಡಿದ್ದೇವೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಹಾಗೂ ಅತ್ಯಲ್ಪ ಅಂಚಿನಲ್ಲಿರುವ ಸಮುದಾಯಗಳು, ಬಾಲ್ಯವಿವಾಹವು ಹೆಚ್ಚು ಪ್ರಚಲಿತದಲ್ಲಿರುವ ರಾಜಸ್ಥಾನದ ನಿರ್ದಿಷ್ಟ ಜಿಲ್ಲೆಗಳ ಕಡೆಗೆ ಹೆಚ್ಚಿನ ಗಮನ ನೀಡುತ್ತಿದ್ದೇವೆ ಎಂಬುದಾಗಿ ಜಯಾ ತಿಳಿಸಿದ್ದಾರೆ.

ಯುವಜನಾಂಗದ ಪ್ರತಿಕ್ರಿಯೆಗಳೇನು?
ಬೋರ್ಡ್‌ನಾದ್ಯಂತ ಪಡೆದುಕೊಂಡಿರುವ ಪ್ರತಿಕ್ರಿಯೆಗಳ ಪ್ರಕಾರ ಯುವ ವಯಸ್ಕರ ವಿವಾಹ ವಯಸ್ಸು 22-23 ವರ್ಷಗಳು ಹಾಗೂ ಈ ಕುರಿತು ಯುವ ಜನಾಂಗ ಇದೇ ಪ್ರತಿಕ್ರಿಯೆಯನ್ನು ನೀಡಿದೆ ಎಂಬುದಾಗಿ ಜಯಾ ಜೇಟ್ಲಿ ತಿಳಿಸಿದ್ದು, ಕೆಲವು ಕಡೆಗಳಿಂದ ಈ ನಿರ್ಧಾರಕ್ಕೆ ಪ್ರತಿಕ್ರಿಯೆಗಳಿಗೆ ಆಕ್ಷೇಪಣೆಗಳು ಉಂಟಾಗಿದ್ದರೂ ಇದನ್ನು ಉದ್ದೇಶಿಸಲಾಗಿರುವ ಗುಂಪಿನಿಂದ ಮಾರ್ಗದರ್ಶನ ಪಡೆದುಕೊಳ್ಳುವುದು ಈಗ ಮುಖ್ಯವಾದುದು ಎಂಬುದಾಗಿ ಅವರು ತಿಳಿಸಿದ್ದಾರೆ.

ಜಾಗೃತಿ ಅಭಿಯಾನ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಜೂನ್ 2020 ರಲ್ಲಿ ಸ್ಥಾಪಿಸಿದ ಕಾರ್ಯಪಡೆಯು ನೀತಿ ಆಯೋಗದ ಡಾ ವಿ ಕೆ ಪಾಲ್ ಮತ್ತು ಡಬ್ಲ್ಯುಸಿಡಿ, ಆರೋಗ್ಯ ಮತ್ತು ಶಿಕ್ಷಣ ಸಚಿವಾಲಯಗಳು ಮತ್ತು ಶಾಸಕಾಂಗ ಇಲಾಖೆಯ ಕಾರ್ಯದರ್ಶಿಗಳನ್ನು ಸಹ ಒಳಗೊಂಡಿದೆ. ನಿರ್ಧಾರದ ಕುರಿತು ಸಾಮಾಜಿಕ ಅಂಗೀಕಾರವನ್ನು ಉತ್ತೇಜಿಸಲು ಸಮಗ್ರ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ನಡೆಸಬೇಕೆಂದು ಕಾರ್ಯಪಡೆಯು ಶಿಫಾರಸು ಮಾಡಿದೆ.

ಹೆಣ್ಣುಮಕ್ಕಳು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು:
ಲೈಂಗಿಕ ಶಿಕ್ಷಣವನ್ನು ಔಪಚಾರಿಕಗೊಳಿಸುವುದು ಮತ್ತು ಇದನ್ನು ಶಾಲಾ ಪಠ್ಯಕ್ರಮದಲ್ಲಿ ಪರಿಚಯಿಸಬೇಕು ಎಂಬುದನ್ನು ಶಿಫಾರಸು ಮಾಡಿದೆ. ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ತರಬೇತಿ ನೀಡುವುದು, ಕೌಶಲ್ಯ ಮತ್ತು ವ್ಯಾಪಾರ ತರಬೇತಿ ಮತ್ತು ಜೀವನ ನಿರ್ವಹಣೆಯ ಸುಧಾರಣೆಗಳನ್ನು ವಿವಾಹ ವಯಸ್ಸನ್ನು ಹೆಚ್ಚಿಸುವ ಹಂತವಾಗಿ ಶಿಫಾರಸು ಮಾಡಲಾಗಿದೆ. ಹೆಣ್ಣುಮಕ್ಕಳು ಆರ್ಥಿಕವಾಗಿ ಸ್ವತಂತ್ರರಾದರೆ, ಅವರಿಗೆ ಬೇಗನೇ ವಿವಾಹ ಮಾಡಿಸುವ ಮುನ್ನ ಮಾತಾ ಪಿತರು ಎರಡೆರಡು ಬಾರಿ ಯೋಚಿಸುತ್ತಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

ಹಿಂದೂ ವಿವಾಹ ಕಾಯ್ದೆ, 1955 ರ ಸೆಕ್ಷನ್ 5(iii) ಪ್ರಕಾರ ವಿವಾಹ ವಯಸ್ಸನ್ನು ವಧುವಿಗೆ 18 ವರ್ಷಗಳು ಹಾಗೂ ವರನಿಗೆ 21 ವರ್ಷಗಳೆಂದು ನಿಗದಿಪಡಿಸುತ್ತದೆ. ವಿಶೇಷ ವಿವಾಹ ಕಾಯ್ದೆ, 1954 ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆ, 2006 ಕೂಡ ಮಹಿಳೆಯರು ಮತ್ತು ಪುರುಷರಿಗೆ ಅನುಕ್ರಮವಾಗಿ 18 ಮತ್ತು 21 ವರ್ಷಗಳನ್ನು ವಿವಾಹ ಒಪ್ಪಿಗೆಯ ಕನಿಷ್ಠ ವಯಸ್ಸು ಎಂಬುದನ್ನು ಸೂಚಿಸುತ್ತವೆ.

ಇದನ್ನೂ ಓದಿ: ಕಡಿಮೆ ಖರ್ಚಿನಲ್ಲಿ ಗ್ರ್ಯಾಂಡ್ ಆಗಿ ಮದುವೆ ಮಾಡೋಕೆ ಸಾಧ್ಯ ಇದೆ: ಈ ಟಿಪ್ಸ್ ಫಾಲೋ ಮಾಡಿ ಸಾಕು

ನಿರ್ಮಲಾ ಸೀತಾರಾಮನ್ ಉಲ್ಲೇಖಿಸಿರುವ ಅಂಶಗಳೇನು?
2020-21ರ ಬಜೆಟ್ ಭಾಷಣದಲ್ಲಿ ಕಾರ್ಯಪಡೆಯನ್ನು ಅಳವಡಿಸಿರುವ ಉದ್ದೇಶವನ್ನು ಉಲ್ಲೇಖಿಸಿ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ತಿಳಿಸಿರುವಂತೆ, 1978 ರಲ್ಲಿ 1929 ರ ಹಿಂದಿನ ಶಾರದಾ ಕಾಯಿದೆಗೆ ತಿದ್ದುಪಡಿ ಮಾಡುವ ಮೂಲಕ ಮಹಿಳೆಯರ ವಿವಾಹದ ವಯಸ್ಸನ್ನು 15 ವರ್ಷದಿಂದ 18 ವರ್ಷಕ್ಕೆ ಹೆಚ್ಚಿಸಲಾಯಿತು. ಭಾರತವು ಮುಂದುವರೆದಂತೆ, ಮಹಿಳೆಯರಿಗೆ ಉನ್ನತ ಶಿಕ್ಷಣ ಮತ್ತು ವೃತ್ತಿಯನ್ನು ಮುಂದುವರಿಸಲು ಅವಕಾಶಗಳು ತೆರೆದುಕೊಳ್ಳುತ್ತವೆ. MMR (ಮಾತೃ ಮರಣ ಪ್ರಮಾಣ) ಕಡಿಮೆ ಮಾಡುವುದರ ಜೊತೆಗೆ ಪೌಷ್ಠಿಕಾಂಶದ ಮಟ್ಟವನ್ನು ಸುಧಾರಿಸುವ ಅಗತ್ಯತೆಗಳಿವೆ.
Published by:vanithasanjevani vanithasanjevani
First published: