ಕೇಂದ್ರ ಸಂಪುಟ ಸಭೆಯಲ್ಲಿ ಅಂಗೀಕಾರವಾದ ಪೌರತ್ವ ತಿದ್ದುಪಡಿ ಮಸೂದೆ; ಮುಂದಿನ ವಾರ ಸಂಸತ್​ನಲ್ಲಿ ಮಂಡನೆ ಸಾಧ್ಯತೆ?

ಈ ಮಸೂದೆ ಜಾರಿಯಾದರೆ ಈಶಾನ್ಯ ರಾಜ್ಯಗಳಲ್ಲಿ ಹಿಂದೂಗಳೇ ಅಲ್ಪ ಸಂಖ್ಯಾತರಾಗಿ ಬದಲಾಗಲಿದ್ದಾರೆ. ಈಶಾನ್ಯ ರಾಜ್ಯಗಳು ಕಾಶ್ಮೀರದಂತೆ ಬದಲಾಗಲಿದೆ. ಹಾಗೂ ನಿರಾಶ್ರಿತರು ಈಶಾನ್ಯ ರಾಜ್ಯದ ಪ್ರಜೆಗಳ ಅವಕಾಶಗಳನ್ನು ಕಸಿಯಲಿದ್ದಾರೆ ಎಂಬುದು ಅಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

MAshok Kumar | news18-kannada
Updated:December 4, 2019, 12:22 PM IST
ಕೇಂದ್ರ ಸಂಪುಟ ಸಭೆಯಲ್ಲಿ ಅಂಗೀಕಾರವಾದ ಪೌರತ್ವ ತಿದ್ದುಪಡಿ ಮಸೂದೆ; ಮುಂದಿನ ವಾರ ಸಂಸತ್​ನಲ್ಲಿ ಮಂಡನೆ ಸಾಧ್ಯತೆ?
ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಶಿಲ್ಲಾಂಗ್​ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಈಶಾನ್ಯ ರಾಜ್ಯದ ಪ್ರಜೆಗಳು.
  • Share this:
ನವ ದೆಹಲಿ (ಡಿಸೆಂಬರ್ 04); ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಒಮ್ಮತದಿಂದ ಅಂಗೀಕರಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಮಸೂದೆಯನ್ನು ಮುಂದಿನ ವಾರ ನಡೆಯಲಿರುವ ಸಂಸತ್ ಅಧಿವೇಶನದಲ್ಲಿ ಮಂಡಿಸಲಿರುವುದು ಬಹುತೇಕ ಖಚಿತವಾಗಿದೆ. ಆದರೆ, ಈ ಮಸೂದೆಗೆ ಈಶಾನ್ಯ ರಾಜ್ಯಗಳು ಬಲವಾದ ವಿರೋಧವನ್ನು ವ್ಯಕ್ತಪಡಿಸುತ್ತಿವೆ.

ಮೂಲ "ಪೌರತ್ವ ಕಾಯ್ದೆ 1955" ರ ಪ್ರಕಾರ ನೆರೆಯ ಅಫ್ಘಾನಿಸ್ತಾನ, ಪಾಕಿಸ್ತಾನ, ಹಾಗೂ ಬಾಂಗ್ಲಾದೇಶದಲ್ಲಿ ಅಲ್ಪ ಸಂಖ್ಯಾತರಾಗಿರುವ ಹಿಂದು, ಸಿಖ್, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರೈಸ್ತ ಧರ್ಮೀಯ ವಲಸಿಗರು ಭಾರತದಲ್ಲಿ 12 ಅಥವಾ ಅದಕ್ಕಿಂತ ಹೆಚ್ಚು ವರ್ಷ ವಾಸವಿದ್ದಲ್ಲಿ ಅವರಿಗೆ ಭಾರತೀಯ ಪೌರತ್ವವನ್ನು ನೀಡಲಾಗುತ್ತಿತ್ತು.

ಆದರೆ, ಕೇಂದ್ರ ಸರ್ಕಾರ ಈಗ ತಿದ್ದುಪಡಿಗೊಳಿಸಿ ಹೊಸದಾಗಿ ರೂಪಿಸಿರುವ ಮಸೂದೆಯಲ್ಲಿ ಅನ್ಯ ದೇಶದ ಮುಸ್ಲೀಮೇತರ ವಲಸಿಗರು ಭಾರತದಲ್ಲಿ 6 ವರ್ಷ ವಾಸವಿದ್ದರೆ ಅವರು ಇಲ್ಲಿನ ಪೌರತ್ವ ಪಡೆಯಲು ಅರ್ಹರಾಗಿರುತ್ತಾರೆ. ಯಾವುದೇ ಸೂಕ್ತ ದಾಖಲೆಗಳು ಇಲ್ಲದಿದ್ದರೂ ನಿರಾಶ್ರಿತ ವಲಸಿಗರು ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದಾದ ಅವಕಾಶವನ್ನು ಕೇಂದ್ರ ಸರ್ಕಾರ ಕಲ್ಪಿಸಲಾಗಿದೆ.

ಈ ಮಸೂದೆ ಜಾರಿಯಾದರೆ ಈಶಾನ್ಯ ರಾಜ್ಯಗಳಲ್ಲಿ ಹಿಂದೂಗಳೇ ಅಲ್ಪ ಸಂಖ್ಯಾತರಾಗಿ ಬದಲಾಗಲಿದ್ದಾರೆ. ಈಶಾನ್ಯ ರಾಜ್ಯಗಳು ಕಾಶ್ಮೀರದಂತೆ ಬದಲಾಗಲಿದೆ. ಹಾಗೂ ನಿರಾಶ್ರಿತರು ಈಶಾನ್ಯ ರಾಜ್ಯದ ಪ್ರಜೆಗಳ ಅವಕಾಶಗಳನ್ನು ಕಸಿಯಲಿದ್ದಾರೆ ಎಂಬುದು ಅಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಇಂದಿನಿಂದ ಸಂಸತ್​ನಲ್ಲಿ ಚಳಿಗಾಲ ಅಧಿವೇಶನ; ಸದ್ದು ಮಾಡಲಿವೆ ಪೌರತ್ವ ಮಸೂದೆ, ಆರ್ಥಿಕ ಮುಗ್ಗಟ್ಟು, ನಿರುದ್ಯೋಗ ವಿಚಾರ

ಇದೇ ಕಾರಣಕ್ಕೆ ಕೇಂದ್ರ ಸರ್ಕಾರದ ಈ ನೂತನ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್, ಟಿಎಂಸಿ, ಸಿಪಿಐ(ಎಂ), ಸೇರಿದಂತೆ ಅನೇಕ ಪಕ್ಷಗಳು ವಿರೋಧಿಸಿವೆ. ಆಡಳಿತರೂಢ ಬಿಜೆಪಿಗೆ ನೀಡಿದ್ದ ಬೆಂಬಲವನ್ನು ಅಸ್ಸಾಂ ಗಣ ಪರಿಷತ್ ಸೋಮವಾರ ಹಿಂಪಡೆದಿದೆ. ಈ ಮಸೂದೆಯನ್ನು ರದ್ದುಗೊಳಿಸುವಂತೆ ಕೋರಿ ಈಶಾನ್ಯ ರಾಜ್ಯದ ಬಿಜೆಪಿಯೇತರ ಸಂಸದರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ಒತ್ತಾಯಿಸಿದ್ದಾರೆ.

ಅಲ್ಲದೆ, ಈ ಮಸೂದೆಯನ್ನು ವಿರೋಧಿಸಿ ಈಶಾನ್ಯ ರಾಜ್ಯಗಳ 8 ಪ್ರಭಾವಿ ವಿದ್ಯಾರ್ಥಿ ಸಂಘಟನೆಗಳು, ಅಸ್ಸಾಂನ 40 ಸಾಮಾಜಿಕ ಸಂಘಟನೆಗಳು ಮಂಗಳವಾರ 11 ತಾಸುಗಳ ಬಂದ್​ಗೂ ಸಹ ಕರೆ ನೀಡಿದ್ದವು. ಹೀಗಾಗಿ ಗೃಹ ಸಚಿವ ಅಮಿತ್ ಶಾ ಮಂಗಳವಾರ ವಿದ್ಯಾರ್ಥಿ ಸಂಘಗಳು ಮತ್ತು ಅಸ್ಸಾಂ ಸಮಾಜದ ಮುಖಂಡರ ಜೊತೆ ಈ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸುತ್ತಿವೆ.ಆದರೆ, ಈಶಾನ್ಯ ಭಾಗದ ಜನರ ಪ್ರತಿರೋಧ ಹಾಗೂ ವಿರೋಧ ಪಕ್ಷಗಳ ಖಂಡನೆಗಳ ನಡುವೆಯೂ ನೂತನ ಪೌರತ್ವ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಮುಂದಿನ ವಾರ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸುವುದು ಬಹುತೇಕ ಖಚಿತವಾಗಿದೆ.

ಒಂದು ವೇಳೆ ಈ ಮಸೂದೆ ಜಾರಿಯಾದರೆ 2014ರ ಡಿಸೆಂಬರ್ 31ಕ್ಕೂ ಮುಂಚೆ ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಿರುವ ಮುಸ್ಲೀಮೇತರ ಅನ್ಯ ಧರ್ಮೀಯರು ಭಾರತೀಯ ಪೌರತ್ವವನ್ನು ಪಡೆಯಲಿದ್ದಾರೆ.

ಇದನ್ನೂ ಓದಿ : ಮುಸ್ಲಿಮೇತರ ವಲಸೆಗಾರರಿಗೆ ಭಾರತೀಯ ಪೌರತ್ವ: ಕೇಂದ್ರದ ತಿದ್ದುಪಡಿ ಮಸೂದೆಗೆ ಲೋಕಸಭೆ ಅನುಮೋದನೆ
First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ